ಕುಡಿದ ಮತ್ತಿನಲ್ಲಿ ರಾತ್ರಿ ಮಲಗಿದ್ದ ಹೆಂಡತಿ ಮತ್ತು ಮಗಳ ಮೇಲೆ ತಂದೆ ಮಾಡಿದ ಕೆಲಸವೇನು ನೋಡಿ! ತಂದೆಯ ಹೆಸರಿಗೆ ಕಳಂಕ ಈ ಮನುಷ್ಯ

ಈ ಘಟನೆ ಯಶವಂತಪುರ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ. ಆತನಲ್ಲಿ ಎಂಥಹ ಕ್ರೌರ್ಯ ಇರಬಹುದು ನೋಡಿ. ತನ್ನ ಹೆಂದತಿ ಮಗಳ ಪಾಲಿಗೆ ವಿಲನ್ ಆಗಿದ್ದಾನೆ. ಈ ಮಹಾನುಭಾವನ ಹೆಸರು ಧನೇಂದ್ರ. ಚಿತ್ತೂರು ಮೂಲದ ಧನೇಂದ್ರ ಕೋಲಾರ ಮೂಲಕ ಅನಸೂಯಾ ಎಂಬವಳ ಜೊತೆ ಮದುವೆಯಾಗಿ 15 ವರ್ಷಗಳೇ ಆಗಿತ್ತು. ಇವರಿಗೆ 14 ವರ್ಷ ವಯಸ್ಸಿನ ಮಗಳೂ ಇದ್ದಳು. ಧನೇಂದ್ರ ಹಾಗೂ ಅನುಸೂಯ ದಂಪತಿ ಯಶವಂತಪುರದಲ್ಲಿ ಟೈಲರಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

ಅನುಸೂಯ ತನ್ನ ಮಗಳ ವಿದ್ಯಾಭ್ಯಾಸಕ್ಕಾಗಿ ಆಗಾಗ ಚೀಟಿ ಕಟ್ಟಿ ಹಣವನ್ನು ಉಳಿಸಿದ್ದರು. ಹೀಗೆ ಸುಮಾರು ಒಂದುವರೆ ಲಕ್ಷ ರೂಪಾಯಿಗಳಷ್ಟು ಹಣವನ್ನು ಕೂಡಿಟ್ಟಿದ್ದರು ಅನುಸೂಯ. ಆದರೆ ಧನೇಂದ್ರ ಈ ಹಣವನ್ನು ಹಿಂತಿರುಗಿ ಕೊಡುವುದಾಗಿ ಹೇಳಿ ಆಕೆಯಿಂದ ಹಣವನ್ನು ಪಡೆದುಕೊಂಡಿದ್ದ. ಆದರೆ ಅದನ್ನು ಖರ್ಚು ಮಾಡಿಕೊಂಡಿದ್ದ. ಹೆಂಡತಿ ವಾಪಸ್ ಹಣ ಕೇಳಿದಾಗ ಕೊಡಲು ಆತನ ಬಳಿ ಹಣವಿರಲಿಲ್ಲ. ಮೇಲಾಗಿ ಮತ್ತೂ ಒಂದು ಲಕ್ಷ ರೂಪಾಯಿ ಸಾಲವನ್ನು ಕೂಡ ಮಾಡಿಕೊಂಡಿದ್ದ ಧನೆಂದ್ರ.

ಆದರೆ ಮಗಳ ಫೀಸ್ ಖರ್ಚು ಹಾಗೂ ಇತರ ವಿದ್ಯಾಭ್ಯಾಸದ ಖರ್ಚಿಗಾಗಿ ಹಣ ವಾಪಸ್ ಕೊಡುವಂತೆ ಅನುಸೂಯಾ ತಾಕೀತು ಮಾಡಿದ್ದರು. ಅಲ್ಲದೇ ಜೂನ್ 22 ರವರೆಗೆ ಗಡುವು ಕೊಟ್ಟು ಒಂದುವರೆ ಲಕ್ಷ ಹಣವನ್ನು ಹಿಂತಿರುಗಿಸಬೇಕು ಎಂದು ಕಟ್ಟುನಿಟ್ಟಾಗಿ ಹೇಳಿದ್ದರು ಅನುಸೂಯ. ಹಣವನ್ನು ಹೇಗೂ ತೀರಿಸಲು ಸಾಧ್ಯವಿಲ್ಲ ಹಾಗಾಗಿ ಪತ್ನಿಯನ್ನೇ ಮುಗಿಸೋದೇ ಸರಿ ಅಂತ ಧನೇಂದ್ರ ನಿರ್ಧರಿಸಿ ಬಿಟ್ಟಿದ್ದ. ತನ್ನ ಯೋಜನೆಯಂತೆ ಕಳೆದ ಮಂಗಳವಾರ ರಾತ್ರಿ ಕುಡಿದು ಮನೆಗೆ ಬಂದ ಧನೇಂದ್ರ ಮಲಗಿದ್ದ ಪತ್ನಿ ಹಾಗೂ ಮಗಳನ್ನು ನೋಡಿದ್ದಾನೆ.

ಇದೇ ಸರಿಯಾದ ಸಮಯ ಅಂತ ಪತ್ನಿ ಮಲಗಿದ್ದಲ್ಲೇ ಚಾಕುವಿನಿಂದ ಆಕೆಯ ಕುತ್ತಿಗೆಗೆ ಇ’ರಿದು ಕೊ’ಲೆ ಮಾಡಿದ್ದಾನೆ. ಜೊತೆಗೆ ಮಗಳ ಕು’ತ್ತಿಗೆಗೂ ಚಾಕುವಿನಿಂದ ಚು’ ಚ್ಚಿದ್ದಾನೆ. ಆದರೆ ಮಗಳು ತಾನು ಸತ್ತಂತೆಯೇ ನಟಿಸಿ ಬೆಳಿಗ್ಗೆಯವರೆಗೂ ಹಾಗೆಯೇ ಮಲಗಿದ್ದಳು. ಬೆಳಿಗ್ಗೆ ಸುಮಾರು ಎಂಟು ಗಂಟೆಯ ಹೊತ್ತಿಗೆ ಮಗಳು ಬದುಕಿದ್ದನ್ನು ಕಂಡು ಧನೇಂದ್ರ, ಕುಡಿದ ಮತ್ತಿನಲ್ಲಿ ತಾನು ಮಾಡಿದ ಕೃತ್ಯವನ್ನು ನೆನೆದು ದುಃಖ ಪಟ್ಟಿದ್ದಾನೆ. ಮಗಳು ಬದುಕಿದ್ದಾಳೆ, ತಾನು ಬದುಕಬೇಕು ಅನ್ನೋದು ಮಧ್ಯದ ಅಮಲು ಇಳಿದ ಮೇಲೆ ಆತನಿಗೆ ಮನವರಿಕೆಯಾಗಿದೆ.

ಕೊನೆಗೆ ಧನೇಂದ್ರ ತಾನೇ ಪೊಲೀಸರಿಗೆ ಕರೆ ಮಾಡಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಧನೇಂದ್ರನನ್ನು ಅರೆಸ್ಟ್ ಮಾಡಿದ್ದಾರೆ. ಜೊತೆಗೆ ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ. ಇದೀಗ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಧರ್ಮೇಂದ್ರನ ಮಗಳು. ಆದರೆ ಧನೇಂದ್ರ ಮಾತ್ರ ಸದ್ಯ ಜೈಲು ಪಾಲಾಗಿದ್ದಾನೆ. ಯಶವಂತಪುರ ಪೊಲೀಸರು ಧನೇಂದ್ರನನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.

Leave a Comment

error: Content is protected !!