ನಾನು ಸುಚೇಂದ್ರ ಪ್ರಸಾದ್ ಅವರನ್ನು ಮದುವೇನೇ ಆಗಿಲ್ಲ. ಮದುವೆ ವಿಚಾರದ ಬಗ್ಗೆ ಪವಿತ್ರ ಲೋಕೇಶ್ ಅವರ ಮೊದಲ ಪ್ರತಿಕ್ರಿಯೆ

ಇತ್ತೀಚೆಗೆ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಅವರ ಸುದ್ದಿ ಜೋರಾಗಿ ಹರಿದಾಡುತ್ತಿದೆ. ನಟಿ ಪವಿತ್ರಾ ಲೋಕೇಶ್ ಅವರು ತೆಲುಗು ಹಿರಿಯ ನಟ ನರೇಶ್ ಅವರ ಜೊತೆ ಸ್ನೇಹ ಬೆಳೆಸಿ ನಂತರ ಇಬ್ಬರೂ ಮದುವೆ ಕೂಡ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ನರೇಶ್ ಮತ್ತು ಪವಿತ್ರಾ ಲೋಕೇಶ್ ಮದುವೆಯಾಗಿ ಸಂಸಾರ ನಡೆಸುತ್ತಿದ್ದಾರೆ ಎಂದೆಲ್ಲಾ ಗಾಸಿಪ್ ಗಳು ಕೇಳಿ ಬರುತ್ತಿವೆ. ಆದರೆ ಈ ಎಲ್ಲ ಗಾಸಿಪ್ ಗಳಿಗೆ ಪವಿತ್ರ ಲೋಕೇಶ್ ಅವರು ಪ್ರತಿಕ್ರಿಯೆ ನೀಡಿ ಫುಲ್ ಸ್ಟಾಪ್ ಹಾಕಿದ್ದಾರೆ.

ನ್ಯೂಸ್ ಚಾನೆಲ್ ಗಳು ಪವಿತ್ರ ಲೋಕೇಶ್ ಅವರ ಸಂಬಂಧದ ಬಗ್ಗೆ ಮನಬಂದಂತೆ ಬರೆತ್ತಿರುವುದನ್ನು ಕಂಡು ಪವಿತ್ರ ಲೋಕೇಶ್ ಬೇಸರ ವ್ಯಕ್ತಪಡಿಸಿದ್ದಾರೆ. ಹಾಗೆ ಸ್ವತಃ ಪವಿತ್ರಾ ಲೋಕೇಶ್ ಅವರೇ ಎಲ್ಲಾ ನ್ಯೂಸ್ ಚಾನೆಲ್ ಗಳನ್ನು ಕರೆದು ಸಂದರ್ಶನವನ್ನು ಕೊಟ್ಟಿದ್ದಾರೆ. ಕೊಟ್ಟ ಸಂದರ್ಶನದಲ್ಲಿ ಪವಿತ್ರ ಲೋಕೇಶ್ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ. ಸುಚೇಂದ್ರ ಪ್ರಸಾದ್ ಮತ್ತು ಪವಿತ್ರ ಲೋಕೇಶ್ ಮದುವೆಯಾಗಿಲ್ವಂತೆ. ಮದ್ವೆನೇ ಆಗದಿದ್ದರೆ ನಾನು ಡಿವೋರ್ಸ್ ಯಾಕೆ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಮದುವೆ ಆಗದೆ ಸುಚೇಂದ್ರ ಪ್ರಸಾದ್ ಅವರ ಜೊತೆ ಪವಿತ್ರಾ ಲೋಕೇಶ್ ಅವರು ಸುಮಾರು 11 ವರ್ಷಗಳ ಕಾಲ ಸಂಸಾರ ಮಾಡಿದ್ದಾರಂತೆ. ಸ್ವತಃ ಪವಿತ್ರ ಲೋಕೇಶ್ ಅವರು ಹೇಳುವ ಪ್ರಕಾರ ನನಗೆ ಮತ್ತು ಸುಚೇಂದ್ರ ಪ್ರಸಾದ್ ಅವರಿಗೆ ಮದುವೆಯಾಗಿಲ್ಲ.2017 ರ ನಂತರ ಸುಚೇಂದ್ರ ಪ್ರಸಾದ್ ಮತ್ತು ಪವಿತ್ರ ಲೋಕೇಶ್ ಅವರು ಬೇರೆಯಾದರು . ಸುಚೇಂದ್ರ ಪ್ರಸಾದ್ ಮತ್ತು ಪವಿತ್ರಾ ಲೋಕೇಶ್ ಅವರು ದೂರವಾಗಿ 6 ವರ್ಷಗಳಾಗಿವೆ. ಇದಕ್ಕೆ ಸುಚೇಂದ್ರ ಪ್ರಸಾದ್ ಅವರೇ ಕಾರಣ ಯಾಕೆಂದರೆ ಅವರು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುತ್ತಿರಲಿಲ್ಲ. ನಾನೇ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದ್ದು ನಾವಿಬ್ಬರೂ ಮದುವೆಯಾಗದೆ ಇರುವುದಕ್ಕೆ ಸುಚೇಂದ್ರ ಪ್ರಸಾದ್ ಅವರೇ ಕಾರಣ.

ಹಾಗೇ ಸಂದರ್ಶನವೊಂದರಲ್ಲಿ ಸುಚೇಂದ್ರಪ್ರಸಾದ್ ಪವಿತ್ರಾಲೋಕೇಶ್ ಅವರ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ ಪವಿತ್ರ ಲೋಕೇಶ್ ಅವರು ನರೇಶ್ ಅವರ ಜೊತೆ ಆತ್ಮೀಯತೆ ಬೆಳೆಸಿರುವುದು ಹಣ ಮತ್ತು ಆಸ್ತಿಗೋಸ್ಕರ ಎಂದು ಸುಚೇಂದ್ರ ಪ್ರಸಾದ್ ಆರೋಪ ಮಾಡಿದ್ದಾರೆ ಸುಚೇಂದ್ರ ಪ್ರಸಾದ್ ಅವರ ಈ ಆರೋಪಕ್ಕೆ ಪವಿತ್ರ ಲೋಕೇಶ್ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ ನಾನು ನರೇಶ್ ಅವರ ಜೊತೆ ಆತ್ಮೀಯತೆ ಬೆಳೆಸಿರುವುದು ಹಣಕ್ಕೋಸ್ಕರ ಅಂತ ಆದರೆ ನಾನು ನಿಮ್ಮ ಜೊತೆ ಯಾಕೆ 11 ವರ್ಷಗಳ ಕಾಲ ಸಂಸಾರ ಮಾಡಿದೆ?..

ನಾನು ಸುಚೇಂದ್ರ ಪ್ರಸಾದ್ ಅವರನ್ನು ಮದುವೆಯಾದಾಗ ಅವರ ಬಳಿ ಏನೇನೂ ಇರಲಿಲ್ಲ ಅವರು ಖಾಲಿ ಕೈಲಿ ಇದ್ದಾಗ ನಾನು ಅವರನ್ನು ನಂಬಿ ಮದುವೆಯಾದೆ ನನಗೆ ಹಣದ ಮೋಹ ಇದ್ದರೆ ನಾನು ಯಾಕೆ ಸುಚೇಂದ್ರ ಪ್ರಸಾದ್ ಅವರನ್ನು ಮದುವೆಯಾಗುತ್ತಿದ್ದೆ. ನನಗೆ ಹಣದ ಮೇಲೆ ಆಸೆಯಿದ್ದರೆ ನಾನು ಸುಚೇಂದ್ರ ಪ್ರಸಾದ್ ಅವರ ಜೊತೆ ಸಂಸಾರ ನಡೆಸುತ್ತಲೇ ಇರಲಿಲ್ಲ. ಹಾಗೆ ನರೇಶ್ ಮತ್ತು ನಾನು ಇಬ್ಬರು ಒಳ್ಳೆಯ ಸ್ನೇಹಿತರು. ನಾನು ನರೇಶ್ ಜೊತೆಗೆ ಆತ್ಮೀಯತೆ ಬೆಳೆಸಿರುವುದು ಹಣಕ್ಕೋಸ್ಕರ ಅಲ್ಲ ದಯವಿಟ್ಟು ಅರ್ಥ ಮಾಡಿಕೊಳ್ಳಿ ಎಂದು ಪವಿತ್ರಾ ಲೋಕೇಶ್ ಅವರು ಸಂದರ್ಶನವೊಂದರಲ್ಲಿ ತಮ್ಮ ಮನದಾಳದ ನೋವನ್ನು ತೋಡಿಕೊಂಡಿದ್ದಾರೆ.

Leave a Comment

error: Content is protected !!