50 ಕೋಟಿ ನಗದು ಹಣ 3 ಕೋಟಿ ಚಿನ್ನಾಭರಣ ರಾಶಿಯೊಂದಿಗೆ ಸಿಕ್ಕಿಬಿದ್ದ ನಟಿ ಅರ್ಪಿತಾ ಮುಖರ್ಜಿ ದೇಶದೆಲ್ಲೆಡೆ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಈ ನಟಿಯ ಹಿನ್ನಲೆಯೇನು ಗೊತ್ತಾ

ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರ ಬಗ್ಗೆ ಸಾಕಷ್ಟು ವಿಚಾರಗಳು ಬೆಳಕಿಗೆ ಬಂದಿವೆ. ಅದರಲ್ಲೂ ಶಿಕ್ಷಕರ ನೇಮಕಾತಿ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಹಗರಣದ ಕೇಸ್ ನಲ್ಲಿ ಪಾರ್ಥ ಚಟರ್ಜಿ ಅವರ ಆಪ್ತರಾದ ಅರ್ಪಿತಾ ಮುಖರ್ಜಿ ಹೆಸರು ಕೇಳಿ ಬರುತ್ತಿದೆ. ಈಗಾಗಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅವರ ಮನೆಯ ಮೇಲೆ ರೇ’ಡ್ ಮಾಡಿದ್ದಾರೆ. ಈಗಾಗಲೇ ಸುಮಾರು 50 ಕೋಟಿಗೂ ಹೆಚ್ಚು ಹಣ ಹಾಗೂ ಚಿನ್ನಾಭರಣಗಳನ್ನು ಈ ಡಿ ಅಧಿಕಾರಿಗಳು ಮುಖರ್ಜಿ ಅವರ ಮನೆಯಲ್ಲಿ ಪತ್ತೆ ಹಚ್ಚಿದ್ದಾರೆ.

ಈಗಾಗಲೇ ತನಿಖೆಯನ್ನು ಎದುರಿಸಿದ ಅರ್ಪಿತ ಮುಖರ್ಜಿ ಅವರು ಯಾರು ಅವರ ಬಳಿ ಇಷ್ಟೊಂದು ಹಣ ಹೇಗೆ ಬಂತು ಎನ್ನುವುದರ ಬಗ್ಗೆ ಈಗಾಗಲೇ ತನಿಖೆ ನಡೆಸಲಾಗುತ್ತಿದೆ. ಅಲ್ಲದೆ ಅರ್ಪಿತ ಮುಖರ್ಜಿ ಅವರನ್ನು ಈಗಾಗಲೇ ಬಂಧಿಸಲಾಗಿದೆ. ಆದರೆ ಅರ್ಪಿತ ಮುಖರ್ಜಿ ಅವರ ಬಳಿ ಇಷ್ಟು ಹಣ ಹೇಗೆ ಬಂತು ಎನ್ನುವುದನ್ನು ಈಗಲೂ ತನಿಖೆ ನಡೆಸಲಾಗುತ್ತಿದೆ. ಯಾಕಂದ್ರೆ ಇವರ ಬಂಧನದ ಹಿಂದಿನ ದಿನ ಅವರ ಮನೆಯ ಕೋಣೆಯೊಂದರಲ್ಲಿ ದೊಡ್ಡ ಹಣದ ರಾಶಿಯ ದೃಶ್ಯ ಸೆರೆ ಹಿಡಿಯಲಾಗಿತ್ತು ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿಯೂ ತುಂಬಾನೇ ವೈರಲಾಗಿತ್ತು. ಹಾಗಾಗಿ ಅವರ ಮನೆಯ ಮೇಲೆ ಈ ಡಿ ಅಧಿಕಾರಿಗಳು ದಾಳಿ ಮಾಡಿದರು.

ಅರ್ಪಿತಾ ಮುಖರ್ಜಿ ಅವರ ಬಗ್ಗೆ ಹೇಳುವುದಾದರೆ ಅವರು ಪಶ್ಚಿಮ ಬಂಗಾಳದ ಫೇಮಸ್ ಮಾಡೆಲ್. ಇನ್ನು ಅವರು ಕೆಲವು ಸಿನಿಮಾಗಳಲ್ಲಿಯೂ ಕೂಡ ನಟಿಸಿದ್ದು ಬಂಗಾಳಿ, ಓಡಿಯ ಅಲ್ಲದೆ ತಮಿಳಿನಲ್ಲಿಯೂ ಕೂಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಂಗಾಳಿ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಎನಿಸಿಕೊಂಡಿರುವ ಪ್ರೋಸೆನ ಜಿತ್ ಅವರ ಜೊತೆಗೂ ತೆರೆ ಹಂಚಿಕೊಂಡವರು ನಟಿ ಅರ್ಪಿತಾ ಮುಖರ್ಜಿ! 2008ರಿಂದ 2014ರ ವರೆಗೆ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದರು ಅರ್ಪಿತ. 2008ರಲ್ಲಿ ಪಾರ್ಟ್ನರ್, 2009ರಲ್ಲಿ ಮಾಮಾ ಭಗ್ನೆ ಈ ಚಿತ್ರಗಳಲ್ಲಿ ಜಿತ್ ಜೊತೆ ಅಭಿನಯಿಸಿದರೂ ಅರ್ಪಿತಾ ಮುಖರ್ಜಿ. ನೋಡುವುದಕ್ಕೂ ಅತ್ಯಂತ ಸುಂದರವಾಗಿರುವ ಅರ್ಪಿತ ಮುಖರ್ಜಿ ಸಾಕಷ್ಟು ಅಭಿಮಾನಿ ಬಳಗವನ್ನ ಕೂಡ ಗಳಿಸಿಕೊಂಡಿದ್ದಾರೆ.

ನಿರ್ದೇಶಕ ಹಾಗೂ ನಿರ್ಮಾಪಕರಾಗಿರುವ ಅನುಪ್ ಸೇನ್ ಗುಪ್ತ ‘ ನಾನು ನಿರ್ಮಿಸಿದ ಮೂರು ಚಿತ್ರಗಳಲ್ಲಿ ಅರ್ಪಿತ ಮುಖರ್ಜಿ ಅಭಿನಯಿಸಿದ್ದರು. ಅದಾದ ಬಳಿಕ ಅವರೊಂದಿಗೆ ನನ್ನ ಸಂಪರ್ಕ ಇರಲಿಲ್ಲ ಈಗ 12 ವರ್ಷದ ನಂತರ ಮತ್ತೆ ಅವರ ಬಗ್ಗೆ ಸುದ್ದಿಯನ್ನು ಕೇಳುತ್ತಿದ್ದೇನೆ’ ಎಂದು ಮದ್ಯಮಕ್ಕೆ ತಿಳಿಸಿದ್ದಾರೆ. ಸಚಿವ ಪಾರ್ಥ ಚಟರ್ಜಿ ಅವರ ಸಂಪರ್ಕವಾದ ಬಳಿಕ ಅರ್ಪಿತ ಮುಖರ್ಜಿ ಸಿನಿಮಾದಲ್ಲಿ ನಟಿಸುವುದನ್ನು ಬಿಟ್ಟಿದ್ದರು. ಅರ್ಪಿತ ಅವರು ಚಿಕ್ಕ ವಯಸ್ಸಿನಿಂದಲೂ ಮಾಡೆಲ್ ಆಗಬೇಕು ಎನ್ನುವ ಕನಸನ ಹೊತ್ತಿದ್ದರು.

ಹಾಗಾಗಿ ಅವರು ಮೊದಲು ಮಾಡಲಿಲ್ಲ ಕ್ಷೇತ್ರದಲ್ಲಿ ಗುರುತಿಸಿಕೊಂಡರು. ನಂತರ ಉದ್ಯಮಿಯ ಒಬ್ಬರೊಂದಿಗೆ ಮದುವೆಯಾಗುತ್ತಾರೆ. ಬಳಿಕ ಅವರೊಂದಿಗೆ ವಿ’ಚ್ಛೇದನವಾಗುತ್ತದೆ. ಈ ಘಟನೆ ಯಾದ ಬಳಿಕ ಅರ್ಪಿತ ಸಿನಿಮಾರಂಗದತ್ತ ಮುಖ ಮಾಡುತ್ತಾರೆ. 2016 ರಿಂದ ಭಾರತ ಚಟರ್ಜಿ ಅವರ ಜೊತೆಗೆ ಅರ್ಪಿತ ಮುಖರ್ಜಿ ಅವರ ಸಂಪರ್ಕವಿದೆ 2021 ರಲ್ಲಿ ನಡೆದ ಚುನಾವಣೆಯಲ್ಲಿ ಪಾರ್ಥ ಚಟರ್ಜಿ ಅವರ ಪರವಾಗಿ ಪ್ರಚಾರವನ್ನು ಕೂಡ ಮಾಡಿದ್ದರು ಅರ್ಪಿತ!

ಈಗಾಗಲೇ ಬಂಧನದಲ್ಲಿರುವ ಅರ್ಪಿತ, ಹಲವಾರು ಕಾರ್ಯಕ್ರಮಗಳಲ್ಲಿ ಭಾರತ ಚಟರ್ಜಿ ಅವರ ಜೊತೆಗೆ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಅವರು ದುರ್ಗಾ ಪೂಜೆಯ ಸಮಯದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಜೊತೆಗೂ ಇದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಪಕ್ಷ ತನಿಖೆ ನಡೆಸುವಂತೆ ಈಗಾಗಲೇ ಸಾಕಷ್ಟು ಒತ್ತಡ ಹೇರಿದ್ದಾರೆ. ಇಷ್ಟಾದರೂ ಪಾರ್ಥ ಚಟರ್ಜಿ ಅವರ ವಿರುದ್ಧ ಸರ್ಕಾರ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಅಂತ ವಿಪಕ್ಷದ ನಾಯಕರು ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದಾರೆ.

Leave A Reply

Your email address will not be published.

error: Content is protected !!