ನನ್ನ ಮಗ ಕೆಟ್ಟವನಾಗಿ ಸಮಾಜವನ್ನು ಹಾಳು ಮಾಡಬೇಕು ಎಂದು ಹೇಳಿದ ಶಾರುಖ್ ಖಾನ್. ಶಾರುಖ್ ಖಾನ್ ಹೀಗೆ ಹೇಳಿದ್ಯಾಕೆ

ಸ್ಟಾರ್ ನಟ – ನಟಿಯರು ಏನೇ ಮಾಡಿದ್ರೂ ಸುದ್ದಿಯಾಗ್ತಾರೆ. ಇನ್ನು ಅವರ ಮಕ್ಕಳು ಯಾವುದೇ ಸ್ಟೆಪ್ ಇಟ್ಟರೂ ಅದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತೆ. ಇದೀಗ ಹಾಗೆ ಸುದ್ದಿಯಲ್ಲಿರುವುದು ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್. ಆರ್ಯನ್ ಮೊದಲು ಸುದ್ದಿಯಾಗಿದ್ದೇ ಡ್ರಗ್ಸ್ ವಿಷಯಕ್ಕೆ. ಇದೇ ವಿಷಯಕ್ಕೆ ಸೆರೆವಾಸವನ್ನು ಅನುಭವಿಸಿದ್ದರು ಆರ್ಯನ್. ಬಾಲಿವುಡ್ ನಲ್ಲಿ ತುಸು ಹೆಚ್ಚಿನ ಮಟ್ಟದಲ್ಲಿ ಈ ವಿಷಯ ಸುದ್ದಿಯಾಗಿತ್ತು. ಮಾದರಿಯಾಗಬೇಕಿದ್ದ ಹುಡುಗ ಹೀಗೆ ಇತರರನ್ನೂ ದಾರಿ ತಪ್ಪಿಸುವ ಕೆಲಸ ಮಾಡಿದಕ್ಕೆ ಜನ ಹಿಗ್ಗಾ ಮುಗ್ಗಾ ಬೈದಿದ್ದರು. ಕೊನೆಗೂ ಆರ್ಯನ್ ಖಾನ್ ಗೆ ಕ್ಲೀನ್ ಚಿಟ್ ಸಿಕ್ಕಿದೆ.


ಈ ನಡುವೆ ತನ್ನ ಮಗನ ಬಗ್ಗೆ ಶಾರುಖ್ ಖಾನ್ ಹಾಗೂ ಗೌರಿ ಖಾನ್ ಮಾತನಾಡಿದ್ದ ಹಳೆ ವಿಡಿಯೋವೊಂದು ವೈರಲ್ ಆಗಿದೆ. ಸಂದರ್ಶನ ವೊಂದರಲ್ಲಿ ಆರ್ಯನ್ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಗೌರಿ ಖಾನ್ ಹಾಗೂ ಶಾರೂಕ್ ಖಾನ್ ಮಾತನಾಡಿದ್ದರು. 1997ರಲ್ಲಿ ನಡೆದ ಸಂದರ್ಶನವದು. ಸಂದರ್ಶನಕಾರರು ಗೌರಿ ಖಾನ್ ಹಾಗೂ ಶಾರುಖ್ ಖಾನ್ ಅವರಿಗೆ ಆರ್ಯನ್ ಖಾನ್ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದರು. ಗೌರಿ ಖಾನ್ ಬಳಿ ನಿಮ್ಮ ಮಗನ ಬಗ್ಗೆ ನಿರ್ದಿಷ್ಟವಾದ ಕನಸುಗಳು ಏನಾದರೂ ಇವೆಯೇ ಎಂದು ಕೇಳಿದ್ದಕ್ಕೆ ‘ ಅವನ ಭವಿಷ್ಯವನ್ನು ನಾವು ನಿರ್ಧರಿಸಲು ಸಾಧ್ಯವಿಲ್ಲ ಆದರೆ ನನ್ನ ಮಗ ಒಳ್ಳೆಯ ಹುಡುಗ ಆಗಬೇಕು’ ಅಂತ ಹೇಳಿದ್ದರು.

ಇದೇ ಪ್ರಶ್ನೆಗೆ ತಮಾಷೆಯಾಗಿ ಉತ್ತರಿಸಿದ ಶಾರುಖ್ ಖಾನ್ ನನ್ನ ಮಗ ಒಳ್ಳೆಯವನಾದರೆ ಆತ ಮನೆಯಿಂದ ಹೊರಗಿರುತ್ತಾನೆ’ ಎಂದು ಹೇಳಿದ್ದರು. ಇದಕ್ಕೆ ಗೌರಿ ಖಾನ್ ಶಾರೂಕ್ ಅವರನ್ನು ಗೇಲಿ ಮಾಡಿದ್ದರು. ಇನ್ನು ನಿಮ್ಮ ಮಗ ಆರ್ಯನ್ ಸಿನಿಮಾ ಕ್ಷೇತ್ರಕ್ಕೆ ಬರಬೇಕಾ ಎಂಬ ಪ್ರಶ್ನೆಗೆ ಶಾರೂಖ್ ಈ ರೀತಿ ಉತ್ತರಿಸಿದ್ದರು ’ಇದು ಅವನು ಮಾಡುವ ಕೆಟ್ಟ ಕೆಲಸಗಳಲ್ಲಿ ಒಂದಾಗಬೇಕು, ಅವನು ಉದ್ದ ಕೂದಲು ಬಿಟ್ಟು ಕಿವಿಗೆ ರಿಂಗ್ ಧರಿಸಿ ಬರುವ ಹಿರೋ ಆಗ್ಬೇಕು’ ಎಂದು ತಮಾಷೆಯ ಚಟಾಕಿ ಹಾರಿಸಿದ್ದರು.

ನಂತರ ಮಾತು ಮುಂದುವರೆಸಿದ ಶಾರೂಖ್, ನನ್ನ ಮಗ ನಿಜವಾಗಿಯೂ ಹಾಳಾಗಬೇಕು. ನಾನು ಸಿನಿಮಾ ನಾಯಕಿಯರಿಗೆ ಹೇಳಿದ್ದೇನೆ. ನಿಮಗೆ ಹೆಣ್ಣು ಮಕ್ಕಳಿದ್ದರೆ ನನ್ನ ಮಗನಿಂದ ದೂರವಿಡಿ, ಇಲ್ಲವಾದರೆ ಆತ ಎಲ್ಲರ ಹಿಂದೆ ಸುತ್ತುತ್ತಾನೆ ಅಂತ. ಅವನನ್ನು ಮನೆಯಿಂದ ಹೊರಗೆ ಕಳುಹಿಸಿ ಅಂತ ಎಲ್ಲರೂ ದಿನವೂ ದೂರು ನೀಡಬೇಕು, ನನ್ನ ಮಗ ನಗರವನ್ನೇ ಹಾಳು ಮಾಡಬೇಕು’ ಎಂದು ಸ್ಟೇಟ್ ಮೆಂಟ್ ಕೊಟ್ಟಿದ್ದರು.

ಶಾರೂಖ್ ಖಾನ್ ಅವರ ಈ ಹೇಳಿಕೆಗಳು ತಮಾಷೆಗಾಗಿ ಕೇಳಿದ್ದು ಮಾತ್ರ. ಹಾಳಾಗಬೇಕು ಅಂದ್ರೆ ಸಿನಿಮಾಕ್ಕೆ ಬರಲಿ ಎಂಬರ್ಥದಲ್ಲಿ ಹೇಳಿದ್ದು ಎಂಬುದು ಸ್ಪಷ್ಟವಾಗುತ್ತದೆ. ಅದೇನೆ ಇರಲಿ, ಆರ್ಯನ್ ಮಾತ್ರ ದೊಡ್ಡ ಯುದ್ಧವನ್ನೇ ಗೆದ್ದು ಬಂದ ಖುಷಿಯಲ್ಲಿದ್ದಾರೆ. ಅವರು ಯಾವ ಸಿನಿಮಾದ ಮೂಲಕ ಬಾಳಿವುಡ್ ಗೆ ಎಂಟ್ರಿ ಕೊಡ್ತಾರೋ ಗೊತ್ತಿಲ್ಲ. ಕೆಲವು ಮೂಲಗಳ ಪ್ರಕಾರ ಅವರು ನಿರ್ದೇಶಕರಾಗಿ ಮೊದಲು ಸಿನಿಮಾ ರಂಗಕ್ಕೆ ಇಳಿಯಲಿದ್ದಾರೆ ಎನ್ನಲಾಗುತ್ತಿದೆ. ಆರ್ಯನ್ ಅವರ ಮುಂದಿನ ನಿಲುವಿನ ಬಗ್ಗೆ ಸ್ಪಷ್ಟತೆಯಂತೂ ಇಲ್ಲ!

Leave A Reply

Your email address will not be published.

error: Content is protected !!