ವಿಮಲ್ ಪಾನ್ ಮಸಾಲಾ ಜಾಹೀರಾತಿನಲ್ಲಿ ನಟನೆ ಮಾಡೋಕೆ ಅಜಯ್ ದೇವಗನ್ ತೆಗೆದುಕೊಳ್ಳುವ ಸಂಭಾವನೆ ಎಷ್ಟು ಕೋಟಿ ಗೊತ್ತಾ ಕೇಳಿದ್ರೆ ತಲೆ ತಿರುಗುತ್ತೆ

ಅಜಯ್ ದೇವಗನ್ ಅವರು ಬಾಲಿವುಡ್ ನ ಹೆಸರಾಂತ ನಟ. ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ತೆಗೆದುಕೊಳ್ಳುವ ಟಾಪ್ ನಟರಲ್ಲಿ ಇವರೂ ಕೂಡ ಒಬ್ಬರು. 1991 ರಲ್ಲಿ ಫೂಲ್ ಔರ್ ಕಾಂಟೆ ಎಂಬ ಸಿನಿಮಾದ ಮೂಲಕ ಅಜಯ್ ದೇವಗನ್ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು. ಈ ನಟ ಮಾಡಿರುವ ಸಿನಿಮಾಗಳೆಲ್ಲವೂ ಕೂಡ ದಕ್ಷಿಣ ಭಾರತದ ಚಿತ್ರಗಳ ರಿಮೇಕ್ ಗಳೆ.. ಇವರು ನಟಿಸಿದ ಮೊದಲ ಸಿನಿಮಾವೇ ಮಲಯಾಳಂ ಚಿತ್ರದ ರಿಮೇಕ್ ಆಗಿತ್ತು. ದಕ್ಷಿಣ ಭಾರತದ ಚಿತ್ರಗಳನ್ನು ರಿಮೇಕ್ ಮಾಡಿಯೇ ಈತ ಬಾಲಿವುಡ್ ನ ಸೂಪರ್ ಸ್ಟಾರ್ ಆಗಿದ್ದಾನೆ.

ಅಜಯ್ ದೇವಗನ್ ನಟಿಸಿರುವ ಯುವ, ಇನ್ಸಾನ್, ಗೋಲ್ ಮಾಲ್, ಸಂಡೇ, ಝಮೀರ್ ಹೀಗೆ ಹೇಳುತ್ತಾ ಹೋದರೆ ಅಜಯ್ ದೇವಗನ್ ನ ಸೂಪರ್ ಹಿಟ್ ಸಿನಿಮಾಗಳೆಲ್ಲ ನಮ್ಮ ದಕ್ಷಿಣ ಭಾರತದ ಚಿತ್ರಗಳ ರಿಮೇಕ್ ಆಗಿವೆ. ಅಷ್ಟೇ ಅಲ್ಲ ಅಜಯ್ ದೇವಗನ್ ಅವರು ನಮ್ಮ ಕನ್ನಡದ ಸಿನಿಮಾಗಳನ್ನು ಕೂಡ ರಿಮೇಕ್ ಮಾಡಿದ್ದಾರೆ. ನಮ್ಮ ಕನ್ನಡದ ಗಲಾಟೆ ಸಂಸಾರ ಚಿತ್ರವನ್ನು ಹಿಂದಿಯಲ್ಲಿ ಆಲ್ ದಿ ಬೆಸ್ಟ್ ಎನ್ನುವ ಹೆಸರಿನಲ್ಲಿ ರೀಮೇಕ್ ಮಾಡಿದ್ದಾರೆ ಹಾಗೆ ಬಲಗಾಲಿಟ್ಟು ಒಳಗೆ ಬಾ ಎಂಬ ಸಿನಿಮಾವನ್ನು ಹಿಂದಿಯಲ್ಲಿ ಸನ್ ಆಫ್ ಸರ್ದಾರ್ ಎಂದು ರೀಮೇಕ್ ಮಾಡಿದ್ದಾರೆ.

ಹೀಗೆ ಸಿನಿಮಾಗಳ ಹೆಸರು ಹೇಳುತ್ತಾ ಹೋದರೆ ಮುಗಿಯಲ್ಲ. ಅಜಯ್ ದೇವಗನ್ ತನ್ನ ಜೀವನದುದ್ದಕ್ಕೂ ದಕ್ಷಿಣ ಭಾರತದ ಸಿನಿಮಾಗಳನ್ನು ಮರುಸೃಷ್ಟಿ ಮಾಡಿ ಜನಪ್ರಿಯತೆ ಗಳಿಸಿದ್ದಾರೆ. 120 ಕ್ಕೂ ಅಧಿಕ ಚಿತ್ರಗಳಲ್ಲಿ ಅಜಯ್ ದೇವಗನ್ ನಟನೆ ಮಾಡಿದ್ದಾರೆ. ಸೋಜಿಗದ ಸಂಗತಿ ಏನೆಂದರೆ ಈ ಅಜಯ್ ದೇವ್ಗನ್ ದಕ್ಷಿಣ ಭಾರತದಲ್ಲಿ ತನ್ನ ಸಿನಿಮಾಗಳಿಂದ ಹೆಚ್ಚು ಖ್ಯಾತಿ ಪಡೆಯದಿದ್ದರೂ ವಿಮಲ್ ಪಾನ್ ಮಾಸಾಲಾ ಪ್ರಚಾರದ ಮೂಲಕ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಕಣಕಣದಲ್ಲೂ ಕೇಸರಿ ಎಂಬ ಡೈಲಾಗ್ ಹೇಳುವ ಮೂಲಕ ಅಜಯ್ ದೇವಗನ್ ದೇಶದ ಮೂಲೆ ಮೂಲೆಗೂ ತಲುಪಿದ್ದಾರೆ.

ಅಜಯ್ ದೇವ್ ಗನ್ ಅವರು ವಿಮಲ್ ಗು’ಟ್ಕಾ’ ಕಂಪೆನಿಯ ರಾಯಭಾರಿಯಾಗಿದ್ದಾರೆ. ವಿಮಲ್ ಕಂಪನಿಯವರು ಅಜಯ್ ದೇವಗನ್ ಅವರಿಗೆ ಪ್ರತಿ ವರ್ಷಕ್ಕೊಮ್ಮೆ ಸಂಭಾವನೆ ನೀಡುತ್ತಾರೆ. ಕೇವಲ ಹತ್ತು ಸೆಕೆಂಡ್ ಗಳಲ್ಲಿ ನಟಿಸಲು ಅಜಯ್ ದೇವಗನ್ ಕೋಟಿಗಟ್ಟಲೆ ರೂಪಾಯಿಗಳನ್ನು ಡಿಮ್ಯಾಂಡ್ ಮಾಡುತ್ತಾರೆ. ವಿಮಲ್ ಪ್ರಚಾರಕ್ಕೆ ಅಜಯ್ ದೇವಗನ್ ಅವರಿಗೆ ಪ್ರತಿ ವರ್ಷಕ್ಕೆ ನಾಲ್ಕರಿಂದ ಐದು ಕೋಟಿ ಸಿಗುತ್ತವೆಯಂತೆ.

ವಿಮಲ್ ಮನುಷ್ಯನ ಜೀವನಕ್ಕೆ ಹಾನಿಕಾರಕ ಎಂದು ಗೊತ್ತಿದ್ದರೂ ಕೂಡ ಅಜಯ್ ದೇವಗನ್ ಅವರು ಕೇವಲ ಹಣಕ್ಕೊಸ್ಕರ ವಿಮಲ್ ಪ್ರಚಾರವನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಅಜಯ್ ದೇವಗನ್ ಅವರ ಜೊತೆ ಬಾಲಿವುಡ್ ಪ್ರಸಿದ್ಧ ನಟರಾದ ಅಕ್ಷಯ್ ಕುಮಾರ್ ಮತ್ತು ಶಾರುಖ್ ಖಾನ್ ಕೂಡ ವಿಮಲ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಬಾಲಿವುಡ್ ಚಿತ್ರರಂಗದ ಪ್ರಸಿದ್ಧ ನಟರಾಗಿ ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದೆಲ್ಲಾ ಟೀಕೆಗಳು ಶುರುವಾದವು. ನಂತರ ಅಕ್ಷಯ್ ಕುಮಾರ್ ಅವರು ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾರೆ. ಮತ್ತು ವಿಮಲ್ ಜಾಹೀರಾತಿನಲ್ಲಿ ಇನ್ಮೇಲೆ ಕಾಣಿಸಿಕೊಳ್ಳುವುದಿಲ್ಲ ಹಾಗೆ ಜಾಹೀರಾತಿನಿಂದ ಬಂದ ಹಣವನ್ನು ಸಾಮಾಜಿಕ ಕಲ್ಯಾಣಕ್ಕಾಗಿ ಉಪಯೋಗಿಸುತ್ತೇನೆ ಎಂದು ಅಕ್ಷಯ್ ಕುಮಾರ್ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

Leave a Comment

error: Content is protected !!