
ಸ್ನೇಹಿತರೆ, ಕಳೆದ ಕೆಲವು ದಿನಗಳಿಂದ ಕಾವೇರಿ ಹೋರಾಟವು(Cauvery Dispute) ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ ರಾಜ್ಯದ ಸಮಸ್ತ ಜನತೆಯು ಕಾವೇರಿಯನ್ನು ಇತರರಿಗೆ ಬಿಟ್ಟು ಕೊಡುವುದಿಲ್ಲ ಎಂದು ಬೆಂಬಲ ಸೂಚಿಸುತ್ತಿದ್ದಾರೆ. ಹೀಗೆ ನಾಡು ನುಡಿ ಜಲ ಎಂಬ ವಿಚಾರ ಬರುತ್ತಿದ್ದ ಹಾಗೆ ಸಿಡಿದೇಳುವ ನಮ್ಮ ಕನ್ನಡ ಸಿನಿಮಾ ರಂಗದ ಸಾಕಷ್ಟು ನಟ ನಟಿಯರು ಕೂಡ ಕಾವೇರಿ ಹಾಗೂ ರೈತರ ಪರವಾಗಿ ಬೆಂಬಲ ಸೂಚಿಸುತ್ತಿದ್ದು, ಡಾಕ್ಟರ್ ರಾಜಕುಮಾರ್ ಅವರ ಕುಟುಂಬದ ಮಕ್ಕಳಾದ ರಾಘವೇಂದ್ರ ರಾಜಕುಮಾರ್(Raghavendra Rajkumar) ಹಾಗೂ ಶಿವರಾಜ್ ಕುಮಾರ್ (Shiva Rajkumar) ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಾಲು ಸಾಲು ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ.
ಅಲ್ಲದೆ ಮಾಧ್ಯಮದವರ ಜೊತೆಗೂ ಮಾತನಾಡಿದ ಶಿವಣ್ಣ “ರೈತನ ಬೆನ್ನೆಲುಬು ಕಾವೇರಿ ರಾಜ್ಯದಲ್ಲಿ ಈಗಾಗಲೇ ಮಳೆಯ ಅಭಾವ ಇರುವ ಕಾರಣದಿಂದ ರೈತರ ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಎರಡು ರಾಜ್ಯಗಳ ನಾಯಕರು, ನ್ಯಾಯಾಲಯ ಇದಕ್ಕೊಂದು ಸಮಾಧಾನಕರ ಪರಿಹಾರವನ್ನು ಕಂಡುಕೊಳ್ಳಬೇಕಿದೆ ಇದು ನನ್ನ ಪ್ರಾರ್ಥನೆ ಕೂಡ ಆಗಿದೆ” ಎಂದಿದ್ದಾರೆ. ಮಂಡ್ಯ ಕ್ಷೇತ್ರದ ಸಂಸದೆ ಆಗಿರುವಂತಹ ಸುಮಲತಾ ಅಂಬರೀಶ್(Sumalatha Ambareesh) ಜಲ ಶಕ್ತಿ ಸಚಿವರು ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಆಗುತ್ತಿರುವ ಬೆಳವಣಿಗೆಯ ಕುರಿತು ಮಾಹಿತಿ ತಲುಪಿಸಿ ಇದಕ್ಕೊಂದು ಪರಿಹಾರ ನೀಡುವಂತೆ ಕೇಳಿಕೊಂಡಿದ್ದಾರೆ.

ಅಲ್ಲದೆ ಬೆಳ್ಳಂ ಬೆಳಗ್ಗೆ ಟ್ವಿಟರ್ ಇನ್ಸ್ಟಾಗ್ರಾಮ್ ಹಾಗೂ facebook ನಲ್ಲಿ ಸರಣಿ ಸಂದೇಶಗಳನ್ನು ಹಂಚಿಕೊಳ್ಳುವ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಕೂಡ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು “ಕರ್ನಾಟಕದ ಪಾಲಿನ ಕಾವೇರಿ ನೀರಿಗೆ ಕತ್ತರಿ ಹಾಕಿ ಮತ್ತಷ್ಟು ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆಯುತ್ತಾ ಬಂದಿದೆ. ಈ ವರ್ಷ ನೀರಿನ ಅಭಾವ ರಾಜ್ಯದಲ್ಲಿ ಸಾಕಷ್ಟಿದೆ ಈ ಸಮಯದಲ್ಲಿ ನೀರಾವರಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಬಹಳಷ್ಟು ಇರುವ ಕಾರಣ ಎಲ್ಲಾ ಅಂಕಿ ಅಂಶಗಳನ್ನು ಪರಿಗಣಿಸಿ ಆದಷ್ಟು ಬೇಗ ನ್ಯಾಯ ಸಿಗುವಂತಾಗಲಿ” ಎಂದು ಬರೆದುಕೊಂಡಿದ್ದಾರೆ.
ಅನಂತರಾ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಕೂಡ ತಮ್ಮ ಟ್ವಿಟರ್ ಖಾತೆಯಲ್ಲಿ ಸ್ನೇಹಿತರೆ “ನಮ್ಮ ಕಾವೇರಿ ನಮ್ಮ ಹಕ್ಕು ಅಷ್ಟು ಒಮ್ಮತದಿಂದ ಗೆಲ್ಲಿಸಿರುವ ಸರ್ಕಾರ ಕಾವೇರಿಯನ್ನು ನಂಬಿರುವ ಜನರನ್ನು ಕೈಬಿಡುವುದಿಲ್ಲ ಎಂದು ನಾನು ನಂಬಿದ್ದೇನೆ. ಈ ಕೂಡಲೇ ತಜ್ಞರು ಕಾರ್ಯತಂತ್ರ ರೂಪಿಸಿ ನ್ಯಾಯ ನೀಡಲಿ ಎಂದು ಒತ್ತಾಯಿಸುತ್ತೇನೆ. ನೆಲ ಜಲ ಭಾಷೆಯ ಹೋರಾಟದಲ್ಲಿ ನನ್ನ ಧ್ವನಿಯೂ ಇದೆ, ಕಾವೇರಿ ತಾಯಿ ಕರುನಾಡನ್ನು ಕಾಪಾಡಲಿ” ಎಂದು ಟ್ವೀಟ್ ಮಾಡಿದ್ದಾರೆ.
ಅದರಂತೆ ಸ್ಯಾಂಡಲ್ವುಡ್ನ ಇನ್ನಷ್ಟು ಸ್ಟಾರ್ ಸೆಲೆಬ್ರಿಟಿಗಳು ಬೆಂಬಲ ಸೂಚಿಸಿದ್ದು, ಹೀಗೆ ನಮ್ಮಲ್ಲಿ ಕುಡಿಯೋಕು ನೀರಿಲ್ಲದೆ ಇರುವಂತಹ ಪರಿಸ್ಥಿತಿ ಎದುರಾಗಿರುವಾಗ ತಮಿಳುನಾಡು ಸರ್ಕಾರ ಕುರುವೈ ಬೆಳೆಯ ಎರಡನೇ ಬೆಳೆಗೆ ನೀರು ಕೇಳಿದ್ದಾರೆ, ಸುಪ್ರೀಂ ಕೋರ್ಟ್ನಿಂದಲೂ ಕಾವೇರಿ ನೀರನ್ನು ಬಿಡಲು ಆದೇಶ ದೊರೆಕಿದೆ. ಇದು ನಮ್ಮ ರಾಜ್ಯದ ಸದ್ಯದ ದುರಾದೃಷ್ಟಕರ ಪರಿಸ್ಥಿತಿಯಾಗಿದೆ.