
ರಾಜ್ಯದಲ್ಲಿ ಬಾರಿ ಮಳೆ ಆಗಲಿದೆ, ಈ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್
ಸ್ನೇಹಿತರೆ ರಾಜ್ಯದ ಹಲವಡೆ ಕಳೆದ ಮೂರು ನಾಲ್ಕು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಇದರ ನಡುವೆ ಹವಾಮಾನ ವರದಿಯು(Weather Report) ಹೊರಬಿದ್ದಿದ್ದು ಮುಂದಿನ ಒಂದು ವಾರಗಳವರೆಗೂ ರಾಜ್ಯದ ಹಲವಡೆ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ. ಈ ಕಾರಣದಿಂದ ಕರ್ನಾಟಕದ ಹದಿನೈದು ರಾಜ್ಯದಲ್ಲಿ ಎಲ್ಲೋ ಅಲರ್ಟ್(Yellow Alert) ಘೋಷಣೆ ಮಾಡಲಾಗಿದೆ. ಮುಂದಿನ ಒಂದು ವಾರಗಳ ಕಾಲ ದಕ್ಷಿಣ ಒಳನಾಡು ಕರಾವಳಿ ಹಾಗೂ ಉತ್ತರ ಒಳನಾಡಿನ ಭಾಗದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಅವಮಾನ ಇಲಾಖೆಯ ಮುನ್ಸೂಚನೆ ನೀಡಿದ್ದು,
ಇದರ ಜೊತೆಗೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಬೆಳಗಾವಿ, ಬಾಗಲಕೋಟೆ, ಮಂಡ್ಯ, ಮೈಸೂರು ನಂತಹ ಜಿಲ್ಲೆಗಳಿಗೆ ಅವಮಾನ ಇಲಾಖೆಯು ಎಲ್ಲೋ ಅಲರ್ಟ್ ಘೋಷಣೆ ಮಾಡಿದ್ದು ಎಚ್ಚರದಿಂದ ಇರುವಂತೆ ಸೂಚನೆಯನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಬೆಂಗಳೂರಿನಲ್ಲಿಯೂ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದ್ದು, ಮುಂದಿನ ಒಂದು ವಾರಗಳ ಕಾಲ ಸಂಜೆಯ ಸಮಯದಲ್ಲಿ ಜಿಟಿ ಮಳೆ ಸುರಿಯಲಿದೆ.

ಕಳೆದ ಭಾನುವಾರದಿಂದ ಬೆಂಗಳೂರಿ(Bengaluru)ನ ವಿವಿಧೆಡೆ ಧಾರಾಕಾರ ಮಳೆ ಸುರಿಯುತ್ತಿದ್ದು, ಪುಲಿಕೇಶಿ ನಗರ, ಸಂಪಂಗಿರಾಮನಗರ, ಜಕ್ಕೂರು, ಯಲಂಕ ಸೇರಿದಂತೆ ಮುಂತಾದ ನಗರಗಳಲ್ಲಿ ಹತ್ತು ಮಿಲಿಮೀಟರ್ಗೂ ಅಧಿಕ ಮಳೆ ಸುರಿಯುತ್ತಿದ್ದು, ಇನ್ನು ಒಂದು ವರಗಳ ವರೆಗೂ ಧಾರಾಕಾರ ಮಳೆ ಸುರಿಯಲಿದೆ ಎಂಬ ಮಾಹಿತಿಯನ್ನು ಹವಾಮಾನ ಇಲಾಖೆ ಹೊರಹಾಕಿದೆ.
ಮಳೆ ಇಲ್ಲದೆ ಕಂಗಾಲಾಗಿದ್ದಂತಹ ರೈತರು ಜನಸಾಮಾನ್ಯರು ನಿಟ್ಟಿಸಿರು ಬಿಟ್ಟಿದ್ದು ತಾವು ಹೊಲಗಳಿಗೆ ಹಾಕಿರುವಂತಹ ಬಿತ್ತನೆಗೆ ಮಳೆಯಿಂದಾಗಿ ಜೀವ ಬರುತ್ತದೆ ಎಂದು ಸಂತಸಪಟ್ಟಿದ್ದಾರೆ. ಅದರಂತೆ ರಾಯಚೂರು, ವಿಜಯಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿಯೂ ಮಳೆಯಾಗುವ ಸಾಧ್ಯತೆ ಹೆಚ್ಚಿದೆ.