ಮಾಸ್ಕ್ ದಂಡ ಇಳಿಸಿದ ಸರ್ಕಾರ, ಒಂದು ಸಾವಿರ ಇದ್ದದ್ದು ಈಗ ಎಷ್ಟಾಗಿದೆ ನೋಡಿ

ಸರ್ಕಾರ ಕೊರುನಾ ಇನ್ನು ಕಡಿಮೆ ಆಗದೆ ಇರುವುದರ ಸಲುವಾಗಿ ಮಾಸ್ಕ್ ಧರಿಸದೆ ಇರುವುದರಿಂದ ,ಜನರ ಹಿತದೃಷ್ಟಿಯಿಂದ ಕೆಲವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ ಸರ್ಕಾರ ಜಾರಿಗೆ ತಂದಿರುವ ಹೊಸ ನಿಯಮಗಳು ಏನು? ಎನ್ನುವುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಕೋರೋನ ವಿಚಾರದಲ್ಲಿ ಸರ್ಕಾರ ಎಡವಿದೆ ಎಂದರೆ ಅದರಲ್ಲಿ ಎರಡನೇ ಮಾತಿಲ್ಲ. ಸರ್ಕಾರ ಎಡವಿದ ಹಾಗೆಯೇ ಜನರು ಕೂಡ ಕೋರೋನ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿರುವುದು ದುರಂತವೇ ಸರಿ. ಕೊರೋನಾದ ನಿಯಂತ್ರಣಕ್ಕಾಗಿ ಮಾಸ್ಕ್ ಧರಿಸುವಂತೆ ಪದೇ ಪದೇ ಹೇಳುತ್ತಿದ್ದರು ಸಹ ಜನರು ಇದ್ಯಾವುದಕ್ಕೂ ಗಮನವಹಿಸದೇ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಮಾಸ್ಕ್ ಧರಿಸದೇ ಹಾಗೆಯೇ ಹೊರಬೀಳುವ ಜನರಿಗೆ ಇನ್ನುಮುಂದೆ ಮಾಸ್ಕ್ ಧರಿಸದೆ ಇರುವ ಕಾರಣಕ್ಕಾಗಿ 250 ರೂಪಾಯಿ ದಂಡವನ್ನು ವಿಧಿಸುವ ಆಜ್ಞೆಯನ್ನು ಹೊರಡಿಸಲಾಗಿದೆ. ಮೊದಲು 250 ರೂಪಾಯಿಯ ಬದಲಿಗೆ ಮಾಸ್ಕ್ ಧರಿಸದೆ ಇದ್ದವರಿಗೆ 1000 ರೂಪಾಯಿ ದಂಡವನ್ನು ವಿಧಿಸಲಾಗುತ್ತಿತ್ತು ಒಂದು ಸಾವಿರ ರೂಪಾಯಿ ದಂಡ ವಿಧಿಸಲು ಜನರು ಕೆಂಡಾಮಂಡಲವಾಗುತ್ತಿದ್ದರು ಹಾಗೂ ಮಾಸ್ಕ್ ಧರಿಸುವುದರ ಕುರಿತಾಗಿ ಅಷ್ಟೊಂದು ಯೋಚಿಸಿಯೂ ಇರಲಿಲ್ಲ.

ಮಾಸ್ಕ ಧರಿಸುವುದರಿಂದ ಕೊರೋನವನ್ನು ತಡೆಯುವುದು ಅಥವಾ ನಿಯಂತ್ರಣದಲ್ಲಿಡುವುದು ಮಾತ್ರವಲ್ಲದೆ ಧೂಳಿನಿಂದಲೂ ಸಹ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿತ್ತು. ಹೀಗಿದ್ದಾಗ್ಯೂ ಸಹ ನಮ್ಮ ಒಳ್ಳೆಯದಕ್ಕಾಗಿ ಕಾನೂನು ಇದ್ದರೂ ಸಹ ಕಾನೂನು ಇರುವುದೇ ಅದನ್ನು ಉಲ್ಲಂಘನೆ ಮಾಡಲು ಎನ್ನುವ ಮನೋಭಾವ ಸಾಕಷ್ಟು ಜನರಲ್ಲಿ ಇದೆ. ಹೀಗಿದ್ದಾಗಲೂ ಸಹ ಅದೆಷ್ಟೋ ಜನರು ಮಾಸ್ಕ್ ಧರಿಸದೆ ಮನೆಯಿಂದ ಹೊರಗೆ ಬೀಳುತ್ತಿದ್ದಾರೆ. ಹತ್ತು ಹದಿನೈದು ರೂಪಾಯಿ ಖರ್ಚು ಮಾಡಿದರೆ ಅದೆಷ್ಟೋ ಜನರ ಜೀವವನ್ನು ಉಳಿಸಬಹುದು ಎನ್ನುವ ವಿಚಾರ ತಿಳಿದಿದ್ದರೂ ಸಹ ಮಾಸ್ಕ್ ಧರಿಸುವುದರ ಬಗ್ಗೆ ಜನರಲ್ಲಿ ಅದೇನೋ ಒಂದು ರೀತಿಯ ಅಸಡ್ಡೆ , ನಿರ್ಲಕ್ಷ್ಯ ಮನೋಭಾವ. ಹೀಗಾಗಿ ಈ ವಿಚಾರದಲ್ಲಿ ಮಾಸ್ಕ್ ಧರಿಸುವುದರ ಬಗ್ಗೆ ಕಟ್ಟುನಿಟ್ಟಾಗಿ ಕ್ರಮವನ್ನು ಕೈಗೊಂಡಿದೆ ಬಿಬಿಎಂಪಿ.

ಬಿಬಿಎಂಪಿ ಈಗಿನ ನಿಯಮದಂತೆ ಯಾರೆಲ್ಲ ಜನರು ಮಾಸ್ಕ್ ಧರಿಸದೆ ಹಾಗೆ ಮನೆಯಿಂದ ಹೊರಗಡೆ ತಿರುಗಾಡುತ್ತಾರೆ ಅಂತಹ ಜನರೆಲ್ಲರನ್ನು ಕಡ್ಡಾಯವಾಗಿ ಕೊರೋನ ಟೆಸ್ಟ್ ಗೆ ಒಳಪಡಿಸಬೇಕು ಎಂದು ಹೊಸ ನಿಯಮವನ್ನು ಜಾರಿಗೆ ತಂದಿದೆ. ಬಿಬಿಎಂಪಿ ಮಾರ್ಷಲ್ ಗಳು ಮಾಸ್ಕ್ ಧರಿಸದೆ ಇರುವವರಿಗೆ 1000 ರೂಪಾಯಿ ದಂಡ ವಿಧಿಸುವುದು ಜೊತೆಗೆ ಹತ್ತಿರದ ಕೋವಿಡ್ ಸೆಂಟರ್ ಗೆ ಟೆಸ್ಟ್ ಮಾಡಿಸಲು ಕರೆದುಕೊಂಡು ಹೋಗುತ್ತಾರೆ. ಮಾಸ್ಕ್ ಧರಿಸದ ವ್ಯಕ್ತಿ ಕೊರೋನಾ ಟೆಸ್ಟ್ ಮಾಡಿಸಲು ಒಪ್ಪದೇ ಇದ್ದಲ್ಲಿ ಅಥವಾ ಅದನ್ನು ವಿರೋಧಿಸಿದರೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂಬ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ಇಂತಹ ಅಧಿಕಾರವನ್ನು ಪೊಲೀಸರಿಗೆ ನೀಡಿ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ. ಪ್ರತಿ ಠಾಣೆಯಲ್ಲಿ ಸಬ್ಇನ್ಸ್ಪೆಕ್ಟರ್ ಹಂತದ ಅಧಿಕಾರಿಗಳು ದಂಡವನ್ನು ವಿಧಿಸಬಹುದಾಗಿದೆ. ಮಾಸ್ಕ್ ಧರಿಸದೆ ಹೊರಗಡೆ ಅಡ್ಡಾಡುವ ಜನರ ಮೇಲೆ ಗಮನ ಇರಿಸುವುದರ ಸಲುವಾಗಿ ಪ್ರತಿ ಠಾಣೆಯಲ್ಲಿ ಇಬ್ಬರು ಪೊಲೀಸರನ್ನು ಆಯೋಜಿಸಲಾಗಿದೆ. ಮಾಸ್ಕ್ ಧರಿಸದೆ ಇರುವ ಜನರು ಪೊಲೀಸರ ಕೈಗೆ ಸಿಕ್ಕಿದರೆ ಸ್ವತಹ ಪೊಲೀಸರು ಅಂತಹ ವ್ಯಕ್ತಿಗಳನ್ನು ಕೋವಿಡ್ ಸೆಂಟರ್ಗೆ ಕರೆದುಕೊಂಡು ಹೋಗಿ ಕೋರೋನ ಟೆಸ್ಟ್ ಮಾಡಿಸಿಕೊಂಡು ಬರುತ್ತಾರೆ. ಸರ್ಕಾರ ಈಗಾಗಲೇ ನಗರ ಪ್ರದೇಶಗಳಲ್ಲಿ ಮಾಸ್ಕ್ ಧರಿಸದೆ ಹಾಗೆಯೇ ಅಡ್ಡಾಡುವ ಜನರಿಗೆ 250 ರೂಪಾಯಿ ದಂಡವನ್ನು ವಿಧಿಸುತ್ತಿದೆ. ಅದೇ ರೀತಿ ಗ್ರಾಮೀಣ ಭಾಗಗಳಲ್ಲಿ ಮಾಸ್ಕ್ ಧರಿಸದೆ ಅಡ್ಡಾಡುವ ವ್ಯಕ್ತಿಗಳಿಗೆ ನೂರು ರೂಪಾಯಿ ದಂಡವನ್ನು ವಿಧಿಸಲು ಸರ್ಕಾರ ತೀರ್ಮಾನಿಸಿದೆ. ಯಾವುದಕ್ಕೂ ಸಾರ್ವಜನಿಕರು ತಮ್ಮ ಎಚ್ಚರಿಕೆಯಲ್ಲಿ ತಾವು ಇರುವುದು ಒಳ್ಳೆಯದು ಇಲ್ಲವಾದಲ್ಲಿ ದಂಡ ಹಾಗು ಜೈಲು ಶಿಕ್ಷೆ ತಪ್ಪಿದ್ದಲ್ಲ. ಮಾಸ್ಕ್ ಧರಿಸಿ ಕೋರೋನ ಡಿಂದ ನಮ್ಮನ್ನು ನಾವು ಕಾಪಾಡಿಕೊಳ್ಳುವುದರ ಜೊತೆಗೆ ಇತರರ ಜೀವ ಹಾಗೂ ಜೀವನವನ್ನೂ ಉಳಿಸೋಣ.

Leave A Reply

Your email address will not be published.

error: Content is protected !!