ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸೆಕ್ಯೂರಿಟಿಗಾರ್ಡ್ ಮಗಳು ರಾಜ್ಯಕ್ಕೆ ಮೊದಲ ಸ್ಥಾನ. ಸೆಕ್ಯೂರಿಟಿಗಾರ್ಡ್ ಗೆ ತನ್ನ ಮಗಳು ಏನಾಗಬೇಕೆಂಬ ಆಸೆ ಇದೆ ಗೊತ್ತಾ

ನಮ್ಮ ರಾಜ್ಯದ ಈ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಹೊರಬಂದಿದೆ. ಈ ವರ್ಷ ತಮ್ಮ ರಾಜ್ಯದ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ. 145 ವಿದ್ಯಾರ್ಥಿಗಳು ಕ್ಕೆ ಅಂಕಗಳನ್ನು ಪಡೆದು ಯಶಸ್ವಿ ಸಾಧನೆ ಮಾಡಿದ್ದಾರೆ. ಅದರಲ್ಲೂ ವಿಶೇಷತೆಯೇನೆಂದರೆ ಸಾಧನೆ ಮಾಡಿರುವ ವಿದ್ಯಾರ್ಥಿಗಳೆಲ್ಲ ಶ್ರೀಮಂತ ಕುಟುಂಬದ ವಿದ್ಯಾರ್ಥಿಗಳೆಲ್ಲ ಹಲವಾರು ವಿದ್ಯಾರ್ಥಿಗಳು ಬಡ ಕುಟುಂಬದಲ್ಲಿ ಹುಟ್ಟಿದ ಬಡ ಮಕ್ಕಳೇ. ಖಾಸಗಿ ಶಾಲೆಯ ಮಕ್ಕಳಿಗಿಂತ ಸರಕಾರಿ ಶಾಲೆಯ ಮಕ್ಕಳೇ ಮೇಲುಗೈ ಸಾಧಿಸಿರುವುದು ಖುಷಿ ವಿಚಾರ.

ಕೂಲಿ ಕೆಲಸ ಮಾಡುವವಳ ಮಗ, ರೈತನ ಮಗ, ಮೆಕ್ಯಾನಿಕ್ ಮಗಳು, ಕಿರಾಣಿ ಅಂಗಡಿಯವನು ಮಕ್ಕಳು ಹಾಗೆ ಸೆಕ್ಯೂರಿಟಿಯ ಮಗಳು ಹೀಗೆ ಸಾಮಾನ್ಯ ಬಡ ಕುಟುಂಬದ ಮಕ್ಕಳೇ ಈ ಬಾರಿ ರಾಜ್ಯದಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಹಾವೇರಿ ಜಿಲ್ಲೆಯ ಗುರುಭವನದಲ್ಲಿ ಕಾವಲುಗಾರನಾಗಿ ಕೆಲಸ ಮಾಡುವ ಬಸವರಾಜ ಶೇತಸನದಿ ಅವರ ಮಗಳು ಮಧು ಶೇತಸನದಿ, ಕನ್ನಡ ಮಾಧ್ಯಮದಲ್ಲಿ 625ಕ್ಕೆ 625 ಅಂಕ ಗಳಿಸುವ ಮೂಲಕ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾಳೆ.

ಮಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿರುವುದು ಬಸವರಾಜ್ ಅವರಿಗೆ ತುಂಬಾ ಖುಷಿ ತಂದಿದೆ. ಮಗಳು ಕಷ್ಟಪಟ್ಟು ಓದಿ ಜಿಲ್ಲೆಗೆ ಹೆಸರು ತಂದಿರುವುದು ಬಸವರಾಜ್ ಅವರಿಗೆ ಇನ್ನೂ ಹೆಚ್ಚು ಖುಷಿಯಾಗಿದೆ. ಬಸವರಾಜ್ ಅವರು ಹಾವೇರಿ ಜಿಲ್ಲೆಯ ಗುರುಭವನದಲ್ಲಿ ಸೆಕ್ಯುರಿಟಿಯಾಗಿ ಇಪ್ಪತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಇಬ್ಬರು ಮಕ್ಕಳು ಒಬ್ಬಳು ಹತ್ತನೇ ತರಗತಿ ಮುಗಿಸಿರುವ ಮಧು ಮತ್ತು ಇನ್ನೊಬ್ಬ ಮಗ 7 ನೇ ತರಗತಿ ಓದುತ್ತಿದ್ದಾನೆ.

ಇಪ್ಪತ್ತು ವರ್ಷಗಳಿಂದ ಸೆಕ್ಯುರಿಟಿಯಾಗಿ ಕೆಲಸ ಮಾಡುತ್ತಿರುವ ಬಸವರಾಜ್ ಗೆ ಪ್ರತಿ ತಿಂಗಳು ಹದಿನೈದು ಸಾವಿರ ರೂಪಾಯಿಗಳ ಸಂಬಳ ಸಿಗುತ್ತೆ ಇದೇ ದುಡ್ಡಿನಲ್ಲಿ ಮನೆ ಬಾಡಿಗೆ ಕಟ್ಟಿಕೊಂಡು ಮಕ್ಕಳ ವಿದ್ಯಾಭ್ಯಾಸದ ಖರ್ಚು ಮತ್ತು ಮನೆಯ ಕಟ್ಟನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಕಷ್ಟದ ಜೀವನದಲ್ಲಿ ಬದುಕುತ್ತಿರುವ ಬಸವರಾಜು ತನ್ನ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ದೊಡ್ಡ ಹುದ್ದೆಗೆ ಸೇರಿಸುವ ಆಸೆ ಇದೆ.ಬಸವರಾಜು ತನ್ನ ಮಗಳು ಡಾಕ್ಟರ್ ಆಗಬೇಕೆಂಬ ಮಹದಾಸೆ ಇದೆಯಂತೆ. ಆದರೆ ಮಗಳನ್ನು ಡಾಕ್ಟರ್ ಓದಿಸುವಷ್ಟು ಆರ್ಥಿಕ ಶಕ್ತಿ ನನಗಿಲ್ಲ ಎಂದು ತಮ್ಮ ದುಃಖವನ್ನು ತೋಡಿಕೊಂಡಿದ್ದಾರೆ.

ಜಿಲ್ಲೆಗೆ ಪ್ರಥಮ ರ್ಯಾಂಕ್ ಪಡೆದು ಕೊಂಡಿರುವ ಮಧು ಅಂತ ಸಾಧನೆಯ ಬಗ್ಗೆ ಈ ರೀತಿಯಾಗಿ ಹೇಳಿಕೊಂಡಿದ್ದಾಳೆ “ನಗರದ ಕಾಳಿದಾಸ ಪ್ರೌಢಶಾಲೆಯಲ್ಲಿ ನಮ್ಮ ಶಿಕ್ಷಕರು ಚೆನ್ನಾಗಿ ಪಾಠ ಮಾಡುತ್ತಿದ್ದರು. ಇದರ ಜೊತೆಗೆ ನಾನು ಟ್ಯೂಶನ್‌ಗೂ ಹೋಗುತ್ತಿದ್ದೆ. ಪ್ರತಿ ನಿತ್ಯ ತಪ್ಪದೆ 6 ಗಂಟೆಗಳ ಕಾಲ ಓದುತ್ತಿದ್ದೆ. ಪರೀಕ್ಷೆ ಬರೆದ ಮೇಲೆ 2-3 ಅಂಕಗಳು ಕೈತಪ್ಪಬಹುದು ಎಂದುಕೊಂಡಿದ್ದೆ. ಆದರೆ 625ಕ್ಕೆ 625 ಅಂಕ ಬಂದಿರುವುದು ನನಗಂತೂ ತುಂಬಾ ಖುಷಿ ಕೊಟ್ಟಿದೆ. ನನ್ನ ಸಾಧನೆಯಲ್ಲಿ ಅಪ್ಪ(ಬಸವರಾಜ )-ಅಮ್ಮನ (ಕವಿತಾ) ಪಾತ್ರ ದೊಡ್ಡದಿದೆ. ನಾನು ಮುಂದೆ ಡಾಕ್ಟರ್ ಆಗಿ ಸಮಾಜಸೇವೆ ಮಾಡಬೇಕು ಹಾಗೂ ಹೆತ್ತವರ ಕಣ್ಣೀರು ಒರೆಸಬೇಕು’ ಎಂದು ಗುರಿ ಇಟ್ಟುಕೊಂಡಿರುವುದಾಗಿ” ಮಧು ಶೇತಸನದಿ ತನ್ನ ಸಾಧನೆ ಗುರಿ ಮತ್ತು ತಂದೆ ತಾಯಿಯ ಬಗ್ಗೆ ಈ ರೀತಿಯಾಗಿ ಹೇಳಿಕೊಂಡಿದ್ದಾಳೆ.

Leave a Comment

error: Content is protected !!