
ಚಿಕಿತ್ಸೆಗೆಂದು ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಯುವತಿ ಐದೇ ದಿನದಲ್ಲಿ ಡಾಕ್ಟರ್ ಜೊತೆ ಮದುವೆ.ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ
ಗಂಡು ಹೆಣ್ಣಿನ ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಎಂಬ ಮಾತಿದೆ. ಈ ಮಾತು ನೂರಕ್ಕೆ ನೂರು ಸತ್ಯ. ಪ್ರೀತಿ ಕುರುಡು. ಜಾತಿ ಭಾಷೆ ದೇಶ ಯಾವುದೇ ಭೇದವಿಲ್ಲದೆ ಗಂಡು ಹೆಣ್ಣಿನ ಮಧ್ಯೆ ಪ್ರೀತಿ ಹುಟ್ಟುತ್ತೆ. ಎಷ್ಟೇ ಅಡೆತಡೆಗಳಿದ್ದರೂ ಪ್ರೀತಿ ಎರಡು ಜೀವಗಳನ್ನು ಒಂದು ಮಾಡುತ್ತೆ ಇದಕ್ಕೆ ಬಿಹಾರದ ಹಾಜಿಪುರದಲ್ಲಿ ನಡೆದ ಒಂದು ಘಟನೆ ಪ್ರತ್ಯಕ್ಷ ಉದಾಹರಣೆ. ತನ್ನ ತಾಯಿಯನ್ನು ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗಿದ್ದ ಯುವತಿ ಡಾಕ್ಟರ್ ಬಿದ್ದು ಐದೇ ದಿನದಲ್ಲಿ ಮದುವೆಯಾದ ಕುತೂಹಲ ಘಟನೆ ಬಿಹಾರದಲ್ಲಿ ನಡೆದಿದೆ.
ಪ್ರೀತಿ ಸಿಂಗ್ ಎನ್ನುವ ಯುವತಿಯ ತಾಯಿ ವಯೋವೃದ್ಧ ಕಾಯಿಲೆಯಿಂದ ಬಳಲುತ್ತಿದ್ದ ಕಾರಣ ಆಸ್ಪತ್ರೆಗೆ ತನ್ನ ತಾಯಿಯನ್ನು ಕರೆದುಕೊಂಡು ಹೋಗಿದ್ದಳು. ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ದಾಖಲು ಮಾಡಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಈ ಎರಡೇ ದಿನಗಳ ಸಮಯದಲ್ಲಿ ಯುವತಿಗೆ ಆಸ್ಪತ್ರೆಯ ಕಾರ್ಯಕರ್ತನೊಬ್ಬನ ಜೊತೆ ಪ್ರೇಮಾಂಕುರವಾಗುತ್ತದೆ. ಪ್ರೀತಿ ಸಿಂಗ್ ತಾಯಿಯ ಡೇಲಿ ಚೆಕ್ ಅಪ್ ಮತ್ತು ಔಷಧಿಗಳನ್ನು ಕೊಡುವ ಕೆಲಸವನ್ನು ಮಣಿಂದರ್ ಕುಮಾರ್ ಸಿಂಗ್ ವೈದ್ಯ ಮಾಡುತ್ತಿದ್ದ.
ಮಣಿಂದರ್ ಕುಮಾರ್ ಸಿಂಗ್ ಮತ್ತು ಪ್ರೀತಿ ಸಿಂಗ್ ಮಧ್ಯೆ ಒಂದೇ ದಿನದಲ್ಲಿ ಸ್ನೇಹ ಬೆಳೆದು ಒಂದೇ ದಿನದಲ್ಲಿ ಸ್ನೇಹ ಪ್ರೀತಿಗೆ ಬದಲಾಗಿದೆ. ನೋಡೋಕೆ ಚೆನ್ನಾಗಿದ್ದ ಪ್ರೀತಿಯನ್ನು ನೋಡಿದ ವೈದ್ಯ ಒಂದೇ ಕ್ಷಣಕ್ಕೆ ಬೋಲ್ಡ್ ಆಗಿದ್ದ. ಎರಡನೇ ದಿನಕ್ಕೆ ಪ್ರೀತಿ ಸಿಂಗ್ ಹತ್ತಿರ ಹೋಗಿ ಈ ವೈದ್ಯ ಮದುವೆಯಾಗೋಕೆ ಪ್ರಸ್ತಾಪ ಮಾಡಿದ್ದಾನೆ. ಆಗ ಆ ಹುಡುಗಿ ಅನಾರೋಗ್ಯದಿಂದ ಬಳಲುತ್ತಿರುವ ತನ್ನ ತಾಯಿಯ ಅನುಮತಿ ಪಡೆಯಲು ಹೇಳಿದ್ದಾಳೆ. ತಕ್ಷಣವೇ ಮಣಿಂದರ್ ಕುಮಾರ್ ಆ ಹುಡುಗಿಯ ತಾಯಿಯ ಬಳಿ ಹೋಗಿ ನಿಮ್ಮ ಮಗಳನ್ನು ಮದುವೆ ಆಗುತ್ತೇನೆ ಎಂದು ಹೇಳಿದ್ದಾನೆ.
ಅಷ್ಟೇ ಅಲ್ಲ ವೈದ್ಯ ತಾಯಿಯ ಬಳಿ ತನಗೆ ಯಾವುದೇ ರೀತಿಯ ವರದಕ್ಷಿಣ ಬೇಕಾಗಿಲ್ಲ ನಿಮ್ಮ ಮಗಳನ್ನು ತನಗೆ ಮದುವೆ ಮಾಡಿಕೊಟ್ಟರೆ ಅಷ್ಟೇ ಸಾಕು ಎಂದು ಕೇಳಿದ್ದಾನೆ. ತಾಯಿಗೆ ಆ ಕ್ಷಣ ವೈದ್ಯನ ಮಾತನು ಕೇಳಿ ಆಶ್ಚರ್ಯವಾಯಿತು ಹಾಗೆ ಸಂತೋಷ ಕೂಡ ಆಯ್ತು. ಕಣ್ಣು ಮುಚ್ಚಿಕೊಂಡು ತಾಯಿ ಮಗಳನ್ನು ಮದುವೆ ಮಾಡಲು ಒಪ್ಪಿಗೆ ಕೊಟ್ಟಳು. ಆ ಹುಡುಗಿಗೆ ತಂದೆ ಇರಲಿಲ್ಲ. ತಾಯಿಯ ಅನುಮತಿ ಸಿಕ್ಕಿದ್ದೇ ಪ್ರೀತಿ ಸಿಂಗ್ ಕೂಡ ವೈದ್ಯನ ಮದುವೆಯಾಗಲು ನಾಚಿಕೆಯಿಂದ ಒಪ್ಪಿಕೊಂಡಳು.
ಈ ಜೋಡಿಗಳು ಒಂದೇ ದಿನದಲ್ಲಿ ಸ್ನೇಹ ಬೆಳೆಸಿ ಎರಡೇ ದಿನದಲ್ಲಿ ಪ್ರೇಮಿಗಳಾಗಿ ಮತ್ತು ಐದೇ ದಿನದಲ್ಲಿ ಗಂಡ ಹೆಂಡತಿ ಕೂಡ ಆಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಐದು ದಿನದಲ್ಲಿ ಚೇತರಿಸಿಕೊಂಡಳು ತಾಯಿ ಚೇತರಿಸಿಕೊಳ್ಳುತ್ತಿದ್ದ ಮರುದಿನವೇ ಈ ಜೋಡಿ ಹಸೆಮಣೆ ಹತ್ತಿದ್ದಾರೆ. ೫ ನೇ ದಿನಕ್ಕೆ ಪವಿತ್ರ ವಿವಾಹವಾಗಿ ಎರಡೂ ಕುಟುಂಬಗಳ ಸಮ್ಮುಖದಲ್ಲಿ ನಗರದ ಪಾತಾಳೇಶ್ವರ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ವಿವಾಹ ನೆರವೇರಿತು. ಈ ಮದುವೆಯಲ್ಲಿ, ಆರೋಗ್ಯ ಕಾರ್ಯಕರ್ತರು ಮದುವೆಯ ಮೆರವಣಿಗೆಯಲ್ಲಿ ನೃತ್ಯ ಮಾಡುತ್ತಿರುವುದು ಕಂಡುಬಂದರು. ವೈದ್ಯ ಮಣಿಂದರ್ ಮತ್ತು ಪ್ರೀತಿ ಸಿಂಗ್ ಕೂಡ ಪರಸ್ಪರರ ಪ್ರೀತಿಯಲ್ಲಿ ಇದ್ದದ್ದು ಕಂಡು ಬಂದಿದೆ.