ಕಫದಿಂದ ಎದೆಉರಿ ಯಾಗುತ್ತಿದ್ರೆ ಬಿಲ್ವಪತ್ರೆ ಎಲೆಯಲ್ಲಿದೆ ತಕ್ಷಣ ಪರಿಹಾರ

ನಮ್ಮ ರಾಜ್ಯದಲ್ಲಿ ಇರುವಂತ ಹಲವು ಸಸ್ಯ ಪ್ರಭೇದಗಳು ಹಲವು ಆಯುರ್ವೇದ ಔಷದಿ ಗುಣಗಳನ್ನು ಹೊಂದಿದೆ ಅಲ್ಲದೆ, ಇದರಲ್ಲಿ ನಾನಾ ಕಾಯ್ಲಿಯೇ ರೋಗ ಬೇನೆಗಳನ್ನು ನಿವಾರಿಸುವ ಶಕ್ತಿಯನ್ನು ಕಾಣಬಹುದು. ಇನ್ನು ಬಿಲ್ವ ಪತ್ರೆ ಅನ್ನೋದು ಶಿವನಿಗೆ ಪ್ರಿಯವಾದ ಗಿಡ ಸಸ್ಯ ಎಂಬುದಾಗಿ ಹೇಳಲಾಗುತ್ತದೆ. ಈ ಗಿಡದಲ್ಲಿ ಹಲವು ಔಷಧಿ ಗುಣಗಳನ್ನು ಕಾಣಬಹುದು.

ಈ ಮೂಲಕ ಕಫ ಹಾಗೂ ಕಫದಿಂದ ಆಗುವಂತ ಎದೆ ಉರಿ ಸಮಸ್ಯೆ ನಿವಾರಣೆಗೆ ಪರಿಹಾರ ಏನು ಅನ್ನೋದನ್ನ ನೋಡುವುದಾದರೆ, ಅದಕ್ಕೆ ಬಿಲ್ವ ಪತ್ರೆಯಲ್ಲಿ ಪರಿಹಾರ ಮಾರ್ಗವನ್ನು ನೋಡಬಹುದಾಗಿದೆ. ಹೌದು ಕಫ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಹಾಗು ಕಫದಿಂದ ಎದೆ ಹುರಿ ಸಮಸ್ಯೆ ಬರುತ್ತಿದ್ದರೆ ಬಿಲ್ವದ ತಾಜಾ ಎಲೆಗಳನ್ನು ತಂದು ಅದನ್ನು ಚನ್ನಾಗಿ ತೊಳೆದು ಅದರ ರಸವನ್ನು ಮಾಡಿ, ಕುಡಿದರೆ ಕಫ ಕಡಿಮೆಯಾಗಿ ಎದೆ ಹುರಿ ನಿವಾರಣೆಯಾಗುವುದು.

ಇನ್ನು ಈ ಬಿಲ್ವ ಪತ್ರೆ ಗಿಡದ ಮತ್ತೊಂದು ಉಪಯೋಗ ಏನು ಅನ್ನೋದನ್ನ ನೋಡುವುದಾದರೆ ಕೈ ಕಾಲುಗಳು ಏನಾದ್ರು ಊತವಾಗಿದ್ರೆ ಇದನ್ನು ನಿವಾರಿಸಲು ಬಿಲ್ವದ ಎಲೆಗಳನ್ನು ಬಿಸಿ ಮಾಡಿ ಊತ ಇರುವ ಜಾಗಕ್ಕೆ ಪಟ್ಟು ಹಾಕಿದರೆ ಉತ್ತಮ ಪರಿಹಾರವಿದೆ.

ಕೆಲವರಲ್ಲಿ ಅತಿಸಾರ ಸಮಸ್ಯೆ ಅನ್ನೋದು ಹೆಚ್ಚಾಗಿ ಕಾಡುತ್ತಿರುತ್ತದೆ ಅದಕ್ಕೆ ಪರಿಹಾರ ಕಾಣಲು ಬಿಲ್ವದ ಚಕ್ಕೆ ಹಾಗು ದೊಡ್ಡ ಏಲಕ್ಕಿ ಎರಡನ್ನು ಕುಟ್ಟಿ ಪುಡಿಮಾಡಿ ದಿನಕ್ಕೆ ಎರಡು ಬರಿ ಮಜ್ಜಿಗೆಯಲ್ಲಿ ಬೆರಸಿ ಸೇವನೆ ಮಾಡಿದರೆ ಅತಿಸಾರ ನಿವಾರಣೆಯಾಗುವುದು. ಈ ಬಿಲ್ವ ಪತ್ರೆ ಮರದ ಔಷಧಿ ಗುಣಗಳು ನಿಮಗೆ ಇಷ್ಟ ಆದ್ರೆ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ.

Leave a Comment

error: Content is protected !!