ಸಾವಿರಾರು ಬಡ ಜೀವಗಳ ಜೀವ ರಕ್ಷಕ ಮಂಡ್ಯದ 5 ರೂಪಾಯಿ ಪ್ರಾಮಾಣಿಕ ವೈಧ್ಯರು ಶಂಕ್ರೆಗೌಡರ ಪರಿಸ್ಥಿತಿ ಹೇಗಾಗಿದೆ ನೋಡಿ ನಿಜಕ್ಕೂ ಮನ ಕಲಕುತ್ತೆ

’ವೈದ್ಯೋ ನಾರಾಯಣ ಹರಿಃ’ ಅಂತ ಹೇಳಲಾಗುತ್ತೆ. ಅಂದರೆ ಸಾಮಾನ್ಯರಿಗೆ ವೈದ್ಯರೇ ದೇವರು. ಮನುಷ್ಯನ ಜೀವ ಉಳಿಸುವವರು ವೈದ್ಯರೇ ಅಲ್ಲವೆ?. ಹೀಗೆ ವೈದ್ಯರಾಗಿ ಸೇವೆಯನ್ನು ನಿರ್ವಹಿಸುತ್ತಿರುವ ಡಾ. ಶಂಕರೇಗೌಡರು ಉಳಿದ ವೈದ್ಯರಿಗಿಂತ ಬಹಳ ವಿಭಿನ್ನ. ಇದಕ್ಕೆ ಕಾರಣ ಅವರ ಸೇವಾ ಮನೋಭಾವ. ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ವೈದ್ಯರಾಗಿರುವ ಶಂಕರೇಗೌಡರು ಐದು ರೂಪಾಯಿ ಡಾಕ್ಟರ್ ಎಂದೇ ಫೇಮಸ್.

ಡಾ. ಶಂಕರೇಗೌಡ ಅವರಿಗೆ ಸೋಮವಾರ ರಾತ್ರಿ ಲಘು ಹೃದಯಾಘಾತ ಸಂಭವಿಸಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಈ ಸುದ್ದಿ ಇಡೀ ಮಂಡ್ಯದ ಜನರಲ್ಲಿ ಆತಂಕವನ್ನು ಸೃಷ್ಟಿಮಾಡಿದ್ದು ಸುಳ್ಳಲ್ಲ. ಯಾಕಂದ್ರೆ ಶಂಕರೇಗೌಡ ಅವರ ಕೈ ಗುಣವೇ ಹಾಗೆ. ಅವರಿಂದ ಚಿಕಿತ್ಸೆ ಪಡೆದ ಬಹುತೇಕ ಎಲ್ಲರೂ ಗುಣಮುಖರಾಗಿದ್ದಾರೆ. ಸಾವಿರಾರು ಜನರಿಗೆ ಜೀವ ರಕ್ಷಣೆ ನೀಡಿದ ದೇವರು ಇವರು.

ಇದೆಲ್ಲದಕ್ಕಿಂತ ಮುಖ್ಯವಾಗಿ ಮಂಡ್ಯದಲ್ಲಿ ತಮ್ಮ ತಾರಾ ಕ್ಲಿನಿಕ್ ನಲ್ಲಿ ಕೇವಲ ಐದು ರೂಪಾಯಿ ಪಡೆದು ಚಿಕಿತ್ಸೆಯನ್ನು ನೀಡುವಂತಹ ಮಹಾನುಭಾವ ಇವರು. ವೈದ್ಯರು ಮಾತ್ರವಲ್ಲದೆ ರಾಜಕಾರಣಿಯಾಗಿ ಯು ಕೂಡ ಸೇವೆ ಸಲ್ಲಿಸಿರುವ ಡಾ. ಶಂಕರೇಗೌಡ, ತಮ್ಮ ಊರಾದ ಶಿವಳ್ಳಿಯಲ್ಲಿ ಯಾವುದೇ ರೋಗಿಗಳಿಗೆ ಒಂದು ರೂಪಾಯಿಯನ್ನು ತೆಗೆದುಕೊಳ್ಳದೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡುತ್ತಾರೆ.

ಮಂಡ್ಯ ಮೈಸೂರು ವಿಭಾಗದಲ್ಲಿ ಐದು ರೂಪಾಯಿ ಡಾಕ್ಟರ್ ಎಂದೇ ಪ್ರಸಿದ್ಧಿಯನ್ನು ಪಡೆದಿರುವ ಶಂಕರೇಗೌಡರು ಹೀಗೆ ಹೃದಯಾಘಾತಕ್ಕೆ ಒಳಗಾಗಿರುವುದು ಎಲ್ಲರಲ್ಲಿಯೂ ಆತಂಕವನ್ನು ಸೃಷ್ಟಿಸಿದೆ. ಡಾ. ಶಂಕರೇಗೌಡ ಅವರಿಗೆ ಸೋಮವಾರ ರಾತ್ರಿ ಇದ್ದಕ್ಕಿದ್ದಹಾಗೆ ಹೃದಯಾ’ಘಾ’ ತವಾಗಿದೆ. ಕುಟುಂಬದವರು ಕೂಡಲೇ ಮೈಸೂರಿನ ಅಪೊಲೋ ಆಸ್ಪತ್ರೆಗೆ ಶಂಕರೇಗೌಡ ಅವರನ್ನು ಕರೆದುಕೊಂಡು ಹೋಗಿದ್ದಾರೆ.

ಹೃದಯದ ಮೂರು ರ’ಕ್ತ’ ನಾಳಗಳಲ್ಲಿ ಬ್ಲಾಕ್ ಆಗಿದ್ದು, 4 ಸ್ಟಂಟ್ ಗಳನ್ನೂ ಅಳವಡಿಸಲಾಗಿದೆ. ಸದ್ಯದ ಮಟ್ಟಿಗೆ ಚೇತರಿಕೆಯನ್ನು ಕಂಡುಕೊಂಡಿರುವ ಶಂಕರೇ ಗೌಡರಿಗೆ ಒಂದು ಬೈಪಾಸ್ ಸರ್ಜರಿಯನ್ನು ಮಾಡಬೇಕಾಗಬಹುದು ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. 5 ರೂಪಾಯಿಯ ಡಾಕ್ಟರ್ ಶಂಕರೇಗೌಡರು ಬೇಗ ಗುಣಮುಖರಾಗಿ ಮನೆಗೆ ಬರುವಂತಾಗಲಿ ಎಂದು ಮಂಡ್ಯದ ಜನತೆ ಅವರ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.

Leave a Comment

error: Content is protected !!