ಕನ್ನಡ ಕಿರುತೆರೆ ಇತಿಹಾಸದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದು ರೆಕಾರ್ಡ್ ಸೃಷ್ಟಿ ಮಾಡಿದ ಶಿವಣ್ಣ. ಶಿವಣ್ಣ ಪಡೆದ ಸಂಭಾವನೆ ಎಷ್ಟು ಗೊತ್ತೇ

ಜೀ ಕನ್ನಡ ಚಾನೆಲ್ ನಲ್ಲಿ ಪ್ರತಿ 3-4 ತಿಂಗಳಿಗೊಮ್ಮೆ ಹೊಸ ರಿಯಾಲಿಟಿ ಶೋಗಳು ಪ್ರಾರಂಭವಾಗುತ್ತಲೇ ಇರುತ್ತವೆ. ಇತ್ತೀಚೆಗೆ ಜೀ ಕನ್ನಡ ವಾಹಿನಿಯಲ್ಲಿ ಹೊಸದಾಗಿ ಗೋಲ್ಡನ್ ಗ್ಯಾಂಗ್ ಎಂಬ ರಿಯಾಲಿಟಿ ಶೋ ಶುರುವಾಗಿತ್ತು. ಈ ರಿಯಾಲಿಟಿ ಶೋ ಅನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರು ನಿರೂಪಣೆ ಮಾಡುತ್ತಿದ್ದರು. ಇದೀಗ ಗೋಲ್ಡನ್ ಗ್ಯಾಂಗ್ ರಿಯಾಲಿಟಿ ಶೋ ಅಂತ್ಯಗೊಂಡಿದೆ. ಮತ್ತು ಹೊಸದಾದ ರಿಯಾಲಿಟಿ ಶೋ ಶುರುವಾಗಲಿದೆ.

ಗೋಲ್ಡನ್ ಗ್ಯಾಂಗ್ ರಿಯಾಲಿಟಿ ಶೋ ಮುಗಿಯುತ್ತಿದ್ದಂತೆ ಪ್ರೇಕ್ಷಕರಲ್ಲಿ ದೊಡ್ಡದಾದ ಕುತೂಹಲ ಮೂಡಿತ್ತು ಮುಂದೆ ಯಾವ ರಿಯಾಲಿಟಿ ಶೋ ಬರಬಹುದೆಂದು ಅಭಿಮಾನಿಗಳಲ್ಲಿ ಕಾತುರವಿತ್ತು. ಜೀ ಕನ್ನಡ ವಾಹಿನಿಯಲ್ಲಿ ಹೊಸದಾಗಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್-6 ಶುರುವಾಗಲಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್-6 ರ ಪ್ರೋಮೋ ನೋಡಿ ವೀಕ್ಷಕರಂತೂ ಫುಲ್ ಖುಷ್ ಆಗಿದ್ದಾರೆ ಯಾಕೆಂದರೆ ಇದರಲ್ಲಿ ಡಾಕ್ಟರ್ ಶಿವರಾಜ್ ಕುಮಾರ್ ಅವರು ಜಡ್ಜ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಶಿವರಾಜ್ ಕುಮಾರ್ ಅವರು ಮಹಾ ಗುರುಗಳ ಸ್ಥಾನದಲ್ಲಿ ಕೂತುಕೊಳ್ಳುತ್ತಾರೆ. ಯಾವಾಗಲೂ ಎನರ್ಜಿಟಿಕ್ ಆಗಿರುವ ಶಿವಣ್ಣ ಅವರು ಈ ಡ್ಯಾನ್ಸ್ ಶೋಗೆ ಕಳೆಯನ್ನು ತಂದುಕೊಟ್ಟಿದ್ದಾರೆ. ಅರ್ಜುನ್ ಜನ್ಯ ,ನಟಿ ರಕ್ಷಿತಾ ಮತ್ತು ಡ್ಯಾನ್ಸ್ ಕೊರಿಯೋಗ್ರಫರ್ ಚಿನ್ನಿ ಮಾಸ್ಟರ್ ಅವರು ಕೂಡ ಜಡ್ಜ್ ಸೀಟ್ ನಲ್ಲಿ ಕುಳಿತುಕೊಳ್ಳುತ್ತಾರೆ. ಹಾಗೆ ಆಂಕರ್ ಅನುಶ್ರೀ ಅವರು ನಿರೂಪಣೆ ಮಾಡಲಿದ್ದಾರೆ. ರಿಯಾಲಿಟಿ ಶೋ ಪ್ರಾರಂಭವಾಗುವುದಕ್ಕಿಂತ ಮುಂಚೆ ಶಿವಣ್ಣನವರ ಸಂಭಾವನೆಯ ವಿಷಯ ಇದೀಗ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಶಿವಣ್ಣ ಅವರು ಈ ರಿಯಾಲಿಟಿ ಶೋಗೆ ದಾಖಲೆ ಮೊತ್ತದ ಸಂಭಾವನೆ ಪಡೆದಿರುವುದು ತುಂಬಾ ವಿಶೇಷ.

2010 ರಲ್ಲಿ ಶಿವಣ್ಣ ಅವರು ಮೊದಲ ಬಾರಿಗೆ ಜೀ ಕನ್ನಡದಲ್ಲಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ನಾನಿರುವುದೆ ನಿಮಗಾಗಿ ಎಂಬ ರಿಯಾಲಿಟಿ ಶೋ ನ ಮೂಲಕ ಶಿವಣ್ಣ ಅವರು ಮೊದಲ ಬಾರಿಗೆ ಬಾರಿಗೆ ಕಾಣಿಸಿಕೊಂಡಿದ್ದರು. ಅದಾದ ನಂತರ ಶಿವಣ್ಣ ಅವರು ಇದೀಗ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಿವಣ್ಣ ಅವರು ಮತ್ತೆ ರಿಯಾಲಿಟಿ ಶೋಗೆ ಕಾಲಿಟ್ಟಿರುವುದು ಅಭಿಮಾನಿಗಳಂತೂ ಫುಲ್ ಖುಷ್ ಆಗಿದೆ. ಈ ರಿಯಾಲಿಟಿ ಶೋನಲ್ಲಿ ಶಿವಣ್ಣ ಅವರ ಚಿಂದಿ ಡಾನ್ಸ್ ಸ್ಟೆಪ್ ಗಳನ್ನು ನೋಡುವ ಭಾಗ್ಯ ನಮಗೆ ಸಿಗುತ್ತವೆ.

ಇನ್ನೂ ಶಿವಣ್ಣ ಅವರ ಸಂಭಾವನೆ ವಿಚಾರಕ್ಕೆ ಬರೋಣ. ಸುಮಾರು ನಾಲ್ಕು ತಿಂಗಳುಗಳ ಕಾಲ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮ ನಡೆಯುತ್ತೆ. ಶಿವಣ್ಣ ಅವರು ನಾಲ್ಕು ತಿಂಗಳುಗಳ ಸಂಭಾವನೆಯನ್ನು ಪಡೆದಿದ್ದಾರೆ . ಪ್ರತಿ ಎಪಿಸೋಡ್ ಗೆ ಶಿವಣ್ಣ ಅವರು ತಲಾ ಮೂರರಿಂದ ನಾಲ್ಕು ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ. ಒಟ್ಟಾರೆ ಕಂಪ್ಲೀಟ್ ಸೀಸನ್ ಗೆ ಶಿವಣ್ಣ ಅವರು ಒoದು ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎಂಬ ಮಾಹಿತಿ ಇದೆ. ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಕೋಟಿ ಮೊತ್ತದ ಸಂಭಾವನೆ ಪಡೆದಿರುವ ಮೊದಲ ನಟ ಶಿವಣ್ಣ.

Leave A Reply

Your email address will not be published.

error: Content is protected !!