ನನ್ನಮ್ಮ ಸೂಪರ್ ಸ್ಟಾರ್ ವಿನ್ನರ್ ವಂಶಿಕಾ ಗೆ ಗಿಚ್ಚ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಸಿಗುತ್ತಿರುವ ಸಂಭಾವನೆ ಎಷ್ಟು ಗೊತ್ತಾ

ಸದ್ಯದ ಮಟ್ಟಿಗಂತೂ ಕಿರುತೆರೆಯಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವಂಶಿಕಾ ಅವಳದ್ದೇ ಹವಾ. ವಂಶಿಕಾ ಕೇವಲ 5 ವರ್ಷದ ಪುಟ್ಟ ಕೂಸು. ಐದು ವರ್ಷಕ್ಕೆ ಕನ್ನಡಿಗರ ಮನ ಗೆದ್ದಿದ್ದಾಳೆ. ಜನಪ್ರಿಯತೆಯಲ್ಲಿ ತನ್ನ ತಂದೆಯನ್ನೇ ಮೀರಿಸುವ ಹಂತವನ್ನು ತಲುಪಿದ್ದಾಳೆ. ನಟನೆ ಮತ್ತು ಮಾತನಾಡುವ ಕೌಶಲ್ಯ ವಂಶಿಕಾಗೆ ತನ್ನ ತಂದೆಯಿಂದ ಹುಟ್ಟುವಾಗಲೇ ಉಡುಗೊರೆಯಾಗಿ ಬಂದಿದೆ. ಇವಳು ಪಟ ಪಟಾಂತ ಮುದ್ದಾಗಿ ಮಾತನಾಡುವ ಮಾತುಗಳು ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ.

ಇತ್ತೀಚೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಎಂಬ ಹೊಸದಾದ ರಿಯಾಲಿಟಿ ಶೋ ಪ್ರಾರಂಭವಾಗಿತ್ತು. ಈ ಕಾರ್ಯಕ್ರಮದಲ್ಲಿ ತಾಯಿ ಮಕ್ಕಳು ಜೋಡಿಯಾಗಿ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಸೃಜನ್ ಲೋಕೇಶ್ ತಾರಾ ಮತ್ತು ಅನು ಪ್ರಭಾಕರ್ ಅವರು ಈ ಕಾರ್ಯಕ್ರಮದ ಜಡ್ಜ್ ಆಗಿದ್ದರು. ಈ ಕಾರ್ಯಕ್ರಮಕ್ಕೆ ವಂಶಿಕಾ ಮತ್ತು ಅವಳ ಅಮ್ಮ ಯಶಸ್ವಿನಿ ಆನಂದ್ ಅವರು ಸ್ಪರ್ಧೆಯ ವೇಳೆ ಕಾಣಿಸಿಕೊಂಡಿದ್ದರು.

ವಂಶಿಕ ಮೊದಲನೇ ದಿನವೇ ಅದ್ಬುತ ನಟನೆಯಿಂದ ಜನರ ಮನಸ್ಸನ್ನು ಗೆದ್ದು ಬಿಟ್ಟಿದ್ದಳು. ವಂಶಿಕಾಳ ಅಭಿನಯ ಮತ್ತು ಮಾತಿನ ಕೌಶಲ್ಯವನ್ನು ಮೆಚ್ಚಿದ ಜನರು ವಂಶಿಕಾ ಳನ್ನು ನನ್ನಮ್ಮ ಸೂಪರ್ ಸ್ಟಾರ್ ವಿನ್ನರ್ ಮಾಡಿದ್ದಾರೆ. ಇಟ್ಟ ಮೊದಲನೇ ಹೆಜ್ಜೆಯಲ್ಲಿ ವಂಶಿಕಾ ಗೆಲುವನ್ನು ಸಾಧಿಸಿದ್ದಾರೆ ಇದೀಗ ವಂಶಿಕ ಎರಡನೇ ಹೆಜ್ಜೆಯನ್ನು ಇಟ್ಟಿದ್ದಾರೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಗಿಚ್ಚ ಗಿಲಿಗಿಲಿ ಎಂಬ ಹೊಸ ರಿಯಾಲಿಟಿ ಶೋನಲ್ಲಿ ವಂಚಿತ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾಳೆ.

ಗೆಜ್ಜೆಯ ಗಿಲಿಗಿಲಿ ಕಾರ್ಯಕ್ರಮದಲ್ಲಿ ಎರಡು ಸ್ಪರ್ಧಿಗಳು ಜೋಡಿಗಳಾಗಿ ವೇದಿಕೆ ಮೇಲೆ ಬಂದು ಡ್ರಾಮಾ ಮಾಡುತ್ತಾರೆ. ಪ್ರೇಕ್ಷಕರನ್ನು ನಗಿಸಲು ಪ್ರಯತ್ನ ಪಡುತ್ತಾರೆ. ಈ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ನಿವೇದಿತಾ ಗೌಡ ಅಯ್ಯಪ್ಪ ಮತ್ತು ಬಿ ಟಿವಿ ಆ್ಯಂಕರ್ ದಿವ್ಯ ವಸಂತ್ ಹಾಗೂ ಹಲವರು ಸ್ಪರ್ಧಿಗಳಿದ್ದಾರೆ. ಸ್ಪರ್ಧಿಗಳ ಪಟ್ಟಿಯಲ್ಲಿ ವಂಶಿಕ ಅತಿ ಕಿರಿಯ ವಯಸ್ಸಿನವಳು. ಮಿಕ್ಕಿದವರೆಲ್ಲ ದೊಡ್ಡವರೇ. ಯಾರಿಗಿಂತ ತಾನೇನು ಕಡಿಮೆಯಿಲ್ಲ ಎಂಬಂತೆ ವಂಶಿಕ ಗಿಚ್ಚ್ ಗಿಲಿ ಗಿಲಿ ಕಾರ್ಯಕ್ರಮವನ್ನು ನಾನೇ ವಿನ್ ಆಗುತ್ತೇನೆ ಎಂದು ಹೇಳುತ್ತಿದ್ದಾಳೆ.

ಇನ್ನು ವಂಶಿಕಾ ಸಂಭಾವನೆ ವಿಚಾರ ಇದೀಗ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಕಾರ್ಯಕ್ರಮಕ್ಕೆ ಶೋಭೆ ಬಂದಿರುವುದು ವಂಶಿಕಾ ಯಿಂದಲೇ. ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ವಿನ್ನರ್ ಆಗಿರುವ ವಂಶಿಕ ಇದೀಗ ದೊಡ್ಡ ಮಟ್ಟದ ಜನಪ್ರಿಯತೆ ಇದೆ. ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಇಂದ ವಂಶಿಕಾ ಗೆ ಐದು ಲಕ್ಷ ರುಪಾಯಿಗಳ ಬಹುಮಾನ ಹಾಗೆ ಪ್ರತಿ ವಾರಕ್ಕೆ ಇಪ್ಪತ್ತು ಸಾವಿರ ಸಂಭಾವನೆ ಸಿಗುತ್ತಿತ್ತು. ಜನಪ್ರಿಯತೆ ಹೆಚ್ಚಿದಂತೆ ವಂಶಿಕ ಗಿಚ್ಚು ಗಿಲಿಗಿಲಿ ಕಾರ್ಯಕ್ರಮಕ್ಕೆ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ.

ಹೌದು ಸ್ನೇಹಿತರೆ ವಂಶಿಕಾ ತನ್ನ ಸಂಭಾವನೆಯನ್ನು ದುಪ್ಪಟ್ಟು ಮಾಡಿಕೊಂಡಿದ್ದಾರೆ. ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಪ್ರತಿ ಎಪಿಸೋಡ್ ಗೆ ಇಪ್ಪತ್ತು ಸಾವಿರ ಪಡೆಯುತ್ತಿದ್ದ ವಂಶಿಕಾ, ಇದೀಗ ಗಿಚ್ಚ ಗಿಲಿಗಿಲಿ ಕಾರ್ಯಕ್ರಮಕ್ಕೆ ಪ್ರತಿ ವಾರಕ್ಕೆ ನಲವತ್ತು ಸಾವಿರ ರೂಪಾಯಿಗಳ ಸಂಭಾವನೆ ಪಡೆಯುತ್ತಿದ್ದಾರೆ. ವಂಶಿಕ ಈ ಕಾರ್ಯಕ್ರಮದ ಫೈನಲ್ ವರೆಗೂ ತಲುಪುವುದು ಗ್ಯಾರಂಟಿ. ವಿನ್ನರ್ ಆದರು ಆಶ್ಚರ್ಯವೇನಿಲ್ಲ. ಚಿಕ್ಕ ವಯಸ್ಸಿನಲ್ಲೇ ರಿಯಾಲಿಟಿ ಶೋಗಳ ರಾಣಿಯಾಗಿರುವ ವಂಶಿಕ ನಿಜಕ್ಕೂ ಗ್ರೇಟ್.

Leave a Comment

error: Content is protected !!