ಸನ್ನೆ ಮಾಡಿ ಐಪಿಎಲ್ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ರಿಷಬ್ ಪಂತ್ ಕೊಟ್ಟ ದಂಡದ ಮೊತ್ತ ಎಷ್ಟು ಗೊತ್ತಾ

ಕೆಲವೊಮ್ಮೆ ಜೀವನದಲ್ಲಿ ನಾವು ಮಾಡುವ ಚಿಕ್ಕಚಿಕ್ಕ ತಪ್ಪುಗಳು ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತೆ. ಜೀವನದಲ್ಲಿ ನಾವು ಮಾಡುವ ಚಿಕ್ಕ ತಪ್ಪುಗಳು ಎಂಥಾ ದೊಡ್ಡ ಪರಿಣಾಮ ಬೀರುತ್ತದೆ ಎಂಬುದಕ್ಕೆ ಮೊನ್ನೆ ಐಪಿಎಲ್ ಆಟದಲ್ಲಿ ನಡೆದ ಒಂದು ಘಟನೆ ಕಾರಣ. ಕಳೆದ ಶುಕ್ರವಾರ ಏಪ್ರಿಲ್ 24 ರಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದ ನಡುವೆ ಶಾಕಿಂಗ್ ಘಟನೆಯೊಂದು ನಡೆದಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರು ಮಾಡಿದ ಅಶಿಸ್ತಿನ ನಡತೆಗೆ ದಂಡ ಕಟ್ಟುವಂತ ಪರಿಸ್ಥಿತಿ ಬಂದಿದೆ.

ಶುಕ್ರವಾರ ಏಪ್ರಿಲ್ 24 ರ ಸಂಜೆ ರೋಚಕ ಪಂದ್ಯ ನಡೆದಿದೆ. ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಡುವೆ ಭರ್ಜರಿ ಜಟಾಪಟಿ ನಡೆದಿದೆ. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡ 222ರನ್ ಗಳ ದೊಡ್ಡ ಮೊತ್ತವನ್ನು ಕಲೆ ಹಾಕಿತ್ತು. ಈ ದೊಡ್ಡ ಮೊತ್ತವನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಕೊನೆಯ ಓವರ್ ನಲ್ಲಿ 36 ರನ್ ಗಳು ಬೇಕಾಗಿರುವ ಹಂತವನ್ನು ತಲುಪಿತ್ತು. ಈ ಸಂದರ್ಭದಲ್ಲಿ ಲಾಸ್ಟ್ ಓವರ್ ನ ಪ್ರತಿ ಬಾಲ್ ಕೂಡ ಇಂಪಾರ್ಟೆಂಟ್ ಆಗಿತ್ತು.

ಕೊನೆಯ 6 ಬಾಲ್ ಗಳಲ್ಲಿ 36 ರನ್ ಗಳು ಬೇಕಾದಾಗ ವೆಸ್ಟ್ ಇಂಡೀಸ್ ತಂಡದ ಆಟಗಾರ ಪೊವೆಲ್ ಬ್ಯಾಟಿಂಗ್ ಮಾಡುತ್ತಿದ್ದರು. ಮೊದಲ 3 ಬಾಲುಗಳಿಗೆ 3 ಸಿಕ್ಸರ್ ಗಳನ್ನು ಪೊವೆಲ್ ಬಾರಿಸಿದ್ದಾನೆ. ನಂತರ ನಾಲ್ಕನೇ ಬಾಲ್ ಅನ್ನು ಬೌಲರ್ ಬ್ಯಾಟ್ಸ್ ಮನ್ ನ ಸೊಂಟದ ಮೇಲೆ ಹಾಕುತ್ತಾನೆ. ಈ ಬೌಲ್ ನೋಬಾಲ್ ಆಗಿದ್ದರೂ ಕೂಡ ಅಂಪೈರ್ ಯಾವುದೇ ರಿಯಾಕ್ಷನ್ ಕೊಡುವುದಿಲ್ಲ. ಇದರಿಂದ ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಪ್ಟನ್ ರಿಷಬ್ ಪಂತ್ ಸಿಟ್ಟಿಗೇಳುತ್ತಾರೆ. ಮೈದಾನ ಹೊರಗಿನಿಂದಲೇ ಸನ್ನೆಮಾಡಿ ಪೊವೆಲ್ ಗೆ ಬ್ಯಾಟಿಂಗ್ ನಿಲ್ಲಿಸಿ ಮೈದಾನದಿಂದ ಆಚೆ ಬರುವಂತೆ ಹೇಳುತ್ತಾನೆ.

ಹಾಗೆ ರಿಷಬ್ ಪಂತ್ ಡೆಲ್ಲಿ ತಂಡದ ಅಸಿಸ್ಟೆಂಟ್ ಕೋಚ್ ಅನ್ನು ಮೈದಾನಕ್ಕೆ ಕಳಿಸಿ ಅಂಪೈರ್ ಬಳಿ ನೋಬಾಲ್ ಸಿಗ್ನಲ್ ಕೊಡುವಂತೆ ಒತ್ತಾಯಿಸಿದ್ದಾನೆ. ಕೈಸನ್ನೆಯಿಂದಲೇ ಅಂಪೈರ್ ಗಳಿಗೆ ಬೈದಿರುವುದು ಮತ್ತು ಆಟಗಾರರನ್ನು ಮೈದಾನದಿಂದ ಹೊರ ಬರುವಂತೆ ಹೇಳಿ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲು ಪ್ರಯತ್ನಪಟ್ಟಿರುವುದು ಐಪಿಎಲ್ ನಿಯಮ ಉಲ್ಲಂಘನೆ ಮಾಡಿದಂತಾಗುತ್ತದೆ. ಇದೇ ಕಾರಣದಿಂದ ರಿಷಬ್ ಪಂತ್ ಅವರಿಗೆ ಬಹುದೊಡ್ಡ ಮೊತ್ತದ ದಂಡವನ್ನು ವಿಧಿಸಲಾಗಿದೆ. ಮಹೇಂದ್ರ ಸಿಂಗ್ ಧೋನಿಯವರ ಕೂಡ 2017 ರಲ್ಲಿ ಇದೇ ರೀತಿಯ ನಿಯಮ ಉಲ್ಲಂಘನೆ ಮಾಡಿ ದಂಡ ವನ್ನು ಕಟ್ಟಿದರು.

ಆಗ ಧೋನಿಯವರು ಹಾಗೂ ಶೇಕಡಾ 50 ರಷ್ಟು ಹಣವನ್ನು ದಂಡವಾಗಿ ಪಾವತಿಸಿದರು. ಧೋನಿಯವರು ಆಗ ಐವತ್ತು ಲಕ್ಷ ರೂ ದಂಡ ಪಾವತಿಸಿದರು. ಆದರೆ ರಿಷಬ್ ಪಂತ್ ಅವರು ಇದೀಗ ಧೋನಿ ದಂಡ ಪಾವತಿಸಿದ ಹಣಕ್ಕಿಂತ ದುಪ್ಪಟ್ಟು ಹಣವನ್ನು ಪಾವತಿ ಮಾಡಿದ್ದಾರೆ. ರಿಷಬ್ ಪಂತ್ ಅವರು ಬರೋಬ್ಬರಿ ಒಂದು ಕೋಟಿ ರುಪಾಯಿಗಳ ಹಣವನ್ನು ದಂಡದ ರೂಪದಲ್ಲಿ ಪಾವತಿ ಮಾಡಿದ್ದಾರೆ. ಅಂದರೆ ಆ ಒಂದು ಮ್ಯಾಚ್ ನ ಶೇಕಡಾ ನೂರರಷ್ಟು ಆದಾಯ ಮೊತ್ತವನ್ನು ರಿಷಬ್ ಪಂತ್ ಅವರು ಕೈಬಿಟ್ಟಿದ್ದಾರೆ. ಹಾಗೇ ರಿಷಬ್ ಪಂತ್ ಅವರ ಜೊತೆಗೆ ಅಶಿಸ್ತಿನ ವರ್ತನೆ ತೋರಿದ ಶಾರ್ದೂಲ್ ಠಾಕೂರ್ ಅವರಿಗೆ ಕೂಡ ಒಂದು ಪಂದ್ಯದ ಶೇಕಡಾ 100 ರಷ್ಟು ಆದಾಯದ ಮೊತ್ತವನ್ನು ಕಡಿತ ಮಾಡಲಾಗಿದೆ. ಹಾಗೆ ಮೈದಾನಕ್ಕಿಳಿದು ಅಂಪೈರ್ ಜೊತೆ ಜಗಳವಾಡಿದ ಡೆಲ್ಲಿ ಕ್ಯಾಪಿಟಲ್ಸ್ ಅಸಿಸ್ಟೆಂಟ್ ಕೋಚ್ ಅನ್ನು ಮುಂದಿನ ಪಂದ್ಯಕ್ಕೆ ಬ್ಯ‍ಾನ್ ಮಾಡಲಾಗಿದೆ

Leave A Reply

Your email address will not be published.

error: Content is protected !!