ಕನ್ನಡದ ಖ್ಯಾತ ಧಾರಾವಾಹಿ ನಟಿ ದೇಹ ಸೌಂದರ್ಯವನ್ನು ಹೆಚ್ಚಿಸಿಕೊಳ್ಳೋಕೆ ಹೋಗಿ ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ ಬೇಕಿತ್ತಾ ಇಂತಹ ಶೋಕಿ ಎಲ್ಲಾ

ಕಲಾವಿದರು ಅಥವಾ ಸೆಲೆಬ್ರಿಟಿಗಳು ಯಾವಾಗಲು ಗ್ಲಾಮರ್ ಲೋಕದಲ್ಲಿ ಬದುಕುತ್ತಾರೆ. ಆರೋಗ್ಯಕ್ಕಿಂತ ಹೆಚ್ಚಾಗಿ ತಮ್ಮ ದೇಹ ಸೌಂದರ್ಯದ ಮೇಲೆ ಹೆಚ್ಚಿನ ಗಮನ ನೀಡುತ್ತಾರೆ. ಪ್ರೇಕ್ಷಕರಿಗೆ ತಾವು ಚೆನ್ನಾಗಿ ಕಾಣಿಸಿಕೊಳ್ಳಬೇಕು ಅಂತ ಯಾವ ಕೆಲಸ ಮಾಡೋಕೆ ಕೂಡ ರೆಡಿ ಇರುತ್ತಾರೆ. ಅದರಲ್ಲೂ ಈಗಿನ ಯುವ ನಟನಟಿಯರು ಅತಿ ಬೇಗನೇ ಜನಪ್ರಿಯತೆ ಗಳಿಸಬೇಕೆಂದು ಶಾರ್ಟ್ ಕಟ್ ಹುಡುಕುತ್ತಾರೆ. ಇದೀಗ ಕನ್ನಡ ಕಿರುತೆರೆಯ ಪ್ರಖ್ಯಾತ ನಟಿ ಚೇತನರಾಜ್ ತನ್ನ ದೇಹ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಮಾಡಿಕೊಂಡ ಅವಾಂತರದಿಂದ ಇದೀಗ ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ.

ಬೆಂಗಳೂರು ಉತ್ತರ ತಾಲೂಕಿನ ಅಬ್ಬಿಗೆರೆಯಲ್ಲಿ ಚೇತನಾ ರಾಜ್ ಕುಟುಂಬ ವಾಸವಿತ್ತು. ಚಿತ್ರ ರಾಜ್ ಗೆ ಕೇವಲ 21 ವರ್ಷ ವಯಸ್ಸು.ಚೇತನ ರಾಜ್ ಅವರು ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುವ ಗೀತಾ ಮತ್ತು ದೊರೆ ಶನಿ ಧಾರಾವಾಹಿಯಲ್ಲಿ ನಟನೆ ಮಾಡುತ್ತಿದ್ದರು. ಅಲ್ಲದೆ ಇನ್ನೂ ಕೂಡ ಬಿಡುಗಡೆಯಾಗದ ಹವಾಯಾಮಿ ಎಂಬ ಕನ್ನಡ ಚಿತ್ರದಲ್ಲಿ ಕೂಡ ಇವರು ನಟನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ʻಒಲವಿನ ನಿಲ್ದಾಣʼ ಎಂಬ ಧಾರಾವಾಹಿಯಲ್ಲಿ ಚೇತನರಾಜ್ ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದ್ದರು. ದಿನೇದಿನೇ ಚೇತನರಾಜ್ ಅವರ ಜನಪ್ರಿಯತೆ ಹೆಚ್ಚುತ್ತಿತ್ತು ಜನಪ್ರಿಯತೆ ಹೆಚ್ಚಿದಂತೆ ಚೇತನ ತನ್ನ ದೇಹ ಸೌಂದರ್ಯವನ್ನು ಹೆಚ್ಚಿಸಲು ಯೋಚನೆ ಮಾಡಿದ್ದಳು.

ಚೇತನಾ ಜೋರು ನೋಡಲಿಕ್ಕೆ ತುಂಬಾ ದಪ್ಪವಾಗಿದ್ದರು. ದೇಹದ ತೂಕವನ್ನು ಇಳಿಸಲು ಇವರು ಜಿಮ್ ವರ್ಕೌಟ್ ಡಯೆಟ್ ಮಾಡುವ ಮೂಲಕ ಹರಸಾಹಸ ಪಡುತ್ತಿದ್ದರು ಆದರೆ ಇದ್ಯಾವುದೂ ಕೂಡ ಒಳ್ಳೆಯ ಫಲಿತಾಂಶ ನೀಡಿಲಿಲ್ಲ. ಆಪ್ತರೊಬ್ಬರ ಸಲಹೆಯ ಮೂಲಕ ಚೇತನರಾಜ್ ತನ್ನ ದೇಹದ ತೂಕವನ್ನು ಇಳಿಸಿಕೊಳ್ಳಲು ಸರ್ಜರಿ ಮಾಡಿಸಿಕೊಳ್ಳಲು ಮುಂದಾಗುತ್ತಾಳೆ ಮತ್ತು ಈ ವಿಷಯವನ್ನು ತನ್ನ ತಂದೆ ತಾಯಿಗೆ ಚೇತನರಾಜ್ ಹೇಳೋದೇ ಇಲ್ಲ..

ಮೇ 16 ರಂದು ಚೇತನರಾಜ್ ಮನೆಯವರಿಗೆ ವಿಷಯ ತಿಳಿಸದೆ ಮುಂಜಾನೆ ಡಾಕ್ಟರ್ ಶೆಟ್ಟಿ ಆಸ್ಪತ್ರೆಗೆ ಹೋಗಿ ಫ್ಯಾಟ್ ಸರ್ಜರಿ ಮಾಡಿಸಿಕೊಳ್ಳುತ್ತಾಳೆ. ತಕ್ಷಣ ಈ ವಿಷಯ ಚೇತನ ಪಾಲಕರಿಗೆ ತಿಳಿಯುತ್ತೆ ಕಾಗೆ ತನ್ನ ತಂದೆ ತಾಯಿ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಸರ್ಜರಿ ಮಾಡುವ ಸಂದರ್ಭದಲ್ಲಿ ಎಡವಟ್ಟಾಗಿ ಚೇತನರಾಜ್ ಸ್ಥಿತಿ ಗಂಭಿರವಾಗುತ್ತದೆ. ಶಸ್ತ್ರಚಿಕಿತ್ಸೆ ವೇಳೆ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡು ಪರಿಸ್ಥಿತಿ ಗಂಭೀರವಾಗಿತ್ತು. ಚಿತ್ರ ರಾಜ್ ರನ್ನು ಉಳಿಸಿಕೊಳ್ಳಲು ವೈದ್ಯರು 4 ಗಂಟೆಗಳ ಕಾಲ ಚಿಕಿತ್ಸೆ ಮಾಡಿದರು ಆದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಚೇತನರಾಜ್ ಇಹಲೋಕ ತ್ಯಜಿಸಿದ್ದಾಳೆ.

ಚಿತ್ರ ರಾಜ್ ತಂದೆ ವರದರಾಜ್ ಮತ್ತು ತಾಯಿ ಮುನಿಲಕ್ಷ್ಮೀ ಮಗಳನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ.ವೈದ್ಯರ ನಿರ್ಲಕ್ಷ್ಯದಿಂದಲೇ ಈ ರೀತಿ ಆಗಿದೆ ಎಂದು ಪೋಷಕರು ದೂರನ್ನು ದಾಖಲಿಸಿದ್ದಾರೆ. ತನ್ನ ಮಗಳು ಈ ರೀತಿ ಶಸ್ತ್ರಚಿಕಿತ್ಸೆ ತಾಳೆ ಎಂದು ನಮಗೆ ಅರಿವಿರಲಿಲ್ಲ ಅವಳು ತನ್ನ ಸ್ನೇಹಿತರೊಂದಿಗೆ ಚರ್ಚೆ ಮಾಡಿ ಈ ನಿರ್ಧಾರ ತೆಗೆದುಕೊಂಡಿದ್ದಾಳೆ. ಆರೋಗ್ಯದ ವಿಚಾರದಲ್ಲಿ ನಾವು ತುಂಬಾ ಕಾಳಜಿ ವಹಿಸಬೇಕು ಸ್ವಲ್ಪ ಎಡವಟ್ಟಾದರೂ ಜೀವವೇ ಹೋಗುತ್ತದೆ ಹೋದ ಜೀವ ಮತ್ತೆ ಬರುವುದಿಲ್ಲ ಎಂದು ಚೇತನ್ ರಾಜ್ ತಂದೆ ತಾಯಿ ತಮ್ಮ ಗೋಳನ್ನು ಹೇಳಿಕೊಂಡಿದ್ದಾರೆ.

Leave a Comment

error: Content is protected !!