ಅನುಶ್ರೀ ಹಾಗೂ ಸರಿಗಮಪ ಸ್ಪರ್ಧಿ ಜಸ್ ಕರಣ್ ಸಿಂಗ್ ಜೊತೆಗಿನ ಪಂಜಾಬ್ ಪ್ರವಾಸದ ಫೋಟೋಸ್

ಸ್ನೇಹಿತರೆ ತುಂಬಾ ಚಿಟಪಟ ಮಾತುಗಾರಿಕೆಯ ಮೂಲಕ ಎಲ್ಲೆಡೆ ತಮ್ಮದೇ ಆದ ಹಾವಳಿಯನ್ನು ಸೃಷ್ಟಿ ಮಾಡಿಕೊಂಡಿರುವಂತಹ ಆಂಕರ್ ಅನುಶ್ರೀ(Anu shree) ಅವರು ಕನ್ನಡ ಕಿರುತೆರೆಯ ಸಾಲು ಸಾಲು ರಿಯಾಲಿಟಿ ಕಾರ್ಯಕ್ರಮಗಳನ್ನು ಸಿನಿಮಾ ಕುರಿತಾದಂತಹ ಪ್ರೋಗ್ರಾಮ್ಗಳನ್ನು ಹಾಗೂ ಇನ್ನಿತರ ಸಭೆ ಸಮಾರಂಭಗಳನ್ನು ನಡೆಸಿ ಕೊಡುವ ಮೂಲಕ ಕನ್ನಡದ ನಂಬರ್ ಒನ್ ಆಂಕರ್ ಪ್ರಖ್ಯಾತಿ ಪಡೆದಿದ್ದಾರೆ.

ಒಂದಲ್ಲ ಒಂದು ವಿಚಾರದಿಂದ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವಂತಹ ಅನುಶ್ರೀ ಅವರು ಕಳೆದ ಕೆಲವು ದಿನಗಳ ಹಿಂದೆ ತಮ್ಮ ಜೀ ಕನ್ನಡ ವಾಹಿನಿಯ ವಾಹಿನಿಯಲ್ಲಿ ಮೂಡಿ ಬರುವ ಸರಿಗಮಪ ಕಾರ್ಯಕ್ರಮದ ಸ್ಪರ್ಧಿ ಜಸ್ ಕರಣ್ ಸಿಂಗ್ (Jaskaran Singh) ಅವರೊಂದಿಗೆ ಪಂಜಾಬ್ ಪ್ರವಾಸಕ್ಕೆ ತೆರಳಿದ್ದು ಅದರ ಕೆಲ ಫೋಟೋಗಳು ನೆಟ್ಟಿಗರನ್ನು ಆಕರ್ಷಿಸುತ್ತಿದೆ. ಮೂಲತಃ ಕನ್ನಡದವರಾದ ಅನುಶ್ರೀ ಅವರು ಪಂಜಾಬ್ ಮೂಲದ ಗಾಯಕನೊಂದಿಗೆ ಕಾಣಿಸಿಕೊಂಡಿದ್ದು,

ಎಲ್ಲರಿಗೂ ಕೊಂಚ ಅಚ್ಚರಿಯನ್ನು ಉಂಟು ಮಾಡಿಸುವುದರ ಜೊತೆಗೆ ಇವರಿಬ್ಬರ ಫೋಟೋಗೆ ನಾನಾ ರೀತಿಯಾದಂತಹ ಕಮೆಂಟ್ಗಳ ಸುರಿಮಳೆ ಹರಿದು ಬರುತ್ತಿದೆ. ಈ ಬಾರಿ ಸರಿಗಮಪ ಸೀಸನ್ ನಲ್ಲಿ ಜಸ್ ಕರಣ್ ಸಿಂಗ್ ಅವರು ಮೂಲತಃ ಪಂಜಾಬ್ ನವರಾದರು ಕನ್ನಡವನ್ನು ಕಲಿತು ಅಪ್ಪಟ ಕನ್ನಡ ಹಾಡುಗಳನ್ನು ಹಾಡುತ್ತಾ, ಕನ್ನಡಿಗರ ಮನಸ್ಸಿನಾಳಕ್ಕೆ ಇಳಿದುಬಿಟ್ಟಿದ್ದಾರೆ. ಅದೆಷ್ಟೋ ಮಂದಿ ಇವರ ಅದ್ಭುತ ಕಂಠಸಿರಿಯಲ್ಲಿ ಮೂಡಿಬರುವ ಹಾಡುಗಳನ್ನು ಕೇಳಲು ಈ ಬಾರಿಯ ಸರಿಗಮಪ ರಿಯಾಲಿಟಿ ಕಾರ್ಯಕ್ರಮವನ್ನು ವೀಕ್ಷಿಸುತ್ತಿರುವುದುಂಟು.

ಇನ್ನು ಕಾರ್ಯಕ್ರಮದ ಉದ್ದಕ್ಕೂ ಆಂಕರ್ ಅನುಶ್ರೀ ಅವರೊಂದಿಗೆ ಉತ್ತಮವಾದ ಬಾಂಧವ್ಯವನ್ನು ಕಾಯ್ದುಕೊಂಡು ಬಂದಿದ್ದಂತಹ ಜಸ್ಕರಣ್ ಸಿಂಗ್ ಅವರು ತಮ್ಮ ಮನೆಯಲ್ಲಿ ನಡೆದಂತಹ ಕಾರ್ಯಕ್ರಮ ಒಂದಕ್ಕೆ ಅನುಶ್ರೀ ಅವರನ್ನು ಆಹ್ವಾನಿಸಿದರು. ಅದರ ಮೇರೆಗೆ ಪಂಜಾಬ್ ಗೆ ತೆರಳಿದಂತಹ ಅನುಶ್ರೀ ಅಲ್ಲಿನ ಸುಂದರ ತಾಣಗಳನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಅವರ ಶೈಲಿಯ ಉಡುಪನ್ನು ಧರಿಸಿ ಅವರ ಆಚರಣೆಗಳೆಲ್ಲಾ ಭಾಗಿಯಾಗಿ

ವಿಶೇಷವಾದ ಸಮಯ ಕಳೆದಿದ್ದು ಈ ಸುಂದರ ಫೋಟೋಗಳನ್ನು ಗಾಯಕ ಜಸ್ ಕರಣ್ ಸಿಂಗ್ ಅವರು ಅನುಶ್ರೀ (Anushree) ಅವರೊಂದಿಗೆ ಪಂಜಾಬ್ ಗೆ ಭೇಟಿ ನೀಡಿದ ಕೆಲಸ ಸುಂದರ ನೆನಪುಗಳು ಈ ಸಂಪೂರ್ಣ ಪ್ರವಾಸದಲ್ಲಿ ಬಹಳಷ್ಟುನೂ ಆನಂದಿಸಿದೆವು ಎಂಬ ಶೀರ್ಷಿಕೆ ಬರೆದು ಪೋಸ್ಟ್ ಹಂಚಿಕೊಂಡಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!