ಹಾಡುತ್ತಲೇ ವೇದಿಕೆಯ ಮೇಲೆ ಪ್ರಾಣವನ್ನು ಬಿಟ್ಟ ಖ್ಯಾತ ಸಂಗೀತ ಗಾಯಕ. ಇಲ್ಲಿದೆ ನೋಡಿ ವಿಡಿಯೋ

ಕೆಲವರ ಕಲಾರಾಧನೆ, ಎಷ್ಟುರುತ್ತದೆ ಎನ್ನುವುದನ್ನು ಈ ಘಟನೆಯನ್ನು ನೋಡಿದರೆ ನಿಮಗೆ ಅರಿವಾಗಬಹುದು. ಕೆಲವರು ಕಲಾಸರಸ್ವತಿಗೆ ತಮ್ಮನ್ನು ತವು ಅರ್ಪಿಸಿಕೊಂಡಿರುತ್ತಾರೆ. ಇವರು ಎಷ್ಟರ ಮಟ್ಟಿಗೆ ಕಲೆಯನ್ನ ಆರಾಧಿಸುತ್ತಾರೆ ಎಂದರೆ, ಕಲೆಯಲ್ಲಿ ತೊಡಗಿರುವಗಲೇ ಕೊನೆಯುಸಿರೆಳೆಯುವ ಮಟ್ಟಿಗೆ. ಸಾಮಾನ್ಯವಾಗಿ ಪುರಾತನ ಕಾಲದಲ್ಲೂ ಧ್ಯಾನಾಸಕ್ತರಾಗಿದ್ದ ಋಷಿಮುನಿಗಳು ಸ್ಥಳದಲ್ಲೇ ಜೀವ ತ್ಯಜಿಸಿದ ಬಗ್ಗೆ ನಾವು ಕೇಳಿದ್ದೇವೆ, ಓದಿದ್ದೇವೆ.

ಅಂತೆಯೇ ವೇದಿಕೆಯಲ್ಲಿ ತಮ್ಮ ಪರ್ಫಾರ್ಮೆನ್ಸ್ ಕೊಡುವಗಲೇ ಪ್ರಾಣ ಬಿಟ್ಟ ಹಲವು ಕಲಾವಿದರ ಉದಾಹರಣೆಯೂ ಇದೆ. ಉತ್ತರ ಕನ್ನಡದ ಖ್ಯಾತ ಯಕ್ಷಗಾನ ಕಲಾವಿದ ಚಿಟ್ಟಾಣಿ ರಮಚಂದ್ರ ಹೆಗಡೆ ತಮ್ಮ ಇಷ್ಟವಾದ ಕೃಷ್ಣನ ಪಾತ್ರ ಮಾಡುವಾಗಲೇ ಕುಸಿದು ಬಿದ್ದು ಪ್ರಾಣಬಿಟ್ಟಿದ್ದರು. ಇಂತಹ ಹಲವಾರು ಉದಾಹರಣೆಗಳು ನಮ್ಮ ನಡುವೆ ಇವೆ. ಇಂತದ್ಧೇ ಒಂದು ಘಟನೆ ಕೇರಳದಲ್ಲಿ ನಡೆದಿದೆ.

87 ವರ್ಷ ವಯಸ್ಸಿನ ಎಡವಾ ಬಶೀರ್ ಅವರು ಕೇರಳದಲ್ಲಿ ಮಲಯಾಳಂ ಹಾಡುಗಳನ್ನು ಹಾಡುವುದರಲ್ಲಿ ಬಹಳ ಫೇಮಸ್. ಕೇರಳದಲ್ಲಿ ಆರ್ಕೆಸ್ಟ್ರಾವನ್ನು ಜನಪ್ರಿಯಗೊಳಿಸುವಲ್ಲಿ ಎಡವ ಬಶೀರ್ ಪ್ರಮುಖ ಪಾತ್ರ ವಹಿಸಿದ್ದರು. ಮಲಯಾಳಂ ನ ಹಿನ್ನೆಲೆ ಗಾಯಕರಾಗಿ ಹಲವಾರು ಹಾಡುಗಳಿಗೆ ಧ್ವನಿಯಾಗಿದ್ದ ಗಾಯಕ ಬಶೀರ್ ಇಂದು ನಮ್ಮೊಂದಿಗಿಲ್ಲ. ಆದರೆ ಇವರ ಸಾ’ವು ಮಾತ್ರ ಬಹಳ ವಿಚಿತ್ರ ಹಾಗೂ ಅವರ ಅದೃಷ್ಟ ಅಂತಲೇ ಹೇಳಬಹುದು. ಯಾಕೆಂದರೆ ಕಲಾದೇವಿಯನ್ನ ಆರಾಧಿಸುವಾಗಲೇ ಆಕೆಯಲ್ಲಿ ಲೀನರಾಗಿದ್ದಾರೆ ಗಾಯಕ ಬಶೀರ್!

ಕೇರಳದ ಅಲಪ್ಪುವಳದಲ್ಲಿ ’ಬ್ಲೂ ಡೈಮಂಡ್ ಆರ್ಕೆಸ್ಟ್ರಾ’ ದ ಸುವರ್ಣ ಮಹೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಗಾಯಕ ಎಡವ ಬಶೀರ್ ಕೂಡ ಭಾಗವಹಿಸಿದ್ದರು. ಹತ್ತಾರು ಸಂಗೀತ ವಾದ್ಯಗಳ ನಡುವೆ ವೇದಿಕೆಯಲ್ಲಿ ನಿಂತು ಸುಶ್ರಾವ್ಯವಾಗಿ ಹಾಡುತ್ತಾ ಕೇಳುಗರಿಗೆ ಇಂಪನ್ನು ನೀಡುತ್ತಿದ್ದ ಗಾಯಕ ಬಶೀರ್ ಹಾಡುತ್ತ ಹಾಡುತ್ತಲೇ ಕುಸಿದು ಬಿದ್ದಿದ್ದಾರೆ. ಸ್ಥಳದಲ್ಲಿಯೇ ಬಶೀರ್ ಅವರಿಗೆ ಹಾರ್ಟ್ ಅ’ಟ್ಯಾ’ಕ್ ಆಗಿದ್ದು ತಕ್ಷಣವೇ ಜೀವ ಬಿಟ್ಟಿದ್ದಾರೆ. ಅವರನ್ನು ಆಸ್ಪತ್ರೆಗೆ ಕೂಡಲೇ ಕರೆದೊಯ್ಯಲಾಯಿತು. ಆದರೆ ಆಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಗಾಯಕ ಬಶೀರ್ ಅವರಿಗೆ 87 ವರ್ಷ ವಯಸ್ಸಾಗಿತ್ತು. ಕಲಾಸರಸ್ವತಿ ಅವರನ್ನು ತನ್ನಲ್ಲಿ ಲೀನವಾಗಿಸಿಕೊಂಡಳು ಎಂದು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

edava basheer video
Leave A Reply

Your email address will not be published.

error: Content is protected !!