
ಬ್ರೇಕಿಂಗ್ ನ್ಯೂಸ್ : ಕೊನೆಗೂ ಹೊರ ಬಿತ್ತು RCB ತಂಡದ ಹೊಸ ನಾಯಕನ ಹೆಸರು. ಯಾರು ಗೊತ್ತಾ ಆರ್ಸಿಬಿ ತಂಡದ ಕ್ಯಾಪ್ಟನ್
ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಮತ್ತು ಅಭಿಮಾನಿಗಳನ್ನು ಅತಿಹೆಚ್ಚು ಮನರಂಜಿಸುವ ಟೀಮ್ ಎಂದರೆ ಅದು ಆರ್ ಸಿಬಿ. ಆರ್ ಸಿಬಿ ಎಂದರೆ ಕನ್ನಡಿಗರಿಗಂತೂ ವಿಶೇಷವಾದ ಪ್ರೀತಿ. ಆರ್ ಸಿಬಿ ಆಟಗಾರರು ಕನ್ನಡಿಗರು ಹೃದಯದ ವಿಶೇಷವಾದ ಸ್ಥಾನವನ್ನು ಗಳಿಸಿದ್ದಾರೆ. ಐಪಿಎಲ್ ಶುರುವಾಗಿ ಸುಮಾರು 13 ವರ್ಷಗಳು ಪೂರ್ಣಗೊಂಡಿವೆ. ಒಂದು ಬರೀ ಕೂಡ ಆರ್ ಸಿಬಿ ಕಪ್ ಗೆಲ್ಲಲಿಲ್ಲ.
ಕಪ್ ಅಭಿಮಾನಿಗಳ ಸಂಖ್ಯೆ ಯಲ್ಲಿ ಇನ್ನೂ ಕಡಿಮೆಯಾಗಿಲ್ಲ ಪ್ರತೀ ವರ್ಷ ಆರ್ ಸಿಬಿ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಯಾಕೆಂದರೆ ನಿಷ್ಟಾವಂತ ಅಭಿಮಾನಿಗಳು ಇದ್ದಾರೆ ಸೋಲಿರಲಿ ಗೆಲುವಿರಲಿ ತಂಡವನ್ನು ಯಾವಾಗಲೂ ನಾವೆಲ್ಲ ಸಪೋರ್ಟ್ ಮಾಡುತ್ತೆವೆ. ಹಾಗೆ ಬೇರೆ ಟೀಮ್ ನ ಅಭಿಮಾನಿಗಳು ಹಾಗೆ ಆಟಗಾರರು ಚೆನ್ನಾಗಿ ಹಾಡಿನಂಥ ಅವರನ್ನು ವೈಯಕ್ತಿಕವಾಗಿ ನಾವು ದ್ವೇಷಿಸುವುದಿಲ್ಲ.

ಕಳೆದ ಐಪಿಎಲ್ ಸೀಸನ್ ಮುಗಿದ ತಕ್ಷಣವೇ ವಿರಾಟ್ ಕೊಹ್ಲಿ ತಮ್ಮ ನಾಯಕತ್ವ ಕೂಡ ನಿವೃತ್ತಿಯನ್ನು ಘೋಶಿಸಿದರು ಇನ್ಮುಂದೆ ಆರ್ ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ ಅವರು ಕೇವಲ ಒಬ್ಬ ಆಟಗಾರನಾಗಿ ಅಷ್ಟೇ ಇರ್ತಾರೆ. ಇದು ಹಲವಾರು ಅಭಿಮಾನಿಗಳಿಗೆ ಬೇಸರ ತಂದಿತ್ತು. ವಿರಾಟ್ ಕೊಹ್ಲಿ ಅವರನ್ನು ಆರ್ ಸಿಬಿ ತಂಡದ ನಾಯಕನಾಗಿ ನೋಡೋದಕ್ಕೆ ಪ್ರತಿಯೊಬ್ಬರು ಇಷ್ಟಪಡುತ್ತಿದ್ದರು. ಇದೀಗ ಆರ್ ಸಿಬಿ ತಂಡಕ್ಕೆ ಹೊಸ ನಾಯಕನೊಬ್ಬ ಆಯ್ಕೆಯಾಗಿದ್ದಾನೆ.
ಅವರು ಗೆದ್ದರೆ ಆರ್ ಸಿಬಿ ತಂಡಕ್ಕೆ ಸೌತ್ ಆಫ್ರಿಕಾ ತಂಡದ ಫಾಫ್ ಡುಪ್ಲೆಸಿಸ್ ಅವರು ನಾಯಕನಾಗಿ ಆಯ್ಕೆಯಾಗಿದ್ದಾರೆ. ಈ ಮಾಹಿತಿಯನ್ನು ಸ್ವತಃ ಆರ್ ಸಿಬಿ ತಂಡವೇ ಅಧಿಕೃತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದಾರೆ. ಚೆನ್ನೈ ತಂಡದ ಆಟಗಾರನಾಗಿದ್ದ ಡುಪ್ಲೆಸಿಸ್ ಇಂದು ಆರ್ ಸಿಬಿ ತಂಡದ ನಾಯಕನಾಗಿದ್ದಾರೆ. ಇವರಿಗೆ ನಾಯಕತ್ವ ಹೊಸದಲ್ಲ. 2016 ನೇ ಇಸವಿಯಿಂದ 2019 ರ ವರೆಗೆ ದಕ್ಷಿಣ ಆಫ್ರಿಕಾ ತಂಡವನ್ನು ನಾಯಕನಾಗಿ ನಿಭಾಯಿಸಿರುವ ಅನುಭವಗಳನ್ನು ಹೊಂದಿದ್ದಾರೆ.
ಫಾಫ್ ಡು ಪ್ಲೆಸಿಸ್ ನಾಯಕನಾಗಿರುವುದು ವಿರಾಟ್ ಕೊಹ್ಲಿ ಅವರಿಗೆ ತುಂಬಾ ಸಂತಸ ತಂದಿದೆಯಂತೆ. ಆರ್ ಸಿಬಿ ತಂಡದ ಮಾಜಿ ಆಟಗಾರನಾಗಿರುವ ಎಬಿಡಿ ವಿಲಿಯರ್ಸ್ ಅವರು ಕೂಡ ಫಾಫ್ ಡುಪ್ಲೆಸಿಸ್ ಅಭಿನಂದನೆಗಳನ್ನು ತಿಳಿಸಿದ್ದಾರೆ. ಇನ್ಮೇಲೆ ಫಾಪ್ ಡುಪ್ಲೆಸಿಸ್ ಅವರು ಆರ್ ಸಿಬಿ ತಂಡವನ್ನು ಹೇಗೆ ಮುನ್ನಡೆಸುತ್ತಾರೆ ಎಂಬುದನ್ನು ನೋಡಬೇಕಾಗಿದೆ. ಡುಪ್ಲೆಸಿಸ್ ಅವರನ್ನು ಕ್ಯಾಪ್ಟನ್ ಮಾಡಿರುವುದು ನಿಮಗೆಲ್ಲಾ ತೃಪ್ತಿ ತಂದಿದೆಯಾ ಇಲ್ಲವೆಂಬುದನ್ನು ಕಮೆಂಟ್ ಮಾಡಿ ತಿಳಿಸಿ
