
ಕೋಟಿ ಕೊಟ್ಟರು ಮಾರಾಟಕ್ಕಿಲ್ಲ ಈ ಬೆಳಗಾವಿ ಕೋಣ
ಕಳೆದ ನಾಲ್ಕು ವರ್ಷಗಳಿಂದ ವಿಲಾಸ್ ಅವರು ಒಂದು ದೈಯ್ತ್ಯಕಾರದ ಕೋಣವನ್ನು ಸಾಕಿದ್ದಾರೆ ಇತ್ತೀಚಿಗೆ ಮಹಾರಾಷ್ಟ್ರದಸಾಂಗ್ಲಿಯಾತಸಂಗವ್ಅಲ್ಲಿ ನಡೆದ ಪಶು ಪ್ರದರ್ಶನದಲ್ಲಿ ಗಜೇಂದ್ರ ಎಂಬ ಕೋಣವನ್ನು80 ಲಕ್ಷ ರೂಪಾಯಿ ಕೊಟ್ಟು ಕೊಂಡುಕೊಳ್ಳಲು ಬಂದರು ವಿಲಾಸ್ ಅವರು ಮಾರಾಟ ಮಾಡಲಿಲ್ಲ
ನಾಲ್ಕು ವರ್ಷಗಳ ಹಿಂದೆ ವಿಲಾಸ್ ಅವರು ಒಂದು ಲಕ್ಷ ನಲವತ್ತು ಸಾವಿರ ರೂಗಳಿಗೆ ಒಂದು ಎಮ್ಮೆಯನ್ನು ಖರೀದಿಸಿದ್ದರು ಅದು ಜನ್ಮ ನೀಡಿರುವ ಮರಿಯೆ ಈ ದೈತ್ಯಾಕಾರದ ಗಜೇಂದ್ರ ಇದಕ್ಕೆ ಬೆಳಗಾದರೆ ಪ್ರತಿನಿತ್ಯ ಕುಡಿಯಲು 15 ಲೀಟರ್ ಹಾಲು ಬೇಕು ಈತನ ನೋಟಕ್ಕೆಆಕರ್ಷಣ ಆಗದೆ ಇರೋ ಜನರೇ ಇಲ್ಲ
ಇತ್ತೀಚಿಗೆ ಮಹಾರಾಷ್ಟ್ರ ಹಾಗೂ ಕರ್ನಾಟಕದ ಮನೆಮಾತಾಗಿದ್ದಾರೆ ಈ ಗಜೇಂದ್ರ ಈ ಗಜೇಂದ್ರ ಬರೋಬ್ಬರಿ ಒಂದೂವರೆ ಟನ್ ತೂಕ ಇದ್ದಾನೆ ಗಾತ್ರಕ್ಕೆ ತಕ್ಕಂತೆ ಗಜೇಂದ್ರ ಎಂಬ ಹೆಸರನ್ನು ಇಡಲಾಗಿದೆ ತೀಕ್ಷ್ಣವಾದ ನೋಟ ಗಾಂಭೀರ್ಯ ವಾಗಿ ನಡೆಯುವ ನಡೆ ಜನರನ್ನು ಆಕರ್ಶಿಸದೆ ಇರುವುದಿಲ್ಲ
ಹೆಸರಿಗೆ ತಕ್ಕಂತೆ ಗಜ ಗಾತ್ರ ವಾಗಿದ್ದಾನೆ ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದ ವಿಲಾಸ್ ನಾಯಕ್ ಬೆಳೆಸಿರುವ ಈತ ಮುರ ತಳಿಯ ಕೋಣ ಈತನಿಗೆ ದಿನಕ್ಕೆ 15 ಲೀಟರ್ ಹಾಲು ಅಲ್ಲದೆ ತಿನ್ನಲು 5ಕೆಜಿ ಪಶುಆಹಾರ ಹಾಗೂ ಕಬ್ಬು ಮೇವು ಬೇಕು
ಈ ಗಜೇಂದ್ರ ಕೋಣದ ಜೊತೆಗೆ ಇನ್ನು 50 ಎಮ್ಮೆಗಳು ವಿಲಾಸ್ ಅವರ ಬಳಿ ಇದ್ದು ಪ್ರತಿ ದಿನ ನೂರರಿಂದ ನೂರೈವತ್ತು ಲೀಟರ್ ಹಾಲು ಡೈರಿ ಗೆ ಹಾಕುತ್ತಾರೆ ಸ್ವಂತ ಜಮೀನು ನೀರಿನ ವ್ಯವಸ್ಥೆ ಇಲ್ಲದಿದ್ದರೂ ಇವರು ಮೇವು ಖರೀದಿಸಿ ಬರೋಬ್ಬರಿ 50 ಕ್ಕೂ ಹೆಚ್ಚು ಎಮ್ಮೆಗಳನ್ನು ಸಾಕಿ ಇತರೆ ರೈತರಿಗೆ ಮಾದರಿಯಾಗಿದ್ದಾರೆ