ಎಂ ಎಸ್ ಧೋನಿ ಅವರು ಐಪಿಎಲ್ ನ 15 ಸೀಸನ್ ಗಳಿಂದ ಪಡೆದ ಒಟ್ಟು ಹಣ ಎಷ್ಟು ಕೋಟಿ ಗೊತ್ತಾ! ಕೇಳಿದ್ರೆ ನೀವು ಶಾಕ್ ಆಗ್ತೀರಾ

ಐಪಿಎಲ್ ಎಂದರೆ ಇದು ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಹಾಗೂ ಜನಪ್ರಿಯ ಟೂರ್ನಮೆಂಟ್. ಭಾರತೀಯ ಕ್ರಿಕೆಟ್ ಬೋರ್ಡ್ ಜಗತ್ತಿನಲ್ಲೇ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿದೆ. ಭಾರತೀಯ ಕ್ರಿಕೆಟ್ ಬೋರ್ಡ್ ಸಂಸ್ಥೆ ಸ್ಥಾಪಿಸಿರುವ ಐಪಿಎಲ್ ಇಂದು ವಿಶ್ವದಲ್ಲೇ ಟಾಪ್ 5 ಸ್ಪೋರ್ಟ್ಸ್ ನಲ್ಲಿ ಒಂದಾಗಿದೆ. ಐಪಿಎಲ್ ಟೂರ್ನಮೆಂಟ್ ಆರ್ಥಿಕ ಮತ್ತು ಮನೋರಂಜನಾ ವಿಭಾಗದಲ್ಲಿ ಬಲಿಷ್ಠವಾಗಿದೆ. ಐಪಿಎಲ್ ಕ್ರಿಕೆಟ್ ನಲ್ಲಿ ಆಟಗಾರರಿಗೆ ಬಯಸಿದ್ದಕ್ಕಿಂತ ಹೆಚ್ಚಿನ ಆದಾಯ ಸಿಗುತ್ತೆ. ಐಪಿಎಲ್ ಮಾಲೀಕರು ಆಟಗಾರರ ಮೇಲೆ ಮನಬಂದಂತೆ ಹಣಗಳನ್ನು ಸುರಿಸುತ್ತಾರೆ.

ಐಪಿಎಲ್ ಆಟದಿಂದ ಆದಾಯವೂ ಕೂಡ ತುಂಬಾ ಹೆಚ್ಚಿದೆ. ಕೋಟ್ಯಂತರ ಜನ ಐಪಿಎಲ್ ಕ್ರಿಕೆಟ್ ವೀಕ್ಷಿಸುತ್ತಾರೆ ಜಾಹೀರಾತಿನ ಮೂಲಕ ವಾಹಿನಿಯವರು ಸಾವಿರಾರು ಕೋಟಿಯನ್ನು ದುಡಿಯುತ್ತಾರೆ. ಹಾಗೆ ಬಂದ ಲಾಭದಲ್ಲಿ ವಾಹಿನಿಯವರು ಐಪಿಎಲ್ ಮಾಲಕರಿಗೆ ಹಣವನ್ನು ನೀಡುತ್ತಾರೆ ಮತ್ತು ಐಪಿಎಲ್ ಮಾಲಕರು ಅದೇ ಹಣವನ್ನು ಆಟಗಾರರಿಗೆ ಸಂಭಾವನೆ ಮೂಲಕ ಕೊಡುತ್ತಾರೆ.ಯಾವ ಆಟಗಾರ ಎಷ್ಟು ಸಂಭಾವನೆ ಪಡೆಯುತ್ತಾನೆ ಎಂಬ ಕುತೂಹಲ ವೀಕ್ಷಕರಿಗೆ ಇದ್ದೇ ಇರುತ್ತದೆ.

ಐಪಿಎಲ್ ಕ್ರಿಕೆಟ್ ಇತಿಹಾಸದಲ್ಲಿಯೇ ಅತ್ಯಂತ ಶ್ರೀಮಂತ ಆಟಗಾರನೆಂದರೆ ಅದು ಎಂಎಸ್ ಧೋನಿ. ಎಂಎಸ್ ಧೋನಿ ಅವರು ಹದಿನೈದು ಐಪಿಎಲ್ ಸೀಸನ್ ಗಳಲ್ಲಿ ಆಟವಾಡಿದ್ದಾರೆ. 14 ಐಪಿಎಲ್ ಸೀಸನ್ ಗಳಲ್ಲಿ ನಾಯಕತ್ವವನ್ನು ನಿರ್ವಹಿಸಿದ್ದಾರೆ. 2008 ರಲ್ಲಿ ದೋನಿ ಅವರು ತಮ್ಮ ಐಪಿಎಲ್ ಜರ್ನಿ ಪ್ರಾರಂಭಿಸಿದ್ದಾರೆ.2008 ರಿಂದ ಸಿಎಸ್ ಕೆ ತಂಡದ ನಾಯಕ ಮತ್ತು ವಿಕೆಟ್ ಕೀಪರ್ ಆಗಿ ಧೋನಿ ಐಪಿಲ್ ವೃತ್ತಿಜೀವನ ಪ್ರಾರಂಭ ಮಾಡಿದ್ದಾರೆ.

2008 ರಿಂದ ಇಲ್ಲಿಯವರೆಗೂ ಎಂಎಸ್ ಧೋನಿ ಅವರನ್ನು ಸಿಎಸ್ ಕೆ ತಂಡದ ವರು ರಿಟೇನ್ ಮಾಡಿದ್ದಾರೆ. ಪ್ರತಿವರ್ಷ ಎಂಎಸ್ ಧೋನಿಯವರನ್ನು ಸಿಎಸ್ ಕೆ ತಂಡದವರು ಬಿಟ್ಟು ಕೊಟ್ಟಿಲ್ಲ ಪ್ರತಿ ವರ್ಷ ರಿಟೇನ್ ಮಾಡಿದ್ದಾರೆ. ಎಂಎಸ್ ಧೋನಿ ಅವರ ನಾಯಕತ್ವದಲ್ಲಿ ಚೆನ್ನೈ ತಂಡವು ನಾಲ್ಕು ಐಪಿಎಲ್ ಟ್ರೋಫಿಗಳನ್ನೂ ಗೆದ್ದಿವೆ. ಹಾಗೆಯೇ ಹನ್ನೊಂದು ಬಾರಿ ಪ್ಲೇ ಆಫ್ ಪ್ರವೇಶಿಸದ್ದಾರೆ. ಮತ್ತು ಒಂಬತ್ತು ಬಾರಿ ಫೈನಲ್ ವರೆಗೆ ಸಿಎಸ್ ಗೆ ತಲುಪಿದ್ದು ಧೋನಿ ಅವರ ನಾಯಕತ್ವದಲ್ಲಿಯೇ.. ಸಿಎಸ್ ಕೆ ತಂಡದಲ್ಲಿ ಧೋನಿ ಅವರಿಲ್ಲದೆ ನೆನೆಸಿಕೊಳ್ಳುವುದು ಅಸಾಧ್ಯ.

ಐಪಿಎಲ್ ಇತಿಹಾಸದಲ್ಲೇ ಟಾಪ್ ಟೆನ್ ಬ್ಯಾಟ್ಸ್ ಮನ್ ಗಳಲ್ಲಿ ಧೋನಿ ಅವರು ಒಬ್ಬರಾಗಿದ್ದಾರೆ. ಧೋನಿಯವರ ಆದಾಯದ ವಿಷಯಕ್ಕೆ ಬಂದರೆ ಮೊದಲ ಮೂರು ಸೀಸನ್ ಗಳಿಗೆ ಎಂಎಸ್ ಧೋನಿ ಆರು ಕೋಟಿ ರೂಪಾಯಿಗಳನ್ನು ಪಡೆದಿದ್ದರು ತದನಂತರ. 2017 ರ ತನಕ ಪ್ರತಿವರ್ಷ ಧೋನಿ ಸುಮಾರು ಹನ್ನೆರಡು ಕೋಟಿ ರೂಪಾಯಿಗಳನ್ನು ಸಂಭಾವನೆ ಪಡೆದಿದ್ದಾರೆ. ತದನಂತರ 2018 ರಿಂದ 2021 ರ ವರೆಗೆ ಧೋನಿ ಅವರಿಗೆ ಹದಿನೈದು ಕೋಟಿ ರುಪಾಯಿಗಳನ್ನು ಕೊಟ್ಟಿದ್ದಾರೆ.2022 ರಲ್ಲಿ ಧೋನಿ ಅವರಿಗೆ ಹನ್ನೆರಡು ಕೋಟಿ ಕೊಟ್ಟು ರಿಟೇನ್ ಮಾಡಿದ್ದಾರೆ. ಒಟ್ಟಾರೆ ಹದಿನೈದು ಐಪಿಎಲ್ ಸೀಸನ್ ಗಳಿಂದ ದೋನಿ ಅವರಿಗೆ ನೂರಾ ಎಂಭತ್ತು ಕೋಟಿ ಆದಾಯ ಬಂದಿದೆ ಎಂದು ವರದಿ ತಿಳಿಸಿದೆ.

Leave a Comment

error: Content is protected !!