Free Bus: ಮಹಿಳೆಯರ ಉಚಿತ ಬಸ್ ಪ್ರಯಾಣದಲ್ಲಿ ಮಹತ್ವದ ಬದಲಾವಣೆ ತಂದ ಸರ್ಕಾರ

Free Bus Karnataka: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Karnataka Congress government )ಅಧಿಕಾರಕ್ಕೆ ಬಂದ ಮೇಲೆ ಚುನಾವಣೆಯ ಅವಧಿಯಲ್ಲಿ ಘೋಷಿಸಿದಂತೆ ಒಂದೊಂದಾಗಿ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅದರಂತೆ ಮೊದಲು ಜಾರಿಗೆ ಬಂದಿದ್ದು ಉಚಿತ ಬಸ್ ಪ್ರಯಾಣ.. ಮಹಿಳೆಯರಿಗೆಂದೆ ಉಚಿತ ಬಸ್ (Free Bus) ಪ್ರಯಾಣ ನೀಡುವ ಶಕ್ತಿ ಯೋಜನೆಯನ್ನು ರಾಜ್ಯ ಸರ್ಕಾರ ಜೂನ್ 11 ರಂದು ಜಾರಿಗೆ ತಂದಿದೆ.

ಆದರೆ ಉಚಿತ ಬಸ್ ಪ್ರಯಾಣಕ್ಕೆ ಕೆಲವು ಷರತ್ತುಗಳಿವೆ.
ಜೂನ್ 11 ರಂದು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಜಾರಿಗೆಯಾಗಿದೆ. ಕರ್ನಾಟಕ ರಾಜ್ಯದ ಮಹಿಳೆಯರು ಸೇರಿ 6 ರಿಂದ 12 ವರ್ಷದೊಳಗಿನ ಬಾಲಕಿಯರು, ಲೈಂ ಗಿಕ ಅಲ್ಪ ಸಂಖ್ಯಾತರು ಶಕ್ತಿ ಯೋಜನೆಯಡಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು. ಎಲ್ಲ ಬಸ್ ಗಳಲ್ಲೂ ಉಚಿತವಾಗಿ ಮಹಿಳೆಯರು ಪ್ರಯಾಣಿಸುವಂತಿಲ್ಲ. ಕೇವಲ BMTC , KSRTC, KRTC ಬಸ್ ಗಳಲ್ಲಿ ಮಾತ್ರ ಉಚಿತ ಪ್ರಯಾಣಕ್ಕೆ ಅವಕಾಶ ಇದೆ. ಖಾಸಗಿ ಬಸ್ ಗಳಲ್ಲಿ ಹೊರ ರಾಜ್ಯದ ಬಸ್ ಗಳಲ್ಲಿ ದುಡ್ಡು ನೀಡಿ ಮಹಿಳೆಯರು ಪ್ರಯಾಣ ಮಾಡಬೇಕು.

ಐಷಾರಾಮಿ ಬಸ್ ಗಳಲ್ಲಿ ಉಚಿತವಾಗಿ ಓಡಾಡುವ ಹಾಗಿಲ್ಲ. ರಾಜಹಂಸ, non ac sleeper, ವಜ್ರ, ವಾಯು ವಜ್ರ, ಐರಾವತ, ಇವುಗಳನ್ನು ಹೊರತುಪಡಿಸಿ ಉಳಿದ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ಅದಲ್ಲದೆ ಮಹಿಳೆಯರು ಕರ್ನಾಟಕದಲ್ಲಿ ಯಾವ ಸ್ಥಳಕ್ಕೆ ಬೇಕಾದರೂ ಉಚಿತವಾಗಿ ಪ್ರಯಾಣಿಸಬಹುದು. ಉಚಿತವಾಗಿ ಪ್ರಯಾಣಿಸಲು ಆಧಾರ್ ಕಾರ್ಡ್, ಮತದಾರನ ಗುರುತಿನ ಚೀಟಿ, Driving Laisens, ಅಂಗವಿಕಲ ಅಥವಾ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ನೀಡಿರುವ ಗುರುತಿನ ಪತ್ರ ಇವುಗಳಲ್ಲಿ ಯಾವುದಾದರೊಂದು ಇರಬೇಕು.

Free Bus Karnataka

ಸರ್ಕಾರದ ಸೇವಾ ಸಿಂಧು ಪೋರ್ಟಲ್ನಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಉಚಿತ ಬಸ್ ಪ್ರಯಾಣಕ್ಕೆ ನೋಂದಾಯಿಸಿಕೊಳ್ಳಬೇಕು. ಅರ್ಜಿ ಸಲ್ಲಿಕೆಗೆ ಯಾವುದೇ ಹಣವನ್ನು ಮಹಿಳೆಯರು ನೀಡಬೇಕಾಗಿಲ್ಲ, ನೀವೇ ಸೇವಾ ಸಿಂಧು ಪೋರ್ಟಲ್ನಲ್ಲಿ Log in ಆಗಿ ಅರ್ಜಿ ಸಲ್ಲಿಸಬಹುದು. ಸ್ಮಾರ್ಟ್ ಕಾರ್ಡ್ ವಿತರಣೆ ತಡವಾಗುವುದರಿಂದ ಮಹಿಳೆಯರಿಗೆ ಉಚಿತವಾಗಿ ಟಿಕೆಟ್ ನೀಡಲು ಸೂಚಿಸಲಾಗಿದೆ. ಇದನ್ನೂ ಓದಿ Free Electricity: ಸರ್ಕಾರದಿಂದ 200 ಯೂನಿಟ್ ಉಚಿತ ಪಡೆಯಲು ಅರ್ಜಿ ಎಲ್ಲಿ ಸಲ್ಲಿಸಬೇಕು? ಏನೆಲ್ಲಾ ದಾಖಲೆಗಳು ಬೇಕು ಇಲ್ಲಿದೆ ಮಾಹಿತಿ

Leave A Reply

Your email address will not be published.

error: Content is protected !!