ಇನ್ನೇನು ತಾಳಿ ಕಟ್ಟಬೇಕೆನ್ನುವಷ್ಟರಲ್ಲಿ ಮದುವೆ ಗಂಡಿನ ವಿಗ್ ಕಳಚಿಬಿತ್ತು. ಹೀಗೊಂದು ದುರಂತ ಮದುವೆ ಕಥೆ!

ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡಿಸು ಎನ್ನುವ ಮಾತಿದೆ. ಆದರೆ ಇಲ್ಲಿ ಕೇವಲ ಒಂದೇ ಒಂದು ಸುಳ್ಳು ಹೇಳಿ ಮದುವೆಯನ್ನೇ ಮುರಿದುಕೊಂಡಿದ್ದಾರೆ. ಮದುವೆಗಾಗಿ ಜನರು ಹಲವಾರು ವೇಷಗಳನ್ನು ಧರಿಸುತ್ತಾರೆ. ಮದುವೆಯಲ್ಲಿ ಸಾಕಷ್ಟು ಸುಳ್ಳನ್ನು ಹೇಳಿ ಮದುವೆಯಾಗುವವರು ಇದ್ದಾರೆ. ಇದರಿಂದ ಹಲವಾರು ಮದುವೆಗಳು ಮುರಿದು ಬಿದ್ದಿವೆ. ಸಾಕಷ್ಟು ದಂಪತಿಗಳು ಬೇರೆ ಬೇರೆಯಾಗಿದ್ದಾರೆ. ಹಾಗಾಗಿ ಮದುವೆಯ ಮೊದಲು ಗಂಡು ಮತ್ತು ಹೆಣ್ಣಿನ ನಡುವೆ ಎಲ್ಲವೂ ಸ್ಪಷ್ಟವಾಗಿರಬೇಕು. ಒಬ್ಬರನ್ನ ಒಬ್ಬರು ಅರ್ಥ ಮಾಡಿಕೊಳ್ಳಬೇಕು, ಪರಸ್ಪರ ಮಾತನಾಡಿಕೊಳ್ಳಬೇಕು ಎಂದು ಹೇಳುವುದು. ಇಲ್ಲವಾದರೆ ಹೀಗೆ ಒಂದು ಕಷ್ಟದ ಪರಿಸ್ಥಿತಿಯನ್ನು ಎದುರಿಸಬೇಕಾದ ಬಹುದು.

ಈ ಘಟನೆ ನಡೆದಿದ್ದು, ಉತ್ತರ ಪ್ರದೇಶದ ಉನ್ನಾವೋ ಎಂಬ ಪ್ರದೇಶದಲ್ಲಿ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಷ್ಟೊತ್ತಿಗೆ ವಧು-ವರ ಮಧುಚಂದ್ರಕ್ಕೆ ಹೋಗಬೇಕಿತ್ತು. ಆದರೆ ವರನ ದುರದೃಷ್ಟವೋ ವಧುವಿನ ಅದೃಷ್ಟವೋ ಗೊತ್ತಿಲ್ಲ ಮದುವೆ ಮುರಿದು ಬಿದ್ದಿದೆ. ಈ ಮದುವೆ ಮುರಿದು ಬೀಳಲು ಕಾರಣ ಅಷ್ಟು ದೊಡ್ಡ ವಿಷಯವೇನಲ್ಲ, ಆದರೂ ವಧು ಮಾತ್ರ ವರನನ್ನು ಮದುವೆಯಾಗಲು ಕೊನೆಗೂ ಒಪ್ಪಿಕೊಳ್ಳಲಿಲ್ಲ. ಹಾಗಾದ್ರೆ ಏನು ಆ ಗೊತ್ತಾ ಘಟನೆ!

ಕಾನ್ಪುರದ ವರ ಹಾಗೂ ಉತ್ತರ ಪ್ರದೇಶದ ಉನ್ನಾವೊ ಸ್ಥಳದ ವಧು ಇಬ್ಬರಿಗೂ ಮದುವೆ ಗೊತ್ತಾಗಿತ್ತು. ಇಬ್ಬರೂ ಪರಸ್ಪರ ಮದುವೆಗೆ ಒಪ್ಪಿದ್ದರು. ಹಾಗೆಯೇ ಮನೆಯವರು ಕೂಡ ಅದ್ದೂರಿಯಾಗಿಯೇ ಮದುವೆಯನ್ನು ನೆರವೇರಿಸುತ್ತಿದ್ದರು. ಇನ್ನೇನು ಮದುವೆಯ ಮಂಟಪಕ್ಕೆ ಹುಡುಗ ಬರಬೇಕು ಅನ್ನುವಷ್ಟರಲ್ಲಿ ತಲೆತಿರುಗಿ ಕೆಳಗೆ ಬಿದ್ದಿದ್ದಾನೆ. ಆದರೆ ಹಾಗೆ ಬಿಚ್ಚಿರುವುದು ಸುಸ್ತಿನಿಂದ ಇರಬಹುದು ಬಿಡಿ, ಆದರೆ ಮದುವೆ ನಿಂತಿದ್ದು ಈ ಕಾರಣಕ್ಕಲ್ಲ. ಕೆಳಗೆ ಬೀಳುತ್ತಿದ್ದಂತೆ ಅವನ ವಿಗ್ ತಲೆಯಿಂದ ಕೆಳಚಿ ಕೆಳಗೆ ಬಿದ್ದಿದೆ. ಇದನ್ನು ನೋಡಿದ ವಧು ಕಡೆಯವರು ಶಾಕ್ ಆಗಿದ್ದಾರೆ.

ಮದುವೆಗೂ ಮುನ್ನ ತಾನು ಬೋಳು ತಲೆಯನ್ನು ಎಂಬುದನ್ನು ಅವರ ಮದುವೆಗೆ ತಿಳಿಸದೆ ಮುಚ್ಚಿಟ್ಟಿದ್ದ. ಮಂಟಪದಲ್ಲಿ ಈ ವಿಷಯ ಗೊತ್ತಾಗುತ್ತಿದ್ದಂತೆ ಮದುಮಗಳು ಮಂಟಪಕ್ಕೆ ಬರಲು ಹಿಂದೇಟು ಹಾಕಿದ್ದಾರೆ. ವರನ ಕಡೆಯವರು ವಧು ಮನೆಯವರು ಎಲ್ಲರೂ ಆಕೆಯನ್ನು ಒಪ್ಪಿಸಲು ಪ್ರಯತ್ನಪಟ್ಟು ಸೋತಿದ್ದಾಯಿತು. ಕೊನೆಗೆ ಅಲ್ಲಿಯ ಸ್ಥಳೀಯ ಪೊಲೀಸರಿಗೆ ವಿಷಯ ತಿಳಿದು ಅವರು ಬಂದು ವಧುವಿನ ಮನವೊಲಿಸಲು ಪ್ರಯತ್ನಿಸಿದರು. ಆದರೆ ಮದುಮಗಳು ಮಾತ್ರ ಸುತಾರಾಂ ಈ ಮದುವೆಗೆ ಒಪ್ಪಲೇ ಇಲ್ಲ. ಕೊನೆಗೆ ಗ್ರಾಮ ಪಂಚಾಯತ್ ಎದುರಲ್ಲಿ ಒಂದು ತೀರ್ಮಾನಕ್ಕೆ ಬರಲಾಯಿತು.

ವಧು ಕಡೆಯವರು ಮದುವೆಗಾಗಿ ಸುಮಾರು ಆರು ಲಕ್ಷದಷ್ಟು ಹಣವನ್ನು ಖರ್ಚು ಮಾಡಿದ್ದರು. ಈ ಹಣವನ್ನು ವರನ ಕಡೆಯವರು ಸುಳ್ಳು ಹೇಳಿದ್ದಕ್ಕಾಗಿ ಮರುಪಾವತಿಸಬೇಕು ಎಂದು ತಾಕೀತು ಮಾಡಲಾಯಿತು. ಇದಕ್ಕೆ ಒಪ್ಪಿದ ಅವರ ಕುಟುಂಬ ಬಂದ ದಾರಿಗೆ ಸುಂಕ ಇಲ್ಲ ಅಂತ ಹಿಂದಿರುಗಿದ್ದಾರೆ. ಹೀಗೆ ಒಂದು ಸುಳ್ಳನ್ನು ಹೇಳಲು ಹೋಗಿ ತನ್ನ ಜೀವನದಲ್ಲಿ ಮದುವೆಯ ಸಂಭ್ರಮವನ್ನೇ ಕಳೆದುಕೊಂಡಿದ್ದಾನೆ ವರ. ಎಂಥ ಬ್ಯಾಡ್ ಲಕ್ ನೋಡಿ ಅಲ್ವಾ!

Leave a Comment

error: Content is protected !!