ಗಂಡನ ಶ’ವ’ದ ಮುಂದೆ ಕೂತುಕೊಂಡು ಗಳಗಳನೆ ಅತ್ತು ಡವ್ ಮಾಡಿದ ಪತ್ನಿ ಕೊನೆಗೆ ಹೊರಬಿತ್ತು ನೋಡಿ ಅಸಲಿ ಸತ್ಯ

ಈಗಿನ ಕಾಲದಲ್ಲಿ ಸ್ವಂತ ಅಣ್ಣ ತಮ್ಮ ಅಕ್ಕ ತಂಗಿ ಗಂಡ ಹೆಂಡತಿ ಯಾರನ್ನು ಕೂಡ ನಂಬೋಹಾಗಿಲ್ಲ. ನಮ್ಮವರು ಯಾರು ನಮ್ಮ ಶತ್ರುಗಳು ಯಾರು ಎಂದು ಅರ್ಥ ಮಾಡಿಕೊಳ್ಳುವುದೇ ಕಷ್ಟವಾಗಿದೆ. ಕಲಿಯುಗದಲ್ಲಿ ಪ್ರತಿಯೊಬ್ಬ ಮನುಷ್ಯನು ಸ್ವಾರ್ಥಿಯಾಗಿದ್ದಾನೆ. ತಾನು ತನ್ನದು ತಾನು ಖುಷಿಯಾಗಿದ್ದರೆ ಸಾಕು ಎನ್ನುವುದು ಪ್ರತಿಯೊಬ್ಬರ ತತ್ತ್ವವಾಗಿ ಬಿಟ್ಟಿದೆ. ಚಿತ್ರದುರ್ಗದ ಗೋಪಾಲ ನಾಯ್ಕ್ ಮತ್ತು ಚಂದ್ರಕಲಾ ದಂಪತಿಗಳ ಕಥೆಯನ್ನು ಕೇಳಿ ಇದೀಗ ನಮ್ಮವರನ್ನೇ ನಾವು ನಂಬೋದಾ ಬಿಡೋದಾ ಅಂತ ಯೋಚನೆ ಬರಲಿಕ್ಕೆ ಶುರುವಾಗಿದೆ.

ಗೋಪಾಲ್ ನಾಯ್ಕ್ ಎಂಬ ಪುರುಷ ಚಿತ್ರದುರ್ಗದ ಚಳ್ಳಕೆರೆ ತಾಲ್ಲೂಕಿನ ವೀರದಿಮ್ಮನಹಳ್ಳಿಯವನು. ಈತ ಹನ್ನೊಂದು ವರ್ಷಗಳ ಹಿಂದೆ ತನ್ನ ಅಕ್ಕನ ಮಗಳನ್ನೇ ಇಷ್ಟಪಟ್ಟು ಮನೆಯವರ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದ. ಇವನ ಮದುವೆಯಾಗಿದ್ದ ಹುಡುಗಿಯ ಹೆಸರು ಚಂದ್ರಕಲಾ. ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಿ ಮನೆಯವರ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದರು. ಮದುವೆಯಾಗಿ ಸುಖಸಂಸಾರವನ್ನು ನಡೆಸಿದ್ದ ಈ ದಂಪತಿಗಳಿಗೆ ಇಬ್ಬರು ಮಕ್ಕಳು ಕೂಡ ಹುಟ್ಟಿದರು. ಗೋಪಾಲ ನಾಯ್ಕ ಕಿರಾಣಿ ಅಂಗಡಿ ಕೆಲಸಕ್ಕೆ ಹೋಗುತ್ತಿದ್ದ.

ನನ್ನನ್ನೇ ನಂಬಿ ಬಂದ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಕಾರಣಕ್ಕೆ ಹಗಲು ರಾತ್ರಿ ಗೋಪಾಲ ಕಷ್ಟಪಟ್ಟು ದುಡಿಯುತ್ತಿದ್ದ. ಮಕ್ಕಳು ಹುಟ್ಟಿದ ಮೇಲಂತೂ ಗೋಪಾಲ ನಿಗೆ ಕಷ್ಟಗಳು ಜಾಸ್ತಿಯಾದವು. ಜೀವನ ನಡೆಸುವುದು ಕೂಡ ಕಷ್ಟವಾಗಿತ್ತು. ಹೆಂಡತಿ ಚಂದ್ರಕಲಾ ಹೆಸರಿನಲ್ಲಿ ಗ್ರಾಮದ ಮಹಿಳಾ ಸಂಘಗಳ ಮೂಲಕ ಸಾಲ ಪಡೆದು ಹಳ್ಳಿ ಹಳ್ಳಿಗಳಿಗೆ ಆಟೋದಲ್ಲಿ ತೆರಳಿ ತರಕಾರಿ ಮಾರಾಟ ಮಾಡುವ ಕೆಲಸವನ್ನು ಗೋಪಾಲ ಶುರು ಮಾಡಿದ . ಈ ವ್ಯಾಪಾರ ಪ್ರಾರಂಭಿಸಲು ರಾಜಶೇಖರ್ ಎಂಬ ಫೈನಾನ್ಸ್ ವ್ಯಕ್ತಿಯ ಬಳಿ ಕೂಡ ಗೋಪಾಲ ಸಾಲ ಪಡೆದಿದ್ದ. ಇಲ್ಲೇ ನೋಡಿ ಸ್ಟೋರಿಗೆ ಟ್ವಿಸ್ಟ್ ಸಿಕ್ಕಿದ್ದು..

ಗೋಪಾಲ ಸಾಲಪಡೆದ ರಾಜಶೇಖರ್ ಎಂಬ ವ್ಯಕ್ತಿ ಗೋಪಾಲನ ಪತ್ನಿ ಚಂದ್ರಕಲಾ ಜೊತೆ ನಿಧಾನವಾಗಿ ಒಡನಾಟ ಬೆಳೆಸುತ್ತಾನೆ. ಚಂದ್ರಕಲಾ ಮತ್ತು ರಾಜಶೇಖರ್ ಇಬ್ಬರೂ ಡಿಂಗ್ ಡಾಂಗ್ ಆಟ ಶುರುಮಾಡುತ್ತಾರೆ. ಆಗಾಗ ರಾಜಶೇಖರ್ ಮನೆಗೆ ಬರುತ್ತಿದ್ದ. ಪತ್ನಿ ಚಂದ್ರಕಲಾ ಗೋಪಾಲ್ ಜೊತೆ ಆಗಾಗ ಸುಮ್ ಸುಮ್ನೆ ಕಾಲು ಕೆರೆದುಕೊಂಡು ಜಗಳ ಪ್ರಾರಂಭಿಸುತ್ತಿದ್ದರು. ಇದನ್ನೆಲ್ಲ ನೋಡಿ ಗೋಪಾಲ್ ಗೆ ಅನುಮಾನ ಹುಟ್ಟಿಕೊಳ್ಳುತ್ತದೆ. ತನ್ನ ಹೆಂಡತಿಗೆ ಮತ್ತು ರಾಜಶೇಖರ್ ನಡುವೆ ಏನೋ ನಡೀತಿದೆ ಎಂಬ ಸಂಶಯ ಹುಟ್ಟಿಕೊಳ್ಳುತ್ತೆ.

ಸಂಶಯಗೊಂಡ ಗೋಪಾಲ್ ಪ್ರತಿದಿನ ತರಕಾರಿ ಮಾರಾಟ ಮಾಡಲು ತನ್ನ ಜೊತೆ ಹೆಂಡತಿ ಚಂದ್ರಕಲಾಳನ್ನು ಕೂಡ ಕರೆದುಕೊಂಡು ಹೋಗಲು ಪ್ರಾರಂಭಿಸಿದ. ಈ ಕಾರಣದಿಂದ ಚಂದ್ರಕಲಾ ಮತ್ತು ರಾಜಶೇಖರ್ ಭೇಟಿ ಆಗೋಕೆ ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಪತ್ನಿ ಚಂದ್ರಕಲಾ ಬೇಸತ್ತಿದ್ದಳು. ತಮ್ಮಿಬ್ಬರ ಅ’ನೈ’ತಿಕ ಸಂಬಂಧಕ್ಕೆ ಅಡ್ಡಿಯಾದ ಗಂಡನಿಗೆ ಒಂದು ಗತಿ ಕಾಣಿಸಬೇಕು ಅಂತ ಯೋಚಿಸುತ್ತಾಳೆ. ಏಪ್ರಿಲ್ 20 ರಂದು ಬೆಳಿಗ್ಗೆ ಎಂದಿನಂತೆ ಆಟೊದಲ್ಲಿ ಚಂದ್ರಕಲಾ ಮತ್ತು ಗೋಪಾಲ್ ತರಕಾರಿ ಮಾರಾಟ ಮಾಡಲು ಪ್ರಯಾಣ ಬೆಳೆಸುತ್ತಿದ್ದರು. ಅರ್ಧ ದಾರಿಗೆ ಆಟೊದ ಗ್ಯಾಸ್ ಖಾಲಿಯಾಗಿ ನಿಂತುಹೋಗುತ್ತೆ. ಇದೇ ಒಳ್ಳೆಯ ಸಮಯ ಎಂದು ಚಂದ್ರಕಲಾ ಒಂದು ಪ್ಲಾನ್ ಮಾಡುತ್ತಾಳೆ.

ಆಟೋದಿಂದ ಇಳಿದು ಚಂದ್ರಕಲಾ ತನ್ನ ಪ್ರಿಯಕರ ರಾಜಶೇಖರ್ ಗೆ ಫೋನ್ ಮಾಡಿ ಅವನನ್ನು ಬೈಕ್ನಲ್ಲಿ ಕರೆಸಿಕೊಳ್ಳುತ್ತಾಳೆ. ಚಂದ್ರಕಲಾ ರಾಜಶೇಖರ್ ಮತ್ತು ಗೋಪಾಲ್ ಮೂರು ಜನ ಬೈಕ್ ನಲ್ಲಿ ಹೋಗುತ್ತಿರುವಾಗ ಮಧ್ಯ ದಾರಿಯಲ್ಲಿ ಬೈಕ್ ಅನ್ನು ನಿಲ್ಲಿಸಿ, ಚಂದ್ರಕಲಾ ಮತ್ತು ರಾಜಶೇಖರ್ ಸೇರಿ ಗೋಪಾಲನನ್ನು ಕತ್ತು ಹಿ ಸುಕಿ ಇಲ್ಲ ಎನಿಸಿದ್ದಾರೆ. ಬೇರೆಯವರಿಗೆ ಈ ವಿಷಯ ತಿಳಿಯಬಾರದೆಂದು ಚಂದ್ರಕಲಾ ತನ್ನ ಗಂಡ ಮೂರ್ಚೆ ಬಿದ್ದಿದ್ದಾನೆ ಅಂತ ಸುಳ್ಳು ಹೇಳಿ ಆಸ್ಪತ್ರೆಗೆ ಕರೆದುಕೊಂಡು ಹೋದಳು. ಮೊದಲೇ ಜೀವವನ್ನು ಕಳೆದುಕೊಂಡಿದ್ದ ಗೋಪನ್ನನನ್ನು ನೋಡುತ್ತಿದ್ದಂತೆ ವೈದ್ಯರು ದಾರಿ ಮಧ್ಯೆಯೇ ಸಾ ‘ವೊ’ ನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

ಗೋಪಾಲನ ಮೃ’ತ’ದೇಹದ ಮುಂದೆ ಕೂತುಕೊಂಡು ಚಂದ್ರಕಲಾ ಗಳಗಳನೆ ಗೋಳೋ ಅಂತ ಅಳುತ್ತಿದ್ದಳು.. ಮೊಸಳೆ ಕಣ್ಣೀರು ಹಾಕಿ ಊರಿನ ಜನರನ್ನು ಮರಳು ಮಾಡುವ ಪ್ರಯತ್ನ ಪಟ್ಟಳು. ಆದರೆ ಊರಿನ ಜನರಿಗೆ ಇವಳ ಮೇಲೆ ಮುಂಚೆಯಿಂದಲೂ ಒಂದು ಕಣ್ಣಿತ್ತು. ಗೋಪಾಲ ಇಹಲೋಕ ತ್ಯಜಿಸಿದ ನಂತರ ಊರಿನವರೆಲ್ಲ ಗೋಪಾಲನ ಸಾ’ವಿ’ಗೆ ಹೆಂಡತಿ ಚಂದ್ರಕಲಾ ನೇ ಕಾರಣ. ಈ ಘಟನೆಗೆ ಚಂದ್ರಕಲಾ ಮತ್ತು ರಾಜಶೇಖರ್ ಇಬ್ಬರಿಗೂ ಏನೋ ಸಂಬಂಧವಿದೆ. ಇದು ಆ’ಕಸ್ಮಿಕ ಸಾ’ವು’ ಅಲ್ಲ ಎಂದು ಗುಸುಗುಸು ಕಿವಿಮಾತು ಶುರುಮಾಡ್ತಾರೆ. ಈ ಕಿವಿಮಾತನ್ನು ಕೇಳಿ ಗೋಪಾಲನ ಪಾಲಕರು ಚಳ್ಳಕೆರೆ ಪೋಲೀಸ್ ಠಾಣೆಗೆ ದೂರು ನೀಡಿದರು. ಸೂಕ್ಷ್ಮವಾಗಿ ತನಿಖೆ ನಂತರ ಪೊಲೀಸರ ಬಳಿಯೇ ಚಂದ್ರಕಲಾ ನಡೆದ ಸತ್ಯವನ್ನು ಬಾಯ್ಬಿಟ್ಟಿದ್ದಾಳೆ.

Leave a Comment

error: Content is protected !!