ಅಪರೂಪದ ಅಪೂರ್ವ ಮದುವೆ. ಮಾತು ಬಾರದ ವಧು ಕಿವಿ ಕೇಳದ ವರನನ್ನು ಒಂದುಗೂಡಿಸಿದ್ದೇ ಇನ್ನೊಬ್ಬ ಮೂಗ

ನಮ್ಮಲ್ಲಿ ಎಲ್ಲಾ ಸರಿ ಇದ್ದು ಮದುವೆ ಆಗೋದಕ್ಕೆ 108 ಸಮಸ್ಯೆಗಳು ಇರುತ್ತೆ. ಹುಡುಗನ ಕಡೆಯವರಿಗೆ ಸರಿಯಾಗಿದ್ದು, ಹುಡುಕಿ ಕಡೆಯವರಿಗೆ ಸರಿಯಾಗುವುದಿಲ್ಲ ಹುಡುಗಿ ಕಡೆಯವರು ಮಾಡಿದ ತಪ್ಪು ಹುಡುಗನ ಕಡೆಯವರಿಗೆ ಬಹಳ ದೊಡ್ಡದಾಗಿ ಕಾಣಿಸುತ್ತೆ. ಇಂತಹ ಹಲವಾರು ಸಮಸ್ಯೆಗಳ ನಡುವೆ ಕೊನೆಗೆ ಒಂದು ವಿವಾಹವಾಗಿ ಬಂದಿರುವವರು ಶುಭ ಹಾರೈಸುತ್ತಾರೆ ಎಂದೆಟ್ಟುಕೊಳ್ಳೋಣ. ಆದರೆ ತಮ್ಮ ಅಂಗಾಂಗಗಳಲ್ಲಿಯೇ ಊನ ಇದ್ರು ಅವುಗಳನ್ನೆಲ್ಲ ಲಕ್ಷಕ್ಕೆ ತೆಗೆದುಕೊಳ್ಳದೆ ಸುಖವಾಗಿ ಸಂಸಾರ ಮಾಡ್ತೀವಿ ಎನ್ನುವ ನಂಬಿಕೆಯಿಂದ ಮದುವೆಯಾಗುವ ಅಪರೂಪದ ಜೋಡಿಗಳನ್ನು ನೋಡಿದರೆ ನಿಜಕ್ಕೂ ಖುಷಿ ಅನಿಸುತ್ತದೆ. ಇಂತಹ ಅಪರೂಪದ ಜೋಡಿ ಎಂದು ಬೆಳಗಾವಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಹೌದು ಮದುವೆಗೆ ಮಾತು ಬರಲ್ಲ ವರನಿಗೆ ಕಿವಿಗೆ ಕೇಳಿಸಲ್ಲ. ಈ ದಂಪತಿ ಮದುವೆಗೆ ಸಹಸ್ರು ಜನರು ಬಂದು ಶುಭ ಹಾರೈಸಿದ್ದಾರೆ ಅಂದ ಹಾಗೆ ಮಾತಿಗಿಂತ ಹೃದಯದ ಭಾಷೆ ಹೆಚ್ಚು ಎನ್ನುವ ವಿಶೇಷ ಜೋಡಿ ಇದು. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೂಗೇರಿ ಗ್ರಾಮದಲ್ಲಿ ಜುಲೈ 21ನೇ ತಾರೀಖಿನಂದು ಈ ವಿವಾಹ ಏರ್ಪಟ್ಟಿದೆ.

ಹಾರೋಗೆರೆ ಗ್ರಾಮದ ನಿವಾಸಿಗಳಾದ ಜ್ಯೋತೆಪ್ಪ ಮತ್ತು ಪಾರ್ವತಿ ಅವರ ಮಗಳು ಸ್ವಾತಿ ಕುಮಾರಾಣಿ ಇವರಿಗೆ ಮಾತು ಬರುವುದಿಲ್ಲ. ಇನ್ನು ಮುಗಳಖೋಡ ಗ್ರಾಮದ ಸಿದ್ದು ಮುಧೋಳ ಎಂಬ ಹುಡುಗನಿಗೆ ಕಿವಿಯೇ ಕೇಳಿಸಲ್ಲ. ಇವರಿಬ್ಬರನ ಮನೆಯವರು ಒಪ್ಪಿ ಸಂತೋಷದಿಂದ ಮದುವೆ ಮಾಡಿಕೊಟ್ಟಿದ್ದಾರೆ. ಸ್ವಾತಿ ನೋಡುವುದಕ್ಕೂ ಸುಂದರವಾಗಿದ್ದಾಳೆ ಜೊತೆಗೆ ಅಷ್ಟೇ ಚುರುಕು ಆದರೆ ಆಕೆಗೆ ಮಾತನಾಡಲು ಬರುವುದಿಲ್ಲ ಎನ್ನುವುದಷ್ಟೇ ಕೊರಗು. ಎಷ್ಟೇ ಆಸ್ಪತ್ರೆಯಿಂದ ಆಸ್ಪತ್ರೆಗೆ ಹೋದರು ಎಷ್ಟೇ ಚಿಕಿತ್ಸೆ ಮಾಡಿಸಿದರು ಯಾವುದೇ ಪ್ರಯೋಜನವಾಗಲಿಲ್ಲ ಸ್ವಾತಿಗೆ ಮದುವೆ ವಯಸ್ಸಾದರೂ ಮಾತು ಮಾತ್ರ ಬರಲಿಲ್ಲ ಹಾಗಾಗಿ ಈಕೆಗೆ ಎಲ್ಲ ರೀತಿಯ ಸಂಬಂಧವನ್ನು ಹುಡುಕುವುದಕ್ಕೆ ಆಗುವುದಿಲ್ಲ.
ಜ್ಯೋತಿಪ್ಪ ಹಾಗೂ ತಾಯಿ ಪಾರ್ವತಿ ತುಂಬಾನೇ ಸಂಕಟ ಪಟ್ಟರು. ತಮ್ಮ ಮಗಳನ್ನು ಸರಿಯಾಗಿ ನೋಡಿಕೊಳ್ಳುವ ಅವರ ಬೇಕು ಅಂತ ತುಂಬಾನೇ ಹುಡುಕಾಡಿದರು ಆದರೆ ಆಕೆಗೆ ಮಾತು ಬರುವುದಿಲ್ಲ ಎನ್ನುವ ಒಂದೇ ಕಾರಣಕ್ಕೆ ಆಕೆ ಎಷ್ಟೇ ಗುಣವಂತಿಯಾಗಿದ್ದರೂ ಅವಳನ್ನ ಮದುವೆಯಾಗುವುದಕ್ಕೆ ಯಾರು ಮುಂದೆ ಬರಲಿಲ್ಲ. ಸರಿ ಅಂತವರ ಕಥೆ ಹಾಗೆ ಬಿಡಿ. ಆದರೆ ಮೂಗರಾಗಿದ್ದ ಯುವಕರು ಕೂಡ ತಾವು ಮತ್ತೆ ಮೂಗಿಯನ್ನ ಮದುವೆಯಾದರೆ ಜೀವನವೇ ಕಷ್ಟ ಅಂತ ಆಕೆಯನ್ನು ಮದುವೆಯಾಗುವುದಕ್ಕೆ ಹಿಂದೆಟು ಹಾಕಿದ್ರು. ವಿಪರ್ಯಾಸವೆಂದರೆ ಕೊನೆಗೂ ಸ್ವಾತಿ ಯ ಮದುವೆ ಮಾಡಿಸಿದ್ದೆ ಮತ್ತು ರುವ ಮೂಗ ಯೋಗೇಶ್ ಉಮಾ ರಾಣಿ!

ಯೋಗೇಶ್ ಅವರು ತನ್ನ ಸ್ನೇಹಿತ ಮುಗುಳುಕೋಡದ ಸಿದ್ದು ಮುಧೋಳ ಅವರಿಗೆ ಸ್ವಾತಿಯ ಫೋಟೋ ಹಾಗೂ ಇತರ ವಿವರಗಳನ್ನು ವಾಟ್ಸಾಪ್ನಲ್ಲಿ ಕಳುಹಿಸಿ ಅವನ ಒಪ್ಪಿಗೆ ಪಡೆದು ನಂತರ ಎರಡು ಕುಟುಂಬದವರನ್ನು ಒಪ್ಪಿಸಿ ಕೊನೆಗೆ ಮದುವೆ ಮಾಡಿಸಿದ್ದಾರೆ. ಸಿದ್ದುಗೆ ಕಿವಿ ಕೇಳದಿದ್ದರೂ ಮಾತನಾಡಲು ಬರುತ್ತೆ ಹಾಗಾಗಿ ಮೂಕ ಸೊಸೆಯನ್ನು ಮದುವೆ ಮಾಡಿಸಿಕೊಂಡು ಬಂದಿದ್ದಕ್ಕೆ ಬೇಸರ ಇಲ್ಲ ಅಂತ ಸಿದ್ದು ತಂದೆ ಗಿರಿಮಲ್ಲಪ್ಪ ಮುಧೋಳ ಹೇಳಿದ್ದಾರೆ.

ಇನ್ನು ಈ ಅಪರೂಪದ ಮದುವೆಗೆ ಶಾಸಕ ಪಿ ರಾಜೀವ್ ಬಂದು ನಮ್ಮ ಜೋಡಿಗೆ ಆಶೀರ್ವಾದ ಮಾಡಿದ್ದಾರೆ. ಈ ಸಮಯದಲ್ಲಿ ಮಾತನಾಡಿದ ಅವರು ನಾನು ಹೃದಯದ ಅಂತರಾಳದಿಂದ ಈ ಮದುವೆಯಲ್ಲಿ ಭಾಗವಹಿಸಿದ್ದೇನೆ ಮಾತುಗಳು ಒಂದು ಹಂತಕ್ಕೆ ನಿಶಬ್ದ ಅನಿಸುತ್ತೆ. ಮಾತಿಗಿಂತಲೂ ಮೌನವೇ ದೊಡ್ಡ ಶಕ್ತಿ ಇದರಲ್ಲಿ ಸಾಕಷ್ಟು ಅರ್ಥವಿದೆ ಮೌನ ಎಲ್ಲವನ್ನು ಹೇಳುತ್ತೆ ಅಂತ ಪಿ ರಾಜು ಹೇಳಿದ್ದಾರೆ. ಮಾತನಾಡಲು ಪ್ರಾರಂಭಿಸಿದರೆ ಮನುಷ್ಯನ ಬಾಯಿಯ ಮಾತಿನ ಅವಶ್ಯಕತೆ ಇರುವುದಿಲ್ಲ ಎನ್ನುವುದು ಅವರ ಅಭಿಪ್ರಾಯ. ಇವರ ಬದುಕು ಮಾದರಿಯಾಗಲಿ ಎಲ್ಲರಿಗೂ ಆದರ್ಶವಾಗಲಿ, ನೂರ್ಕಾಲ ನವ ವಧು ವರರು ಚೆನ್ನಾಗಿ ಬಾಳಲಿ ಅಂತ ಶಾಸಕ ಪಿ ರಾಜೀವ ಹಾರೈಸಿದ್ದಾರೆ.

Leave a Comment

error: Content is protected !!