ನೇ’ಣು’ ಬಿಗಿದುಕೊಂಡು ಜೀವ ಕಳೆದುಕೊಂಡ ಹಾಸನದ ಗೃಹಿಣಿ. ನಡೆಯಿತು ಹೊಡೆದಾಟ, ತಪ್ಪಿತಸ್ಥರು ಯಾರು ಗೊತ್ತಾ?

ಹಾಸನದ ವಿದ್ಯಾನಗರದಲ್ಲಿ ಇತ್ತೀಚಿಗೆ ಒಂದು ದುರಂತ ನಡೆದು ಹೋಗಿದೆ. ಕುತ್ತಿಗೆಗೆ ಹಗ್ಗ ವನ್ನು ಬಿಗಿ’ದ ಸ್ಥಿತಿಯಲ್ಲಿ ಗೃಹಿಣಿಯೊಬ್ಬಳು ಜೀವವನ್ನು ಕಳೆದುಕೊಂಡ ಘಟನೆ ಕಂಡುಬಂದಿದೆ. ಆಕೆ ಯಾಕೆ ಇಂತಹ ದುಸ್ಥಿತಿಯಲ್ಲಿ ಹೆತ್ತವರ ಮುಂದೆ ಮಲಗಿದ್ದಳು? ಆಕೆಯ ಗಂಡ ಇದಕ್ಕೆಲ್ಲ ಕಾರಣಾನ? ಬನ್ನಿ ಈ ಘಟನೆಯ ಒಂದು ಸುತ್ತು ಬರೋಣ.

ಒಬ್ಬಳು ಹೆಣ್ಣು ಒಂದು ಗಂಡನ್ನು ಒಪ್ಪಿ ಮದುವೆಯಾಗಿ, ಗಂಡನ ಮನೆಗೆ ಬರ್ತಾಳೆ ಅಂತ ಆದರೆ ಆಕೆ ತನ್ನ ಹುಟ್ಟೂರು, ಹೆತ್ತವರು, ಕೊನೆಗೆ ತನ್ನ ಸರ್ವಸ್ವವನ್ನೇ ಬಿಟ್ಟು ಗಂಡನನ್ನು, ಆತನ ಮನೆಯವರನ್ನೂ ನಂಬಿ ಬಂದಿರುತ್ತಾಳೆ. ಆದರೆ ಅದೆಷ್ಟೋ ಬಾರಿ ಈ ನಂಬಿಕೆ ಹುಸಿ ಆಗುತ್ತೆ. ಪತಿ ಎನಿಸಿಕೊಂಡವನು ಪಾರಮಾರ್ಥಿಕತೆ ಇಲ್ಲದೆ ಬದುಕುತ್ತಾನೆ. ಇನ್ನು ಆತನ ಮನೆಯವರು ಬೇರೆ ಮನೆಯ ಹೆಣ್ಣು ಎನ್ನುವ ಕನಿಕರವೂ ಇಲ್ಲದೆ ತಮಗೆ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಾರೆ. ಇದು ಎಲ್ಲರ ಮನೆಯಲ್ಲಿ ನಡೆಯುವ ಕಥೆಯಲ್ಲ. ನೂರರಲ್ಲಿ ಒಂದೆರಡು ಮನೆಗಳಲ್ಲಿ ಇಂತಹ ಪರಿಸ್ಥಿತಿ ಇರಬಹುದು. ಆದರೆ ಇಂಥ ಪರಿಸ್ಥಿತಿಯನ್ನು ಎದುರಿಸಿದ ಹೆಣ್ಣಿನ ಜೀವನ ಮಾತ್ರ ನರಕ ಸದೃಶ್ಯ.

ಇಲ್ಲಿ ಗಂಡ ಹೆಂಡತಿ ಮದುವೆಯಾಗಿ ಹತ್ತು ವರ್ಷಗಳು ಕಳೆದಿತ್ತು. ಹೊಳೆನರಸೀಪುರ ತಾಲೂಕಿನ ಪಡವಲಹಿಪ್ಪೆ ಗ್ರಾಮದ ರಂಜಿತಾ ಅವರನ್ನು ಹಾಸನದ ವಿದ್ಯಾನಗರದ ಅಕ್ಷಯ್ ಅವರು ಮದುವೆಯಾಗಿದ್ದರು. ಮದುವೆಯಾಗಿ ಗಂಡ ಹೆಂಡತಿ ಚೆನ್ನಾಗಿಯೇ ಇದ್ದರು ಆದರೆ ಹತ್ತು ವರ್ಷ ಕಳೆದರೂ ದಂಪತಿಗಳಿಗೆ ಮಕ್ಕಳಾಗಿರಲಿಲ್ಲ. ಇದೇ ವಿಷಯವನ್ನು ಇಟ್ಟುಕೊಂಡು ರಂಜಿತಾ ಅವರ ಪತಿ ಅಕ್ಷಯ್ ಹಾಗೂ ಅವರ ಮನೆಯವರು ರಂಜಿತಾಗೆ ಇನ್ನಿಲ್ಲದಷ್ಟು ಕಿರುಕುಳವನ್ನು ನೀಡುವುದಕ್ಕೆ ಶುರುಮಾಡಿದರು. ಆಕೆಗೆ ದೈಹಿಕವಾಗಿ ಹಿಂಸೆಯನ್ನ ಕೊಡುತ್ತಿದ್ದರು. ರಂಜಿತ ಇತ್ತೀಚಿಗೆ ತನ್ನ ಜೀವವನ್ನೇ ಕಳೆದುಕೊಂಡ ಬಳಿಕ ಈ ವಿಚಾರವನ್ನು ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ.

ಈ ಹಿಂದೆಯೂ ರಂಜಿತಾ ಅವರ ಗಂಡನ ಮನೆಯವರು ಕೊಡುತ್ತಿದ್ದ ಹಿಂಸೆಯ ಬಗ್ಗೆ ಮಾಜಿ ಸಚಿವ ರೇವಣ್ಣ ಅವರಿಗೆ ರಂಜಿತ ಪೋಷಕರು ದೂರು ನೀಡಿದ್ದರು. ಸಚಿವರು ಕೂಡ ಹುಡುಗನ ಮನೆಯವರನ್ನು ಕರೆಸಿ ಬುದ್ಧಿವಾದ ಹೇಳಿದ್ದಾರೆ. ಆದರೆ ನಾಯಿ ಬಾಲ ಡೊಂಕೆ ಎನ್ನುವಂತೆ ರಂಜಿತಾಗೆ ಕಿರುಕುಳ ಕೊಡುವುದನ್ನು ಮಾತ್ರ ಬಿಟ್ಟಿರಲಿಲ್ಲ. ಪಾಪ ಆ ಬಡ ಜೀವ ಅದೆಷ್ಟು ನೋವು ತಿಂದಿರಬಹುದು, ಯಾಕೆಂದರೆ ಇನ್ನು ಈ ಹಿಂಸೆಯನ್ನು ಸಹಿಸುವುದಕ್ಕೇ ಸಾಧ್ಯವಾಗುತ್ತಿಲ್ಲ ಎನ್ನುವ ಹಂತಕ್ಕೆ ತಲುಪಿದಾಗ ರಂಜಿತಾ ನೇ’ಣಿಗೆ ಶರಣಾಗಿದ್ದಾಳೆ.

ವಿಷಯ ತಿಳಿದ ಮನೆಯವರು ಹಾಗೂ ರಂಜಿತಾ ಸಂಬಂಧಿ ಅಕ್ಷಯ್ ಮನೆಯವರ ಮೇಲೆ ಕಿಡಿಕಾರಿದ್ದಾರೆ. ಅಲ್ಲದೆ ಅಕ್ಷಯ ಮನೆಯ ಕಿಟಕಿ ಗಾಜುಗಳನ್ನು ಒಡೆದು ಕೈ ಕೈ ಮಿಲಾಯಿಸಿದ್ದಾರೆ. ಆದರೆ ರಂಜಿತ ಗಂಡ ಅಕ್ಷಯ ಮಾತ್ರ ಮನೆಯವರ ಪರವಾಗಿಯೇ ನಿಂತಿದ್ದ. ಹೀಗಾಗಿ ರಂಜಿತಾ ಅವರ ಸಂಬಂಧಿಗಳು ಅಕ್ಷಯ್ ಅವರಿಗೆ ಇನ್ನಷ್ಟು ಥಳಿಸಿದ್ದಾರೆ. ಘಟನೆಯನ್ನು ಅರಿತ ಪೊಲೀಸರು ಸ್ಥಳಕ್ಕೆ ಬಂದು ಜಗಳವನ್ನು ತಪ್ಪಿಸಿದ್ದಾರೆ. ಆದರೂ ಇದು ಮತ್ತೆ ಮುಂದುವರೆಯಬಹುದು ಎನ್ನುವ ಕಾರಣಕ್ಕೆ ಪೊಲೀಸರು ಅಕ್ಷಯ ಮನೆಯ ಸುತ್ತ ಈಗಾಗಲೇ ಕಾವಲು ಇರಿಸಿದ್ದಾರೆ. ರಂಜಿತಾ ಅವರ ಸಾವಿಗೆ ಆಕೆಯ ಗಂಡನ ಮನೆಯವರೇ ಕಾರಣ ಎಂಬುದು ಇನ್ನೂ ಸಾಬೀತಾಗಿಲ್ಲ. ಹಾಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.

error: Content is protected !!