
Shakti Scheme: ಉಚಿತ ಬಸ್ ನಲ್ಲಿ ನೂಕು ನುಗ್ಗಲು ಬಸ್ ಡೋರ್ ಅನ್ನೆ ಕಿತ್ತೆಸದ ನಾರಿಮಣಿಯರು, ಕಂಡಕ್ಟರ್ ಪರದಾಟ
Shakti Scheme: ಕಾಂಗ್ರೆಸ್ ಸರ್ಕಾರ (Congress Government )ಜಾರಿಗೆ ತಂದಿದ್ದ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ (Shakti Scheme) ಅಂದರೆ ಬಸ್ ನಲ್ಲಿ ಕರ್ನಾಟಕದಾದ್ಯಂತ ಉಚಿತ ಪ್ರಯಾಣ ಜಾರಿಗೆ ಬಂದ ಬಳಿಕ ಬಸ್ ನಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ದೇವಸ್ಥಾನಕ್ಕಾಗಲ್ಲಿ, ಮಾರ್ಕೆಟ್ ಗಾಗಲಿ, ಪ್ರವಾಸಕ್ಕಾಗಲಿ ಮಹಿಳೆಯರು ಈ ಯೋಜನೆಯನ್ನು ಬಳಸಿಕೊಳ್ಳಬಹುದೆಂಬ ನಿರೀಕ್ಷೆ ಇತ್ತು ಆದರೆ ರಜಾ ದಿನಗಳು ಅಂದ್ರೆ ವೀಕೆಂಡ್ ಆದ ಕಾರಣ ಬಹುತೇಕ ಎಲ್ಲ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಕರು ತುಂಬಿ ತುಳುಕಾಡುತ್ತಿದ್ದಾರೆ.
ಆದರೆ, ಈ ಶಕ್ತಿ ಯೋಜನೆ ಜಾರಿ ಬಂದ ನಂತರ ಬಸ್ ಡ್ರೈವರ್ ಹಾಗೂ ಕಂಡಕ್ಟರ್ ಪಜೀತಿ ಹೇಳತೀರದಾಗಿದೆ.ತುಮುಕೂರಿನ ಬಳಿ ಬಸ್ ಅನ್ನು ಅಡ್ಡಗಟ್ಟಲು ಕೆಲ ಮಹಿಳೆಯರು ಬಸ್ ನ ಮುಂದೆಯೇ ನಿಂತಿದ್ದನ್ನು ಕಂಡು, ಡ್ರೈವರ್ ಬಸ್ ನಿಲ್ಲಿಸದೆ ಮುಂದೆ ಹೋದರು. ಆದರೆ ಅಮವಾಸೆ ದಿನದಂದು ಕೂಡ ನೂಕು ನುಗ್ಗಲು,ಗದ್ದಲು, ಮಲೆ ಮಹದೇಶ್ವರಕ್ಕೆ ಬೆಟ್ಟಕ್ಕೆ ಅನೇಕ ಮಂದಿ ಮಹಿಳೆಯರು ಈ ದಿನ ಹೊರಟು ನಿಂತಿದ್ದಾರೆ

ಅಂದಹಾಗೆ ಈಗಾಗಲೇ ಬಸ್ನಲ್ಲಿ ಮಹಿಳೆಯರು (womens travel) ಪ್ರಯಾಣಕ್ಕಾಗಿ ಬರುತ್ತಿದ್ದು, ಕಂಡಕ್ಟರ್ , ಉಳಿದವರಿಗೆ ಟಿಕೆಟ್ ನೀಡಲು ಸಹ ಪರದಾಡುವಂತಹ ಸ್ಥಿತಿ ತಲುಪಿದೆ. ಗಂಡಸರು ದುಡ್ಡು ಕೊಟ್ಟು ಟಿಕೆಟ್ ತೆಗೆದುಕೊಂಡರು ಸಹ ನಿಂತುಕೊಂಡೆ ಪ್ರಯಾಣ ಮಾಡಬೇಕಾದ ಸಂದರ್ಭ ಬಂದಿದೆ. ಉಚಿತವಾಗಿ ಬಸ್ ಪ್ರಯಾಣ ಯೋಜನೆ ಶುರುವಾದಾಗಿನಿಂದಲೂ ಬರೀ ಮಹಿಳೆಯರೇ ತುಂಬಿ ಕೊಳ್ಳುತ್ತಿದ್ದಾರೆ, ನಾವು ಹೇಗೆ ಪ್ರಯಾಣ ಮಾಡಬೇಕೆಂದು ಗಂಡಸರು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಯಾಣ ಉಚಿತವೆಂದು ಬೆಂಗಳೂರಿನ ಅಜ್ಜಿಯೊಬ್ಬರು ಸಂಪೂರ್ಣ ಒಂದು ಬಸ್ ನ ಸೀಟ್ ಗಳನ್ನೇ ಬುಕ್ ಮಾಡಲು ಹೋದಂತಹ ಘಟನೆ ಕೂಡ ನೆಡೆದಿದೆ. ತದನಂತರ ಚಾಮರಾಜನಗರದಲ್ಲಿ ಬಸ್ ನಲ್ಲಿ ಪ್ರಯಾಣಿಕರು ಉಸಿರುಗಟ್ಟುವವಾಗಿ ತುಂಬಿದ್ದಲ್ಲದೆ ಬಸ್ ನ ಬಾಗಿಲನ್ನೇ ಮುರಿದು ಹಾಕಿದ್ದಾರೆ.ವಾರದ ಹಿಂದೆಯಷ್ಟೇ ಸಾರಿಗೆ ನಿಗಮವು ಬಸ್ ನ ಬಾಗಿಲು ಹಾಕದೆ ಬಸ್ ಓಡಿಸದಂತೆ ಆದೇಶ ಮತ್ತು ಎಚ್ಚರಿಕೆ ನೀಡಿತ್ತು, ಆದರೆ ಪ್ರಯಾಣಿಕರೇ ಸೇರಿ ಬಸ್ ಡೋರ್ ಅನ್ನೆ ಕಿತ್ತಿ ಹಾಕಿದ್ದಾರೆ ಎನ್ನುವುದನ್ನು ಕೇಳಲು ವಿಷಾದವಾಗುತ್ತದೆ. ಇದನ್ನೂ ಓದಿ Free Bus: ಮಹಿಳೆಯರ ಉಚಿತ ಬಸ್ ಪ್ರಯಾಣದಲ್ಲಿ ಮಹತ್ವದ ಬದಲಾವಣೆ ತಂದ ಸರ್ಕಾರ