Gruha Jyothi: 200 ಯೂನಿಟ್ ಉಚಿತ ವಿದ್ಯುತ್ ಜನರಿಗೆ ಸಿಕ್ತು ಗುಡ್ ನ್ಯೂಸ್.

Gruha Jyothi ಈಗಾಗಲೇ ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರವನ್ನು ಸ್ವೀಕರಿಸಿದ್ದು ಸಿದ್ದರಾಮಯ್ಯ(Siddaramaiah) ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಜನರಿಗೆ ಪಾರದರ್ಶಕವಾಗಿರುವಂತಹ ಹಾಗೂ ಜನರ ಬಡತನವನ್ನು ನೀಗಿಸುವಂತಹ ಆಡಳಿತವನ್ನು ನೀಡುವ ಭರವಸೆಯನ್ನು ಅಧಿಕಾರಕ್ಕೂ ಮುಂಚೆ ವಾಗ್ದಾನ ಮಾಡಿತ್ತು.

ಅದೇ ರೀತಿ ಈಗ ಗಮನಿಸುವುದಾದರೆ 200 ಯೂನಿಟ್ ಉಚಿತ ವಿದ್ಯುತ್ ಅನ್ನು ಜುಲೈ ತಿಂಗಳಿನಿಂದ ಪ್ರಾರಂಭಿಸಿ ಆಗಸ್ಟ್ ತಿಂಗಳಿಗೆ ಬಿಲ್ ಕಟ್ಟುವ ರೀತಿಯಲ್ಲಿ ರಾಜ್ಯದ ಜನರು ಈ ಗ್ರಹಜ್ಯೋತಿ ಯೋಜನೆಯನ್ನು ಆನಂದಿಸುವ ಬಗ್ಗೆ ಸಂಪೂರ್ಣ ಕಾರ್ಯ ಯೋಜನೆಗಳನ್ನು ರಾಜ್ಯ ಸರ್ಕಾರ ಈಗಾಗಲೇ ವಿದ್ಯುತ್ ಮಂಡಳಿಯ ಜೊತೆ ಸೇರಿಕೊಂಡು ರೂಪಿಸಿದೆ.

ಇದರ ನಡುವೆ ಬಾಡಿಗೆ ಮನೆಯನ್ನು ಹೊಂದಿರುವವರು ಉಚಿತ ವಿದ್ಯುತ್ ಅನ್ನು ಪಡೆಯುವ ಹಾಗಿಲ್ಲ ಎನ್ನುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಎಲ್ಲಾ ಕಡೆ ಗಾಳಿ ಸುದ್ದಿಗಳು ಓಡಾಡುತ್ತಿದ್ದವು ಇದರಿಂದಾಗಿ ಬಾಡಿಗೆ ಮನೆಯವರು ಕೂಡ ಚಿಂತಾ ಕ್ರಾಂತರಾಗಿದ್ದರು. ಈಗ ಅವರಿಗೂ ಕೂಡ ಶುಭ ಸುದ್ದಿ ಕೇಳಿ ಬಂದಿದ್ದು ಅದೇನೆಂಬುದನ್ನು ತಿಳಿಯೋಣ ಬನ್ನಿ.

ಹೌದು ಅಗ್ರಿಮೆಂಟ್ ಪೇಪರ್(Agreement Paper) ಅನ್ನು ವಿದ್ಯುತ್ ಇಲಾಖೆಗೆ ತೋರಿಸಿದರೆ ಸಾಕು ಬಾಡಿಗೆ ಮನೆಯಲ್ಲಿ ಇರುವವರು ಕೂಡ 200 ಯೂನಿಟ್ ಗಳವರೆಗೂ ಕೂಡ ಉಚಿತ ವಿದ್ಯುತ್ ಅನ್ನು ಪಡೆಯಬಹುದಾಗಿದೆ ಎಂಬುದಾಗಿ ಸುದ್ದಿ ತಿಳಿದು ಬಂದಿದ್ದು ಇದನ್ನು ಮುಂದಿನ ದಿನಗಳಲ್ಲಿ ಸರ್ಕಾರ ಹಾಗೂ ವಿದ್ಯುತ್ ಇಲಾಖೆ ಅಧಿಕೃತವಾಗಿ ನಿಮಗೆ ತಿಳಿಸಲಿದೆ.

Leave A Reply

Your email address will not be published.

error: Content is protected !!