RCB ತಂಡಕ್ಕೆ ಜೂನಿಯರ್ maxwell ಸೇರ್ಪಡೆ, ಅಪ್ಪನಾದ ಸಂಭ್ರಮದಲ್ಲಿ ಭಾರತದ ಅಳಿಯಾ ಗ್ಲೆನ್ ಮ್ಯಾಕ್ಸ್ವೆಲ್!

Glane maxwell: ಸ್ನೇಹಿತರೆ, ಕನ್ನಡಗರ ಪ್ರೀತಿಯ ಆರ್‌ಸಿಬಿ ತಂಡದ ಆಲ್ ರೌಂಡರ್ ಹಾಗೂ ಆಸ್ಟ್ರೇಲಿಯಾ ಮೂಲದ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್ ವೆಲ್ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಪ್ಪನಾದ ಸಂತೋಷದ ಸುದ್ದಿಯನ್ನು ಪೋಸ್ಟ್ ಮಾಡಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಹೌದು ಗೆಳೆಯರೇ ಮ್ಯಾಕ್ಸ್ ವೆಲ್ ಭಾರತ ಮೂಲದ ಪ್ರಖ್ಯಾತ ಉದ್ಯಮಿಯ ಮಗಳಾದ ವಿನಿ ರಾಮನ್(Vini Raman) ಎಂಬುವವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ರೂಪದರ್ಶಿಯಾಗಿ ಗುರುತಿಸಿಕೊಂಡಿದಂತಹ ವಿನಿ ರಾಮನ್ ತಮ್ಮ ಪತಿಯ ಕ್ರಿಕೆಟ್ ಆಟಗಾರಿಕೆಗೆ ಪ್ರೋತ್ಸಾಹಿಸುತ್ತ ಅನ್ಯೋನ್ಯ ದಂಪತಿಗಳಾಗಿದ್ದರು, ಆಗಾಗ ಸೋಶಿಯಲ್ ಮೀಡಿಯಾ ಗಳಲ್ಲಿ ತಮ್ಮ ಮುದ್ದಾದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಂತಹ ಈ ಜೋಡಿ ಹಕ್ಕಿಗಳು ನಿನ್ನೆ ಪೋಷಕರಾದ ಸಂಭ್ರಮವನ್ನು ಶೇರ್ ಮಾಡಿದ್ದಾರೆ. ವಿನಿ ರಾಮನ್ ಹಾಗೂ ಮ್ಯಾಕ್ಸ್ ವೆಲ್ ತಮ್ಮ ಮಗನ ಕೈ ಹಿಡಿದ ಫೋಟೋ ಶೇರ್ ಮಾಡಿ ಆತನ ಹೆಸರನ್ನು ಬರೆದುಕೊಂಡಿದ್ದಾರೆ.

ಲೋಗನ್ ಮವೆರಿಕ್ ಮ್ಯಾಕ್ಸ್ವೆಲ್(Logan Maverick Maxwell) ಹೆಸರಿಟ್ಟಿದ್ದು, ಸೆಪ್ಟೆಂಬರ್ 11ನೇ ತಾರೀಕು 2023 ರಂದು ಮನೆಗೆ ತಮ್ಮ ಮುದ್ದಾದ ಮಗುವನ್ನು ಸ್ವಾಗತಿಸಿಕೊಂಡಿದ್ದಾರೆ. ಈ ಒಂದು ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಮ್ಯಾಕ್ಸ್ ವೆಲ್ ಹಂಚಿಕೊಳ್ಳುತ್ತಾ ಇದ್ದ ಹಾಗೆ ಶುಭಾಶಯಗಳು ಮಹಾಪೂರವೇ ಹರಿದು ಬಂದಿದೆ. ಕಳೆದ ಕೆಲ ದಿನಗಳ ಹಿಂದೆ ಭಾರತೀಯ ಸಂಪ್ರದಾಯದಂತೆ ತಮ್ಮ ಹೆಂಡತಿಗೆ ಸೀಮಂತ ಶಾಸ್ತ್ರವನ್ನು ಮಾಡಿದಂತಹ ಮ್ಯಾಕ್ಸ್ ವೆಲ್ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರಿಂದ ಮೆಚ್ಚುಗೆಗೆ ಒಳಪಟ್ಟಿದ್ದರು.

ಮೂಲತಃ ಆಸ್ಟ್ರೇಲಿಯಾದವರಾದರು ಕೂಡ ತುಂಬಾ ಹೆಂಡತಿಯ ಬಯಕೆಯನ್ನು ಭಾರತದ ಶೈಲಿಯಲ್ಲಿ ಈಡೇರಿಸುತ್ತ ಕನ್ನಡಿಗರ ಹೃದಯ ಗೆದ್ದಿದ್ದ ಮ್ಯಾಕ್ಸ್ ವೆಲ್(Maxwell) ತಮ್ಮ ಮಗನ ಕೈ ಹಿಡಿದಿರುವ ಫೋಟೋವನ್ನು ಹಂಚಿಕೊಂಡ ಬೆನ್ನಲ್ಲೇ ಆರ್‌ಸಿಬಿ ತಂಡಕ್ಕೆ ಮತ್ತೊರ್ವ ಆಟಗಾರ ಸೇರ್ಪಡೆಯಾದ ಎಂದೆಲ್ಲ ಮ್ಯಾಕ್ಸ್ ವೆಲ್ ಅವರ ಕಾಲಳಿಯುತ್ತಿದ್ದಾರೆ.

Leave A Reply

Your email address will not be published.

error: Content is protected !!