Virat Kohli: ಕೊನೆಗೂ ವಿರಾಟ್ ಕೊಹ್ಲಿ ಅವರ ಬಗ್ಗೆ ತಿಳಿಯದೆ ಇರುವ ಅದೊಂದು ವಿಚಾರ ಬಹಿರಂಗವಾಗಿಯೇ ಬಿಡ್ತು.

Virat Kohli ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ ತಂಡದ ಧ್ರುವತಾರೆ ಎನ್ನಬಹುದಾಗಿದೆ. ಒಬ್ಬ ಕ್ರಿಕೆಟಿಗನಾಗಿ ಅದರಲ್ಲಿ ವಿಶೇಷವಾಗಿ ಬ್ಯಾಟ್ಸ್ಮನ್ ಆಗಿ ಕ್ರಿಕೆಟ್ ಜಗತ್ತಿನ ದೇವರು ಆಗಿರುವಂತಹ ಸಚಿನ್ ತೆಂಡೂಲ್ಕರ್(Sachin Tendulkar) ಅವರ ದಾಖಲೆಯನ್ನು ಕೂಡ ಸರಿಗಟ್ಟುವ ರೀತಿಯಲ್ಲಿ ದಾಖಲೆಗಳನ್ನು ಮಾಡುತ್ತಿದ್ದು ಇನ್ನೂ ಹಲವಾರು ವರ್ಷಗಳ ಕಾಲ ಅವರು ಭಾರತೀಯ ಕ್ರಿಕೆಟ್ ತಂಡದಲ್ಲಿ ಇಂತಹ ದಾಖಲೆಗಳನ್ನು ಮಾಡುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ವಿರಾಟ್ ಕೊಹ್ಲಿ ನಾಯಕನಾಗಿ ಕೂಡ ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆ. ಇನ್ನು ಬ್ರಾಂಡಿಂಗ್ ವಿಚಾರಕ್ಕೆ ಬಂದರೆ ವಿರಾಟ್ ಕೊಹ್ಲಿ(Virat Kohli) ಅವರನ್ನು ಸರಿಪಟ್ಟುವಂತಹ ಕ್ರೀಡಾಪಟು ಇದುವರೆಗೂ ಕೂಡ ಭಾರತದಲ್ಲಿ ಹುಟ್ಟಿಲ್ಲ ಮುಂದೆ ಹುಟ್ಟೋದು ಕೂಡ ಕಷ್ಟ ಎಂದು ಹೇಳಬಹುದು.

ಇನ್ನು ಶ್ರೀಮಂತ ಕ್ರಿಕೆಟಿಗರಲ್ಲಿ ಕೂಡ ಕಾಣಿಸಿಕೊಳ್ಳುವಂತಹ ವಿರಾಟ್ ಕೊಹ್ಲಿ ಅವರ ಒಟ್ಟಾರೆ ಆಸ್ತಿಯ ಮೌಲ್ಯ ಎಷ್ಟು ಎನ್ನುವುದರ ಬಗ್ಗೆ ಇಂದಿನ ಲೇಖನಿಯಲ್ಲಿ ನಾವು ನಿಮಗೆ ಹೇಳಲು ಹೊರಟಿದ್ದೇವೆ. ಯಾಕೆಂದರೆ ಅವರ ಆಸ್ತಿಯ ಬಗ್ಗೆ ಇತ್ತೀಚಿಗಷ್ಟೇ ಅಧಿಕೃತವಾಗಿ ಮಾಹಿತಿಗಳು ತಿಳಿದು ಬಂದಿವೆ.

ಹೌದು ಇತ್ತೀಚಿಗಷ್ಟೇ ತಿಳಿದು ಬಂದಿರುವ ಸುದ್ದಿಯ ಪ್ರಕಾರ ವಿರಾಟ್ ಕೊಹ್ಲಿ ಅವರು ಅಧಿಕೃತವಾಗಿ 1050 ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿದ್ದಾರೆ. ಐಪಿಎಲ್ ಸೇರದಂತೆ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಆಡುವುದಕ್ಕೆ ಕೋಟ್ಯಾಂತರ ರೂಪಾಯಿ ಹಣವನ್ನು ಪಡೆಯುವ ವಿರಾಟ್ ಕೊಹ್ಲಿ ಅವರ ಹೆಚ್ಚಿನ ಆದಾಯ ಬರುವುದು ಅವರ ಬಿಸಿನೆಸ್ ಹಾಗೂ ಬ್ರಾಂಡಿಂಗ್ ಮೂಲಕ. ಇದಕ್ಕಾಗಿ ವಿರಾಟ್ ಕೊಹ್ಲಿ ಅತ್ಯಂತ ಹೆಚ್ಚು ಹಣವನ್ನು ಹೊಂದಿರುವ ಕ್ರೀಡಾಪಟುಗಳಲ್ಲಿ ಜಾಗತಿಕವಾಗಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳೋದು.

Leave A Reply

Your email address will not be published.

error: Content is protected !!