ಎರಡು ದಿನ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ವಾಸ ಮಾಡಿದ್ದಕ್ಕೆ ಖರ್ಚಾದ ಒಟ್ಟು ಹಣ ಎಷ್ಟು ಗೊತ್ತಾ ಕೇಳಿದರೆ ದಂಗಾಗುತ್ತೀರಿ

ಬೆಂಗಳೂರಿಗೆ ಆಗಮಿಸಿದ ಮೋದಿ; ಪ್ರಧಾನಿಯ ವೆಲ್ ಕಂಗೆ ಬಿಬಿಎಂಪಿ ಖರ್ಚು ಮಾಡಿದ್ದು ಎಷ್ಟು ಗೊತ್ತಾ?.. ನರೇಂದ್ರ ಮೋದಿ ರಾಜ್ಯಕ್ಕೆ ಬಂದಿರುವುದು ಸಂತೋಷದ ವಿಚಾರ. ಎರಡು ದಿನದ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಪ್ರಧಾನಿ ಬೆಂಗಳೂರಿಗೆ ಬಂದಿದ್ದರು. ನಿನ್ನೆ ಸುಮಾರು 12 ಗಂಟೆಯ ಹೊತ್ತಿಗೆ ರಾಜಧಾನಿಯನ್ನು ತಲುಪಿದ ನರೇಂದ್ರ ಮೋದಿ, ಇಲ್ಲಿ ಹಲವಾರು ಹೊಸ ಯೋಜನೆಗಳಿಗೆ ಚಾಲನೆಯನ್ನು ನೀಡಿದ್ದರು.

ಬೆಂಗಳೂರಿನಲ್ಲಿ ಕೆಲ ಕಾಲ ತಂಗಿದ್ದ ಪ್ರಧಾನಿ ಮೋದಿ ಅವರು ಇಂದು ಬೆಳಗ್ಗೆ ಮೈಸೂರಿಗೆ ತೆರಳಿದ್ದಾರೆ. ಯೋಗ ದಿನದ ಪ್ರಯುಕ್ತ ನಗರಕ್ಕೆ ಆಗಮಿಸಿದ್ದ ಮೋದಿಯವರು ಮೈಸೂರಿನಲ್ಲಿ ಯೋಗಾ ಡೆ ಕಾರ್ಯಕ್ರಮಗಳಲ್ಲಿಯೂ ಭಾಗಿಯಾಗಿದ್ದರು. ಸೂಚನೆಯಂತೆ ಕಾರ್ಯಕ್ರಮಗಳನ್ನು ಮುಗಿಸಿ ಪ್ರಧಾನಿ ದೆಹಲಿಗೆ ತೆರಳಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಯವರ ಆಗಮನಕ್ಕೆ ಬಿಬಿಎಂಪಿ ಎಷ್ಟು ಹಣ ಖರ್ಚು ಮಾಡಿದೆ ಎಂಬುದರ ಲೆಕ್ಕಾಚಾರ ಲಭ್ಯವಾಗಿದೆ.

ಮೋದಿ ಬರುವ ಎರಡು ದಿನಗಳ ಕಾಲ ಅವರು ನಗರದಲ್ಲಿ ಸಂಚರಿಸುವ ಎಲ್ಲಾ ರಸ್ತೆಗಳು, ಬೀದಿದೀಪಗಳು, ಪುಟ್ಬಾತ್ ಸ್ಲಾಬ್, ಮರಗಳ ರೆಂಬೆ ಕತ್ತರಿಸುವುದು, ಚರಂಡಿ ಸ್ವಚ್ಛತೆ ಹೀಗೆ ಮೊದಲಾದ ಕೆಲಸಗಳನ್ನು ಬಿಬಿಎಂಪಿ ನಡೆಸಿದೆ. ಇನ್ನು ಈ ಸಂದರ್ಭದಲ್ಲಿ ಎಷ್ಟು ಹಣ ಖರ್ಚಾಗಿದೆ ಎಂಬುದನ್ನ ಬಿಬಿಎಂಪಿ ವಿಶೇಷ ಆಯುಕ್ತರಾದ ರವೀಂದ್ರ ಮಾಹಿತಿ ನೀಡಿದ್ದಾರೆ. ನಗರಕ್ಕೆ ಪ್ರಧಾನಮಂತ್ರಿ ಬರುತ್ತಿದ್ದಾರೆ ಎನ್ನುವುದು ಸಂತೋಷದ ವಿಚಾರವಾಗಿದ್ದು, ಅವರ ಆ ಗಮನದಲ್ಲಿ ಯಾವುದೇ ದೋಷಗಳೂ ಆಗದಂತೆ ಬಿಬಿಎಂಪಿ ಎಚ್ಚರಿಕೆ ವಹಿಸಿತ್ತು. ಇನ್ನೂ ಬಿಬಿಎಂಪಿ ಆಯುಕ್ತರಾದ ತುಷಾರ್ ಗಿರಿನಾಥ್ ಕೂಡ ರಾಜ್ಯಕ್ಕೆ ಪ್ರಧಾನಿ ಬರುವುದಕ್ಕಾಗಿ ಯಾವ ತರದ ಸಿದ್ಧತೆ ಮಾಡಿದ್ದರು ಹಾಗೂ ಎಷ್ಟು ಖರ್ಚು ಮಾಡಿದ್ದೇವೆ ಎಂಬುದರ ಬಗ್ಗೆ ವಿವರಣೆಯನ್ನು ನೀಡಿದ್ದಾರೆ.

ಪ್ರಧಾನಮಂತ್ರಿ ಬರುವ ಸಮಯದಲ್ಲಿ ತುರ್ತು ಸಂದರ್ಭದಲ್ಲಿ ಬಳಸಬಹುದಾದ ‘ವಿವೇಚನಾ ಅನುದಾನ’ ದಡಿ ರಸ್ತೆ ಕಾಮಗಾ,ರಿ ಡಾಂಬರೀಕರಣ, ಊಟ ವಸತಿ ವ್ಯವಸ್ಥೆ ಎಲ್ಲವೂ ಸೇರಿ 23 ಕೋಟಿ ಹಣ ಖರ್ಚು ಮಾಡಿರುವುದಾಗಿ ಬಿಬಿಎಂಪಿ ತಿಳಿಸಿದೆ. ಹೌದು ರಾಜ್ಯದಲ್ಲಿ ಪ್ರಧಾನಮಂತ್ರಿ ಮೋದಿ ಅವರ ಆಗಮನಕ್ಕೆ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಅಲ್ಲದೇ ಮೋದಿ ಚಲಿಸುವ ನಗರದ ಎಲ್ಲಾ ರಸ್ತೆಗಳು ಹೊಳೆಯುವ ಹಾಗೆ ಡಾಂಬರೀಕರಣ ವನ್ನು ಮಾಡಲಾಗಿತ್ತು. ಇನ್ನು ಮೈಸೂರಿನಲ್ಲಿಯೂ ಕೂಡ ಅಧಿಕ ಜನರು ಸೇರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ 10000ಕ್ಕೂ ಹೆಚ್ಚು ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿತ್ತು.

ಮೈಸೂರಿನ ಅರಮನೆಗೆ ಭೇಟಿ ಕೊಟ್ಟಿದ್ದ ಮೋದಿಯವರ ಆಗಮನಕ್ಕೆ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮೋದಿಯವರ ಜೊತೆ ಯೋಗಭ್ಯಾಸ ಮಾಡಿದ್ದು ಸಂತೋಷದ ವಿಚಾರ ಎಂದಿದ್ದಾರೆ. ಇನ್ನು ಪ್ರಧಾನಮಂತ್ರಿ ಮೋದಿ ಅವರಿಗೆ ಪ್ರಮೋದಾದೇವಿ ಪಂಚಮುಖಿ ಆಂಜನೇಯ ಫೋಟೋವನ್ನು ಉಡುಗರೆಯಾಗಿ ನೀಡಿದ್ದು ವಿಶೇಷವಾಗಿತ್ತು. ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ವಿಶೇಷಚೇತನ ಮಕ್ಕಳೊಂದಿಗೆ ಪ್ರಧಾನಮಂತ್ರಿ ಕೆಲವು ಸಮಯವನ್ನು ಕಳೆದಿದ್ದು, ಇಲ್ಲಿನ ಮಕ್ಕಳು ಪ್ರಧಾನಿ ಜೊತೆಗೆ ಸಮಯ ಕಳೆಯಲು ಸಾಧ್ಯವಾಗಿದ್ದಕ್ಕೆ ಖುಷಿಪಟ್ಟಿದ್ದಾರೆ. ಒಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಗಮನ ರಾಜ್ಯದಲ್ಲಿ ಸಂತಸ ಉಂಟು ಮಾಡಿತ್ತು.

Leave A Reply

Your email address will not be published.

error: Content is protected !!