ಕನ್ನಡತಿ ಧಾರಾವಾಹಿಯ ವರೂಧಿನಿ ನಿಜಜೀವನದಲ್ಲಿ ಹೇಗಿದ್ದಾಳೆ ಗೊತ್ತಾ ನೋಡಿದರೆ ನಿಜಕ್ಕೂ ನೀವು ಆಶ್ಚರ್ಯಪಡುತ್ತೀರಿ

ಸದ್ಯ ಕನ್ನಡ ಕಿರುತೆರೆ ಧಾರಾವಾಹಿಯ ಪಟ್ಟಿಯಲ್ಲಿ ಕನ್ನಡತಿ ಧಾರಾವಾಹಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಅತಿ ಹೆಚ್ಚು ಟಿ ಆರ್ ಪಿ ಪಡೆ ಯುವ ಮೂಲಕ ಜನರನ್ನು ರಂಜಿಸುವಲ್ಲಿ ಕನ್ನಡತಿ ಸಿರೀಯಲ್ ಯಶಸ್ವಿಯಾಗಿ ಮುನ್ನುಗುತ್ತಿದೆ. ಸಂಜೆ 7.30 ಆಗುತ್ತಿದ್ದಂತೆ ಮನೆ ಮಂದಿಯೆಲ್ಲ ಕನ್ನಡ ಧಾರಾವಾಹಿ ನೋಡೋಕ್ಕೆ ಕುಳಿತುಕೊಂಡು ಬಿಡುತ್ತಾರೆ. ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರ ತನಕ ಈ ಧಾರಾವಾಹಿ ಎಲ್ಲರಿಗೂ ಇಷ್ಟವಾಗುತ್ತಿದೆ. ಇದೀಗ ಕನ್ನಡ ಧಾರಾವಾಹಿ ಕುತೂಹಲ ಘಟ್ಟ ತಲುಪಿದ್ದು ಅಭಿಮಾನಿಗಳಲ್ಲಿ ಕುತೂಹಲ ಇನ್ನೂ ಹೆಚ್ಚುತ್ತಿದೆ.

ಕನ್ನಡತಿ ಧಾರಾವಾಹಿಯ ಮುಖ್ಯ ಪಾತ್ರಧಾರಿಗಳಾದ ಹರ್ಷ ಮತ್ತು ಭುವಿ ಇನ್ನೇನು ಮದುವೆ ಆಗೋಕೆ ಹೊರಟಿದ್ದಾರೆ. ಆದರೆ ಇವರ ಮದ್ವೆಗೆ ಅಪಶಕುನದಂತೆ ವರೂಧಿನಿ ಎಂಬ ಪಾತ್ರ ಅಡ್ಡಿಯಾಗುತ್ತಿದೆ. ಮತ್ತು ಹರ್ಷ ನಿನ್ನನ್ನೇ ಮದುವೆಯಾಗಬೇಕೆಂದು ಹಠ ಹಿಡಿದು ಕುಳಿತಿದ್ದಾಳೆ. ಹರ್ಷ ನನ್ನನ್ನೇ ಮದುವೆಯಾಗಬೇಕು ಎಂದು ಹಠ ಹಿಡಿದು ಕುಳಿತಿರುವ ವರೂಧಿನಿ ಕಂಡ್ರೆ ವೀಕ್ಷಕರು ಕೆಂಡಾಮಂಡಲವಾಗುತ್ತಾರೆ. ಕೊನೆಗೂ ಹರ್ಷ ಭುಗಿ ಮದುವೆಯಾಗುವ ಸಮಯ ಬಂತು ಎಂದು ಖುಷಿ ಪಡುತ್ತಿರುವ ಸಂದರ್ಭದಲ್ಲಿ ವರೂಧಿನಿ ಎಂಟ್ರಿ ಕೊಟ್ಟು ದೊಡ್ಡ ಟ್ವಿಸ್ಟ್ ಕೊಟ್ಟಿದ್ದಾಳೆ.

ಸೀರಿಯಲ್ ನಲ್ಲಿ ನೆಗೆಟಿವ್ ಪಾತ್ರ ಮಾಡುತ್ತಿರುವ ವರೂಧಿನಿ ನಿಜಜೀವನದಲ್ಲಿ ಹೇಗಿದ್ದಾಳೆ? ಇವಳ ಲೈಫ್ ಸ್ಟೈಲ್ ಹೇಗಿದೆ ಗೊತ್ತಾ.. ವರೂಧಿನಿಯ ನಿಜ ಜೀವನದ ಹೆಸರು ಸಾರಾ ಅನ್ನಯ್ಯ. ಈಕೆ ಹುಟ್ಟಿ ಬೆಳೆದಿದ್ದು ಮೈಸೂರಿನಲ್ಲಿ. ಕಾಲೇಜು ವಿದ್ಯಾಭ್ಯಾಸ ಮುಗಿಸಿ ಮಾಡೆಲಿಂಗ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟು ನಂತರ ಸೀರಿಯಲ್ ಗಳಲ್ಲಿ ನಟನೆ ಮಾಡೋಕೆ ಶುರು ಮಾಡಿದ್ರು ಇವರು ಮೊದಲು ತಮಿಳು ಸೀರಿಯಲ್ ನಲ್ಲಿ ನಟನೆ ಮಾಡಿದ್ದಾರೆ. ತದನಂತರ ಇದೀಗ ಮೊದಲ ಬಾರಿ ಕನ್ನಡತಿ ಧಾರಾವಾಹಿ ಮೂಲಕ ಕನ್ನಡ ಸೀರಿಯಲ್ ಲೋಕಕ್ಕೆ ಎಂಟ್ರಿಕೊಟ್ಟಿದ್ದಾರೆ. ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರ ಮಾಡುವ ಸಾರ ನಿಜ ಜೀವನದಲ್ಲಿ ತುಂಬಾ ಪಾಸಿಟಿವ್ ಮತ್ತು ಎನರ್ಜೆಟಿಕ್ ಆಗಿರುತ್ತಾರೆ.

ನಿಜಜೀವನದಲ್ಲಿ ವರುಧಿನಿ ಲೈಫ್ ಅನ್ನು ತುಂಬಾ ಎಂಜಾಯ್ ಮಾಡುತ್ತಾರೆ. ಟ್ರಿಪ್ ಫೋಟೋಶೂಟ್ ಅಂತ ಯಾವಾಗಲೂ ಖುಷಿ ಕ್ಷಣಗಳನ್ನು ಹಂಚಿಕೊಳ್ಳುತ್ತಾ ಇರ್ತಾರೆ. ಟ್ರಾವೆಲಿಂಗ್ ಮತ್ತು ಡ್ಯಾನ್ಸಿಂಗ್ ಅಂದರೆ ಇವರಿಗೆ ತುಂಬ ಅಚ್ಚುಮೆಚ್ಚು. ಸೀರಿಯಲ್ ನಲ್ಲಿ ಎಷ್ಟು ಬೋಲ್ಡ್ ಮತ್ತು ಮಾಡರ್ನ್ ಆಗಿ ಕಾಣಿಸಿಕೊಳ್ಳುತ್ತಾರೋ.. ನಿಜ ಜೀವನದಲ್ಲೂ ಕೂಡ ಅಷ್ಟೇ ಬೋಲ್ಡ್ ಮತ್ತು ಮಾಡರ್ನ್ ಆಗಿದ್ದಾರೆ. ಇತ್ತೀಚೆಗೆ ಸಾರಾ ಅಲಿಯಾಸ್ ವರುಧಿನಿ ಅವರು ತಮ್ಮ ಇನ್ ಸ್ಟಾಗ್ರಾಂನಲ್ಲಿ ಸ್ವಿಮ್ಮಿಂಗ್ ಡ್ರೆಸ್ ಹಾಕಿಕೊಂಡಿರುವ ಬೋಲ್ಡ್ ಫೋಟೋ ಒಂದನ್ನು ಹಂಚಿಕೊಂಡಿದ್ದರು. ಈ ಬೋಲ್ಡ್ ಮತ್ತು ಹಾಟ್ ಫೋಟೋ ನೋಡಿ ಕನ್ನಡತಿ ಧಾರಾವಾಹಿಯ ಅಭಿಮಾನಿಗಳು ದಂಗಾಗಿದ್ದಾರೆ. 25 ವರ್ಷ ವಯಸ್ಸಾಗಿದ್ದರೂ ಕೂಡ ಸಾರಾ ಅವರು ತಮ್ಮ ದೇಹದ ಸೌಂದರ್ಯವನ್ನು ಸಕ್ಕತ್ತಾಗಿ ಮೆಂಟೇನ್ ಮಾಡಿದ್ದಾರೆ. ಇಲ್ಲಿದೆ ನೋಡಿ ಸಾರಾ/ ವರೂಧಿನಿಯ ಬೋಲ್ಡ್ ಫೋಟೋ ಶೂಟ್.

Leave A Reply

Your email address will not be published.

error: Content is protected !!