
ರಾಜ್ಯದ ಜನರ ಹಿತಕ್ಕಾಗಿ ರಾತ್ರಿ ಹಗಲು ಶ್ರಮಿಸುವ ಜೊತೆಗೆ ಒಂದು ತಿಂಗಳ ಸಂಬಳವನ್ನು ಸಿಎಂ ಪರಿಹಾರ ನಿಧಿಗೆ ಕೊಟ್ಟು ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿಗಳು
ರಾಜ್ಯದಲ್ಲಿ ಕೊರೋನಾ ಮಹಾಮಾರಿ ಮರಣ ಮೃದಂಗ ಬಾರಿಸುತ್ತಿರುವ ಹಿನ್ನಲೆಯಲ್ಲಿ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಅದೇ ನಿಟ್ಟಿನಲ್ಲಿ ರಾತ್ರಿ ಹಗಲು ಅನ್ನದೆ ರಾಜ್ಯದ ಜನರ ಹಿತಕ್ಕಾಗಿ ಪೊಲೀಸ್ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ, ಅಲ್ಲದೆ ಕರಬುರ್ಗಿಯ ಈ ಪೊಲೀಸ್ ಅಧಿಕಾರಿಗಳು ಒಂದು ಹೆಜ್ಜೆ ಮುಂದೆ ಹಿಟ್ಟು ರಾಜ್ಯದ ಜನರ ಒಳಿತಿಗಾಗಿ ತಮ್ಮ ಒಂದು ತಿಂಗಳ ವೇತನವನ್ನು ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಅಷ್ಟಕ್ಕೂ ಇವರು ಯಾರು ಅನ್ನೋದನ್ನ ಮುಂದೆ ನೋಡಿ.
ರಾಜ್ಯದಲ್ಲಿ ಕೊರೊನಾದಿಂದ ತತ್ತರಿಸಿರುವ ಜನರ ಹಿತಕ್ಕಾಗಿ, ತಮ್ಮ ಒಂದು ತಿಂಗಳ ಸಂಪೂರ್ಣ ಸಂಬಳವನ್ನು ಸಿಎಂ ಪರಿಹಾರ ನಿಧಿಗೆ ಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಒಟ್ಟಾರೆಯಾಗಿ ವಿವಿಧ ಜಿಲ್ಲೆಯ ನಾಲ್ಕು ಅಧಿಕಾರಿಗಳು ತಮ್ಮ ಒಂದು ತಿಂಗಳ ವೇತನವನ್ನು ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ ಅವರುಗಳಲ್ಲಿ ಸುರಪುರ ಡಿವೈಎಸ್‍ಪಿ ವೆಂಕಟೇಶ್ 75 ಸಾವಿರ, ಸಿಪಿಐ ಸಾಹೇಬಗೌಡ 60 ಸಾವಿರ, ಶಹಪುರ ಗ್ರಾಮೀಣ ಸಿಪಿಐ ಶ್ರೀನಿವಾಸ್ 60 ಸಾವಿರ, ಬಿ.ಗುಡಿ ಪಿಎಸ್‍ಐ ರಾಜಕುಮಾರ್ 40 ಸಾವಿರ ದೇಣಿಗೆ ನೀಡಿ ಸಾರ್ಥಕತೆ ಮೆರೆದಿದ್ದಾರೆ.
ಅದೇನೇ ಇರಲಿ ರಾಜ್ಯದ ಜನರ ಹಿತಕ್ಕಾಗಿ ಊಟ ನಿದ್ರೆ ಬಿಟ್ಟು ರಾತ್ರಿ ಹಗಲು ಅನ್ನದೆ ತಮ್ಮ ಕರ್ತವ್ಯ ನಿಷ್ಠೆಯನ್ನು ತೋರಿಸುತ್ತಿರುವ ಈ ಪೊಲೀಸ್ ಹಾಗೂ ಭಾರತೀಯ ಸೈನಿಕರಿಗೆ, ವೈದ್ಯರಿಗೆ ಅರೋಗ್ಯ ಇಲಾಖೆಯವರಿಗೆ ನಮ್ಮ ಕಡೆಯಿಂದ ಬಿಗ್ ಸಲ್ಯೂಟ್.