ಸಾಧಾರಣ ಕೆಳ ಮಧ್ಯಮ ವರ್ಗದ ಬಾಲಕ ಕರ್ನಾಟಕದ ನಂಬರ್ ಒನ್ ಯು ಟ್ಯೂಬರ್ ಡಾ. ಬ್ರೋ ಆಗಿದ್ದು ಹೇಗೆ ಗೊತ್ತಾ ಇವನ ತಿಂಗಳ ಸಂಪಾದನೆ ಎಷ್ಟು?

ಜನರಿಗೆ ಯಾವೆಲ್ಲಾ ರೀತಿಯ ಕ್ರೇಜ್ ಇರತ್ತೆ ಅನ್ನೋದನ್ನ ತಿಳಿದುಕೊಳ್ಳೋಕೆ ಯೂಟ್ಯೂಬ್ ಚಾನೆಲ್ ಒಂದನ್ನ ಓಪನ್ ಮಾಡಿದ್ರೆ ಸಾಕು. ಸಾವಿರಾರು ವಿಧದ ವಿಡಿಯೋಗಳು ಸಿಗತ್ತೆ. ಇಂದು ಅದೆಷ್ಟೋ ಜನದ ಆದಾಯದ ಮೂಲವಾಗಿದೆ ಯೂಟ್ಯೂಬ್. ಇಲ್ಲಿ ವಯಸ್ಸಿನ ಮಿತಿಯಿಲ್ಲದೆ ಎಲ್ಲರೂ ತಮಗನ್ನಿಸಿದ ರೀತಿಯಲ್ಲಿ ವಿಡಿಯೋಗಳನ್ನ ಹರಿಬಿಡುತ್ತಾರೆ. ಇದರಿಂದ ಹಲವರು ಅರ್ನಿಂಗ್ಸ್ ಕೂಡ ಮಾಡುತ್ತಾರೆ. ಆದರೂ ಯೂಟ್ಯೂಬ್ ನಲ್ಲಿ ಹಣ ಮಾಡೋದು ಸುಲಭವಲ್ಲ. ಅದಕ್ಕೆ ಪರಿಶ್ರಮ, ಶ್ರದ್ಧೆಯೂ ಅಷ್ಟೇ ಮುಖ್ಯ. ಇದಕ್ಕೆ ಜ್ವಲಂತ ಉದಾಹರಣೆ ಅಂದ್ರೆ ಡಾ. ಬ್ರೋ ಯೂಟ್ಯೂಬ್ ಚಾನೆಲ್!

ಹೌದು ’ಡಾ. ಬ್ರೋ’ ಯೂಟ್ಯೂಬ್ ಚಾನೆಲ್ ಬಗ್ಗೆ ನೀವು ಕೇಳಿರಬಹುದು ಈ ಚಾನೆಲ್ ಇಂದು ಎಷ್ಟರ ಮಟ್ಟಿಗೆ ಫೇಮಸ್ ಆಗಿದೆ ಅಂದ್ರೆ ಕನ್ನಡಿಗರ ಮನೆ ಮನೆ ತಲುಪಿದೆ. ಈ ಚಾನೆಲ್ ಬೇರೆ ಯಾರದ್ದೂ ಅಲ್ಲ, ಕನ್ನಡಿಗರಿಗೆ ವಿಶ್ವವನ್ನೇ ತೋರಿಸಿ, ಕನ್ನಡದಲ್ಲಿಯೇ ಎಲ್ಲವನ್ನೂ ವಿವರಿಸುವ ಗುರಿಯನ್ನ ಹೊಂದಿರುವ 20 ವರ್ಷದ ಗಗನ್ ಅವರದ್ದು! ಬೆಂಗಳೂರಿನ ಗ್ರಾಮಾಂತರ ಪ್ರದೇಶದಲ್ಲಿ ಕೆಳ ಮಧ್ಯಮ ಕುಟುಂಬದಲ್ಲಿ ಶ್ರೀನಿವಾಸ ಹಾಗೂ ಪದ್ಮ ಅವರ ಮೊದಲನೆಯ ಮಗ ಗಗನ್. ಈತನಿಗೆ ಒಬ್ಬ ಸಹೋದರನೂ ಇದ್ದಾನೆ. ಶ್ರೀನಿವಾಸ ಅವರು ವೃತ್ತಿಯಲ್ಲಿ ಅರ್ಚಕರು. ಹಾಗಾಗಿ ಗಗನ್ ಕೂಡ ಚಿಕ್ಕವಯಸ್ಸಿನಲ್ಲಿಯೇ ಅರ್ಚಕ ಕೆಲಸವನ್ನ ಕಲಿತಿದ್ರು. ಅಪ್ಪನ ಅನುಪಸ್ಥಿತಿಯಲ್ಲಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಗಗನ್ ಪೂಜೆ ಮಾಡಿ ಪ್ರಸಾದ ಕೊಡುತ್ತಿದ್ದರು. ಕೇಳಿಕೊಳ್ಳುವಂತ ಸ್ಥಿತಿವಂತರಲ್ಲದ ಗಗನ್ ಕುಟುಂಬ ಮಗನನ್ನು ಮಾತ್ರ ಕನ್ವೆಂಟ್ ನಲ್ಲಿಯೇ ಕಲಿಸಿತ್ತು. ಆದರೆ ಗಗನ್ ವಿದ್ಯಾಭ್ಯಾಸದಲ್ಲಿ ಹಿಂದೆ ಇದ. ಅಂತೂ ಹತ್ತನೇ ತರಗತಿ ಮುಗಿಸಿದ ಗಗನ್ ಗೆ ಮುಂದೆ ಓದುವ ಮನಸ್ಸಿರಲಿಲ್ಲ.

ಕೊನೆಗೆ ಯಾರೋ ಹೇಳಿದ ಮಾತಿಗೆ ಒಪ್ಪಿ ಸೈನ್ಸ್ ವಿಷಯವನ್ನು ತೆಗ್ರೆದುಕೊಂಡು ಪ್ರಥಮ ಪಿಯುಸಿ ಮೆಟ್ಟಿಲೇರಿದ ಆದರೆ ವಿದ್ಯೆ ತಲೆಗೆ ಹತ್ತಲಿಲ. ಜೊತೆಗೆ ಮನೆಯ ಜವಾಬ್ದಾರಿಯೂ ಇದ್ದಿದ್ದರಿಂದ ತನ್ನ 16ನೇ ವಯಸ್ಸಿನಲ್ಲಿ ಕೆಲಸವನ್ನು ಮಾಡಲು ಆರಂಭಿಸಿದ. ಮೊದಲು ಡ್ರೈವರ್ ವೃತ್ತಿಯನ್ನು ಮಾಡುತಿದ್ದ. 18 ವರ್ಷವಾಗದೇ ಡ್ರೈವಿಂಗ್ ಲೈಸೆನ್ಸ್ ಸಿಗಲ್ಲ, ಆದರೂ ಹಣಕ್ಕಾಗಿ ತಾನು ಕಾರ್ ಓಡಿಸುತ್ತಿದ್ದುದಾಗಿ ಗಗನ್ ಹೇಳಿಕೊಳ್ಳುತ್ತಾರೆ. ಇದಾದ ಬಳಿಕ ಅಲ್ಲಿ ಕೆಲವು ಕಷ್ಟವನ್ನು ಅನುಭವಿಸಬೇಕಾಯಿತು. ಹಾಗಾಗಿ ಬೇರೆ ಬೇರೆ ಕೆಲಸಗಳನ್ನೂ ಕೂಡ ಮಾಡಿ ಹಣ ಗಳಿಸುತ್ತಿದ್ದ ಗಗನ್. ಫೋಟೋಗ್ರಫಿ, ಮಾಡಿ ದಿನಕ್ಕೆ ಸಾವಿರ ರುಪಾಯಿ ಸಂಪಾದನೆ ಮಾಡುತ್ತಿದ್ದ. ಈ ನಡುವೆ ಭರತನಾಟ್ಯವನ್ನೂ ಕಲಿತಿದ್ದ ಗಗನ್.

ಇಷ್ಟೇಲ್ಲಾ ಸರ್ಕಸ್ ಮಾಡಿದರೂ ಗಗನ್ ಉತ್ತಮ ಹಣ ಗಳಿಸುವುದಕ್ಕೆ ಸಾಧ್ಯವಾಗಲಿಲ್ಲ. ಹಾಗೂ ತಾನು ಅಂದುಕೊಂಡ ಜೀವನ ಕಳೆಯುವುದಕ್ಖೂ ಸಾಧ್ಯವಾಗಲಿಲ್ಲ. ಆತನ ಸ್ನೇಹಿತರೆಲ್ಲಾ ಆಗಲೇ ದುಬೈ, ಫಾರಿನ್ ಗಳಲ್ಲಿ ಸೆಟಲ್ ಆಗಿದ್ದೂ ಇತ್ತು. ಕೊನೆಗೆ ಅವರು ಮಾಡಿ ಕಳುಹಿಸುವ ವಿಡಿಯೊಗಳನ್ನು ನೋಡಿ ತಾವೂ ಅಲ್ಲಿಗೆ ಹೋಗಿ ಕನ್ನಡಿಗರಿಗೆ ಅಲ್ಲಿನ ಸ್ಥಳ ಪರಿಚಯ ಮಾಡಿಸಬೇಕು ಅದರಲ್ಲೂ ಕನ್ನಡದಲ್ಲಿ ಎನ್ನುವ ವಿಚಾರ ಅವರ ತಲೆಯಲ್ಲಿ ಬಂತು. ಹೀಗೆ ಬರುತ್ತಿದ್ದಂತೆ ದೇಶ ವಿದೇಶಗಳ ಟ್ರಿಪ್ ಕೈಗೊಂಡ ಗಗನ್. ರಾಜಸ್ಥಾನದಿಂದ ಪಾಕಿಸ್ತಾನದವರೆಗೂ, ಬೆಂಗಳೂರಿನಿಂದ ರಷ್ಯಾವರೆಗೂ ಪ್ರಯಾಣ ಬೆಳೆಸಿ ಕನ್ನಡಿಗರಿಗೆ ಅಲ್ಲಿನ ಸ್ಥಳ ಪರಿಚಯ ಮಾಡಿಸುತ್ತಿದ್ದಾನೆ.

ಗಗನ್ ನ 2016ರಲ್ಲಿ ಆರಂಭವಾದ ಪಯಣ ಇನ್ನೂ ನಿಂತಿಲ್ಲ. ಆಗಿನಿಂದ ಈಗಿನ ವರೆಗೂ ಮನೆಯಿಂದ ಒಂದೇ ಒಂದು ರೂಪಾಯಿಗಳನ್ನೂ ಪಡೆಯದೇ ಸ್ವಂತ ದುಡಿಮೆಯಲ್ಲಿ ಪ್ರವಾಸ ಕೈಗೊಳ್ಳುತ್ತಾನೆ ಗಗನ್! ಕೇವಲ ಯೂಟ್ಯೂಬ್ ಮತ್ತು ಫೇಸ್ ಬುಕ್ ಗಳಲ್ಲಿ ವಿಡಿಯೋಗಳನ್ನು ಹಾಕಿ ಗಗನ್ ಸಂಪಾದನೆ ಮಾಡುತ್ತಾನೆ ಈತನ ಪ್ರತಿ ತಿಂಗಳ ಸಂಪಾದನೆ ಕಡಿಮೆಯೆಂದರೂ ಒಂದರಿಂದ 2 ಲಕ್ಷ ರುಪಾಯಿಗಳು. ಅಪ್ಪ ಅಮ್ಮನ ದುಡ್ಡಿನಲ್ಲಿ ಶೋಕಿ ಮಾಣದೆ ಸ್ವಂತ ದುಡಿಮೆಯಿಂದ ಇಡೀ ವಿಶ್ವವನ್ನೇ ಕನ್ನಡಿಗರಿಗೆ ಪರಿಚಯ ಮಾಡಲು ಈತ ಹೊರಟಿದ್ದಾನೆ. ಸರಿಯಾಗಿ ಇಂಗ್ಲೀಷ್, ಹಿಂದಿ ಮಾತನಾದಲು ಬರದ ಗಗನ್ ಇಂದು ವಿದೇಶದಲ್ಲೆಲ್ಲಾ ಒಬ್ಬರೇ ಪ್ರವಾಸ ಮಾಡುತ್ತಾರೆ ಎಂದರೆ ಮೆಚ್ಚಲೇಬೇಕು. ಇನ್ನು ಈ ಬದುಕಿನಲ್ಲಿಯೇ ತೃಪ್ತಿಕಂಡುಕೊಂಡಿರುವ ಗಗನ್ ಅವರ ಮುಂದಿನ ಕನಸು ನನಸಾಗಲಿ ಎನ್ನುವುದೇ ಎಲ್ಲಾ ಕನ್ನಡಿಗರ ಹಾರೈಕೆ.

Leave A Reply

Your email address will not be published.

error: Content is protected !!