ನಿರ್ಮಾಪಕರ ಪಾಲಿನ ಕುಬೇರನಾಗಿದ್ದ ಅಪ್ಪು, ಬಿಟ್ಟೋದ ಆಸ್ತಿ ಎಷ್ಟು ಗೊತ್ತಾ? ಇಲ್ಲಿದೆ ಮಾಹಿತಿ

ನಟ ಪುನೀತ್ ರಾಜಕುಮಾರ್ ಅವರು ಅಪ್ಪು ಎಂದೇ ಪ್ರಖ್ಯಾತಿ ಪಡೆದಿದ್ದಾರೆ. ಬಾಲ್ಯದಿಂದಲೇ ಅನೇಕ ಸಿನಿಮಾಗಳಲ್ಲಿ ನಟಿಸಿ ತಂದೆಯಂತೆ ಮೇರು ನಟನಾಗಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡವರು. ಇನ್ನೂ ಅನೇಕ ಕಲಾವಿದರು ಬಾಲ್ಯದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿ ನಂತರದ ದಿನಗಳಲ್ಲಿ ಅವರು ಚಿತ್ರರಂಗದಿಂದ ದೂರವಾದರೆ ಅವರು ಮಾತ್ರ ಇಂದಿಗೂ ಕೂಡ ನಟನೆಯಲ್ಲಿ ಹೆಸರು ಮಾಡಿದ್ದು ಅವರಿಗೆ ಸಾಕಷ್ಟು ಅಭಿಮಾನಿ ಬಳಗ ಕೂಡ ಇದೆ. ಇನ್ನು ತಮ್ಮ ನಟನೆಯ ಮೂಲಕ ಹಾಗೂ ತಮ್ಮ ನೃತ್ಯದ ಮೂಲಕ ಅವರು ಸಾಕಷ್ಟು ಅಭಿಮಾನಿಗಳನ್ನು ಸೆಳೆದಿದ್ದಾರೆ.

ಆದರೆ ಇದೀಗ ಇಹಲೋಕ ತ್ಯಜಿಸಿರುವ ನಟ ಅಪ್ಪು ಅವರನ್ನು ಎಂದೆಂದಿಗೂ ಕೂಡ ಮರೆಯಲು ಅಸಾಧ್ಯ. ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಅವರು ಅನೇಕ ಸಿನಿಮಾಗಳನ್ನು ತಮ್ಮ ಪಿ ಆರ್ ಕೆ ಪ್ರೊಡಕ್ಷನ್ ಹೌಸ್ ಮೂಲಕ ನಿರ್ಮಾಣ ಕೂಡ ಮಾಡಿದ್ದಾರೆ. ಇನ್ನು ಅವರು ಇದೀಗ ಇಹಲೋಕ ತ್ಯಜಿಸಿ ತಿಂಗಳುಗಳೇ ಕಳೆದಿದೆ. ಇಂದಿಗೂ ಕೂಡ ಅವರ ಭಾವಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅಷ್ಟರ ಮಟ್ಟಿಗೆ ಅವರು ಜನರ ಪ್ರೀತಿಯನ್ನು ಗಳಿಸಿದ್ದರು.

ಚಿಕ್ಕಂದಿನಿಂದಲೂ ಕಲೆಯ ಮೇಲೆ ಬಹಳ ಆಸಕ್ತಿ ಇದ್ದ ಕಾರಣ ವಿದ್ಯಾಭ್ಯಾಸದಲ್ಲಿ ಅಷ್ಟಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳದೆ ಕಲೆ ಹಾಗು ಸಮಾಜಸೇವೆಯಲ್ಲಿ ಪುನೀತ್ ರಾಜಕುಮಾರ್ ಮುಂದುವರೆದರು. ಇನ್ನು ನಿಮೆಲ್ಲರಿಗೂ ಗೊತ್ತಿರುವ ಹಾಗೆ ಡಾಕ್ಟರ್ ರಾಜಕುಮಾರ್ ಅವರ ಕಾಲದಲ್ಲಿ ಸಂಭಾವನೆ ಅತಿ ಕಡಿಮೆ ಇದ್ದ ಕಾರಣ ರಾಜಣ್ಣ ಮಕ್ಕಳಿಗಾಗಿ ಯಾವುದೇ ಆಸ್ತಿ ಮಾಡಲಿಲ್ಲ. ಬದಲಿಗೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿದರು. ನಟ ಅಪ್ಪು ಅವರು ಬಾಲ್ಯದಿಂದಲೇ ಕನ್ನಡಿಗರ ಮನಸ್ಸನ್ನು ಸೆಳೆದವರು. ಇನ್ನು ಅವರು ಕೇವಲ ನಟನಾಗಿ ಮಾತ್ರವಲ್ಲದೆ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು.

ಹೀಗೆ ಅನೇಕ ಕಾರ್ಯಗಳ ಮೂಲಕ ಅವರ ವ್ಯಕ್ತಿತ್ವವೂ ಇದೀಗ ಬಹಿರಂಗಗೊಂಡಿದೆ. ಇನ್ನು ಸ್ಟಾರ್ ನಟನಾಗಿದ್ದರೂ ಕೂಡ ಸರಳಜೀವನವನ್ನು ತಮ್ಮದಾಗಿಸಿಕೊಂಡಿದ್ದ ಪುನೀತ್ ರಾಜಕುಮಾರ್ ಅವರು ಇಂದಿನ ದಿನಗಳಲ್ಲಿ ಎಲ್ಲರಿಗೂ ಕೂಡ ಆದರೆ ಎಂದು ಹೇಳಬಹುದು. ಇನ್ನು ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಅಪ್ಪು ಅವರು ಬಾಲನಟನಾಗಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು, ಪವರ್ ಸ್ಟಾರ್ ಆಗಿ ಕಿಂಗ್ ಆಗಿದ್ದರು. ಅಪ್ಪು ಅವರು ಇಲ್ಲಿಯವರೆಗೂ ನಾಯಕನಾಗಿ 29 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಈ 29 ಸಿನಿಮಾಗಳು ಕಳಪೆಯಾಗಿದೆ, ಕಡಿಮೆ ಕಲೆಕ್ಷನ್ ಮಾಡಿದೆ ಎಂದು ಯಾವೊಬ್ಬ ನಿರ್ಮಾಪಕನು ಹೇಳಿಲ್ಲ. ಅಪ್ಪು ಅವರು ಸಿನಿಮಾ ಮಾಡಿದರೆ, ನಿರ್ಮಾಪಕನ ಜೇಬು ಸಂಪೂರ್ಣ ಭರ್ತಿಯಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ಅಪ್ಪು ಅವರು ಒಪ್ಪಿಕೊಳ್ಳುತ್ತಿದ್ದ ಸಿನಿಮಾಗಳು ಸಹ, ಇಡೀ ಕುಟುಂಬ ಕೂತು ನೋಡುವಂತಹ ಒಳ್ಳೆಯ ಕಥೆಗಳನ್ನೇ ಅಪ್ಪು ಆರಿಸಿಕೊಳ್ಳುತ್ತಿದ್ದರು. ಅಪ್ಪು ಅವರಿಗೆ ಪ್ರಮುಖ ಆದಾಯ ಸಹ ಸಿನಿಮಾನೆ ಆಗಿತ್ತು. ಅಪ್ಪು ಅವರು ಒಂದು ಸಿನಿಮಾಗೆ 8 ರಿಂದ 10 ಕೋಟಿ ಸಂಭಾವನೆ ಪಡೆಯುತ್ತಿದ್ದರು.

ಕನ್ನಡದ ಟಾಪ್ ಮೋಸ್ಟ್ ಪೇಡ್ ನಟರಲ್ಲಿ ಅಪ್ಪು ಸಹ ಒಬ್ಬರು. ಸುದೀಪ್, ದರ್ಶನ್ ಮತ್ತು ಯಶ್ ಸಹ ಬಹುತೇಕ ಇಷ್ಟೇ ಸಂಭಾವನೆ ಪಡೆಯುತ್ತಿದ್ದರು. ಅಪ್ಪು ಅವರು ನಿರ್ಮಾಪಕರ ಪಾಲಿನ ಕುಬೇರ ಆಗಿದ್ದರು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ ಅಪ್ಪು ಸಿನಿಮಾ ಬಿಡುಗಡೆ ಆಗಿದೆ ಎಂದರೆ, ಕುಟುಂಬ ಸಮೇತ ಎಲ್ಲರೂ ಬಂದು ಸಿನಿಮಾ ನೋಡುತ್ತಿದ್ದರು. ಸಿನಿಮಾ ಹೊರತುಪಡಿಸಿ ಅಪ್ಪು ಅವರಿಗೆ ಬೇರೆ ಮೂಲಗಳಿಂದ ಸಹ ಆದಾಯ ಇತ್ತು. ಅಪ್ಪು ಅವರು ಸಾಕಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಹಲವಾರು ಬ್ರ್ಯಾಂಡ್ ಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು ಅಪ್ಪು.

ನಂದಿನಿ ಹಾಲು, ಸರ್ಕಾರದ ಜಾಹಿರಾತು, ಮಣಪ್ಪುರಂ ಗೋಲ್ಡ್ ಲೋನ್ ಹೀಗೆ ಬಹಳಷ್ಟು ಜಾಹೀರಾತುಗಳಲ್ಲಿ ಅಪ್ಪು ನಟಿಸಿದ್ದರು. ಆದರೆ ಸರ್ಕಾರದ ಪರವಾಗಿ ನಟಿಸಿದ ಯಾವುದೇ ಜಾಹೀರಾತಿಗೂ ಅಪ್ಪು ಅವರು ಒಂದು ರೂಪಾಯಿ ಸಂಭಾವನೆಯನ್ನು ಸಹ ಪಡೆದಿರಲಿಲ್ಲ. ಜನರಿಗೆ ಒಳ್ಳೆಯದಾಗುವ ಕೆಲಸ ಎಂದು ಅಪ್ಪು ಅವರು ಸಂಭಾವನೆ ಪಡೆಯದೆ ನಟಿಸುತ್ತಿದ್ದರು. ಹಾಗೂ ಯಾವುದೇ ಕಾರ್ಯಕ್ರಮಗಳಿಗೆ ಆಮಂತ್ರಣ ನೀಡಿದರು ಸಹ ಹೆಚ್ಚಿನ ಸಂಭಾವನೆ ಪಡೆಯದೆ, ಕಾರ್ಯಕ್ರಮಕ್ಕೆ ಹೋಗಿ ಸಪೋರ್ಟ್ ಮಾಡಿ ಬರುತ್ತಿದ್ದರು. ಈ ಮೂಲಗಳಿಂದ ಅಪ್ಪು ಅವರ ಒಟ್ಟು ಆಸ್ತಿ ಸುಮಾರು 200 ಕೋಟಿ ರೂಪಾಯಿಗಳು ಎನ್ನಲಾಗಿದೆ. ಅಪ್ಪು ಅವರು ತಂದೆ ಡಾ.ರಾಜ್ ಕುಮಾರ್ ಅವರ ಹಾದಿಯಲ್ಲೇ ನಡೆದು, ನ್ಯಾಯವಾದ ರೀತಿಯಲ್ಲಿ 200ಕೋಟಿ ಹಣವನ್ನು ಸಂಪಾದನೆ ಮಾಡಿದ್ದಾರೆ. ಹಾಗೂ ಅಪ್ಪು ಅವರಿಗೆ ಕಾರ್ ಕ್ರೇಜ್ ಜಾಸ್ತಿ ಇತ್ತು. ಸುಮಾರು 12 ಕಾರ್ ಗಳನ್ನು ಅಪ್ಪು ಹೊಂದಿದ್ದರು ಎನ್ನಲಾಗುತ್ತದೆ.

ಅಪ್ಪು ಅವರ ಬಳಿ ಇದ್ದ ಅತ್ಯಂತ ದುಬಾರಿ ಕಾರ್ ಎಂದರೆ, Lamborghini ಇದರ ಬೆಲೆ ಸುಮಾರು 3.75 ಕೋಟಿ ರೂಪಾಯಿಗಳು. ಇದಲ್ಲದೆ ಅಪ್ಪು ಅವರು ತಮ್ಮ ಆಸ್ತಿಯ ಶೇಕಡಾ 30 ರಷ್ಟು ಅನಾಥಾಶ್ರಮಕ್ಕೆ, ಹಾಗು ಬಡ ಮಕ್ಕಳ ಶಾಲೆಗೇ ದಾನವಾಗಿ ನೀಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಈ ಕಾರ್ ಇರುವುದು ದರ್ಶನ್ ಮತ್ತು ಪುನೀತ್ ಇಬ್ಬರ ಬಳಿ ಮಾತ್ರ. ಪುನೀತ್ ಅವರ ಬಳಿ ಬಿಎಂಡಬಲ್ಯೂ 730 ಎಲ್.ಡಿ ಕಾರ್ ಸಹ ಇತ್ತು, ಇದರ ಬೆಲೆ 1.35 ಕೋಟಿ ರೂಪಾಯಿಗಳು. ಹಾಗೂ ಜಾಗ್ವರ್ ಎಕ್ಸ್.ಇ ಕಾರ್ ಅಪ್ಪು ಅವರ ಬಳಿ ಇತ್ತು ಅದರ ಬೆಲೆ 70 ಲಕ್ಷ. ಮತ್ತೊಂದು ದುಬಾರಿ ಕಾರ್ ರೇಂಜ್ ರೋವರ್ ವೊಗ್ ಇದರ ಬೆಲೆ 2.75ಕೋಟಿ ರೂಪಾಯಿಗಳು. ಹಾಗೂ ಚಿಕ್ಕದಾದ ಮಿನಿ ಕೂಪರ್ ನ ಬೆಲೆ 38 ಲಕ್ಷ ರೂಪಾಯಿ ಆಗಿತ್ತು.

78 ಲಕ್ಷದ ಆಡಿ ಕಾರ್, 40 ಲಕ್ಷದ ಟೊಯೊಟಾ ಫಾರ್ಚ್ಯುನರ್ ಕಾರ್ ಸಹ ಇತ್ತು. 1.26 ಕೋಟಿ ರೂಪಾಯಿಯ ಬಿಎಂಡಬಲ್ಯೂ ಎಕ್ಸ್6 ಕಾರ್ ಸಹ ಅಪ್ಪು ಅವರ ಬಳಿ ಇತ್ತು. ಜೊತೆಗೆ ಆಡಿ ಮತ್ತು ಬೆನ್ಸ್ ಕಾರ್ ಕೂಡ ಅಪ್ಪು ಅವರ ಬಳಿ ಇತ್ತು. ಒಟ್ಟಾರೆಯಾಗಿ ಅಪ್ಪು ಅವರ ಸುಮಾರು 12 ಕಾರ್ ಗಳಿದ್ದು, 30ಕೋಟಿಗಿಂತ ಹೆಚ್ಚು ಇವುಗಳ ಬೆಲೆಯಾಗಿತ್ತು. ಇದೆಲ್ಲವೂ ಇದ್ದರು ಈಗ ಅಪ್ಪು ಅವರಿಲ್ಲ ಎನ್ನುವುದು ಅತ್ಯಂತ ನೋವಿನ ವಿಷಯ. ಇಂತಹ ಸರಳಜೀವಿ ಇಂದು ನಮ್ಮ ಮಧ್ಯದಲ್ಲಿ ಇಲ್ಲ ಎಂಬ ವಿಷಯ ಇಂದಿಗೂ ಕೂಡ ನಂಬಲು ಅಸಾಧ್ಯವಾದದ್ದು. ಇನ್ನು ಪುನೀತ್ ಅವರು ನಡೆಸಿಕೊಂಡು ಬರುತ್ತಿದ್ದಂತಹ ಎಲ್ಲಾ ಕಾರ್ಯಗಳು ಕೂಡಾ ಅವರ ಹೆಸರಿನಲ್ಲಿಯೇ ಮುಂದುವರೆಯಲಿದೆ ಎಂದು ಅವರ ಪತ್ನಿ ಅಶ್ವಿನಿ ಅವರು ಹೇಳಿದ್ದಾರೆ. ಇದೀಗ ಕುಟುಂಬದ ಸಂಪೂರ್ಣ ಜವಾಬ್ದಾರಿ ಅಶ್ವಿನಿ ಅವರ ಮೇಲಿದೆ.

Leave a Comment

error: Content is protected !!