ಕೈನೋವು ಅಂತ ಆಸ್ಪತ್ರೆಗೆ ಹೋದ ಬಾಲಕಿ. ಆಸ್ಪತ್ರೆಯಲ್ಲಿ ವೈದ್ಯರು ತೋರಿದ ನಿರ್ಲಕ್ಷ್ಯದಿಂದ ಆಕೆಯ ಪರಿಸ್ಥಿತಿ ಏನಾಯಿತು ನೋಡಿ!

ವೈದ್ಯರನ್ನ ದೇವರು ಅಂತೇವೆ. ಅದರೆ ಇತ್ತೀಚಿಗೆ ನಡೆಯುತ್ತಿರುವ ಹಲವು ಘಟನೆಗಳನ್ನು ನೋಡಿದರೆ ಯಾರನ್ನು ನಂಬುವುದು, ಯಾವ ಆಸ್ಪತ್ರೆಗೆ ಅನಾರೋಗ್ಯಕ್ಕೊಳಗಾದವರನ್ನು ಸೇರಿಸುವುದು ಎನ್ನುವುದೇ ಅರ್ಥವಗುವುದಿಲ್ಲ. ಎಲ್ಲಿ ಸ್ವಲ್ಪ ಯೇಮಾರಿದರೂ ಸಾವು ಸಂಭವಿಸುತ್ತೋ ಅಂತ ಆತಂಕ ಪಡುವ ಹಾಗಾಗಿದೆ. ಇದು ಬೆಂಗಳೂರಿನಲ್ಲಿ ನಡೆದ ಘಟನೆ. ಇಲ್ಲಿ ವೈದ್ಯರ ನಿರ್ಲಕ್ಷ ಎದ್ದು ಕಾಣುತ್ತದೆ. ಆಕೆ ಕೇವಲ 20 ವಯಸ್ಸಿನ ಹುಡುಗಿ. ಬಿಎಸ್ ದ್ವಿತೀಯ ವರ್ಷ ಓದುತ್ತಿದ್ದಳು. ಅಚಾನಕ್ ಕೈಗೆ ಗಾಯವಾಗಿ ಕೈನೋವಿಂದ ಬಳಲುತ್ತಿದ್ದಳು ತೇಜಸ್ವಿನಿ. ನಂತರ ಅವಳನ್ನು ಮಾರತಹಳ್ಳಿಯ ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿತ್ತು. ಆಸ್ಪತ್ರೆಗೆ ಸೇರಿದ ಯುವತಿ ಮನೆಯವರ ಕೈಗೆ ಸಿಕ್ಕಿದ್ದು ಮಾತ್ರ ಶ’ವವಾಗಿ! ಹೌದು ಈ ಘಟನೆಯ ಹಿನ್ನೆಲೆಯನ್ನು ವಿವರಿಸುತ್ತೇವೆ ಮುಂದೆ ಓದಿ.

ಕೈನೋವಿರುವ ಕಾರಣ ತೇಜಸ್ವಿನಿಯವರನ್ನು ಮನೆಯವರು ಸೋಮವಾರ ಬೆಳಗ್ಗೆ ಮುಂಜಾನೆ 4 ಗಂಟೆಗೆ ಆಸ್ಪತ್ರೆಗೆ ಸೇರಿಸಿದರು. ಆಸ್ಪತ್ರೆಯಲ್ಲಿ ವಿವಿಧ ತಪಾಸಣೆಯನ್ನು ಮಾಡಿ ಆಪರೇಶನ್ ಮಾಡಬೇಕು ಎಂದು ಹೇಳಿದ್ದರು. ನಂತರ ತೇಜಸ್ವಿನಿಗೆ ಅನಸ್ತೇಶಿಯಾ ಕೊಟ್ಟಿದ್ದಾರೆ ಆಸ್ಪತ್ರೆಯ ವೈದ್ಯರು. ಬೆಳಗ್ಗೆ ಸುಮಾರು 11.40 ರಷ್ಟೋತ್ತಿಗೆ ಆಕೆಯ ಮನೆಯವರಿಗೆ ಆಸ್ಪತ್ರೆಯಿಂದ ಕರೆ ಮಾಡಿ ನಿಮ್ಮ ಮಗಳಿಗೆ ಸೀರಿಯಸ್ ಆಗಿದೆ ತಕ್ಷಣವೇ ಬನ್ನಿ ಎಂದು ಹೇಳಿದ್ದಾರೆ. ಆದರೆ ಸ್ಥಳಕ್ಕೆ ಹೋದರೆ ಬೇರೆ ಆಸ್ಪತ್ರೆಗೆ ದಾಖಲಿಸಬೇಕು ಎಂದಿದ್ದಾರೆ. ಅದಕ್ಕೂ ಮನೆಯವರು ಒಪ್ಪಿದ್ದಾರೆ. ಅದರೆ ಸ್ಪಲ್ಪ ಸಮಯದಲ್ಲಿಯೇ ನಿಮ್ಮ ಮಗಳು ಸಾವನ್ನಪ್ಪಿದ್ದಳೆ ಎಂದು ವೈದ್ಯರು ತಿಳಿಸಿದ್ದಾರೆ.

ತೇಜಸ್ವಿನಿಗೆ ಅನಸ್ತೇಶಿಯಾ ಕೊಟ್ಟಾಗ ಅವಳಿಗೆ ಲೈಟ್ ಆಗಿ ಎದೆನೋವು ಕಾಣಿಸಿಕೊಂಡಿದೆ. ಆಕೆಗೆ ಮ್ಯಾಸಿವ್ ಹಾರ್ಟ್ ಅಟ್ಯಾಕ್ ಆಗಿದೆ. ಹಾಗಾಗಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ಹೇಳಿದ್ಡಾರೆ. ಆದರೆ ಆಕೆಯ ದೇಹಕ್ಕೆ ಇಂಜೆಕ್ಷನ್ ಚುಚ್ಚಿರುವುದು ಗೊತ್ತಾಗುತ್ತಿದೆ. ಅನಸ್ತೇಶಿಯಾ ಕೊಡುವ ನೆಪದಲ್ಲಿ ಹೈ ಡೋಸ್ ಕೊಟ್ಟು ಆಕೆಯ ಸಾವಿಗೆ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಕಾರಣ ಅಂತ ಮೃತ ತೇಜಸ್ವಿನಿಯ ಚಿಕ್ಕಪ್ಪ ಲಕ್ಷಣ್ ಪೋಲಿಸರಿಗೆ ತಿಳಿಸಿದ್ದಾರೆ.

ಹೀಗೆ ತಮ್ಮ ಮಗಳು ಸಾವನ್ನಪ್ಪಿದ್ದಕ್ಕೆ ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ. ತಮ್ಮ ಮಗಳ ಸಾವಿಗೆ ವೈದ್ಯರೇ ಕಾರಣ, ನಮಗೆ ನ್ಯಾಯ ಕೊಡಿ ಇಲ್ಲವಾದರೆ ನಾವೂ ಸಾಯುತ್ತೇವೆ ಅಂತ ಮೃತ ತೇಜಸ್ವಿನಿ ಮನೆಯವರು ಅಸ್ಪತ್ರೆಯೆದುರು ಗಲಾಟೆ ಮಾಡಿ ಅಲ್ಲಿಯೇ ಧರಣಿ ಕುಳಿತಿದ್ದರು.. ಸ್ಥಳಕ್ಕೆ ಭೇಟಿಯಿತ್ತ ಪೋಲಿಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದ್ದಾರೆ. ಆಸ್ಪತ್ತೆಗೆ ಹಾನಿ ಮಾಡದಂತೆ ಕುಟುಂಬದವರ ಮನವೊಲಿಸಿದ್ದಾರೆ. ಇನ್ನು ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಸ್ಥಳಕ್ಕೆ ಆಗಮಿಸಿ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿ ಮನೆಯವರನ್ನು ಹಿಂತಿರುಗಿ ಕಳುಹಿಸಿದ್ದಾರೆ.

ಇನ್ನು ಆಸ್ಪತ್ರೆಯ ವೈದ್ಯರನ್ನು ಬಂಧಿಸಿರುವುದಾಗಿ ಹೇಳಿದ ಪೋಲಿಸರು, ವಿಡಿಯೋ ಕಾಲ್ ಮಾಡಿ ಬಂಧಿಸಿರುವ ಪುರಾವೆಯನ್ನು ತೇಜಸ್ವಿನಿ ಮನೆಯವರಿಗೆ ನೀಡಿದ್ದಾರೆ. ಹಾಗಾಗಿ ಧರಣಿಯನ್ನು ನಿಲ್ಲಿಸಿ ಮನೆಗೆ ತೆರಳಿದ್ದಾರೆ ತೇಜಸ್ವಿನಿ ಕುಟುಂಬದವರು. ವೈದ್ಯರು ಅರೆಸ್ಟ್ ಆಗಲಿ ಆಗದೇ ಇರಲಿ, ಆದರೆ ತಪ್ಪಿಲ್ಲದೆ ಶ’ವವಾಗಿ ಮಲಗಿರುವ ತೇಜಸ್ವಿನಿ ವಾಪಾಸ್ ಬರಲು ಸಾಧ್ಯವೇ? ಆಕೆಯ ಕುಟುಂಬದ ನೋವನ್ನು ಯಾರಾದರೂ ಭರಿಸಲು ಸಾಧ್ಯವೇ!?

Leave a Comment

error: Content is protected !!