ಈ ದೇಶದಲ್ಲಿ ಪೆಟ್ರೋಲ್ ರೇಟ್ ಗಿಂತ ನೀರಿಗೆ ಹೆಚ್ಚು ಬೆಲೆ ಯಾಕೆ ಗೊತ್ತೇ?

ಪ್ರಕೃತಿ ಮಾನವನಿಗೆ ಉಸಿರಾಡಲು ಗಾಳಿ, ಕುಡಿಯೋ ನೀರು, ವಾಸಕ್ಕೆ ಯೋಗ್ಯವಾದ ಸ್ಥಳ, ಬೆಂಕಿ ಹೀಗೆ ಹೇರಳವಾಗಿ ಅನೇಕ ಅನುಕೂಲಕರ ಪ್ರಾಕೃತಿಕ ಸಂಪನ್ಮೂಲಗಳನ್ನು ಒದಗಿಸಿದೆ. ನಾವು ಅದನ್ನು ಎಷ್ಟರ ಮಟ್ಟಿಗೆ ಸರಿಯಾಗಿ ಉಪಯೋಗಿಸಿಕೊಳ್ಳುತ್ತಿದ್ದೇವೆ ಮತ್ತು ನಾವು ನಮ್ಮ ಪ್ರಕೃತಿಗೆ ಏನನ್ನು ಹಿಂದಿರುಗಿಸಿ ನೀಡುತ್ತಿದ್ದೇವೆ ಎಂಬುದು ನಮಗೆ ತಿಳಿದಿದೆ. ಅದರಲ್ಲೂ ನಾವು ಪ್ರಕೃತಿಯಿಂದ ದೊರೆಯುವ ಪಂಚಭೂತಗಳಲ್ಲಿ ಒಂದಾದ ಜುಲೈ ಸಂಪನ್ಮೂಲ ಇದನ್ನು ಎಷ್ಟರ ಮಟ್ಟಿಗೆ ಸದುಪಯೋಗ ಪಡೆದುಕೊಳ್ಳುತ್ತಿದ್ದೇವೆ ಮತ್ತು ಎಷ್ಟು ಜಲ ಸಂಪನ್ಮೂಲಗಳು ದುರುಪಯೋಗೊಂಡು ಬರಿದಾಗುತ್ತಿದೆ ಎಷ್ಟೋ ಕಡೆ ನೀರಿಗಾಗಿ ಹಾಹಾಕಾರ ಉಂಟಾಗಿದೆ ಅದರ ಬಗ್ಗೆ ಒಂಚೂರು ತಿಳಿದುಕೊಳ್ಳೋಣ ಬನ್ನಿ.

ನಾವಿಲ್ಲಿ ಹೇಳೋಕೆ ಹೊರಟಿರುವುದು ಜಗತ್ತಿನಲ್ಲಿ ಅತ್ಯಂತ ಶ್ರೀಮಂತ ರಾಷ್ಟ್ರದ ಬಗ್ಗೆ ಇಲ್ಲಿ ನೀರಿಗಿಂತ ಪೆಟ್ರೋಲ್ ಉತ್ಪಾದನೆ ಹೆಚ್ಚು ಹಾಗಾಗಿ ಈ ದೇಶದ ಜನರಿಗೆ ಪೆಟ್ರೋಲ್ ಉತ್ಪಾದನೆಯಿಂದಾಗಿ ಹಣಕ್ಕೆ ಏನೂ ಯಾವುದೇ ಕೊರತೆ ಇಲ್ಲ. ಆದರೆ ಈ ದೇಶದ ಜನರಿಗೆ ನೀರಿನ ಕೊರತೆ ಮುಖ್ಯವಾಗಿ ಕಾಡುತ್ತಿರುವ ಸಮಸ್ಯೆ. ಅಲ್ಲಿನ ಜನರಿಗೆ ನಮ್ಮ ದೇಶದಲ್ಲಿ ಇರುವ ಹಾಗೆ ಯಾವುದೇ ರೀತಿಯ ನೀರಿನ ಒರತೆಗಳಾಗಲೀ, ಕೆರೆ ಬಾವಿ, ನದಿ ಇಂತಹ ಯಾವುದೇ ಜುಲೈ ಮೂಲಗಳು ಇಲ್ಲ ಆದರೆ ಜನರು ನೀರಿಗಾಗಿ ಕೇವಲ ಸಮುದ್ರದ ನೀರನ್ನೇ ಅವಲಂಬಿಸಿದ್ದಾರೆ. ಹಾಗಾದರೆ ಆ ದೇಶ ಯಾವುದು? ಅದೇ ಜಗತ್ತಿನ ಅತ್ಯಂತ ಶ್ರೀಮಂತ, ಸುಂದರ, ದುಬಾರಿ ರಾಷ್ಟ್ರ (ದುಬೈ ಯುನೈಟೆಡ್ ಅರಬ್ ಎಮಿರೇಟ್ಸ್ UAE ).

ದುಬೈ ವ್ಯಾಪಾರಿಗಳು, ಉದ್ಯಮಿಗಳು ಜಗತ್ತಿನ ಅತ್ಯಂತ ಶ್ರೀಮಂತ ವರ್ಗದವರಿಗೆ ಹೇಳಿ ಮಾಡಿಸಿದ ತಾಣ. ಇಲ್ಲಿ ನಾವು ಅತ್ಯಂತ ಎತ್ತರದ ಕಟ್ಟಡಗಳನ್ನು ಕಾಣಬಹುದು. ಇಲ್ಲಿ ಉತ್ಪತ್ತಿ ಆಗುವ ಪೆಟ್ರೋಲ್ ಇಂದ ದುಬೈ ಜನರ ಜೀವನ ನಡೆಯುವುದು ಇವರಿಗೆ ಹಣಕ್ಕೇನು ಕೊರತೆ ಇಲ್ಲ. ಇಷ್ಟೊಂದು ಶ್ರೀಮಂತ ರಾಷ್ಟ್ರದ ವಿಸ್ತೀರ್ಣ ನಮ್ಮ ಪಕ್ಕದ ರಾಜ್ಯ ತೆಲಂಗಾಣ ಅದಕ್ಕಿಂತಲೂ ಚಿಕ್ಕದು ಅಲ್ಲಿನ ಜನಸಂಖ್ಯೆ ಸುಮಾರು ಹತ್ತು ಕೋಟಿ ಇರಬಹುದು ಅಷ್ಟೇ.

ಇಲ್ಲಿ ಯಾವುದೇ ರೀತಿಯ ಜಲ ಮೂಲ ಇಲ್ಲ ಹಾಗಿದ್ದರೂ ಈ ದೇಶದಲ್ಲಿ ಎಲ್ಲಾ ಜನರಿಗೂ ಸಮರ್ಪಕವಾಗಿ ಹೇಗೆ ನೀರನ್ನು ಒದಗಿಸುತ್ತಿದ್ದಾರೆ ಎನ್ನುವುದು ಎಲ್ಲರ ಮುಂದಿರುವ ದೊಡ್ಡ ಯಕ್ಷ ಪ್ರಶ್ನೆ. ಇಡೀ ಪ್ರಪಂಚವನ್ನು ನಾವು ಅತೀ ಹೆಚ್ಚು ನೀರನ್ನು ಬಳಸುವ ರಾಷ್ಟ್ರವನ್ನು ಗಣನೆಗೆ ತೆಗೆದುಕೊಂಡರೆ ಅದು ಈ ದುಬೈ ಮಾತ್ರ. ಅಲ್ಲಿನ ಜನರು ಕೇವಲ ಸಮುದ್ರದಿಂದ ನೀರನ್ನು ಶೇಖರಿಸಿ ಅದನ್ನು ಶುದ್ಧೀಕರಿಸಿ ದಿನ ನಿತ್ಯದ ಎಲ್ಲಾ ಬಳಕೆಗಳಿಗು ಆ ನೀರನ್ನೇ ಉಪಯೋಗಿಸುತ್ತಾರೆ.

ಅಲ್ಲಿ ಒಬ್ಬ ವ್ಯಕ್ತಿ ಒಂದು ದಿನಕ್ಕೆ ಕನಿಷ್ಠ 550 ಲೀಟರ್ ಅಷ್ಟು ನೀರನ್ನು ಬಳಸುತ್ತಾರಂತೆ. ಅಂದ್ರೆ ನೀರಿನ ಸಮೃದ್ಧವಾದ ಬಳಕೆ ಇರುವುದಕ್ಕಿಂತ ಹೆಚ್ಚು ದುಬೈ ಜನರು ನೀರನ್ನು ಬಳಸುತ್ತಾರೆ. ಸಮುದ್ರದ ನೀರನ್ನ ಇಲ್ಲಿ ಜನರಿಗೆ ಸಮರ್ಪಕವಾಗಿ ಪೂರೈಕೆ ಮಾಡಲಾಗತ್ತೆ ಅದಕ್ಕೆ ಅಂತಾನೆ ಒಂದು ಸಚಿವಾಲಯ ಇದ್ದು ಅದು ಈ ಎಲ್ಲಾ ವ್ಯವಸ್ಥೆಯನ್ನು ನೋಡಿಕೊಳ್ಳುತ್ತದೆ ಹೇಗೆ ಮಾಡುವುದು ಅತ್ಯಂತ ದುಬಾರಿ ಕೆಲಸ ಆದರೂ ಮಾಡಬೇಕಾದ ಅನಿವಾರ್ಯ ಅವರಿಗೆ.ದುಬೈ ನಲ್ಲಿ ನೀರಿನ ಮರು ಬಳಕೆ ಮಾಡಲಾಗುತ್ತದೆ ಅಂದರೆ, ಹೋಟೆಲ್, ಕಾರ್ಖಾನೆಗಳ ನೀರನ್ನ ಸಂಗ್ರಹಿಸಿ ಅದನ್ನ ಪುನಃ ಶೇಕಡಾ 45ರಷ್ಟು ಶುದ್ಧಗೊಳಿಸಿ ಅದನನ್ನು ದೇಶದ ಪ್ರಮುಖ ನಗರಗಳ ಹಸಿರನ್ನು ಹೆಚ್ಚಿಸುವ ಸಲುವಾಗಿ ಪುನರ್ಬಳಕೆ ಮಾಡಲಾಗುತ್ತೆ.

ಇಲ್ಲಿರುವ ದೊಡ್ಡ ದೊಡ್ಡ ಮನೆಗಳು, ಅಪಾರ್ಟ್ಮೆಂಟ್ ಗಳು ಸಮುದ್ರದ ಶುದ್ಧೀಕರಿಸಿದ ನೀರಿನ ಶೇಕಡಾ 44 ರಷ್ಟು ನೀರನ್ನು ಶ್ರೀಮಂತರು ಬಳಸುತ್ತಾ ಇದ್ದು ಅವರಿಗೆ ಹೇರಳವಾಗಿ ನೀರು ದೊರಕುತ್ತದೆ ಮತ್ತು ಉಳಿದ ಶೇಕಡಾ 56ರಷ್ಟು ನೀರನ್ನು ಉಳಿದ ಎಲ್ಲ ಜನರು ಬಳಸುತ್ತಾರೆ.ದುಬೈನಲ್ಲಿ ಎಷ್ಟೇ ನೀರಿನ ಮರುಬಳಕೆ ಆದರೂ ಕೂಡ ಅವರಿಗೆ ಮುಂದಿನ 20 ವರ್ಷಗಳಲ್ಲಿ ನೀರಿನ ಅಭಾವ ಉಂಟಾಗುವುದು ಖಂಡಿತ ಎಂಬುದು ಈಗಾಗಲೇ ತಿಳಿದ ಸತ್ಯ ಸಂಗತಿ. ಹಾಗಾಗಿ ಈಗಿಂದಲೇ ನೀರನ್ನು ಮಿತವಾಗಿ ಬಳಸುತ್ತಿದ್ದು ಯುವ ಜನತೆಗೆ ನೀರಿನ ಮೌಲ್ಯಗಳ ಕುರಿತು ಸರ್ಕಾರವೇ ಮುಂದಾಗಿ ತಿಳಿ ಹೇಳುತ್ತಿದೆ.

ಈ ದೇಶದಲ್ಲಿ ಎಲ್ಲಿ ಭೂಮಿ ಅಗೆದರು ಬರೀ ಪೆಟ್ರೋಲ್ ಸಿಗುವುದರಿಂದ ನೀರು ಪೆಟ್ರೋಲ್ ಗಿಂತ ಅತೀ ಹೆಚ್ಚು ಪ್ರಾಮುಖ್ಯತೆ ಪಡೆದಿದೆ ಎಂದರೆ ಸುಳ್ಳಾಗುವುದಿಲ್ಲ. ಹಾಗಾಗಿ ಅಲ್ಲಿನ ರಾಜ ಅಲ್ಲಿಯ ಜನರಿಗೆ ಮುಂದೆ ಆಗುವ ನೀರಿನ ಅಭಾವದ ಬಗ್ಗೆ ತಿಳಿದು ಈಗಾಗಲೇ ಬೇರೆ ಬೇರೆ ದೇಶಗಳಲ್ಲಿ ಭೂಮಿ ಖರೀದಿ ಮಾಡಲು ತಿಳಿಸಿದ್ದಾನಂತೆ. ಅಂದರೆ ಅವರ ಅರ್ಥದಲ್ಲಿ ಬೇರೆ ದೇಶದಲ್ಲಿ ಪಡೆದುಕೊಂಡ ಭೂಮಿ ಮಾತ್ರ ಅವರಿಗೆ ಮುಂದಿನ ದಿನಗಳಲ್ಲಿ ಬೆಳೆ ಬೆಳೆಯಲು ಉಪಯೋಗ ಆಗುತ್ತೆ ಅನ್ನೋ ಒಂದು ದೂರ ದೃಷ್ಟಿ. ಒಂದು ಕಡೆ ಎಲ್ಲಾ ದೇಶಗಳೂ ತಾವು ದುಬೈ ಅಲ್ಲಿ ಜಾಗ ಖರೀದಿ ಮಾಡಬೇಕು ಅಂತ ಇದ್ರೆ ಅಲ್ಲಿನ ಉದ್ಯಮಿಗಳು, ವ್ಯಾಪಾರಸ್ಥರು ಬೇರೆ ಬೇರೆ ದೇಶಗಳಲ್ಲಿ ಭೂಮಿ ಖರೀದಿಗೆ ಸಿದ್ಧರಾಗಿದ್ದಾರೆ.

ಇಂದಿನ ಕಾಲಮಾನದಲ್ಲಿ ಎಲ್ಲಾಕಡೆ ನೀರಿನ ಕೊರತೆ ಇರುವುದು ನಿಜದ ಸಂಗತಿ ಅದ್ರಲ್ಲೂ ಅರಬ್ ದೇಶಗಳಲ್ಲಿ ಸ್ವಲ್ಪ ಹೆಚ್ಚೇ. ಅವರಿಗೆ ಪೆಟ್ರೋಲ್ ಗಿಂತ ನೀರಿನ ಬೆಲೆ ಅತೀ ಹೆಚ್ಚು. ಬರೀ ಸಮುದ್ರದ ನೀರನ್ನೇ ಅವಲಂಬಿಸಿರುವ ಅರಬ್ ರಾಷ್ಟ್ರಗಳು ಸಮುದ್ರದಿಂದ ನೀರನ್ನು ಪಡೆಯಲು ಮಾಡುತ್ತಿರುವ ವೆಚ್ಚವೇನು ಕಡಿಮೆ ಏನಿಲ್ಲ. ಇದ್ರ ನಡುವೆ ಅಲ್ಲಿನ ಫೆಡರಲ್ ಸರ್ಕಾರ ಮುಂದಿನ ದಿನಗಳಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಮೋಡ ಬಿತ್ತನೆಯ ವಿಧಾನದಿಂದ ನೀರನ್ನು ಪಡೆಯುವ ಯೋಜನೆಯನ್ನು ರೂಪಿಸಿದೆ. ಆದರೆ ಇದು ಎಷ್ಟರ ಮಟ್ಟಿಗೆ ಸಫಲ ಆಗುತ್ತೆ ಅನ್ನೋದು ಒಂದು ದೊಡ್ಡ ಪ್ರಶ್ನೆ!?

ಇನ್ನು ಅರಬ್ ದೇಶಗಳನ್ನು ಬಿಟ್ಟು ನಮ್ಮ ದೇಶದಲ್ಲಿ ನೋಡಿದ್ರೆ ಇಲ್ಲು ಕೂಡ ನೀರಿನ ಸಮಸ್ಯೆ ಇಂದು ನಮ್ಮೆಲ್ಲರನ್ನೂ ಕಾಡುತ್ತಿದೆ. ಆದರೆ ನಮಗೆ ನದಿ, ಕೆರೆ ಬಾವಿಗಳು ಈ ಎಲ್ಲಾ ಜಲ ಮೂಲ ಇದ್ದರೂ ಸಹ ನಾವು ಅದನ್ನು ಸರಿಯಾಗಿ ಸಂರಕ್ಷಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ನೀರು ಎಲ್ಲರಿಗೂ ಎಲ್ಲಾ ಕಾರ್ಯಕ್ಕೂ ಬೇಕು ಆದರೆ ಅದನ್ನು ಪುನಃ ಬಳಸಿಕೊಳ್ಳುವುದರ ಬಗ್ಗೆ ನಾವ್ಯಾರೂ ಚಿಂತೇನೆ ಮಾಡಲ್ಲ. ಹೀಗೆ ನಾವು ಮಿತಿ ಇಲ್ಲದೆ ನೀರನ್ನ ಪೋಲು ಮಾಡ್ತಾ ಹೋದ್ರೆ ನಮ್ಮ ಮುಂದಿನ ಪೀಳಿಗೆಗೆ ನಾವು ಬಿಟ್ಟು ಹೋಗೋದಾದ್ರೂ ಏನು ಎಂಬುದು ದೊಡ್ಡ ಪ್ರಶ್ನೆಯಾಗಿ ಉಳಿದಿದೆ.

ಮುಂದಿನ ಪೀಳಿಗೆ ಅಲ್ಲ ನಮಗೆ ಇನ್ನೊಂದು ಐದು ವರ್ಷದಲ್ಲಿ ನೀರಿಗೆ ಎಷ್ಟು ಕೊರತೆ ಉಂಟಾಗುತ್ತದೆ ಎಂಬುದರ ಅರಿವೇ ಇಲ್ಲದೆ ನಾವು ನೀರನ್ನು ಬಳಸುತ್ತಿದ್ದೇವೆ. ಹಾಗಾಗಲು ಬಿಡದೆ ಈಗಿನಿಂದಲೇ ನಾವು ನೀರನ್ನ ಮಿತವಾಗಿ ಬಳಸೋಣ. ಮಳೆಯ ನೀರು ಭೂಮಿಯಲ್ಲಿ ಇಂಗಲು ಅಲ್ಲಲ್ಲಿ ಇಂಗು ಗುಂಡಿಯನ್ನು ತೆಗೆದು ಅಂತರ್ಜಲ ಮಟ್ಟ ಹೆಚ್ಚಲು ನಮ್ಮಿಂದಾದ ಕಾರ್ಯ ಮಾಡೋಣ. ಪ್ರಕೃತಿ ನಮಗೆ ನೀಡಿದ ಸೌಲಭ್ಯಗಳನ್ನು ನಾವೂ ಉಪಯೋಗಿಸಿ ನಮ್ಮ ಮುಂದಿನವರಿಗೂ ಉಪಯೋಗಿಸಲು ಬಿಡೋಣ.

Leave a Comment

error: Content is protected !!