ತಂದೆಯ ಅಂತ್ಯ ಸಂಸ್ಕಾರ ದಲ್ಲಿ ಮೈ ಮರೆತು ಕುಣಿದ ಮೋಹನ್ ಪುತ್ರ ಅಕ್ಷಯ್. ಇಲ್ಲಿದೆ ನೋಡಿ ಮಗನ ಡಾನ್ಸ್ ವಿಡಿಯೋ

ಕಲೆ ಮತ್ತು ಕಲಾವಿದರಿಗೆ ಅಂತ್ಯವೆಂಬುದು ಇಲ್ಲ ಕಲೆ ಮತ್ತು ಕಲೆಗಾರರು ಯಾವಾಗಲೂ ಜನರ ಮನಸ್ಸಿನಲ್ಲಿ ಜಾಗವನ್ನು ಗಳಿಸಿರುತ್ತಾರೆ. ಇಂತಹ ಅಗಾಧ ಶಕ್ತಿ ಕಲೆಗಿದೆ. ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ಕಲಾವಿದ ಮೋಹನ್ ಜುನೇಜ ಅವರು ನಮ್ಮನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾರೆ. ಶಾರೀರಿಕವಾಗಿ ಅವರು ನಮ್ಮನ್ನು ಬಿಟ್ಟು ಹೋಗಿದ್ದರೂ ಕೂಡ ಅವರು ನಟನೆ ಮಾಡಿರುವ ಚಿತ್ರಗಳು ಹಾಗೂ ಅವರ ಅಭಿನಯಗಳು ಇನ್ನೂ ಕೂಡ ಅವರನ್ನು ಜೀವಂತವಾಗಿರುತ್ತವೆ.

ನಟ ಮೋಹನ್ ಅವರು ನೂರಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಪೋಷಕ ನಟ ಮತ್ತು ಹಾಸ್ಯ ನಟನಾಗಿ ಅಭಿನಯ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇವರು ಧಾರಾವಾಹಿಗಳಲ್ಲೂ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಕೇವಲ ನಟನೆಯಷ್ಟೇ ಅಲ್ಲದೆ ಇವರು ಒಬ್ಬ ಬರಹಗಾರ ಕೂಡ ಹೌದು.. ಧಾರಾವಾಹಿಗಳಲ್ಲಿ ಹಾಗೂ ಸಿನಿಮಾಗಳಲ್ಲಿ ಇವರು ಹಲವಾರು ಡೈಲಾಗ್ ಗಳನ್ನು ಕೂಡ ಬರೆದು ಸೈ ಎನಿಸಿಕೊಂಡಿದ್ದಾರೆ. ಇಂತಹ ಅಪ್ರತಿಮ ಕಾಮಿಡಿ ನಟನನ್ನು ಕಳೆದುಕೊಂಡಿರುವುದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.

ಕೇವಲ ಐವತ್ತನೇ ವಯಸ್ಸಿಗೆ ಮೋಹನ್ ಅವರನ್ನು ಕಳೆದುಕೊಂಡಿರುವುದು ನಿಜಕ್ಕೂ ಬೇಸರದ ವಿಷಯ. ಕಳೆದ 6 ತಿಂಗಳಿಂದ ಮೋಹನ್ ಅವರಿಗೆ ಲಿ’ವ’ ರ್ ಸಮಸ್ಯೆ ಕಾಣಿಸಿಕೊಂಡಿತ್ತು. ಸ್ವಲ್ಪ ದಿನಗಳ ನಂತರ ಸುಧಾರಿಸಿಕೊಂಡಿದ್ದರು ಆದರೆ ಇತ್ತೀಚೆಗೆ ಮತ್ತೆ ಇವರಿಗೆ ರ’ಕ್ತ’ ಸ್ರಾವ ಉಂಟಾಗಿ ಆರೋಗ್ಯ ಹದಗೆಟ್ಟಿತ್ತು.ದೇಹದಲ್ಲಿ ರ’ಕ್ತ’ದ ಪ್ರಮಾಣ ಕಡಿಮೆಯಾದ್ದರಿಂದ ಮೋಹನ್ ಅವರು ಕೊನೆಯು’ಸಿ’ರೆಳೆದಿದ್ದಾರೆ. ಮೋಹನ್ ಅವರಿಗೆ ಅಕ್ಷಯ್ ಮತ್ತು ಅಶ್ವಿನ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.

ಮೋಹನ್ ಕುಟುಂಬದವರು ಇದೀಗ ದುಃಖದ ಸಾಗರದಲ್ಲಿ ಮುಳುಗಿದ್ದಾರೆ. ಮೋಹನ್ ಅವರ ಚಿಕ್ಕ ಮಗ ಅಕ್ಷಯ್ ಮೋಹನ್ ಅವರ ಅಂತ್ಯಸಂಸ್ಕಾರದ ವೇಳೆ ಮೈಮರೆತು ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದ್ದು..ಈ ವಿಡಿಯೋವನ್ನು ನೋಡಿದವರಿಗೆಲ್ಲ ಕಣ್ಣಲ್ಲಿ ನೀರು ತುಂಬಿಕೊಂಡಿದೆ. ಅಕ್ಷಯ್ ನ ಡ್ಯಾನ್ಸ್ ನೋಡಿದರೆ ಜೋಗಿ ಸಿನಿಮಾದಲ್ಲಿ ಶಿವಣ್ಣ ಅವರು ತಮ್ಮ ತಾಯಿ ಹೋದಾಗ ಅವರ ಅಂತ್ಯಸಂಸ್ಕಾರದ ವೇಳೆ ಡ್ಯಾನ್ಸ್ ಮಾಡಿದ ಚಿತ್ರದ ದೃಶ್ಯ ಕಣ್ಮುಂದೆ ಬರುತ್ತೆ.

“ನಾವು ಸಿನಿಮಾದವರು ಅಂತ ಕಾರು ಬಂಗಲೆ ಇಟ್ಟುಕೊಂಡಿಲ್ಲ ನಾವು ಮಿಡಲ್ ಕ್ಲಾಸ್ ಜೀವನವನ್ನು ಸಾಗಿಸುತ್ತಿದ್ದೇವೆ. ತುಂಬ ಸರಳ ಮತ್ತು ಸಾಧಾರಣ ಜೀವನವನ್ನು ನಡೆಸುತ್ತಿದ್ದೇವೆ. ನಾನು ಫೋಟೋಗ್ರಫಿ ಮಾಡಿ ಹಣ ಸಂಪಾದನೆ ಮಾಡುತ್ತೇನೆ. ನನಗೆ ಪ್ರಾಣಿಗಳೆಂದರೆ ತುಂಬಾ ಇಷ್ಟ. ನನ್ನ ತಂದೆಯನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ನಮ್ಮ ತಂದೆ ತೀರಿಕೊಂಡ ನಂತರ ಸಿನಿಮಾ ದವರು ಹೆಚ್ಚೇನು ಆರ್ಥಿಕ ಸಹಾಯ ಮಾಡಿಲ್ಲ. ಆದರೆ ನಾನು ಫೋನ್ ಮಾಡಿದಾಗ ಎಲ್ಲರೂ ನನ್ನ ಕರೆಗೆ ಸ್ಪಂದಿಸಿ ದ್ದಾರೆ” ಎಂದು ಅಕ್ಷಯ್ ತಂದೆಯ ಅಂತ್ಯ ಸಂಸ್ಕಾರ ನಡೆದ ನಂತರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

Leave A Reply

Your email address will not be published.

error: Content is protected !!