ಮಿಸ್ ಇಂಡಿಯಾ 2022 ರ ಪಟ್ಟವನ್ನು ಮುಡಿಗೇರಿಸಿಕೊಂಡ ಕನ್ನಡತಿ ಸಿನಿ ಶೆಟ್ಟಿ. ರಾಷ್ಟ್ರ ಸುಂದರಿಯ ಫೋಟೋಗಳು ಇಲ್ಲಿವೆ ನೋಡಿ.

ಕೆಲವು ತಿಂಗಳುಗಳ ಕಾಯುವಿಕೆಯ ನಂತರ ಫೆಮಿನಾ ಮಿಸ್ ಇಂಡಿಯಾ 2022 ರ ವಿಜೇತರ ಹೆಸರನ್ನು ಬಿಡುಗಡೆಗೊಳಿಸಿದೆ. 50 ವರ್ಷಗಳ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಕರ್ನಾಟಕ ಮೂಲದ ಯುವತಿ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯನ್ನು ವಿಜೇತಳಾಗಿದ್ದಾಳೆ. ಕರ್ನಾಟಕ ಮೂಲದ ಸಿನಿ ಶೆಟ್ಟಿ ಎಂಬ ಯುವತಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾಳೆ. ಮಂಗಳೂರಿನ ಬೆಡಗಿ ಸಿನಿ ಶೆಟ್ಟಿ ಈ ವರ್ಷದ ರಾಷ್ಟ್ರ ಸುಂದರಿ ಪಟ್ಟ ತನ್ನದಾಗಿಸಿಕೊಂಡಿದ್ದಾಳೆ.

ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆ ಯನ್ನು ನಡೆಸುವುದಕ್ಕೂ ಮುಂಚೆ ಎಲ್ಲ ರಾಜ್ಯಗಳಿಂದಲೂ ಹಲವಾರು ಮಾಡೆಲ್ ಗಳನ್ನು ಸೆಲೆಕ್ಟ್ ಮಾಡಿದ್ದಾರೆ. ತದನಂತರ ಟಾಪ್ 30 ಸ್ಪರ್ಧಾಳುಗಳನ್ನು ಆನ್ ಲೈನ್ ನಲ್ಲಿ ಶಾರ್ಟ್ ಲಿಸ್ಟ್ ಮಾಡಲಾಗಿದೆ. ಈ ಶಾರ್ಟ್ ಲಿಸ್ಟ್ ಮಾಡಿದ ಸ್ಪರ್ಧಾಳುಗಳನ್ನು ಮುಂಬೈಗೆ ಕರೆತರಲಾಗಿತ್ತು. ಶಾರ್ಟ್ ಲಿಸ್ಟ್ ಮಾಡಿದ ಸ್ಪರ್ಧಾಳುಗಳಲ್ಲಿ ಸೀನಿ ಶೆಟ್ಟಿ ಕೂಡ ಒಬ್ಬಳಾಗಿದ್ದಳು. ಮಿಸ್ ಇಂಡಿಯಾ ವರ್ಲ್ಡ್ 2022 ಗಾಗಿ ಸ್ಪರ್ಧಿಸಲು ಉದ್ಯಮದಲ್ಲಿನ ಅತ್ಯುತ್ತಮರಿಂದ ಸಿನಿ ಶೆಟ್ಟಿಗೆ ಮಾರ್ಗದರ್ಶನ ದೊರಕಿತ್ತು. ಕೊನೆಗೂ ತನ್ನ ಶ್ರಮದ ಫಲವಾಗಿ ಮಿಸ್ ಇಂಡಿಯಾ ಪಟ್ಟವನ್ನು ಮುಡಿಗೇರಿಸಿಕೊಂಡ ದ್ದಾರೆ.

ಮೊದಲ ಸ್ಥಾನ ಪಡೆದುಕೊಂಡ ಸಿನಿ ಶೆಟ್ಟಿಗೆ ಕೇವಲ ಇಪ್ಪತ್ತೊಂದು ವರ್ಷ ವಯಸ್ಸು. ಮಿಸ್ ಇಂಡಿಯಾ ಕಾಂಪಿಟಿಷನ್ ವಿಜೇತಳಾದ ಸಿನಿ ಶೆಟ್ಟಿಗೆ 5 ಲಕ್ಷ ರುಪಾಯಿಯ ಬಹುಮಾನದ ಹಣ ದೊರೆತಿದೆ. ರಾಜಸ್ಥಾನದ ರುಬಲ್ ಶೇಖಾವತ್ ರನ್ನರ್ ಅಪ್ ಆದರು ಮತ್ತು ಉತ್ತರ ಪ್ರದೇಶವನ್ನು ಪ್ರತಿನಿಧಿಸಿದ ಶಿನಾತಾ ಚೌಹಾಣ್ ಈ ವರ್ಷದ ಎರಡನೇ ರನ್ನರ್ ಅಪ್ ಆಗಿದ್ದಾಳೆ. ಫಿನಾಲೆ ರಾತ್ರಿಯಲ್ಲಿ ಅವರೆಲ್ಲರೂ ಒಬ್ಬರಿಗಿಂತ ಇನ್ನೊಬ್ಬರು ಅದ್ಭುತವಾಗಿ ಕಾಣುತ್ತಿದ್ದರು..

ಸಿನಿ ಶೆಟ್ಟಿ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೆ ಇವರು ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ ಆದರೆ ಇವರ ಮೂಲ ಮಾತ್ರ ಕರ್ನಾಟಕ. ಸಿನಿ ಶೆಟ್ಟಿಯವರು ಮುಂಬೈನಲ್ಲಿ ಚಾರ್ಟರ್ಡ್ ಫೈನಾನ್ಷಿಯಲ್ ಅನಾಲಿಸ್ಟ್ (ಸಿಎಫ್‌ಎ) ವೃತ್ತಿಪರ ಕೋರ್ಸ್ ಮಾಡುತ್ತಿದ್ದಾರೆ.ಅಷ್ಟೇ ಅಲ್ಲದೆ ಸುನೀಲ್ ಶೆಟ್ಟಿ ಚಿಕ್ಕವಯಸ್ಸಿನಲ್ಲಿಯೇ ನೃತ್ಯ ಮಾಡುವುದನ್ನು ಕಲಿತಿದ್ದರು ತನ್ನ ನಾಲ್ಕನೇ ವಯಸ್ಸಿನಲ್ಲಿಯೇ ಭರತನಾಟ್ಯ ಮತ್ತು ಅರಂಗೇತ್ರಂ ನೃತ್ಯವನ್ನು ಕರಗತ ಮಾಡಿಕೊಂಡಿದ್ದರು. ಮಿಸ್ ಇಂಡಿಯಾ 2022 ರನ್ನರ್ ಅಪ್ ಆಗಿರುವ ರೆಬೆಲ್ ಅವರು ನೃತ್ಯ, ನಟನೆ, ಚಿತ್ರಕಲೆಯಂತಹ ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಮತ್ತು ಬ್ಯಾಡ್ಮಿಂಟನ್ ಆಡಲು ಇಷ್ಟಪಡುತ್ತಾರ೦ತೆ. ಮಿಸ್ ಇಂಡಿಯಾ 2022 ರ ಎರಡನೇ ರನ್ನರ್ ಅಪ್ ಶಿನಾತಾ ಚೌಹಾಣ್ ಅವರು ನಾಯಕತ್ವದ ಗುಣಗಳನ್ನು ಹೊಂದಿದ್ದಾರೆ. ಹಾಗೆ ಇವರು ವಿದ್ವಾಂಸರು ಕೂಡ ಹೌದು.

Leave A Reply

Your email address will not be published.

error: Content is protected !!