ಇಡೀ ರಾತ್ರಿ ಗಂಡನ ಶ’ವದ ಪಕ್ಕ ಕುಳಿತುಕೊಂಡು ಡವ್ ಮಾಡಿದ ಪತ್ನಿ. ಒಳ ಉಡುಪಿನಲ್ಲಿ ಬಚ್ಚಿಟ್ಟುಕೊಂಡಿದ್ದ ಮಾಂಗಲ್ಯ ಸರದ ಹಿಂದಿತ್ತು ಬೆಚ್ಚಿ ಬೀಳುವಂತಹ ರಹಸ್ಯ

ಆಂಧ್ರಪ್ರದೇಶದ ಚಿತ್ತೂರು ಮೂಲದ ಶಂಕರ್ ರೆಡ್ಡಿ ಎಂಬ ಪುರುಷನ ಕೊ’ಲೆ ಪ್ರಕರಣ ಇದೀಗ ರೋಚಕ ತಿರುವು ಪಡೆದಿದೆ. ಶಂಕರ್ ರೆಡ್ಡಿಯ ಒಳ ಉಡುಪಿನಲ್ಲಿ ಸಿಕ್ಕ ಮಾಂಗಲ್ಯ ಸರದ ತನಿಖೆ ನಡೆಸಿ ಪೊಲೀಸರು ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ. ಇಂತಹ ಭಯಾನಕ ಹೆಣ್ಣು ಮಗಳು ಕೂಡ ಇದ್ದಾಳಾ ಎನ್ನುವ ಮಟ್ಟಿಗೆ ಪೊಲೀಸರು ದಂಗಾಗಿದ್ದಾರೆ. ಅಷ್ಟಕ್ಕೂ ಶಂಕರ್ ರೆಡ್ಡಿ ಪತ್ನಿ ಮಾಡಿದ್ದೇನು ಮತ್ತು ಶಂಕರ್ ರೆಡ್ಡಿಗೆ ಆ ರಾತ್ರಿ ಆಗಿದ್ದೇನು ಗೊತ್ತಾ?

ಶಂಕರ ರೆಡ್ಡಿ ಮೂಲತಃ ಆಂಧ್ರಪ್ರದೇಶದವನು. ಈತ ಬೆಂಗಳೂರಿನ ಯಶವಂತಪುರದಲ್ಲಿ ವಾಸ ಮಾಡುತ್ತಿದ್ದ. ಈತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಹಾಗೆ ಇವನು ದಿಲ್ಲಿ ರಾಣಿ ಎಂಬ ಚಿತ್ತೂರಿನ ಹುಡುಗಿಯೊಬ್ಬಳನ್ನು ಮದುವೆಯಾಗಿದ್ದ. ಈಕೆಯ ಹೆಸರು ದಿಲ್ಲಿ ರಾಣಿ ಅಂತ. ಶಂಕರ್ ರೆಡ್ಡಿ ಮತ್ತು ದಿಲ್ಲಿ ರಾಣಿ ದಂಪತಿಗೆ ಏಳು ವರ್ಷದ ಮಗ ಕೂಡ ಇದ್ದ. ಮದುವೆಯಾದ ವರ್ಷದಿಂದ ಏಳು ವರ್ಷದ ತನಕ ಇಬ್ಬರೂ ಸುಖ ಸಂಸಾರ ನಡೆಸುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಏಳು ವರ್ಷ ಕಳೆದ ನಂತರ ಇಬ್ಬರ ಮಧ್ಯೆ ಮನಸ್ತಾಪ ಮೂಡಿತ್ತು.

ಶಂಕರ್ ರೆಡ್ಡಿ ಮತ್ತು ದಿಲ್ಲಿ ರಾಣಿ ಮಧ್ಯೆ ಭಿನ್ನಾಭಿಪ್ರಾಯಗಳು ಇದ್ದ ಕಾರಣ ಗಂಡನನ್ನು ತೊರೆದು ದಿಲ್ಲಿ ರಾಣಿ ತನ್ನ ತವರುಮನೆ ಚಿತ್ತೂರಿಗೆ ಹೋಗಿ ವಾಸ ಮಾಡಲು ಪ್ರಾರಂಭಿಸುತ್ತಾಳೆ. ಈ ವೇಳೆ ನೆರೆಮನೆಯ ನಿವಾಸಿ ಜತೆ ಲವ್ವಿಡವ್ವಿ ಶುರುವಿಟ್ಟುಕೊಂಡಿದ್ದಳು. ಇದ್ಯಾವುದರ ಪರಿವೂ ಶಂಕರ್ ಗೆ ಇರಲಿಲ್ಲ. ಶಂಕರ್ ರೆಡ್ಡಿ ಪತ್ನಿಗೆ ಕರೆ ಮಾಡಿ ಮನೆಗೆ ವಾಪಾಸ್ಸು ಬರುವಂತೆ ಎಡಬಿಡದೆ ಮನವಿ ಮಾಡಿದ್ದ. ಹೆಂಡತಿಯ ಪಾಲಕರಿಗೂ ತನ್ನ ಬಳಿಗೆ ಕಳುಹಿಸುವಂತೆ ಮನವಿ ಮಾಡಲು ಪ್ರಾರಂಭಿಸಿದ್ದ.

ತನ್ನ ಗಂಡನ ಮನೆಗೆ ಬರುವಂತೆ ಪೀಡಿಸುತ್ತಿದ್ದಾನೆ ಎಂದು ದಿಲ್ಲಿ ರಾಣಿ ನೆರೆಮನೆಯ ಪ್ರಿಯಕರನಿಗೆ ಹೇಳುತ್ತಾಳೆ. ಆಗ ಪ್ರಿಯಕರ ದಿಲ್ಲಿ ರಾಣಿಯ ಬಳಿ ಗಂಡನನ್ನು ಕೊ’ಲೆ ಮಾಡಿ ಸುಳ್ಳು ಕಥೆ ಕಟ್ಟುವಂತೆ ಹೇಳುತ್ತಾನೆ. ನೆರಮನೆಯ ಹುಡುಗನ ಕಾ’ಮ’ದ ಬಲೆಗೆ ಬಿದ್ದಿದ್ದ ದಿಲ್ಲಿ ರಾಣಿ ಬೆಂಗಳೂರಿಗೆ ಬಂದು ಗಂಡನ ಮನೆ ಗೆ ಬರುತ್ತಾಳೆ. ಏಪ್ರಿಲ್ 28 ರ ಮಧ್ಯರಾತ್ರಿ 12:30 ಕ್ಕೆ ಗಂಡ ಮತ್ತು ಮಗ ಮಲಗಿದ್ದ ಸಮಯದಲ್ಲಿ ದಿಲ್ಲಿ ರಾಣಿ ಎದ್ದು ಚಾಕು ತೆಗೆದುಕೊಂಡು ನಿದ್ದೆಯಲ್ಲಿದ್ದ ಗಂಡನಿಗೆ ಇರಿದು ಸಾ’ಯಿ’ಸಿದ್ದಾಳೆ. ಹಾಗೆ ಚಾಕುವಿನಿಂದ ತನ್ನ ಕೈ ಗೆ ಗಾಯ ಮಾಡಿಕೊಂಡು ಎಚ್ಚರತಪ್ಪಿದವಳಂತೆ ಡವ್ ಮಾಡಿ ಮಲಗಿದ್ದಳು.

ತದನಂತರ ಬೆಳಿಗ್ಗಿನ ಜಾವ ಏಳು ವರ್ಷದ ಮಗ ಎದ್ದು ನೋಡಿದಾಗ ಇಬ್ಬರು ಎಚ್ಚರತಪ್ಪಿ ಮಲಗಿದ್ದನ್ನು ನೋಡಿ ಮನೆ ಮಾಲೀಕನಿಗೆ ಹೋಗಿ ವಿಷಯ ತಿಳಿಸಿದ್ದಾನೆ. ಆಸ್ಪತ್ರೆಗೆ ದಾಖಲಿಸಿದ ನಂತರ ಶಂಕರ್ ರೆಡ್ಡಿ ಸಾ’ವ’ನ್ನಪ್ಪಿದ್ದಾನೆ ವಿಷಯ ಗೊತ್ತಾಗುತ್ತದೆ. ತದನಂತರ ಪೊಲೀಸರು ದಿಲ್ಲಿ ರಾಣಿಯನ್ನು ಈ ವಿಚಾರವಾಗಿ ಪ್ರಶ್ನಿಸಿದಾಗ ಯಾರೋ ಅಪರಿಚಿತರು ಬಂದು ಹ’ಲ್ಲೆ ಮಾಡಿ ನನ್ನ ಗಂಡನನ್ನು ಸಾ’ಯಿ’ಸಿದ್ದಾರೆ ಮತ್ತು ನನ್ನ ಮಾಂಗಲ್ಯ ಸರವನ್ನು ಕಳ್ಳತನ ಮಾಡಿದ್ದಾರೆ ಎಂದು ಕಥೆ ಕಟ್ಟಿದ್ದಾಳೆ.

ಸ್ವಲ್ಪ ಗಂಟೆಗಳ ನಂತರ ಪೊಲೀಸರು ಕೂಲಂಕುಷವಾಗಿ ತನಿಖೆ ಯನ್ನು ಪರಿಶೀಲಿಸಿದಾಗ ದಿಲ್ಲಿ ರಾಣಿಯ ಒಳ ಉಡುಪಿನಲ್ಲಿ ಮಾಂಗಲ್ಯಸರ ಇರುವುದು ಗೊತ್ತಾಗಿದೆ. ಕಳ್ಳ ಬಂದು ನನ್ನ ಮಾಂಗಲ್ಯ ಸರವನ್ನು ಕದ್ದು ಕೊಂಡು ಹೋಗಿದ್ದಾನೆ ಎಂದು ಹೇಳಿದ್ದ ದಿಲ್ಲಿ ರಾಣಿ ಈಗ ಪೊಲೀಸರ ಬಲೆಗೆ ಬೀಳುತ್ತಾಳೆ. ಅನುಮಾನಗೊಂಡ ಪೊಲೀಸರು ತೀವ್ರ ವಿಚಾರಣೆ ಮಾಡಿದಾಗ ದಿಲ್ಲಿ ರಾಣಿ ನಡೆದ ಎಲ್ಲಾ ವಿಚಾರವನ್ನು ಕುಲಂಕುಶವಾಗಿ ಬಿಚ್ಚಿಟ್ಟಿದ್ದಾಳೆ. ದಿಲ್ಲಿ ರಾಣಿ ಇದೀಗ ತನ್ನ ನೆರೆ ಮನೆಯ ರಾಜನ ಜೊತೆ ಸೆರೆವಾಸ ಅನುಭವಿಸುತ್ತಿದ್ದಾಳೆ.

Leave a Comment

error: Content is protected !!