ನಟ ವಿನೋದ್ ರಾಜ್ ಕುಮಾರ್ ವಯಸ್ಸಾಗಿದ್ದರು ಇನ್ನು ಮದುವೆ ಆಗಿಲ್ಲ ಯಾಕೆ ಗೊತ್ತಾ? ನಿಜಕ್ಕೂ ಅಮ್ಮನ ಮೇಲೆ ಎಂತ ಕಾಳಜಿ ನೋಡಿ

ಆತ್ಮೀಯ ಓದುಗರೇ ಮನುಷ್ಯ ಅಂದ್ರೆ ತನ್ನದೇ ವ್ಯಕ್ತಿತ್ವ ಹಾಗೂ ತನ್ನಲ್ಲಿ ಇರುವಂತ ಪ್ರತಿಭೆ ಮೂಲಕ ಜನಪ್ರಿಯತೆ ಗಳಿಸುತ್ತಾನೆ ಅದೇ ನಿಟ್ಟಿನಲ್ಲಿ ನಟ ವಿನೋದ್ ರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಹೊಸಬರೇನು ಅಲ್ಲ, ಹಳೆಯ ನಟ ಹಾಗೂ ಒಳ್ಳೆಯ ಡ್ಯಾನ್ಸರ್ ಕೂಡ ತಾಯಿ ಲೀಲಾವತಿ ಕೂಡ ಸಿನಿಮಾರಂಗದಲ್ಲಿ ಹಳೆಬರು. ಮುಖ್ಯವಾಗಿ ಇಲ್ಲಿ ಹೇಳಲು ಹೊರಟಿರುವ ವಿಷಯ ಏನಪ್ಪಾ ಅಂದ್ರೆ ವಿನೋದ್ ರಾಜ್ ಕುಮಾರ್ ಅವರು ಒಳ್ಳೆಯ ವ್ಯಕ್ತಿ ಹಾಗೂ ಒಳ್ಳೆಯ ನಟನಾಗಿದ್ದರು ಕೂಡ ಮದುವೆ ಯಾಕೆ ಆಗಿಲ್ಲ ಅನ್ನೋ ಕೆಲವರ ಪ್ರಶ್ನೆಗೆ ಈ ಮೂಲಕ ಉತ್ತರ ಸಿಗಲಿದೆ.

ನಟ ವಿನೋದ್ ಅವರು ಎಲ್ಲ ರೀತಿಯ ಪಾತ್ರಕ್ಕೂ ಜೀವ ತುಂಬಿದ ನಟಿ ಲೀಲಾವತಿ ಅವರ ಮುದ್ದಿನ ಮಗ ಡ್ಯಾನ್ಸ್ ರಾಜ ಡ್ಯಾನ್ಸ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ವಿನೋದ್ ಅವರು ಕೃಷ್ಣ ನೀ ಕುಣಿದಾಗ, ಕಾಲೇಜ್ ಹೀರೊ, ನಂಜುಂಡ, ಮಹಾಭಾರತ ಹೀಗೆ ಹಲವು ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ.

ನಟ ವಿನೋದ್ ರಾಜ್ ಅವರು ಒಳ್ಳೆಯ ಡ್ಯಾನ್ಸರ್ ಆಗಿದ್ದರು ಕೂಡ ಕೆಲವು ಖಾಸಗಿ ವಾಹಿನಿಗಳಲ್ಲಿ ಇವರಿಗೆ ಡಾನ್ಸ್ ಕಾರ್ಯಕ್ರಮಗಳಲ್ಲಿ ಜಡ್ಜ್ ಆಗಿ ಅವಕಾಶ ನೀಡಬೇಕಿತ್ತು ಆದ್ರೆ ಕಾರಣಾಂತರಗಳಿಂದ ಅವಕಾಶ ಸಿಕ್ಕಿಲ್ಲ. ಒಳ್ಳೆಯ ನಟನಾಗಿದ್ದರು ಕೂಡ ತಾಯಿಯ ಪಾಲಿಗೆ ಮುದ್ದು ಮಗ. ತನ್ನ ಅಮ್ಮನನ್ನು ಹೆಚ್ಚಾಗಿ ಇಷ್ಟ ಪಡುವ ಈ ನಟ ತಾಯಿಯನ್ನು ಹೆಚ್ಚು ಕಾಳಜಿಯಿಂದ ನೋಡಿಕೊಳ್ಳುತ್ತಾರೆ.

ವಿನೋದ್ ರಾಜ್ ಅವರು ಇನ್ನು ಮದುವೆ ಯಾಕೆ ಮಾಡಿಕೊಂಡಿಲ್ಲ ಅನ್ನೋದನ್ನ ನೋಡುವುದಾದರೆ ಇದಕ್ಕೆ ಅವರೇ ಉತ್ತರ ಕೊಟ್ಟಿದ್ದಾರೆ ನೋಡಿ ಅವರ ಪ್ರಕಾರ ಲೀಲಾವತಿಯವರನ್ನು ಅವರಷ್ಟು ಕಾಳಜಿಯಿಂದ, ಪ್ರೀತಿಯಿಂದ ನೋಡಿಕೊಳ್ಳುವವರು ಯಾರು ಇಲ್ಲ. ಅವರು ತನ್ನನ್ನು ಮದುವೆಯಾಗಿ ಬರುವ ಹುಡುಗಿ ಹೇಗಿರುತ್ತಾಳೋ, ಏನೋ ತಾನು ಬದುಕಿರುವವರೆಗೆ ಅಮ್ಮನನ್ನು ಪ್ರೀತಿಯಿಂದ, ಕಾಳಜಿಯಿಂದ ನೋಡಿಕೊಂಡು ಅವರೊಂದಿಗೆ ಹೆಚ್ಚು ಸಮಯ ಕಳೆಯುತ್ತೇನೆ ಎಂದು ಅವರೇ ಅಭಿಮಾನಿಗಳಿಗೆ, ಆಪ್ತರಿಗೆ ತಾವು ಏಕೆ ಇನ್ನೂ ಮದುವೆಯಾಗಲಿಲ್ಲ ಎಂಬ ಪ್ರಶ್ನೆಗೆ ಉತ್ತರವನ್ನು ಕೊಟ್ಟಿದ್ದಾರೆ.

ಇಂತಹ ವ್ಯಕ್ತಿ ಅಪರೂಪ ಇವರು ನಮ್ಮ ಕನ್ನಡ ಚಿತ್ರರಂಗದಲ್ಲಿರುವುದು ನಮ್ಮ ಹೆಮ್ಮೆ. ಮದುವೆಯಾಗಿ ಪತ್ನಿ ಬಂದ ನಂತರ ತಾಯಿಯನ್ನು ದೂರ ಮಾಡಿದ ಅದೆಷ್ಟೋ ನಟರ ಕಥೆಯನ್ನು ಕೇಳಿರುತ್ತೇವೆ, ನೋಡಿರುತ್ತೇವೆ. ಅವರು ತಮ್ಮ ತಾಯಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಅದೇನೇ ಇರಲಿ ಇವರ ಪ್ರೀತಿ ಕಾಳಜಿ ಜೊತೆಗೆ ಈ ಭಗವಂತ ಇವರಿಗೆ ಅರೋಗ್ಯ ಆಯುಷ್ಯ ಕೊಡಲಿ ಅನ್ನೋದೇ ನಮ್ಮ ಆಶಯ

Leave a Comment

error: Content is protected !!