ಹಳ್ಳಿ ಹುಡುಗನಿಗೆ ಫಿದಾ ಆದ ಫಾರಿನ್ ಹುಡುಗಿ. ರಷ್ಯಾ ಬೆಡಗಿ ಮತ್ತು ಹಳ್ಳಿ ಹೈದ ನ ಇಂಟರೆಸ್ಟಿಂಗ್ ಲವ್ ಸ್ಟೋರಿ

ಪ್ರೀತಿ ಎನ್ನುವುದು ಒಂದು ಸುಂದರವಾದ ಅನುಭವ. ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಅನುಭವಿಸಲೇ ಬೇಕಾದಂತಹ ವಂದು ಭಾವನೆ ಅದು ಸಕ್ಸೆಸ್ ಆಗಿರಲಿ ಅಥವಾ ಫೇಲ್ಯೂರ್ ಆಗಿರಲಿ ಮನುಷ್ಯನ ಜೀವನದಲ್ಲಿ ಉದ್ಭವಿಸುವ ಅತ್ಯುನ್ನುತ ಭಾವನೆ ಎಂದರೆ ಅದು ಪ್ರೀತಿ ಎನ್ನುವುದು ಪಂಡಿತರ ಅಭಿಪ್ರಾಯ ಎಲ್ಲೋ ಹಳ್ಳಿಯಲ್ಲಿ ಹುಟ್ಟಿದ ಹುಡುಗನ ಮೇಲೆ ಮೊದಲ ನೋಟದಲ್ಲೇ ಹುಡುಗಿಗೆ ಪ್ರೀತಿ ಆಗಿದೆ. ಹಳ್ಳಿ ಹುಡುಗನ ಮೇಲೆ ಪ್ರೀತಿ ಆಗಿರುವ ಫಾರಿನ್ ಹುಡುಗಿ ಯಾರು ಎನ್ನುವುದು ತಿಳಿದರೆ ಶಾಕ್ ಆಗುವುದು ಅಂತೂ ಖಂಡಿತ. ಆ ಫಾರೆನ್ ಹುಡುಗಿ ಯಾರು ಅವಳಿಗೆ ಯಾರ ಜೊತೆ ಪ್ರೀತಿ ಆಗಿದೆ ಎನ್ನುವುದರ ಮಾಹಿತಿ ಇಲ್ಲಿದೆ.

ಕುಗ್ರಾಮದಲ್ಲಿ ಹುಟ್ಟಿದ ಈ ನರೇಂದ್ರ ಎನ್ನುವ ಹುಡುಗನಿಗೆ ಎಷ್ಟೇ ಪ್ರಯತ್ನ ಮಾಡಿದರೂ ಸಹ ಓದು ತಲೆಗೆ ಹತ್ತಲೆ ಇಲ್ಲ. ಹತ್ತನೇ ತರಗತಿ ಫೆಲ್ ಆದ ನರೇಂದ್ರ ತನಗೆ ಇದ್ದ ಅರ್ಧ ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದ ಹಾಗೂ ಸಮಯ ಇದ್ದಾಗಲೆಲ್ಲ ಕೂಲಿ ಕೆಲಸವನ್ನೂ ಸಹ ಮಾಡುತ್ತಿದ್ದ. ಕೊನೆಗೆ ಊರಿನಲ್ಲಿ ಏನೂ ಮಾಡಲು ಕೆಲಸ ಇಲ್ಲದೇ ಇದ್ದಾಗ ನರೇಂದ್ರ ತನ್ನ ಉರು ಬಿಟ್ಟು ಕರ್ನಾಟಕ ಮತ್ತು ಗೋವಾ ಬಾರ್ಡರ್ ನಲ್ಲಿ ಇರುವ ಬಾರ್ ಒಂದರಲ್ಲಿ ಸಪ್ಲೈರ್ ಆಗಿ ಕೆಲಸಕ್ಕೆ ಸೇರಿಕೊಂಡ. ನರೇಂದ್ರ ಕೆಲಸ ಮಾಡುತ್ತಾ ಇದ್ದ ಬಾರ್ ನಲ್ಲಿ ಹೆಣ್ಣು ಗಂಡು ಎನ್ನುವ ಬೇಧ ಭಾವ ಇಲ್ಲದೆ ಎಲ್ಲಾ ವಿದೇಶಿಗರು ಹೆಚ್ಚಾಗಿ ಅಲ್ಲಿ ಬರುತ್ತಿದ್ದರು. ಹೀಗೆ ಒಂದು ದಿನ ರಷ್ಯಾದ ಸುಂದರ ಹುಡುಗಿ ಒಬ್ಬಳು ಈ ನರೇಂದ್ರ ಕೆಲಸ ಮಾಡುತ್ತಿದ್ದ ಬಾರ್ ಗೆ ಬಂದಳು. ಏನಾದರೂ ಆರ್ಡರ್ ಮಾಡಲು ನರೇಂದ್ರನನ್ನು ಕರೆದ ರಷ್ಯಾದ ಹುಡುಗಿ ಬಿಯರ್ ತರಲು ನರೇಂದ್ರನ ಬಳಿ ಹೇಳಿದಳು.

ಬಿಯರ್ ತಂದು ಗ್ಲಾಸಿಗೆ ಸುರಿದ ನರೇಂದ್ರನನ್ನು ಮೊದಲ ಬಾರಿಗೆ ನೋಡಿದ್ದಳು ರಷ್ಯಾದ ಹುಡುಗಿ. ಆಗ ಅದೇನಾಯಿತೋ ತಿಳಿಯಲಿಲ್ಲ ಆ ಹುಡುಗಿಗೆ ಆ ಕ್ಷಣದಿಂದ ನರೇಂದ್ರನ ಮೇಲೆ ಪ್ರೀತಿ ಉಂಟಾಯಿತು. ನರೇಂದ್ರನ ಮೇಲೆ ಪ್ರೀತಿ ಹುಟ್ಟಿದ್ದೇ ರಷ್ಯಾದ ಹುಡುಗಿ ನರೇಂದ್ರನಿಗೆ ತನ್ನ ಪ್ರೀತಿಯ ಕುರಿತು ಹೇಳಿದ್ದಳು. ನರೇಂದ್ರ ಕೂಡಾ ಅವಳ ಪ್ರೀತಿಯನ್ನು ಒಪ್ಪಿಕೊಂಡು ನಂತರ ಇಬ್ಬರೂ ಕೂಡಾ ಅಲ್ಲಿಲ್ಲಿ ಸುತ್ತಾಡಿ ಗಾಢವಾದ ಪ್ರೇಮ ಉಂಟಾಗಿತ್ತು. ಇಬ್ಬರೂ ಗಾಢವಾದ ಪ್ರೀತಿಯಲ್ಲಿ ಮುಳುಗಿದಾಗಲೇ ನರೇಂದ್ರನಿಗೆ ತಿಳಿದಿದ್ದೂ ರಷ್ಯಾದ ಹುಡುಗಿಯ ಮೂಲ. ನರೇಂದ್ರನ ಜೊತೆ ಪ್ರೀತಿಯಲ್ಲಿ ಬಿದ್ದ ರಷ್ಯಾದ ಹುಡುಗಿಯ ಹೆಸರು ಅನಸ್ಥತ. ಆಕೆ ರಷ್ಯಾದ ಪಾರ್ಲಿಮೆಂಟಿನಲ್ಲೀ ದೊಡ್ಡ ಹುದ್ದೆಯಲ್ಲಿ ಇದ್ದಾಳೆ ಎನ್ನುವುದನ್ನು ತಿಳಿದು ನರೇಂದ್ರ ಕೂಡಾ ಒಂದು ಕ್ಷಣ ಆಶ್ಚರ್ಯ ಪಟ್ಟಿದ್ದ.

ರಷ್ಯಾದ ಹುಡುಗಿ ಅನಸ್ಥತಳನ್ನು ನೋಡಲು ಎಂದೇ ರಷ್ಯಾದ ಮಾಸ್ಕೋ ಗೆ ಎರಡು ಬಾರಿ ಹೋಗಿ ಬಂದಿದ್ದಾನೆ. ಮತ್ತೆ ಭಾರತಕ್ಕೆ ಬಂದ ಅನಸ್ಥತ ನರೇಂದ್ರನನ್ನು ಮದುವೆ ಆದಳು. ನರೇಂದ್ರ ಒಮ್ಮೆ ಅವಳನ್ನು ತನ್ನ ಊರಿಗೆ ಕರೆದುಕೊಂಡು ಹೋಗಿದ್ದ. ಆಗ ಆಕೆಯನ್ನು ನೋಡಿ ಎಲ್ಲರೂ ಆಶ್ಚರ್ಯ ಪಟ್ಟಿದ್ದರು. ರಷ್ಯಾದಲ್ಲಿ ವಾಸಿಸಲು ನಿರ್ಧರಿಸಿರುವ ನರೇಂದ್ರ ಮತ್ತು ಅನಸ್ಥತ ವರ್ಷದಲ್ಲಿ ಎರಡು ಮೂರು ತಿಂಗಳುಗಳ ಕಾಲ ಭಾರತದಲ್ಲಿಯೇ ಇರಲು ತೀರ್ಮಾನಿಸಿದ್ದಾರೆ. ಅನಸ್ಥತ ದೊಡ್ಡ ಹುದ್ದೆಯಲ್ಲಿ ಇರುವುದರಿಂದ ಆಕೆ ಹೇಳಿದಂತೆಯೇ ನರೇಂದ್ರ ಬದುಕಬೇಕು ಎಂದು ತಿಳಿದಿದ್ದರೆ ಅದು ತಪ್ಪು.

ನರೇಂದ್ರನನ್ನು ಅತಿಯಾಗಿ ಪ್ರೀತಿಸುವ ಈ ಹುಡುಗಿ ನರೇಂದ್ರನ ಮಾತಿಗೆ ತುಂಬಾ ಬೆಲೆ ಕೊಡುತ್ತಾಳೆ ಹಾಗೂ ಅವನ ಪ್ರತಿಯೊಂದು ಮಾತುಗಳನ್ನು ಸಹ ತಪ್ಪದೇ ಪಾಲಿಸುತ್ತಾಳೆ. ತಾನು ಸುಂದರವಾಗಿ ಇಲ್ಲಾ ತನ್ನನ್ನು ಯಾರೂ ಇಷ್ಟ ಪಡುವುದಿಲ್ಲ ಎಂದು ಬಹಳಷ್ಟು ಜನ ಹುಡುಗ ಹುಡುಗಿಯರು ಭಾವಿಸುತ್ತಾರೆ. ಆದರೆ ನಮ್ಮ ಮುಖಚರ್ಯೆ ಹಾಗೂ ನಮ್ಮ ನಡವಳಿಕೆಯನ್ನು ಗಾಢವಾಗಿ ಪ್ರೀತಿಸುವವರು ಈ ಪ್ರಪಂಚದಲ್ಲಿ ಇರುತ್ತಾರೆ ಎನ್ನುವುದು ಕೂಡಾ ಸತ್ಯ.

Leave A Reply

Your email address will not be published.

error: Content is protected !!