12 ವರ್ಷಗಳಿಂದ ಆಹಾರವನ್ನೇ ಸೇವಿಸದೆ ಬಿಲ್ವಪತ್ರೆಯನ್ನು ತಿಂದು ಬದುಕುತ್ತಿರುವ ಶಿವನ ಭಕ್ತ ಜೈರಾಮ್ ಬಾಬಾ

ಬಿಲ್ವಪತ್ರೆ ಇದರ ಬಗ್ಗೆ ನೀವು ಕೇಳಿರಬಹುದು ಬಿಲ್ವಪತ್ರೆ ಶಿವನಿಗೆ ಅತ್ಯಂತ ಶ್ರೇಷ್ಠವಾದುದು. ಬಿಲ್ವಪತ್ರೆ ಪರಮ ಶ್ರೇಷ್ಠವಾದ ಒಂದು ಸಸ್ಯ ಅನಾದಿಕಾಲದಿಂದಲೂ ಶಿವನಿಗೆ ಬೇರೆ ಏನನ್ನ ಅರ್ಪಿಸದೇ ಇದ್ದರು ಒಂದೇ ಒಂದು ಬಿಲ್ಪಪತ್ರೆಯನ್ನು ಅರ್ಪಿಸಿದರು ಅ ಶಿವನ ಕೃಪೆಗೆ ಪಾತ್ರರಾಗಬಹುದು ಎನ್ನುವ ನಂಬಿಕೆ ಇದೆ. ಶಿವರಾತ್ರಿ ಮೊದಲಾದ ಸಂದರ್ಭದಲ್ಲಿ ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸಲಾಗುತ್ತೆ.


ಇನ್ನು ಬಿಲ್ವಪತ್ರೆಯನ್ನು ಪೂಜೆಗೆ ಮಾತ್ರವಲ್ಲ ಅದರಲ್ಲಿರುವ ಹಲವು ಔಷಧೀಯ ಗುಣಗಳ ಕಾರಣ ಕೆಲವು ಮನೆಮದ್ದುಗಳ ಬಿಲ್ವಪತ್ರೆಯನ್ನು ಬಳಸಲಾಗುತ್ತದೆ. ಬಿಲ್ವಪತ್ರೆಯ ಎಲೆ ಇರಬಹುದು, ತೊಗಟೆ, ಬೇರು, ಹಣ್ಣು ಎಲ್ಲವೂ ಔಷಧಿ ಗುಣಗಳ ಆಗರ. ಹಾಗಾಗಿ ಆಯುರ್ವೇದದಲ್ಲಿಯೂ ಕೂಡ ಬಿಲ್ವಪತ್ರೆಗೆ ಬಹಳ ಮಹತ್ವ ನೀಡಲಾಗಿದೆ. ಹೀಗೆ ಸಾಕಷ್ಟು ರೀತಿಯಲ್ಲಿ ಪ್ರಯೋಜನಕಾರಿಯಾಗಿರುವ ಬಿಲ್ವಪತ್ರೆಯನ್ನು ಇಲ್ಲೊಬ್ಬ ಶಿವನ ಭಕ್ತ ಆಹಾರವಾಗಿ ಸೇವಿಸಿ ಬದುಕುತ್ತಿದ್ದಾನೆ.

ಹೌದು ಈ ವಿಷಯವನ್ನು ಕೇಳಿದರೆ ನಿಮಗೆ ನಿಜಕ್ಕೂ ಅಚ್ಚರಿ ಅನ್ನಿಸಬಹುದು. ಇನ್ನೊಬ್ಬ ಬಾಬಾ ಬಿಲ್ವಪತ್ರೆಯನ್ನು ಆಹಾರವಾಗಿ ಸೇವಿಸುತ್ತಾ ಇಷ್ಟು ವರ್ಷ ಜೀವಿಸಿದ್ದಾರೆ. ಇವರ ಹೆಸರು ಜಯರಾಮ್ ದಾಸ್ ಬಾಬಾ. ಬಿಹಾರದ ಛಾಪ್ರದಲ್ಲಿ ಇವರು ವಾಸಿಸುತ್ತಾರೆ. ಇದೊಂದು ಪವಾಡವೇ ಸರಿ ಯಾಕಂದ್ರೆ ಕಳೆದ 12 ವರ್ಷಗಳಿಂದ ಬೇರೆ ಯಾವುದೇ ಆಹಾರವನ್ನು ಇವರು ಸೇವಿಸುತ್ತಿಲ್ಲ ಕೇವಲ ಬಿಲ್ವಪತ್ರೆಯನ್ನು ಮಾತ್ರ ಆಹಾರವಾಗಿ ಸೇವಿಸುತ್ತಾರೆ ಜಯರಾಮ್ ಬಾಬಾ. ನಿತ್ಯವೂ ಬಿಲ್ವದ ಎಲೆಯನ್ನು ತಿನ್ನುವ ಜೈರಾಮ್ ಬಾಬಾ ಬಿಲ್ಪಟಿಯ ಬಾಬಾ ಎಂದೆ ಪ್ರಖ್ಯಾತಿ ಗಳಿಸಿದ್ದಾರೆ.

ಜೈರಾಮ್ ಬಾಬಾ ಭಗವಾನ್ ಬೋಲೆನಾಥ್ ಮತ್ತು ಮಹಾಕಾಳಿಯ ಮಹಾನ್ ಆರಾಧಕರು. ದಿನವೂ ಬೋಲೆನಾಥನಿಗೆ ಮೆಣಸಿನಕಾಯಿ ಹೋಮವನ್ನು ಮಾಡಿ ಅರ್ಪಿಸುತ್ತಾರೆ. ಆ ಭಾಗದಲ್ಲಿ ತುಂಬಾನೇ ಪ್ರಖ್ಯಾತಿಯನ್ನ ಗಳಿಸಿರುವ ಬಾಬಾ ಅವರ ಆಶೀರ್ವಾದವನ್ನು ಪಡೆದುಕೊಳ್ಳಲು ಹಲವಾರು ಜನರು ನಿತ್ಯವೂ ಅವರ ಬಳಿ ಬರುತ್ತಾರೆ.

ಈ ಬಾಬಾ ಬಿಲ್ವಪತ್ರೆಯನ್ನು ಆಹಾರವಾಗಿ ಸೇವಿಸುವುದು ಮಾತ್ರವಲ್ಲ 12 ವರ್ಷಗಳಿಂದ ಮೆಣಸಿನ ಕಾಯಿ ಹೋಮವನ್ನು ಕೂಡ ಮಾಡುತ್ತಿದ್ದಾರೆ ಹೀಗೆ ಮಾಡಿದರೆ ಭೂತ ಪ್ರೇಮಿತ ಮೊದಲಾದ ದುಷ್ಟ ಶಕ್ತಿಗಳು ಹತ್ತಿರವು ಸುಳಿಯುವುದಿಲ್ಲ ಎನ್ನುವ ನಂಬಿಕೆ. ಈತ ಏನೋ ಆಹಾರವನ್ನು ಸೇವಿಸದೆ ಒಂದು ತಿಂಗಳುಗಳ ಕಾಲ ಕೇವಲ ಗಾಳಿ ನೀರು ಸೇವಿಸಿ ಬದುಕಬಲ್ಲ ಶಕ್ತಿಯನ್ನು ಕೂಡ ಹೊಂದಿದ್ದಾನೆ.

ಬಿಲ್ವಪತ್ರೆ ಅತ್ಯಂತ ಶ್ರೇಷ್ಠವಾದ ಗಿಡಮೂಲಿಕೆಯು ಹೌದು. ಇಂದು ಆಯುರ್ವೇದದಲ್ಲಿ ಬಿಲ್ವಪತ್ರೆಯನ್ನು ಹಾಗೂ ಬಿಲ್ವಪತ್ರೆ ಮರದ ತೊಗಟುಗಳನ್ನು, ಹಣ್ಣುಗಳನ್ನು ಬಳಸಿ ವಿವಿಧ ಔಷಧಿ ವಸ್ತುಗಳನ್ನ ತಯಾರಿಸುವುದನ್ನು ನೋಡಬಹುದು. ಪುರಾಣ ಕಾಲದಲ್ಲಿಯೂ ಬಿಲ್ವಪತ್ರೆಗೆ ಸಾಕಷ್ಟು ಮಹತ್ವವನ್ನು ನೀಡಲಾಗಿತ್ತು. ಇಂತಿಪ್ಪ ಬಿಲ್ವಪತ್ರೆಯನ್ನು ದಿನವೂ ತಿಂದು 12 ವರ್ಷಗಳಿಂದ ಬದುಕುತ್ತಿರುವ ಬಾಬಾ ಜೀವನ ಮಾತ್ರ ನಿಜಕ್ಕೂ ಅಚ್ಚರಿಯೆ ಸರಿ!

Leave A Reply

Your email address will not be published.

error: Content is protected !!