ಡ್ರಾಮಾ ಜೂನಿಯರ್ಸ್ ಶೋ ಮೂಲಕ ಕರ್ನಾಟಕದಾದ್ಯಂತ ಹೆಸರು ಮಾಡಿರುವ ಮಹೇಂದ್ರ ನ ಮನೆ ಹೇಗಿದೆ ನೋಡಿ ? ಇನ್ನೂ ಕೂಡ ಸೋರುವ ಹಂಚಿನ ಮನೆಯಲ್ಲಿದ್ದಾರೆ ಮಹೇಂದ್ರ ಕುಟುಂಬ

ಡ್ರಾಮಾ ಜ್ಯೂನಿಯರ್ಸ್ ಕಾರ್ಯಕ್ರಮ ಕರ್ನಾಟಕದಲ್ಲೇ ಅತ್ಯಂತ ಜನಪ್ರಿಯತೆ ಹೊಂದಿರುವ ರಿಯಾಲಿಟಿ ಶೋ. ಈ ಶೋ ಪ್ರಾರಂಭವಾಗಿದ್ದು 2016 ರಲ್ಲಿ. ಈ ಕಾರ್ಯಕ್ರಮದ ಮೂಲಕ ಪ್ರತಿಭಾನ್ವಿತ ಬಾಲನಟರಿಗೆ ಸುವರ್ಣ ಅವಕಾಶ ಸಿಕ್ಕಿದೆ. ಡ್ರಾಮಾ ಜ್ಯೂನಿಯರ್ಸ್ ವೇದಿಕೆ ಮೇಲೆ ಈಗಾಗಲೇ ಹಲವಾರು ಬಾಲ ನಟರು ತಮ್ಮ ಪ್ರತಿಭೆಗಳನ್ನು ಸಾಬೀತುಪಡಿಸಿದ್ದಾರೆ. ಸದ್ಯಕ್ಕೆ ಡ್ರಾಮಾ ಜೂನಿಯರ್ಸ್ ಸೀಸನ್ 4 ನಡೆಯುತ್ತಿದೆ. ರವಿಚಂದ್ರನ್ ರಚಿತಾ ರಾಮ್ ಮತ್ತು ನಟಿ ಲಕ್ಷ್ಮಿ ಈ ಕಾರ್ಯಕ್ರಮದ ಜಡ್ಜ್ ಆಗಿದ್ದಾರೆ.

ಶುರು ಆದ ಮೊದಲನೇ ಸೀಸನ್ ನಿಂದಲೇ ಡ್ರಾಮಾ ಜ್ಯೂನಿಯರ್ಸ್ ಕಾರ್ಯಕ್ರಮ ಅತಿಹೆಚ್ಚು ಟಿಆರ್ ಪಿಯನ್ನು ಪಡೆದಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಬಾಲ ನಟನೂ ಕೂಡ ಅದ್ಭುತ ನಟನೆ ಮಾಡಿ ಕರ್ನಾಟಕದ ಜನತೆಯನ್ನು ಮನೋರಂಜಿಸಿದ್ದರು. ಅದರಲ್ಲೂ ವಿಶೇಷವಾಗಿ ಮಹೇಂದ್ರ ಎಂಬ ಬಾಲಕ ಪಟಪಟನೇ ಡೈಲಾಗ್ ಹೊಡೆಯುವ ಮೂಲಕ ಪ್ರತಿಯೊಬ್ಬರ ಮನಸ್ಸು ಗೆದ್ದಿದ್ದ. ಚಿಕ್ಕ ವಯಸ್ಸಿನಲ್ಲೇ ಮಹೇಂದ್ರನಿಗೆ ಅದ್ಭುತವಾದ ಹಾಸ್ಯಪ್ರಜ್ಞೆ ಇತ್ತು. ಆರನೇ ತರಗತಿಯಲ್ಲಿರುವಾಗಲೇ ನಿರರ್ಗಳ ನಟನೆ ಮಾಡಿ ಸೈ ಎನಿಸಿಕೊಂಡಿದ್ದ. ಸ ಹಿ ಪ್ರಾ ಶಾಲೆ ಕಾಸರಗೋಡು ಸಿನಿಮಾದಲ್ಲಿ ಮಹೇಂದ್ರ ನಟಿಸಿರುವ ಪಾತ್ರ ಮರೆಯಲಾಗದಂಥದ್ದು.

ಮಹೇಂದ್ರ ಚಿಕ್ಕ ವಯಸ್ಸಿನಲ್ಲಿರುವಾಗಲೇ ಅವನ ತಂದೆ ತೀರಿಕೊಂಡಿದ್ದರು. ತನ್ನ ತಾಯಿಯ ಜೊತೆ ಮಹೇಂದ್ರ ಮೈಸೂರಿನ ಗಾಂಧಿ ನಗರದಲ್ಲಿ ಪುಟ್ಟದಾದ ಹೆಂಚಿನ ಮನೆಯಲ್ಲಿ ವಾಸ ಮಾಡುತ್ತಿದ್ದಾನೆ. ಡ್ರಾಮಾ ಜ್ಯೂನಿಯರ್ಸ್ ನಂತಹ ದೊಡ್ಡ ರಿಯಾಲಿಟಿ ಶೋನಲ್ಲಿ ಹೆಸರುಮಾಡಿದರೂ ಸಹ ಮಹೇಂದ್ರ ಯಾಕೆ ಹಂಚಿನ ಮನೆಯಲ್ಲಿ ವಾಸ ಮಾಡುತ್ತಿದ್ದಾನೆ ಎಂದು ನೀವೆಲ್ಲಾ ಆಶ್ಚರ್ಯ ಪಡಬಹುದು. ಈ ಪ್ರಶ್ನೆಗೆ ಸ್ವತಃ ಮಹೇಂದ್ರನೇ ಉತ್ತರ ನೀಡಿದ್ದಾನೆ. ಡ್ರಾಮಾ ಜ್ಯೂನಿಯರ್ಸ್ ಕಾರ್ಯಕ್ರಮದಿಂದ ಬಂದ ಲಕ್ಷ ಲಕ್ಷ ಹಣ ಗಳನ್ನು ಮಹೇಂದ್ರ ತನ್ನ ಮನೆಯ ರಿಜಿಸ್ಟ್ರೇಶನ್ ಗೆ ಖರ್ಚು ಮಾಡಿದ್ದಾನೆ..

ಹಾಗೇ ಸಿನಿಮಾಗಳಲ್ಲಿ ಕೂಡ ಮಹೇಂದ್ರ ಗೆ ಆಫರ್ ಗಳು ಬರುತ್ತಿದ್ದು ಸಿನಿಮಾಗಳಿಂದ ಬಂದ ಹಣ್ಣಗಳನ್ನು ಮಹೇಂದ್ರ ಮನೆಯ ರಿಪೇರಿಗೆ ಬಳಸುತ್ತಿದ್ದಾನೆ. ಹಂಚಿನ ಮನೆ ಆದ್ದರಿಂದ ಮಳೆಗಾಲದಲ್ಲಿ ಮಹೇಂದ್ರನ ಮನೆಯ ಒಳಗಡೆ ನೀರು ಸೋರುತ್ತದೆ ಮತ್ತು ಮಲಗಲಿಕ್ಕೆ ಕೂಡ ಜಾಗವಿರದಷ್ಟು ನೀರು ಮನೆಯೊಳಗಡೆ ಆವರಿಸುತ್ತೆ. ಸಿನಿಮಾಗಳು ಮತ್ತು ಅವರು ಇವರು ಉಡುಗೊರೆಯಾಗಿ ಕೊಟ್ಟ ಹಣವನ್ನು ಬಳಸಿ ಮಹೇಂದ್ರ ಮನೆಯೊಳಗಡೆ ನೀರು ಸೇರದಂತೆ ರಿಪೇರಿ ಮಾಡಿಸಿದ್ದಾನೆ. ಮುಂದಿನ ದಿನಗಳಲ್ಲಿ ದುಡಿದು ಶ್ರೀಮಂತನಾಗಿ ತನ್ನ ತಾಯಿಗೆ ಅಚ್ಚುಕಟ್ಟಾಗಿ ಆರ್ ಸಿಸಿ ಮನೆಯನ್ನು ಕಟ್ಟಬೇಕು ಎಂಬ ಆಸೆ ಮಹೇಂದ್ರ ನಿಗಿದೆ. ಸದ್ಯಕ್ಕೆ ಮಹೇಂದ್ರ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆದು ರಿಸಲ್ಟ್ ಗೆ ಕಾಯುತ್ತಿದ್ದಾನೆ. ವಿದ್ಯಾಭ್ಯಾಸದ ಜೊತೆ ಜೊತೆಗೆ ಮಹೇಂದ್ರ ಸಿನಿಮಾಗಳಲ್ಲಿ ಕೂಡ ನಟನೆ ಮಾಡುತ್ತಿದ್ದಾನೆ.

junior mahendra house
Leave A Reply

Your email address will not be published.

error: Content is protected !!