KL Rahul: ಕ್ರಿಕೆಟ್ ಕ್ಷೇತ್ರಕ್ಕಿಂತಲೂ ಮಿಗಿಲಾದ ದೊಡ್ಡ ಸಾಧನೆಯನ್ನು ಮಾಡಿದ್ದಾರೆ ನಮ್ಮ ಕನ್ನಡಿಗ ಕೆ ಎಲ್ ರಾಹುಲ್.

KL Rahul ಭಾರತೀಯ ಕ್ರಿಕೆಟ್ ತಂಡದಲ್ಲಿ ಕರ್ನಾಟಕ ಮೂಲದಿಂದ ಯಾರಾದರೂ ಸಾಕಷ್ಟು ದೊಡ್ಡ ಮಟ್ಟದಲ್ಲಿ ನಮ್ಮ ಕನ್ನಡ ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಸದ್ದು ಮಾಡಿದ್ದಾರೆ ಎಂದರೆ ಅದು ನಮ್ಮ ಹೆಮ್ಮೆಯ ಕೆಎಲ್ ರಾಹುಲ್(KL Rahul) ಎಂದು ಹೇಳಬಹುದಾಗಿದೆ. ನಿಜಕ್ಕೂ ಕೂಡ ಅವರನ್ನು ನಮ್ಮ ಕನ್ನಡಿಗ ಎಂದು ಹೇಳಿಕೊಳ್ಳುವುದಕ್ಕೆ ನಮಗೆ ಹೆಮ್ಮೆಯಾಗುತ್ತದೆ.

ಸದ್ಯಕ್ಕೆ ಅವರು ಇಂಜುರಿಯಿಂದ ತಂಡದಿಂದ ಹೊರಕ್ಕೆ ಬಂದಿದ್ದು ಮುಂದಿನ ದಿನಗಳಲ್ಲಿ ಖಂಡಿತವಾಗಿ ದೊಡ್ಡಮಟ್ಟದ ಕಂಬ್ಯಾಕ್ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ ಆದರೆ ಇದರ ನಡುವೆ ಅವರು ಮಾಡಿರುವಂತಹ ಒಂದು ಕೆಲಸ ನಿಜಕ್ಕೂ ಕೂಡ ಪ್ರತಿಯೊಬ್ಬರು ಮೆಚ್ಚುವಂತದ್ದಾಗಿದೆ. ಪ್ರತಿಯೊಬ್ಬರೂ ಕೂಡ ಇದ್ದರೆ ನನ್ನ ಮಗ ಕೆ ಎಲ್ ರಾಹುಲ್ ಅವರ ರೀತಿ ಇರಬೇಕು ಎಂಬುದಾಗಿ ಹಾರೈಸುವಂತಾಗಿದೆ.

ಉತ್ತರ ಕರ್ನಾಟಕ ಮೂಲದ ಹುಡುಗನೊಬ್ಬ ಅದಾಗಲೇ ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡಿದ್ದ ಆದರೆ ಆತನಿಗೆ ಉನ್ನತ ಶಿಕ್ಷಣಕ್ಕೆ ಕಾಲೇಜು ಸಂಸ್ಥೆಯವರು ದೊಡ್ಡ ಮಟ್ಟದ ಡೊನೇಷನ್ ಅನ್ನು ಕೇಳುತ್ತಿದ್ದರು. ಆ ಸಂದರ್ಭದಲ್ಲಿ ಸಾಮಾಜಿಕ ಕಳಕಳಿಯನ್ನು ಹೊಂದಿರುವಂತಹ ಸಂಘ ಸಂಸ್ಥೆ ಅವರು ಕೆ ಎಲ್ ರಾಹುಲ್ ಅವರನ್ನು ಸಂಪರ್ಕ ಮಾಡುತ್ತಾರೆ.

ಆಗ ಕೆಎಲ್ ರಾಹುಲ್ ರವರು ಈ ವಿಚಾರವನ್ನು ತಿಳಿದು ಹಿಂದೂ ಮುಂದು ಯೋಚಿಸದೆ ಆತನ ಪೂರ್ಣ ಪ್ರಮಾಣದ ವಿದ್ಯಾರ್ಥಿ ಶಿಕ್ಷಣದ ಖರ್ಚನ್ನು ನಾನೇ ವಹಿಸಿಕೊಳ್ಳುತ್ತೇನೆ ಎಂಬುದಾಗಿ ಹೇಳಿ ಹಣವನ್ನು ಕೂಡ ಆತನ ಖಾತೆಗೆ ವರ್ಗಾಯಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಕೇವಲ ಕ್ರಿಕೆಟ್ ಮೈದಾನದಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿ ಕೂಡ ಕೆ ಎಲ್ ರಾಹುಲ್(KL Rahul) ಹೀರೊ ಎಂದು ಹೇಳಬಹುದು.

Leave A Reply

Your email address will not be published.

error: Content is protected !!