ಸದ್ಯದಲ್ಲಿಯೇ ಮುಹೂರ್ತವಿದೆ ಕ್ರಿಕೆಟಿಗ ಕೆ ಎಲ್ ರಾಹುಲ್ ಹಾಗೂ ಅತಿಯಾ ಶೆಟ್ಟಿ ಅವರ ಮದುವೆಗೆ

ಟೀಮ್ ಇಂಡಿಯಾದ ಅದ್ಭುತ ಬ್ಯಾಟ್ಸ್ಮನ್ ಹಾಗೂ ನೋಡೋದಿಕ್ಕೆ ಹ್ಯಾಂಡ್ ಸಮ್ ಆಗಿರುವ ಕೆಎಲ್ ರಾಹುಲ್ ಸದ್ಯ ತಮ್ಮ ವೈಯಕ್ತಿಕ ವಿಷಯದ ಬಗ್ಗೆ ಸುದ್ದಿಯಲ್ಲಿದ್ದಾರೆ. ಸಿನಿಮಾ ಜಗತಿಗೂ ಕ್ರಿಕೆಟ್ ಲೋಕಕ್ಕೂ ಬಹಳ ಹಳೆಯ ನಂಟು. ಕ್ರಿಕೆಟಿಗರು ಸಿನಿಮಾ ತಾರೆಯರನ್ನು ಮದುವೆಯಾದ ಹಲವರು ಉದಾಹರಣೆಗಳಿವೆ ಇದೀಗ ಬಾಲಿವುಡ್ ಸುಂದರಿ ಅತಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆ ಎಲ್ ರಾಹುಲ್ ಅವರ ಮದುವೆಯ ಕುರಿತು ಚರ್ಚೆ ನಡೆಯುತ್ತಿದೆ ಪ್ರೀತಿಸುತ್ತಿರುವ ಈ ಜೋಡಿ ಯಾವಾಗ ಮದುವೆಯ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಅಂತ ಜನ ಪ್ರಶ್ನೆ ಮಾಡುತ್ತಿದ್ದಾರೆ.

ಇತ್ತೀಚಿಗೆ ಕೆಎಲ್ ರಾಹುಲ್ ಹಾಗೂ ಅತಿಯಾ ಶೆಟ್ಟಿ ಅವರ ಮದುವೆಗೆ ಸಂಬಂಧಪಟ್ಟಂತೆ ಕೆಲವು ಮಾತುಗಳು ಕೇಳಿ ಬರುತ್ತಿತ್ತು ಮುಂದಿನ ಮೂರು ತಿಂಗಳುಗಳಲ್ಲಿ ಇವರಿಬ್ಬರು ವಿವಾಹವಾಗಲಿದ್ದಾರೆ ಎನ್ನುವ ವರದಿಯು ಆಗಿತ್ತು. ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರ ಮಗಳು ಅತಿಯಾ. ಇತ್ತೀಚಿಗೆ ಮುಂದಿನ ಮೂರು ತಿಂಗಳಲ್ಲಿ ನಡೆಯುವ ಮದುವೆಗೆ ನಿಮ್ಮನ್ನ ಆಹ್ವಾನಿಸಲಿದ್ದೇನೆ ಎನ್ನುವ ಮಾತನ್ನ ಅತಿಯಾ ಶೆಟ್ಟಿ ಹೇಳಿದ್ದು ಇವರಿಬ್ಬರ ಮದುವೆಯ ವಿಚಾರಕ್ಕೆ ಇನ್ನಷ್ಟು ಪುಷ್ಟಿ ನೀಡಿತ್ತು. ಹಾಗಾಗಿ ನೀನು ಕೆಲವೇ ದಿನಗಳಲ್ಲಿ ಇವರಿಬ್ಬರ ವಿವಾಹ ನೆರವೇರಬಹುದು ಎಂಬುದು ಹಲವರ ಊಹೆಯಾಗಿತ್ತು. ಆದರೆ ಈಗ ಹೊಸದಾದ ಅಪ್ಡೇಟ್ ಒಂದು ಬಂದಿದೆ. ಅದೇನು ಗೊತ್ತಾ?

ಕೆ ಎಲ್ ರಾಹುಲ್ ಹಾಗೂ ಅತಿಯಾ ಶೆಟ್ಟಿ ಜೋಡಿ 2023 ಜನವರಿಯಲ್ಲಿ ಅಥವಾ ಫೆಬ್ರವರಿಯಲ್ಲಿ ದಂಪತಿ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಮದುವೆಯ ಸ್ಥಳವಾಗಲಿ ದಿನಾಂಕ ವಾಗಲಿ ಇನ್ನೂ ಕಂಫರ್ಮ್ ಆಗಿಲ್ಲ. ಇನ್ನು ಕಳೆದ ಬಾರಿ ಅತಿಯ ಶೆಟ್ಟಿಯವರ ಸಹೋದರ ಅಹಂ ಸಹೋದರಿಯ ಮದುವೆಯ ಬಗ್ಗೆ ಕೇಳಿದಾಗ ಮದುವೆಯ ಯಾವ ವ್ಯವಸ್ಥೆಯನ್ನು ಮಾಡಲಾಗಿಲ್ಲ ಅಂತಹ ಸಮಾರಂಭ ಇಲ್ಲ ಇದು ಕೇವಲ ಗಾಸಿಪ್ ಅಷ್ಟೇ ಮದುವೆಯೇ ಇಲ್ಲ ಅಂದಮೇಲೆ ನಾನು ದಿನಾಂಕವನ್ನು ಹೇಗೆ ಹೇಳುವುದು ಅಂತ ಮಾಧ್ಯಮ ಕೇಳಿದ ಪ್ರಶ್ನೆಗೆ ಉತ್ತರಿಸಿದ್ರು.

ಇನ್ನು ನಟ ಸುನಿಲ್ ಶೆಟ್ಟಿ ಅವರು ಕೂಡ ಕೆಎಲ್ ರಾಹುಲ್ ಅವರನ್ನು ಮೆಚ್ಚಿದ್ದಾರೆ ಈ ಹಿಂದೆ ಸಂದರ್ಶನ ಒಂದರಲ್ಲಿ ‘ಕೆಎಲ್ ರಾಹುಲ್ ಬಗ್ಗೆ ತನಗೆ ತುಂಬಾ ಅಭಿಮಾನವಿದೆ ಎಂಬುದನ್ನು ಹೇಳಿದರು ಜೊತೆಗೆ ನನ್ನ ಮಗಳು ಹಾಗೂ ಮಗ ಇಬ್ಬರೂ ಜವಾಬ್ದಾರಿಯನ್ನ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ ಅವರೇ ಅವರ ನಿರ್ಧಾರವನ್ನ ತೆಗೆದುಕೊಳ್ಳಬೇಕು ಅವರ ಮೇಲೆ ನನ್ನ ಆಶೀರ್ವಾದ ಸದಾ ಇರುತ್ತೆ’ ಅಂತ ಹೇಳಿದ್ದರು. ರಾಹುಲ್ ಹಾಗೂ ಅತಿಯಾದ ಮದುವೆಗೆ ಕುಟುಂಬದವರ ಗ್ರೀನ್ ಸಿಗ್ನಲ್ ಅಂತೂ ಸಿಕ್ಕಿದೆ. ಇನ್ನು ಈ ಪ್ರಣಯ ಜೋಡಿಗಳು ಮದುವೆಯಾದ ಮೇಲೆ ಮುಂಬೈನ ನಲ್ಲಿರುವ ಸಂಧು ಪ್ಯಾಲೇಸ್ ನಲ್ಲಿ ಉಳಿದುಕೊಳ್ಳಲಿದ್ದಾರಂತೆ.

ಅತಿಯಾ ಹಾಗೂ ರಾಹುಲ್ ಸಾಕಷ್ಟು ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ ಪ್ರವಾಸಗಳಲ್ಲಿ ರಾಹುಲ್ ಜೊತೆ ಅತಿಯಾ ಶೆಟ್ಟಿ ಕೂಡ ಹೋಗುತ್ತಾರೆ. ರಾಹುಲ್ ಅವರು ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದಾಗ ಅತಿಯಾ ಕೂಡ ಅವರ ಜೊತೆಗಿದ್ದರು. ಸದ್ಯ ಅತಿಯ ಕೂಡ ಕೆಲವು ಸಿನಿಮಾ ಹಾಗೂ ಇವೆಲ್ಲ ಮಾಡುವಲ್ಲಿ ಬ್ಯುಸಿಯಾಗಿದ್ದಾರೆ. ಕೆಎಲ್ ರಾಹುಲ್ ಮತ್ತು ಅತಿಯಾ ಶೆಟ್ಟಿ ಅವರ ಪ್ರೇಮಕಥೆ ಈಗಿನದೇನಲ್ಲ ಹಲವು ವರ್ಷಗಳಿಂದಲೇ ನಡೆಯುತ್ತಿದೆ.

ನಟಿ ಅತಿಯಾ ಶೆಟ್ಟಿ ಹಾಗೂ ಕೆಎಲ್ ರಾಹುಲ್ ಕಳೆದ ಮೂರು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ತಮ್ಮಿಬ್ಬರ ಪ್ರೀತಿಯ ಬಗ್ಗೆ ಮುಚ್ಚಿಟ್ಟು ಕೊಳ್ಳದೆ ಬಹಿರಂಗವಾಗಿಯೇ ಹೇಳಿದ್ದಾರೆ ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಖಾಸಗಿ ಫೋಟೋಗಳನ್ನು ಕೂಡ ಆಗಾಗ ಅಪ್ಲೋಡ್ ಮಾಡುತ್ತಾರೆ. ಹಾಗಾಗಿ ಈ ಪ್ರಣಯ ಪಕ್ಷಿಗಳು ಯಾವಾಗ ವಿವಾಹವಾಗುತ್ತಾರೆ ಎನ್ನುವುದು ಸದ್ಯದ ಬಿಸಿ ಬಿಸಿ ಚರ್ಚೆಯ ವಿಷಯ. ಮುಂದಿನ ವರ್ಷ ಈ ಜೋಡಿಗಳ ಮದುವೆ ಹೌದು ಬಹುತೇಕ ಖಚಿತವಾಗಿದೆ.

Leave a Comment

error: Content is protected !!