
ತನ್ನ ಆಪ್ತ ಗೆಳೆಯನಾಗಿದ್ದ ದಿನೇಶ್ ಕಾರ್ತಿಕ್ ಹೆಂಡತಿಯನ್ನು ಮುರಳಿ ವಿಜಯ್ ಹಾರಿಸಿಕೊಂಡು ಮದುವೆಯಾಗಿದ್ದು ಹೇಗೆ ಗೊತ್ತಾ
ಟ್ರೈಯಾಂಗಲ್ ಲವ್ ಸ್ಟೋರಿ ಕಥೆಗಳನ್ನು ನಾವೆಲ್ಲ ಸಿನಿಮಾಗಳಲ್ಲಿ ನೋಡಿರುತ್ತೇವೆ. ಇಬ್ಬರು ಗೆಳೆಯರು ಒಂದೇ ಹುಡುಗಿಯನ್ನು ಇಷ್ಟ ಪಡುವುದು ಮತ್ತು ಒಬ್ಬಳಿಗೋಸ್ಕರ ಕಿತ್ತಾಡುವುದನ್ನು ನಾವೆಲ್ಲಾ ಸಿನೆಮಾಗಳಲ್ಲಿ ಕೆಲವು ಕತೆಗಳಲ್ಲಿ ಕೇಳಿರುತ್ತೇವೆ ಆದರೆ ನಿಜಜೀವನದಲ್ಲಿ ಇದು ನಡೆಯುವುದು ತುಂಬಾ ವಿರಳ. ಆದರೆ ಇಂಥದ್ದೇ ಒಂದು ನಿಜಜೀವನದ ಕಥೆ ಕ್ರಿಕೇಟ್ ಆಟಗಾರರ ಜೀವನದಲ್ಲಿ ನಡೆದಿದೆ ಎಂದರೆ ನಂಬಲೇಬೇಕು. ಆರ್ ಸಿಬಿ ಆಟಗಾರ ದಿನೇಶ್ ಕಾರ್ತಿಕ್ ಮತ್ತು ಮಾಜಿ ಕ್ರಿಕೆಟಿಗ ಮುರಳಿ ವಿಜಯ್ ಅವರ ಜೀವನದಲ್ಲಿ ನಡೆದ ಸ್ಟೋರಿ.
ದಿನೇಶ್ ಕಾರ್ತಿಕ್ ಮತ್ತು ಮುರಳಿ ವಿಜಯ್ ಮತ್ತು ಮೂಲತಃ ತಮಿಳುನಾಡಿನವರು. 2017 ರಲ್ಲಿ ದಿನೇಶ್ ಕಾರ್ತಿಕ್ ಅವರು ಇಪ್ಪತ್ತೊಂದು ವರ್ಷದ ಯುವಕನಿದ್ದಾಗ ನಿಖಿತಾ ಅವರನ್ನು ಮದುವೆಯಾಗಿದ್ದಾರೆ. ನಿಕಿತಾ ಅವರ ತಂದೆ ಮತ್ತು ದಿನೇಶ್ ಕಾರ್ತಿಕ್ ಅವರ ತಂದೆ ತುಂಬಾ ಒಳ್ಳೆಯ ಸ್ನೇಹಿತರಾಗಿದ್ದರು. ತಮ್ಮ ಸ್ನೇಹವನ್ನು ಸಂಬಂಧವಾಗಿ ರೂಪಿಸಿಕೊಳ್ಳುವುದಕ್ಕೆ ಇಬ್ಬರು ಯೋಚನೆ ಮಾಡಿ ತಮ್ಮ ಮಕ್ಕಳನ್ನು ಮದುವೆ ಮಾಡಿಸುತ್ತಾರೆ. 5 ವರ್ಷಗಳ ತನಕ ದಿನೇಶ್ ಮತ್ತು ನಿಕತಾ ಇಬ್ಬರ ದಾಂಪತ್ಯ ಜೀವನ ಸುಖಕರವಾಗಿತ್ತು.
2012 ರಲ್ಲಿ ದಿನೇಶ್ ಕಾರ್ತಿಕ್ ಅವರು ತಮಿಳುನಾಡಿನ ಕ್ರಿಕೆಟ್ ತಂಡದಲ್ಲಿ ಆಟಗಾರನಾಗಿ ಸೇರಿಕೊಂಡಿದ್ದರು. ಒಂದು ದಿನ ಕರ್ನಾಟಕ ತಂಡದ ವಿರುದ್ಧ ಕ್ರಿಕೆಟ್ ಆಡುವ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್ ಅವರಿಗೆ ತನ್ನ ಹೆಂಡತಿಯ ಅ ನೈತಿಕ ಸಂಬಂಧದ ಬಗ್ಗೆ ತಿಳಿಯುತ್ತೆ. ತನ್ನ ಹೆಂಡತಿಯ ಕಣ್ಣು ಮುಚ್ಚಾಲೆ ಆಟ ದಿನೇಶ್ ಕಾರ್ತಿಕ್ ಗೆ ಹಲವು ವರ್ಷಗಳ ನಂತರ ತಿಳಿಯುತ್ತೆ. ಆ ದಿನ ದಿನೇಶ್ ಕಾರ್ತಿಕ್ ಗೆ ಸತ್ಯ ತಿಳಿದು ತುಂಬಾ ಶಾಕ್ ಆಗುತ್ತೆ. ಯಾಕೆಂದರೆ ತನ್ನ ಆಪ್ತ ಗೆಳೆಯನಾಗಿದ್ದ ಮುರಳಿ ವಿಜಯ್ ತನ್ನ ಹೆಂಡತಿ ನಿಕಿತಾ ಜೊತೆ ಸಂಬಂಧ ಬೆಳೆಸಿರುವ ವಿಷಯ ಗೊತ್ತಾಗುತ್ತದೆ. 3-4 ವರ್ಷಗಳಿಂದ ಮುರುಳಿ ವಿಜಯ್ ಮತ್ತು ನಿಕಿತಾ ಅವರ ನಡುವೆ ಸಂಬಂಧ ಬೆಳೆದಿತ್ತು. ಆಗಾಗ ಮುರಳಿ ವಿಜಯ್ ದಿನೇಶ್ ಕಾರ್ತಿಕ್ ಮನೆಗೆ ಕೂಡ ಬರುತ್ತಿದ್ದರು. ದಿನೇಶ್ ಕಾರ್ತಿಕ್ ತನ್ನ ಸ್ನೇಹಿತನ ಮೇಲೆ ಯಾವುದೇ ಸಂದೇಹ ಪಟ್ಟಿರಲಿಲ್ಲ. ತನ್ನ ಆಪ್ತ ಸ್ನೇಹಿತ ಮತ್ತು ತಂಡದ ಆಟಗಾರನಾಗಿದ್ದ ಮುರಳಿ ಈ ಕೆಲಸವನ್ನು ಮಾಡುತ್ತಾನೆ ಎಂದು ದಿನೇಶ್ ಕಾರ್ತಿಕ್ ಕನಸಿನಲ್ಲೂ ಅಂದುಕೊಂಡಿರಲಿಲ್ಲ.
ಈ ಕಟು ಸತ್ಯವನ್ನು ದಿನೇಶ್ ಕಾರ್ತಿಕ್ ಗೆ ಅರಗಿಸಿಕೊಳ್ಳಲಾಗಿಲ್ಲ. ಅದೇ ವರ್ಷ ದಿನೇಶ್ ಕಾರ್ತಿಕ್ ತನ್ನ ಹೆಂಡತಿಗೆ ವಿಚ್ಛೇದನ ನೀಡಿದ್ದಾರೆ. ವಿಚ್ಛೇದನ ನೀಡಿ ನಂತರ ನಿಕಿತಾ ತನ್ನ ಪ್ರಿಯತಮ ಮುರಳಿ ವಿಜಯ್ ಜತೆ ಮದುವೆಯಾಗಿದ್ದಾರೆ. ಆದರೆ ದಿನೇಶ್ ಕಾರ್ತಿಕ್ ಅವರು ವಿಚ್ಛೇದನ ನೀಡುವ ಸಂದರ್ಭದಲ್ಲಿ ನಿಕಿತಾ ಮೂರು ತಿಂಗಳ ಗರ್ಭಿಣಿಯಾಗಿದ್ದಳು. ತದನಂತರ ಮುರಳಿ ವಿಜಯ್ ಅವರನ್ನು ಕೈಹಿಡಿದ ನಂತರ ನಿಕಿತಾಗೆ ಇದೀಗ ಮೂರು ಜನ ಮಕ್ಕಳು. ದಿನೇಶ್ ಕಾರ್ತಿಕ್ ಗೆ ನಿಕಿತಾ ಅವಳನ್ನು ಮರೆಯಲು ತುಂಬಾ ದಿನ ತೆಗೆದುಕೊಂಡಿಲ್ಲ.
ವಿಚ್ಛೇದನ ನೀಡಿದ ವರ್ಷವೇ ದಿನೇಶ್ ಕಾರ್ತಿಕ್ ದೀಪಿಕಾ ಎನ್ನುವ ಹುಡುಗಿಯನ್ನು ಮದುವೆಯಾಗುತ್ತಾರೆ. ದೀಪಿಕಾ ಈ ಹುಡುಗಿಯನ್ನು ದಿನೇಶ್ ಕಾರ್ತಿಕ್ ಅವರು ಪ್ರೀತಿಸಿ ಮದುವೆಯಾಗಿದ್ದಾರೆ. ಪ್ರಾರಂಭದಲ್ಲಿ ದೀಪಿಕಾಗೆ ಕ್ರಿಕೆಟರ್ ಗಳೆಂದರೆ ಇಷ್ಟವೇ ಇರಲಿಲ್ಲ ಆದರೆ ದಿನೇಶ್ ಕಾರ್ತಿಕ್ ಅವರನ್ನು ಭೇಟಿಯಾದ ನಂತರ ದೀಪಿಕಾಗೆ ದಿನೇಶ್ ಕಾರ್ತಿಕ್ ಮೇಲೆ ಪ್ರೀತಿ ಹುಟ್ಟಿತು. ಇಬ್ಬರು ಕುಟುಂಬದ ಒಪ್ಪಿಗೆಯ ಮೇರೆಗೆ ಸಪ್ತಪದಿ ತುಳಿದಿದ್ದಾರೆ.

2018 ರ ನಂತರ ಮುರಳಿ ವಿಜಯ್ ಮತ್ತು ದಿನೇಶ್ ಕಾರ್ತಿಕ್ ಇಬ್ಬರೂ ಒಟ್ಟಿಗೆ ಭಾರತ ತಂಡದಲ್ಲಿ ಆಟವಾಡಿದ್ದರು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ ನಲ್ಲಿ ಇಬ್ಬರೂ ಟಿ ಕಾಣಿಸಿಕೊಂಡಿದ್ದರು ಆದರೆ ಮೈದಾನದಲ್ಲಿ ಇಬ್ಬರು ಯಾವುದೇ ಮಾತುಕತೆ ನಡೆಸಿಲ್ಲ. ಪಂದ್ಯ ಮುಗಿಯುವ ತನಕ ಕೂಡ ಇಬ್ಬರು ಮಾತನಾಡಿಲ್ಲ. ಇದಾದ ನಂತರ ಮುರಳಿ ವಿಜಯ್ ಮತ್ತು ದಿನೇಶ್ ಕಾರ್ತಿಕ್ ಒಟ್ಟಿಗೆ ಕಾಣಿಸಿಕೊಂಡಿಲ್ಲ. ದಿನೇಶ್ ಕಾರ್ತಿಕ್ ಅವರ ಹೆಂಡತಿಯನ್ನು ಹಾರಿಸಿಕೊಂಡು ಹೋಗಿದ್ದಕ್ಕೆ ಮುರಳಿ ವಿಜಯ್ ಅವರನ್ನು ಈಗಲೂ ಕೂಡ ಟ್ರೋಲ್ ಮಾಡುತ್ತಾ ಇರುತ್ತಾರೆ.