
ದಕ್ಷಿಣ ಭಾರತ ಮೂಲದ ಹುಡುಗಿಯನ್ನು ಮದುವೆಯಾದ ಆರ್ ಸಿಬಿ ಆಟಗಾರ ಮ್ಯಾಕ್ಸ್ ವೆಲ್. ಯಾರು ಗೊತ್ತಾ ಈ ಭಾರತೀಯ ಬೆಡಗಿ
ಪ್ರೀತಿಯ ವಿಚಾರಕ್ಕೆ ಬಂದರೆ ಗಡಿ ಭಾಷೆ ಹಾಗೂ ಜಾತಿ ಲೆಕ್ಕಕ್ಕೆ ಬರುವುದಿಲ್ಲ. ಪ್ರೀತಿಯನ್ನು ಯಾವುದೇ ಗಡಿ ಕೂಡ ತಡೆಯಲು ಸಾಧ್ಯವಿಲ್ಲ. ಇದೇ ತತ್ವವನ್ನು ವಿದೇಶಿ ಕ್ರಿಕೆಟಿಗರು ಭಾರತ ದೇಶದಲ್ಲಿ ತಮ್ಮ ಪ್ರೀತಿಯನ್ನು ಕಂಡುಕೊಳ್ಳುವ ಮೂಲಕ ಸಾಬೀತುಪಡಿಸಿದ್ದಾರೆ. ಕೆಲವು ವಿದೇಶಿ ಕ್ರಿಕೆಟಿಗರು ಜಾತಿ ಧರ್ಮ ದೇಶ ಭಾಷೆ ಎಲ್ಲವನ್ನೂ ಮೀರಿ ಕೇವಲ ತಮ್ಮ ಪ್ರೀತಿಯನ್ನು ಪಡೆಯಲು ಭಾರತ ದೇಶದ ಮಹಿಳೆಯರನ್ನು ಮದುವೆಯಾಗಿದ್ದಾರೆ.
ಶ್ರೀಲಂಕಾ ತಂಡದ ಮುತ್ತಯ್ಯ ಮುರಳೀಧರನ್, ಪಾಕಿಸ್ತಾನ ತಂಡದ ಶೋಯಬ್ ಮಲಿಕ್ , ಬಾಂಗ್ಲಾದೇಶದ ಹಸನ್ ಅಲಿ , ಇಂಗ್ಲೆಂಡ್ ತಂಡದ ಮೈಕ್ ಬ್ರೇರ್ಲಿ ,ಆಸ್ಟ್ರೇಲಿಯಾದ ಬೌಲರ್ ಶಾನ್ ಟೇಟ್ ಈ ಎಲ್ಲ ಕ್ರಿಕೆಟಿಗರು ಸಹ ಭಾರತ ಮೂಲದ ಮಹಿಳೆಯರನ್ನೇ ಮದುವೆಯಾಗಿದ್ದಾರೆ. ಇದೀಗ ಇವರ ಸಾಲಿಗೆ ಆಸ್ಟ್ರೇಲಿಯಾ ಮತ್ತು ಆರ್ ಸಿಬಿ ತಂಡದ ಆಟಗಾರ ಮ್ಯಾಕ್ಸ್ ವೆಲ್ ಅವರು ಕೂಡ ಸೇರಿಕೊಂಡಿದ್ದಾರೆ. ಇದೇ ತಿಂಗಳು ಮಾರ್ಚ್ 18 ರಂದು ಮ್ಯಾಕ್ಸ್ ವೆಲ್ ನವರು ವಿನಿ ರಮಣ್ ಎನ್ನುವ ದಕ್ಷಿಣ ಭಾರತದ ಮೂಲದ ಹುಡುಗಿಯನ್ನು ಮದುವೆಯಾಗಿದ್ದಾರೆ.
ಮ್ಯಾಕ್ಸ್ ವೆಲ್ ಮದುವೆಯಾಗಿರುವ ವಿನಿ ರಮಣ್ ಅವರ ಬಗ್ಗೆ ಇದೀಗ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಹಾಗೆಯೇ ಜನರಲ್ಲಿ ಈ ಭಾರತದ ಹುಡುಗಿಯನ್ನು ಮ್ಯಾಕ್ಸ್ ವೆಲ್ ಹೇಗೆ ಮದುವೆಯಾದರು ಎಂಬ ಕುತೂಹಲ ಮೂಡಿದೆ. ವಿನಿ ರಮಣ್ ಹುಟ್ಟಿದ್ದು ತಮಿಳುನಾಡಿನ ಹಿಂದೂ ಕುಟುಂಬದಲ್ಲಿ. ಪಿಕೆ ವಿದ್ಯಾಭ್ಯಾಸ ಮಾಡಿದ್ದು ಆಸ್ಟ್ರೇಲಿಯಾದ ಮೆಲ್ಬರ್ನ್ ನಲ್ಲಿ. ಮೆಡಿಕಲ್ ಕ್ಷೇತ್ರದಲ್ಲಿ ವಿದ್ಯಾಭ್ಯಾಸ ಮುಂದುವರಿಸಿ ನಂತರ ಈಕೆ ಫಾರ್ಮಸಿಸ್ಟ್ (ಔಷಧಿ ಜ್ಞಾನಿ ) ಯಾಗಿ ಕೆಲಸ ಮಾಡುತ್ತಿದ್ದಳು .
2016 ರಲ್ಲಿ ವಿನಿ ಮತ್ತು ಮ್ಯಾಕ್ಸ್ ವೆಲ್ ಅವರು ಭೇಟಿಯಾಗಿದ್ದಾರೆ. ತದನಂತರ ಇವರ ಮಧ್ಯೆ ಗೆಳೆತನ ಬೆಳೆಯಿತು. 2017 ರಿಂದ ಈ ಜೋಡಿಗಳು ಡೇಟಿಂಗ್ ಮಾಡಲು ಪ್ರಾರಂಭಿಸಿದ್ದಾರೆ. ಸತತ 5 ವರ್ಷಗಳ ಕಾಲ ಇಬ್ಬರೂ ಪ್ರೀತಿ ಮಾಡುತ್ತಿದ್ದರು. ಇದೀಗ ಕುಟುಂಬದವರ ಒಪ್ಪಿಗೆಯ ಮೇರೆಗೆ ಮ್ಯಾಕ್ಸ್ ವೆಲ್ ಮತ್ತು ವಿನಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿಗಳ ಮದುವೆ ಕ್ಷಣಗಳ ಫೋಟೋಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಮ್ಯಾಕ್ಸ್ ವೆಲ್ ಭಾರತೀಯ ಸಂಪ್ರದಾಯದಂತೆ ಮದುವೆಯಾಗಿರುವ ನಿಜಕ್ಕೂ ಅಚ್ಚರಿಯ ಸಂಗತಿ. ಭಾರತೀಯ ಸಂಪ್ರದಾಯದಂತೆ ಹೂವಿನ ಹಾರವನ್ನು ಬದಲಾಯಿಸಿಕೊಂಡು ಮ್ಯಾಕ್ಸ್ ವೆಲ್ ಮತ್ತು ವಿನೀತ್ ಅವರು ಮದುವೆಯಾಗಿರುವ ವಿಡಿಯೋಗಳು ಕೂಡ ಟ್ವಿಟ್ಟರ್ ನಲ್ಲಿ ಹರಿದಾಡುತ್ತಿವೆ. ಮ್ಯಾಕ್ಸ್ ವೆಲ್ ಅವರು ಮದುವೆ ಕಾರ್ಯಕ್ರಮದ ಸಲುವಾಗಿ ಮೊದಲ ಎರಡು ಐಪಿಎಲ್ ಮ್ಯಾಚ್ ನಲ್ಲಿ ಲಭ್ಯವಿರಲಿಲ್ಲ. ಮದುವೆ ಆದ ಒಂದೇ ವಾರಕ್ಕೆ ಮ್ಯಾಕ್ಸ್ ವೆಲ್ ಅವರು ಆರ್ ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ ಮತ್ತು ಇನ್ನು ಮುಂದಿನ ಬ್ಯಾಚ್ ಗಳಲ್ಲಿ ಮ್ಯಾಕ್ಸ್ ವೆಲ್ ನವರು ಕೂಡ ಆರ್ ಸಿಬಿ ತಂಡದಲ್ಲಿ ಕಾಣಸಿಗಲಿದ್ದಾರೆ.
