ತಾನು ಓದುತ್ತಿದ್ದ ಕಾಲೇಜಿನ ಬಸ್ ಡ್ರೈವರ್ ನನ್ನು ಪ್ರೀತಿಸಿ ಮದುವೆಯಾದ ಎಂಜಿನಿಯರಿಂಗ್ ವಿದ್ಯಾರ್ಥಿನಿಗೆ ನಂತರ ಕಾದಿತ್ತು ದೊಡ್ಡ ಶಾಕ್

ಶಾಲೆಗೆ ಹೋಗುವ ವಿದ್ಯಾರ್ಥಿನಿ ಮೆಕ್ಯಾನಿಕ್ ನನ್ನು ಪ್ರೀತಿಸಿ ಮದುವೆಯಾಗುವುದು ಮತ್ತು ಚಪ್ಪಲಿ ಹೊಲಿಯುವವನನ್ನು ಮದುವೆಯಾಗೋದು ಇಂತಹ ಘಟನೆಗಳನ್ನು ಸಿನಿಮಾಗಳಲ್ಲಿ ಮಾತ್ರ ನೋಡಿದ್ದೆವು. ಇದೀಗ ಇಂಥಹದ್ದೇ ಒಂದು ಘಟನೆ ನಿಜ ಜೀವನದಲ್ಲೂ ಕೂಡ ನಡೆದಿದೆ ಅಂದರೆ ನೀವೆಲ್ಲಾ ನಂಬಲೇ ಬೇಕು. ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ತಾನು ಓದುತ್ತಿದ್ದ ಕಾಲೇಜಿನ ಬಸ್ ಡ್ರೈವರ್ ನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ.

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಕೊಲ್ಲಿಪರ ಮಂಡಲದ ಲಕ್ಷ್ಮೀ ಪೂಜಿತ ಎಂಬಾಕೆ ತೆನಾಲಿ ಬಳಿಯ ಇಂಜಿನಿಯರ್​ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಈ ಕಾಲೇಜಿನಲ್ಲಿ ಅನಂತಪುರ ಜಿಲ್ಲೆಯ ಕೊಲ್ಲೂರು ವಲಯದ ವಿಶ್ವನಾಥ್​ ಎಂಬಾತನು ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಪ್ರತಿದಿನ ವಿದ್ಯಾರ್ಥಿ ಗಳನ್ನು ಬೆಳಿಗ್ಗೆ ಪಿಕಪ್ ಮಾಡಿ ಸಂಜೆ ಮನೆಗೆ ಬಿಡುವುದೆ ಅವನ ಕೆಲಸವಾಗಿತ್ತು. ವಿದ್ಯಾರ್ಥಿನಿ ಲಕ್ಷ್ಮಿ ಕೂಡ ಕಾಲೇಜು ಪ್ರತಿದಿನ ಬಸ್ ನಲ್ಲೇ ಸಂಚಾರ ಮಾಡುತ್ತಿದ್ದಳು.

ಪ್ರತಿ ದಿನ ಬಸ್ ನಲ್ಲಿ ವಿಶ್ವನಾಥ್ ಜೊತೆ ಈಕೆ ಮಾತನಾಡುತ್ತಿದ್ದಳು ಮತ್ತು ಹಾಗೆ ಇವರಿಬ್ಬರ ಮಧ್ಯೆ ಸ್ನೇಹ ಬೆಳೆದಿತ್ತು ತದನಂತರ ನಿಧಾನವಾಗಿ ವಿಶ್ವನಾಥ್ ಮತ್ತು ಲಕ್ಷ್ಮಿ ಪ್ರೀತಿಯಲ್ಲಿ ಬಿದ್ದರು. ಲಕ್ಷ್ಮಿ ಬಸ್ ಡ್ರೈವರ್ ವಿಶ್ವನಾಥ್ ನನ್ನ ಸಿಕ್ಕಾಪಟ್ಟೆ ಪ್ರೀತಿ ಮಾಡುತ್ತಿದ್ದಳು. ಒಂದು ದಿನ ವಿಶ್ವನಾಥ್ ಲಕ್ಷ್ಮಿ ಬಳಿ ಮದುವೆಯಾಗೋಣ ಅಂತ ಕೇಳಿದ್ದಾನೆ. ಆಗ ಲಕ್ಷ್ಮಿ ಒಂದು ಕ್ಷಣ ಕೂಡ ಯೋಚನೆ ಮಾಡದೆ ಒಪ್ಪಿಕೊಂಡಿದ್ದಾಳೆ.

ತನ್ನ ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಟ್ಟು ವಿಶ್ವನಾಥ್ ನನ್ನು ಮದುವೆಯಾಗಲು ಲಕ್ಷ್ಮಿ ಮುಂದಾಗುತ್ತಾಳೆ. ಲಕ್ಷ್ಮಿ ಬಸ್ ಡ್ರೈವರ್ ಜೊತೆ ಪ್ರೇಮಾಂಕುರ ಬೆಳೆದಿದ್ದು ಮನೆಯವರಿಗೆ ಗೊತ್ತೇ ಇರುವುದಿಲ್ಲ. ಹೇಗೋ ಧೈರ್ಯ ಮಾಡಿ ಲಕ್ಷ್ಮಿ ಮನೆಯವರಿಗೆ ನಾನು ಬಸ್ ಡ್ರೈವರ್ ನನ್ನು ಮದುವೆ ಆಗುತ್ತೇನೆ ಎಂದು ಹಠ ಮಾಡಿ ಒತ್ತಾಯಿಸುತ್ತಾಳೆ. ಕಾಲೇಜು ವಿದ್ಯಾಭ್ಯಾಸ ಮುಗಿಸಿ ಮದುವೆ ಆಗೋದು ಬೇಡ ಎಂದು ಪಾಲಕರು ಬುದ್ದಿವಾದ ಹೇಳುತ್ತಾರೆ ಆದರೂ ಕೂಡ ಲಕ್ಷ್ಮಿ ತಂದೆತಾಯಿಯ ಮಾತನ್ನು ಕೇಳಲಿಲ್ಲ.

ಮನೆಯವರ ಮಾತು ಕೇಳದೆ ಬಸ್ಸಿನ ಡ್ರೈವರ್ ಜೊತೆ ಓಡಿಹೋಗಿ ಲಕ್ಷ್ಮಿ ಮದುವೆಯಾಗುತ್ತಾಳೆ. ನವ ದಂಪತಿ ಮದುವೆಯಾಗಿ ಅನಂತವರಂನಲ್ಲಿ ನೆಲೆಸಿದ್ದರು. ಇವರು ಮದುವೆ ಆಗಿದ್ದು ಏಪ್ರಿಲ್ ನಲ್ಲಿ. ಇದೀಗ ಒಂದು ತಿಂಗಳು ಕಳೆದ ಮೇಲೆ ಲಕ್ಷ್ಮಿ ಪೂಜಿತಾಗೆ ದೊಡ್ಡ ಶಾಕ್ ಉಂಟಾಗಿದೆ. ಇದೇ ಸೋಮವಾರ ಮೇ 2 ರಂದು ಲಕ್ಷ್ಮಿಯ ಅಜ್ಜ, ಅಜ್ಜಿ ,ಆಂಟಿ ಮತ್ತು ತವರುಮನೆಯ ಮಾವಂದಿರು ಅನಂತವರಂನಲ್ಲಿ ಲಕ್ಷ್ಮಿ ವಾಸವಾಗಿದ್ದ ಮನೆಗೆ ಬಂದಿದ್ದರು. ಮನೆಗೆ ಬಂದು ಲಕ್ಷ್ಮಿ ಬಳಿ ನಿನ್ನ ತಾಯಿಗೆ ಹುಷಾರಿಲ್ಲ ಮನೆಗೆ ಬಾ ಎಂದು ಒತ್ತಾಯಿಸಿದ್ದಾರೆ ಆದರೆ ಲಕ್ಷ್ಮಿ ಇದಕ್ಕೆ ಒಪ್ಪಲಿಲ್ಲ.

ಇದಾದ ಬಳಿಕ ಲಕ್ಷ್ಮಿ ಅವರ ತಂದೆ ಶ್ರೀನಿವಾಸ ರೆಡ್ಡಿ, ಸಹೋದರ ನಿರಂಜನ್​ ರೆಡ್ಡಿ ಮತ್ತು ಕೆಲ ಯುವಕರು ಲಕ್ಷ್ಮಿ ಮನೆಗೆ ಬಂದು ಅವಳನ್ನು ಬಲವಂತವಾಗಿ ಕಾರಿನಲ್ಲಿ ಹಾಕಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಕಾರಿನಲ್ಲಿ ಹೊತ್ತೊಯ್ಯುವ ಸಮಯದಲ್ಲಿ ಅವಳ ಗಂಡ ವಿಶ್ವನಾಥ್ ಬಂದು ಬಿಡಿಸಲು ಪ್ರಯತ್ನ ಮಾಡಿದರೂ ಸಹ ಅವರ ಮೇಲೆ ಕೂಡ ಲಕ್ಷ್ಮಿ ತವರು ಮನೆಯವರು ಹ’ಲ್ಲೆ ಮಾಡಿದ್ದಾರೆ. ಇದೀಗ ಲಕ್ಷ್ಮಿ ಗೆ ಹೆ’ದರಿಸಿ ಬೆ’ದರಿಸಿ ಇನ್ನೊಂದು ಮದುವೆ ಮಾಡಲು ನಿರ್ಧಾರ ಮಾಡಿದ್ದಾರೆ. ಇತ್ತ ಕಡೆ ವಿಶ್ವನಾಥ ಪೊಲೀಸ್ ಠಾಣೆಗೆ ಹೋಗಿ ನಡೆದಿರುವ ಘಟನೆ ವಿವರಿಸಿ ಅ’ಪ’ಹರಣದ ಪ್ರಕರಣವನ್ನು ದಾಖಲು ಮಾಡಿದ್ದಾನೆ.

Leave A Reply

Your email address will not be published.

error: Content is protected !!