ನೀತಾ ಅಂಬಾನಿ ಅವರ ಒಂದು ದಿನದ ಖರ್ಚು ಎಷ್ಟಿದೆ ಗೊತ್ತಾ ನಿಜಕ್ಕೂ ಶಾ’ಕ್ ಆಗ್ತೀರಾ

ರಿಲಯನ್ಸ್ ಕಂಪನಿಯ ಒಡೆಯರಾದ ಮುಖೇಶ್ ಅಂಬಾನಿ ಅವರು ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಎಂದು ಪ್ರಖ್ಯಾತಿ ಆಗಿದ್ದರೆ ಇವರ ಒಟ್ಟಾರೆ ಆಸ್ತಿಯ ಅಂದಾಜು ಮೊತ್ತ ಸುಮಾರು ತೊಂಬತ್ತು ಮಿಲಿಯನ್ ಗಿಂತ ಅಧಿಕ ಎಂದು ಹೇಳಲಾಗುತ್ತೆ ಎಷ್ಟೆಲ್ಲ ಅಸ್ತಿ ಪಾಸ್ತಿ ಎದ್ದರು ಮುಖೇಶ್ ಅಂಬಾನಿ ಸರಳವಾಗಿ ಜೀವಿಸುತ್ತಾರೆ

ಮುಖೇಶ್ ಅಂಬಾನಿ ಏನೋ ಸರಳತೆ ಎಂದ ಇದ್ದಾರೆ ಆದರೆ ಇವರ ಪತ್ನಿ ಆದಂತಹ ಶ್ರೀಮತಿ ನೀತಾ ಅಂಬಾನಿ ಅವರ ಲೈಫ್ ಸ್ಟೈಲ್ ಬಗ್ಗೆ ನೀವೇನಾದರೂ ತಿಳಿದುಕೊಂಡರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಾ ಮೂರೂ ಲಕ್ಷದ ಶಾಂಪೇನ್ ಸೇವನೆ ಇಂದ ಹಿಡಿದು ಲಕ್ಷಾಂತರ ಬೆಲೆಯ ಸೀರೆ
ಉಡೂವರೆಗೂ ಅವರ ಜೀವನ ಶೈಲಿಯನ್ನು ನಾವು ಉದಾಹರಿಸಬಹುದು

ಸರಳವಾಗಿ ಒಂದೇ ಮಾತಿನಲ್ಲಿ ಹೇಳುವುದಾದರೆ ಇವರ ದೈನಂದಿನ ಖರ್ಚು ವೆಚ್ಚದ ಲೆಕ್ಕ ಹೇಳಿದರೆ ಜನಸಾಮಾನ್ಯರಿಗೆ ಎದೆಬಡಿತವೇ ನಿಂತುಹೋಗತ್ತೆನೋ ನೀತಾ ಅಂಬಾನಿ ಅವರಬಗ್ಗೆ ಬಹುತೇಕ ಎಲ್ಲರಿಗು ತಿಳಿದಿದೆ ಮುಖೇಶ್ ಅಂಬಾನಿ ಅವರ ಧರ್ಮ ಪತ್ನಿ ಅಂಬಾನಿ ಅವರ ಕೈ ಹಿಡಿದಮೇಲೆ ಇವರ ಅದೃಷ್ಟ ಕುಲಾಯಿಸಿತು ಅನ್ನೋದ್ರಲ್ಲಿ ತಪ್ಪೇನಿಲ್ಲ ಇವರಬಳಿ ಇರುವ ಹಾಗು ಇವರು ಬಳಸುವ ವಸ್ತುಗಳ ಬೆಲೆ ಹಾಗು ದುಬಾರಿ ಮೌಲ್ಯ ಬಗ್ಗೆ ತಿಳಿದರೆ ನಮಗೆ ರೋಮಾಂಚನವಾಗುತ್ತೆ

51 ವರ್ಷದ ನೀತಾ ಅಂಬಾನಿ ಅವರ ಸ್ಯಾರಿ ಕಲೆಕ್ಷನ್ ಹೇಗಿದೆ ಅಂದರೆ ಜಗತ್ತಿನ ಅತ್ಯಂತ ದುಬಾರಿ ಹಾಗು ಅಪರೂಪದ ಸೀರೆ ಕಲೆಕ್ಷನ್ ಮಾತ್ರ ಸಂಗ್ರಹಿಸಿದ್ದಾರೆ ಅವರು ಒಂದುಸಾರಿ ತೊಟ್ಟ ಸೀರೆಯನ್ನು ಪುನಃ ಧರಿಸುವುದಿಲ್ಲ ಅವರ ಡ್ರೆಸ್ಸಿಂಗ್ ಹಾಗು ಫ್ಯಾಷನ್ ಸೆನ್ಸ್ ಗೆ ಅನೇಕ ನಟ ನಟಿಯರು ಮಾರುಹೋಗಿದ್ದಾರೆ ಯಾವುದೇ ಸಭೆ ಸಮಾರಂಭದಲ್ಲಿ ಇವರು ರಾಯಲ್ ಆಗಿ ಕಾಣಿಸಿಕೊಳ್ಳುತ್ತಾರೆ

ಇತ್ತೀಚಿಗೆ ಇವರು ತಮ್ಮ ಮಗನಾದ ಆಕಾಶ್ ಅಂಬಾನಿಯ ಮದುವೆಯಲ್ಲಿ ಚೆನ್ನೈ ಮೂಲದ ಪ್ರಸಿದ್ಧ ಡಿಸೈನರ್ ಆದಂತಹ ಶಿವಲಿಂಗಮ್ ಎಂಬುವರು ಡಿಸೈನ್ ಮಾಡಿದಂತಹ ಪಿಂಕ್ ಬಣ್ಣದ ಆಕರ್ಶಕವಾದ ಸೀರೆಯನ್ನು ಧರಿಸಿ ಮಿಂಚಿದ್ದರು ಇದರ ಬೆಲೆ ಸುಮಾರು ೪೦ ಲಕ್ಷ ರೂಪಾಯಿ ಹಾಗು ಬ್ಲೌಸ್ ಮೇಲೆ ಭಗವಾನ್ ಅವರ ಅವರ ಆಕರ್ಷಕವಾದ ಕುಶಲ ಚಿತ್ರ ಎಂಬ್ರಾಯ್ಡ್ ಮಾಡಲಾಗಿತ್ತು ಇದು ಮೂಲತಃ ರವಿವರ್ಮನ ಕಲಾ ಕುಂಚದಿಂದ ರಚನೆ ಆದಂತಹ ಪೈಂಟಿಂಗ್ ಆಗಿದ್ದು ಇದನ್ನು ಬ್ಲೌಸ್ ಮೇಲೆ ರಚಿಸಲಾಗಿತ್ತು ಈ ಸೀರೆಯನ್ನು ನಿರ್ಮಿಸಲು ಕಾಂಚೀವರಂನ ೪೦ ಮಹಿಳಾ ವರ್ಗದವರ ಶ್ರಮ ಇತ್ತು

ನೀತಾ ಅವರಿಗೆ ಚಿನ್ನ ಹಾಗು ಕುಂದನ್ ಗಳಿಂದ ರಚನೆಯಾದ ಆಭರಣಗಳು ಎಂದರೆ ಅಚ್ಚು ಮೆಚ್ಚು ಅವರು ಧರಿಸಿದಂತಹ ಡಿಸೈನರ್ ಬಟ್ಟೆಗಳೊಂದಿಗೆ ಈ ಒಡವೆಗಳನ್ನ ಮ್ಯಾಚ್ ಮಾಡಿ ಅತ್ಯಂತ ಖ್ಯಾತಿಯಾಗಿ ಕಾಣಿಸಿಕೊಳ್ಳುವ ಅವರ ಲುಕ್ ಕಣ್ತುಂಬಿಕ್ಕೊಳ್ಳುವುದು ಖುಷಿ ಆಕಾಶ್ ಅಂಬಾನಿ ಅವರ ಮದುವೆಯಲ್ಲಿ ಬಿಳಿ ಹಾಗು ಹಸಿರು ವರ್ಣದ ನೆಕ್ಲೆಸ್ ಧರಿಸಿದ್ದರು ಇದು ಮಾಧ್ಯಮದ ದೃಷ್ಟಿಯನ್ನು ಸೆಳೆದಿತ್ತು

ಇವರ ಸಾಕಷ್ಟು ಓಡುವೆಗಳ ಕಲೆಕ್ಷನ್ ಅಲ್ಲಿಯೇ ಈ ವಜ್ರ ಹಾಗು ರೂಬಿ ಕಾಂಬಿನೇಶನ್ ನೆಕ್ಲೆಸ್ ಟಾಪ್ ಸ್ತಾನದಲ್ಲಿ ಬರುತ್ತೆ ಅಂತ ಹೇಳಲಾಗುತ್ತಿದೆ ಇವರ ಡಿಸೈನರ್ ಒಡವೆ ಅಭಿರುಚಿ ಯಾರನ್ನೇ ಆಗಲಿ ಮಂತ್ರ ಮುಗ್ದಗೊಳಿಸುತ್ತದೆ ಹೊರನೋಟಕ್ಕೆ ಮಾತ್ರ ಬೆಲೆ ಕೊಡುವ ಈ ಸಮಾಜದಲ್ಲಿ ನೀತಾ ಅವರು ಕಾಲಕ್ಕೆ ತಕ್ಕಂತೆ ಟ್ರೆಂಡಿ ಆಗಿ ಜೀವಿಸುತ್ತಿರುವುದು ಒಂದುರೀತಿ ಸರಿ ಎಂದು ಹೇಳಬಹುದು

ಇಷ್ಟೇ ಅಲ್ಲದೆ ನೀತಾ ಅವರು ಉಂಗುರದ ಆಯ್ಕೆಯಲ್ಲೂ ತುಂಬಾ ಪರ್ಫೆಕ್ಟ್ ನೂರಾರು ವಿವಿಧ ದುಬಾರಿ ಉಂಗುರಗಳಿವೆ ಅವುಗಳಲ್ಲೆಲ್ಲ ಅವರು ತೊಡುವ ಒರಿಜಿನಲ್ ಉಂಗುರ ಟಾಪ್ ಸ್ತಾನದಲ್ಲಿ ಬರುತ್ತೆ ಅದನ್ನು ಮುಖೇಶ್ ಅಂಬಾನಿ ಅವರು ಅವರಿಗೆ ಪ್ರಪೋಸ್ ಮಾಡುವಾಗ ಧರಿಸಿದ್ದರಂತೆ ಅದು 30 ವರ್ಷ ಹಳೆಯದು ಆವಾಗಲೇ ಅದರ ಬೆಲೆ ಸುಮಾರು ಒಂದು ಲಕ್ಷ ಎಪ್ಪತ್ತು ಸಾವಿರಕ್ಕೂ ಅಧಿಕ ಎನ್ನಲಾಗುತ್ತದೆ

ಇನ್ನು ಅವರ ಕೈ ಗಡಿಯಾರದ ವಿವರಣೆ ಕೇಳಿದರೆ ನೀವು ಬೆರಗಾಗೋದು ನಿಶ್ಚಿತ ಸಾಮಾನ್ಯವಾಗಿ ಎಲ್ಲರಿಗು ಕೈ ಗಡಿಯಾರ ಕಟ್ಟುವ ಅಭ್ಯಾಸ ಇರುತ್ತೆ ಅದರಲ್ಲೂ ದುಬಾರಿ ಕೈ ಗಡಿಯಾರ ಅಂದರೆ ಎಲ್ಲರಿಗು ಅಸೆ ಸಾಮಾನ್ಯರಿಗೆ ಟೈಮ್ ಸರಿ ಇಲ್ಲದಿದ್ದರೂ ಅವರ ಆದಾಯಕ್ಕಿಂತ ಹೆಚ್ಚು ಬೆಲೆಯುಳ್ಳ ಕೈ ಗಡಿಯಾರಕ್ಕೆ ಅಸೆ ಪಡುತ್ತಾರೆ ಅಂತದರಲ್ಲಿ ಎಲ್ಲದರಲ್ಲೂ ಟೈಮ್ ಚೆನಾಗಿರುವಂತಹ ನೀತಾ ಅವರಂತಹ ಶ್ರೀಮಂತರ ಆಯ್ಕೆ ಎಂದರೆ ಅದು ಸಾಮಾನ್ಯದ ಮಾತ ಇವರ ಬಳಿ ಇರುವಂತಹ ಗೋಡೆ ಗಡಿಯಾರ ಹಾಗು ಕೈ ಗಡಿಯಾರ ಜಗತ್ತಿನ ದುಬಾರಿ ಹಾಗು ಅಪರೂಪದ ಗಡಿಯಾರವಾಗಿದೆ

ಇವರು ಸೇವಿಸುವ ಚಹಾದ ಬೆಲೆ ಗೊತ್ತಾದರೆ ನೀವು ಬೆರಗಾಗುತ್ತಿರ ಇವರು ಸೇವಿಸುವ ಒಂದು ಕಪ್ ಚಹಾದ ಬೆಲೆ ಬರೋಬ್ಬರಿ ಮೂರೂ ಲಕ್ಷ ರೂಪಾಯಿ ಇವರು ಸೇವಿಸುವ ಚಹಾದಲ್ಲಿ ಅಂತದ್ದೇನಿರಬಹುದು ಎಂದು ನೀವು ಬೆರಗಾಗಿರಬಹುದು ನೀತಾ ಅವರು ಒಂದು ಟೇಬಲ್ ವೇರ್ ಅನ್ನು ಆರ್ಡರ್ ಮಾಡಿದ್ದರು ಅದು 22 ಕ್ಯಾರೆಟ್ ಗೋಲ್ಡ್ ಹಾಗು ಶುದ್ಧ ಪ್ಲಾಟಿನಂ ಟ್ರಿಮ್ ಫರ್ನಿಚರ್ ಆಗಿತ್ತು ಇದನ್ನು ಜಪಾನ್ ಇಂದ ತರಿಸಿದ್ದರು ಇದರ ಬೆಲೆ ೧.೫ ಕೋಟಿ ಹಾಗಾಗಿ ಇದರಲ್ಲಿ ತಯಾರಿಸುವ ಒಂದು ಕಪ್ ಚಹಾದ ಖರ್ಚು ಸರಿಸುಮಾರು 3 ಲಕ್ಷ ರೂಪಾಯಿ ತಗೊಳುತ್ತೆ

ಹಾಗು ಇವರಬಳಿ ಇರುವ ಒಂದು ಜೊತೆ ಫುಟ್ವೇರ್ ನ ಬೆಲೆ ಕನಿಷ್ಠ ಒಂದು ಲಕ್ಷದಿಂದ ಶುರುವಾಗುತ್ತೆ ಕೆಲವರಿಗೆ ಇಂತಹ ಆಡಂಬರದ ಮೋಜು ಮಸ್ತಿಯಲ್ಲಿ ಖುಷಿ ಹಾಗು ಆ ಖುಷಿ ಎಷ್ಟೋ ಜನಕ್ಕೆ ಗುಡಿಸಿಲಲ್ಲಿ ಮಲಗಿದಾಗಲೂ ಸಿಗುತ್ತೆ ಹಾಸಿಗೆ ಇದ್ದಷ್ಟು ಕಾಲು ಚಾಚೂ ಎಂಬುವ ಮಾತು ಈ ದೇಶದ ಬಡ ಹಾಗು ಮಾಧ್ಯಮ ವರ್ಗದ ಜನಕ್ಕೆ ಮಾತ್ರ ಸೀಮಿತವೇನೋ ಎಂದು ಹಲವುಸಲ ಇಂತಹ ಶ್ರೀಮಂತರ ಬಗ್ಗೆ ಕೇಳಿದಾಗ ಭಾಸವಾಗುತ್ತೆ ಇದು ದುಡ್ಡಿನ ದುನಿಯಾ ಇಲ್ಲಿ ದುಡ್ಡಿದ್ದೋರಿಗೆ ಮಾತ್ರ ಬೆಲೆ ದುಡ್ಡು ಇದ್ದವನಿಗೆ ಹೆಸರು ಸುಖ ಸೌಖ್ಯ ಎಲ್ಲವು ದಾಸರಾಗಿ ಬಿದ್ದಿರುತ್ತದೆ ಅಂತವರು ಹೇಗೆ ಬದುಕಿದರು ಸುದ್ದಿನೇ

Leave A Reply

Your email address will not be published.

error: Content is protected !!